Last Updated:
ಕರಾವಳಿ ಚಿತ್ರದ ಮಿಡ್ ನೈಟ್ ಶೋ ಕೂಡ ಫುಲ್ ಆಗಿವೆ. ಚಿತ್ರ ನೋಡಿ ಹೊರ ಬಂದವ್ರಿಗೆ ರಾಜ್ ಬಿ ಶೆಟ್ಟಿ ನೋಡುವ ಅವಕಾಶ ಕೂಡ ಸಿಕ್ಕಿದೆ. ಹಾಗೆ ಈ ಸಂಭ್ರಮದ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕರಾವಳಿ ಚಿತ್ರದ (Karavali Movie) ಮಿಡ್ ನೈಟ್ ಶೋಗಳು (Midnight Show) ಫುಲ್ ಆಗಿವೆ. ರಿಲೀಸ್ ಆದ ಎರಡನೇ ದಿನವೂ ಈ ಚಿತ್ರದ ಕ್ರೇಜ್ ಜಾಸ್ತಿನೇ ಆಗಿದೆ. ಸ್ಕ್ರೀನ್ ಲೆಕ್ಕ ಅಂತ ಬಂದ್ರೆ, ಅದು 25 ಕ್ಕೂ ಹೆಚ್ಚಾಗಿದೆ. ಕಲೆಕ್ಷನ್ (Collection) ಮೊದಲ ದಿನ 70 ಲಕ್ಷ ದಾಟಿದೆ. ವಾರಾಂತ್ಯ ಇರೋದ್ರಿಂದಲೇ ಇದು ಎರಡನೇ ಮತ್ತು ಮೂರನೇ ದಿನಕ್ಕೆ ಹೆಚ್ಚಾಗುವ ನಿರೀಕ್ಷೆನೂ ಇದೆ. ಇದರ ಹೊರತಾಗಿ ಇಲ್ಲಿ ರಾಜ್ ಬಿ ಶೆಟ್ಟಿ (Raj B Shetty) ಅವರ ಕ್ರೇಜ್ ಭಾರೀ ಇದೆ. ಮಿಡ್ ನೈಟ್ ಶೋ ಮುಗಿಸಿಕೊಂಡು ಹೋಗುವ ಜನ, ರಾಜ್ ಬಿ ಶೆಟ್ಟಿ ಬಂದಾಗ ನಿಂತು ನೋಡಿದ್ದಾರೆ. ಕೈ ಬೀಸಿ ಖುಷಿಪಟ್ಟಿದ್ದಾರೆ. ಈ ಎಲ್ಲದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮಿಡ್ ನೈಟ್ ಶೋ
ಬೆಂಗಳೂರಿನ ನವರಂಗದಲ್ಲಿ ಈ ಚಿತ್ರದ ಮಿಡ್ ನೈಟ್ ಶೋ ನಡೆದಿದೆ. ಈ ಶೋ ಮುಗಿಸಿ ಜನ ಹೊರಗೆ ಬಂದಿದ್ದಾರೆ. ಆಗಲೇ ರಾಜ್ ಬಿ ಶೆಟ್ಟಿ ಥಿಯೇಟರ್ಗೂ ಎಂಟ್ರಿ ಕೊಟ್ಟಿದ್ದಾರೆ.
ಕರಾವಳಿ ಚಿತ್ರದ ಅಬ್ಬರ ಜೋರಾಗಿದೆ. ರಾಜ್ ಬಿ ಶೆಟ್ಟಿ ಮತ್ತು ಮಿತ್ರ ಥಿಯೇಟರ್ಗೆ ಬಂದಾಗ ಜನ ಮುಗಿ ಬಿದಿದ್ದಾರೆ. ಮಹಾಬಲ ಮತ್ತು ಮಹಾವೀರ ಪಾತ್ರದ ಮೂಲಕ ಇವರು ಜನರನ್ನ ರಂಜಿಸಿದ್ದಾರೆ.
ಇವರು ಜನರನ್ನ ಎಮೋಷನಲ್ ಮಾಡಿದ್ದಾರೆ. ಆದರೆ, ಈ ಹಿಂದೆ ಮಿತ್ರ ಎಲ್ಲರನ್ನು ನಗಿಸಿರೋದೇ ಇದೆ. ಈ ಕರಾವಳಿ ಚಿತ್ರದಲ್ಲಿ ಮಿತ್ರ ಎಲ್ಲರನ್ನು ಅಳಿಸಿ ಬಿಟ್ಟಿದ್ದಾರೆ.
ಕರಾವಳಿ ಅಬ್ಬರ
ಕರಾವಳಿ ಚಿತ್ರ ಜುಲೈ-24 ರಂದು ರಿಲೀಸ್ ಆಗಿದೆ. 175 ಥಿಯೇಟರ್ ಅಲ್ಲಿ ಇದು ತೆರೆ ಕಂಡಿದೆ. ಆದರೆ, ಎರಡನೇ ದಿನ ಈ ಚಿತ್ರದ ಸ್ಕ್ರೀನ್ 25ಕ್ಕೂ ಜಾಸ್ತಿ ಆಗಿವೆ.
ಆದರೆ, ಚಿತ್ರದ ಇತರರು ಅಂತ ಬಂದ್ರೆ ರಾಜ್ ಬಿ ಶೆಟ್ಟಿ, ಮಿತ್ರ, ಡೈರೆಕ್ಟರ್ ಗುರುದತ್ತ ಗಾಣಿಗ ಎಲ್ಲರೂ ಈ ಚಿತ್ರ ರಿಲೀಸ್ ಆದ ಥಿಯೇಟರ್ಗೆ ಹೋಗಿ ಜನರನ್ನ ಮೀಟ್ ಆಗಿದ್ದಾರೆ. ಚಿತ್ರ ನೋಡಿ ಮೆಚ್ಚಿರೋದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
Jul 26, 2026 12:09 PM IST














