ರಾಕಿ ಸಖತ್ ಸ್ಲಿಮ್
(ಚಿತ್ರ ಕೃಪೆ: ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್)
ಈ ಒಂದು ಲುಕ್ನ ಝಲಕ್ ಟಾಕ್ಸಿಕ್ ಚಿತ್ರದ ಟೀಸರ್ ಅಲ್ಲಿ ರಿವೀಲ್ ಆಗಿದೆ. ಆದರೆ, ಅದು ಪೂರ್ತಿ ಆಗಿ ಅಲ್ಲ, ಕತ್ತಲು ಕತ್ತಲು ಅಲ್ಲಿಯೇ ಇದೆ. ಆದರೆ, ಈ ಫೋಟೋ ಆ ಲುಕ್ನ ಸಂಪೂರ್ಣ ಚಿತ್ರಣ ಕೊಟ್ಟಿದೆ.
ಟಿಕೆಟ್ ರೋಲ್ ತುಂಬಾನೆ ಯಂಗ್ ಆಗಿದೆ. ಅಪ್ಪನ ವಿರುದ್ಧವೇ ತಿರುಗಿ ಬೀಳುವ ಮಗನ ಚಿತ್ರವೂ ಇದಾಗಿದೆ. ಇದನ್ನ ಚಿತ್ರದ ಟೀಸರ್ ಹೇಳುತ್ತದೆ.
ಅಪ್ಪ ಮತ್ತು ಮಗನ ಕತೆಯನ್ನೆ ಈ ಚಿತ್ರ ಹೇಳುತ್ತದೆ. ಆದರೆ, ಇದು ಗ್ಯಾಂಗ್ಸ್ಟರ್ ಚಿತ್ರವೇ ಆಗಿದೆ. ಇಂತಹ ಈ ಒಂದು ಚಿತ್ರ ಆಗಸ್ಟ್-26,2026 ಕ್ಕೆ ತೆರೆಗೆ ಬರ್ತಿದೆ. ಈ ವಿಷಯ ಫಾದರ್ಸ್ ಡೇನೆ ರಿವೀಲ್ ಆಗಿದೆ.
ಅಪ್ಪಂದಿರ ದಿನಕ್ಕೆ ರಾಧಿಕಾ ಪಂಡಿತ್ ವಿಶ್ ಮಾಡಿದ್ದಾರೆ. ತಮ್ಮ ಮಕ್ಕಳು ತಂದೆ ಜೊತೆಗೆ ಇರೋ ಒಂದು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ತಾವು ಗರ್ಭಿಣಿ ಆಗಿದ್ದಾಗ ತಮ್ಮ ತಂದೆ ಜೊತೆಗೆ ತೆಗೆಸಿಕೊಂಡ ಫೋಟೋನು ಇಲ್ಲಿ ಹಂಚಿಕೊಂಡಿದ್ದಾರೆ.
ಈ ಎರಡೂ ಫೋಟೋಗಳು ಫಾದರ್ಸ್ ಡೇಗೆ ಹೇಳಿ ಮಾಡಿಸಿದಂತೆ ಇವೆ. ಈ ಪೋಟೋಗಳ ಜೊತೆಗೆ ಈಗಾಗಲೇ ಹೇಳಿದಂತೆ ರಾಧಿಕಾ ಒಂದು ಲೈನ್ ಬರೆದುಕೊಡಿದ್ದಾರೆ. ಅದು ಈ ರೀತಿ ಇದೆ Safe, loved, held, always Happy Father’s Day.ಅಂತ ಹೇಳಬಹುದು.
ಅಪ್ಪಂದಿರ ದಿನಕ್ಕೆ ವಿಶ್
(ಚಿತ್ರ ಕೃಪೆ: ರಾಧಿಕಾ ಪಂಡಿತ್ ಇನ್ಸ್ಟಾಗ್ರಾಮ್)
ಫಾದರ್ಸ್ ಡೇ ದಿನ ಸಿಂಪಲ್ ಸುನಿ ಒಂದಷ್ಟು ಫೋಟೋ ಹಂಚಿಕೊಂಡಿದ್ದಾರೆ. ಮಗನ ಜೊತೆಗಿನ ಈ ಫೋಟೋದೊಟ್ಟಿಗೆ ಎರಡು ಲೈನ್ ಬರೆದಿದ್ದಾರೆ. ಈ ಸಾಲುಗಳು ವಿಶೇಷವಾಗಿವೆ.
ಸಿಂಪಲ್ ಸುನಿ ಈ ಮಾತು ಹೇಳಿಕೊಂಡಿದ್ದಾರೆ. ನಾನು ಮಗುನೇ ಆಗಿದ್ದೇನೆ. ಆದರೆ, ನನ್ನ ಹೆಂಡ್ತಿ ನನ್ನ ಅಪ್ಪನನ್ನ ಮಾಡಿದ್ದಾಳೆ. ಅಪ್ಪನಾಗಿ ಬಡ್ತಿಕೊಟ್ಟಿದ್ದಾಳೆ. ಹ್ಯಾಪಿ ಫಾದರ್ಸ್ ಡೇ ಟು ಮಿ ಅಂತಲೂ ಹೇಳಿಕೊಂಡಿದ್ದಾರೆ.
ನಾನೂ ಮಗುನೇ….
(ಚಿತ್ರ ಕೃಪೆ: ಸಿಂಪಲ್ ಸುನಿ ಇನ್ಸ್ಟಾಗ್ರಾಮ್)
ಸಿಂಪಲ್ ಸುನಿ ಬರೆದ ಆ ಸಾಲುಗಳು ಹೀಗಿವೆ; ನಾನು ಮಗು ಹೆಂಡ್ತಿ, ನನಗೆ ತಂದೆಯಾಗಿ ಬಡ್ತಿ Happy Father’s Day to Me
ಪ್ರಗತಿ ಶೆಟ್ಟಿ ಅವರು ಫಾದರ್ಸ್ ಡೇ ವಿಶೇಷವಾಗಿ ವಿಶ್ ಮಾಡಿದ್ದಾರೆ. ರಿಷಬ್ ಶೆಟ್ರ ಹಳೆ ವಿಡಿಯೋ ತೆಗೆದುಕೊಂಡಿದ್ದಾರೆ. ರಿಷಬ್ ಶೆಟ್ಟಿ ಹೇಗೆಲ್ಲ ಮಕ್ಕಳ ಜೊತೆಗೆ ಇರ್ತಾರೆ ಅನ್ನೋದು ಈ ವಿಡಿಯೋದಲ್ಲಿದೆ.
ಈ ಮೂಲಕ ಫಾದರ್ಸ್ ಡೇಗೆ ಇವರು ವಿಶ್ ಮಾಡಿದ್ದಾರೆ. ಬೆಳ್ಳಿ ತೆರೆ ಮೇಲಷ್ಟೆ ಅಲ್ಲ, ಮನೆಯಲ್ಲೂ ರಿಷಬ್ ಶೆಟ್ಟಿ ಹೀರೋನೆ ಅನ್ನೋದನ್ನ ಬರೆದುಕೊಂಡಿದ್ದಾರೆ ಅಂತ ಹೇಳಬಹುದು.












