Radhika Pandit: ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ, ವಾಣಿ ಹರಿಕೃಷ್ಣ ಹೇಳಿದ್ದೇನು ಗೊತ್ತಾ? | | ACTPnews

ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ; ವಾಣಿ ಹರಿಕೃಷ್ಣ ಹೇಳಿದ್ದೇನು?


Last Updated:

ರಾಧಿಕಾ ಪಂಡಿತ್ ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ರಾಧಿಕಾ ಅವರ ಸೆಲ್ಫಿ ಫೋಟೋಗಳಿವೆ. ವಿಶೇಷವೆಂದ್ರೆ ಇದಕ್ಕೆ ವಾಣಿ ಹರಿಕೃಷ್ಣ ಅವರ ಹಾಡಿರೋ ಆಡಿಯೋ ಬಳಕೆ ಮಾಡಿದ್ದಾರೆ. ಇದನ್ನ ನೋಡಿದ ವಾಣಿ ಹರಿಕೃಷ್ಣ ಕಾಕತಾಳಿಯದ ಒಂದು ಕತೆ ಹೇಳಿದ್ದಾರೆ. ರಾಧಿಕಾ ಪಂಡಿತ್ ಅವರು ಕೊಟ್ಟ ಸಂಪಿಗೆ ಗಿಡದ ಸ್ಟೋರಿನೂ ಹೇಳಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ; ವಾಣಿ ಹರಿಕೃಷ್ಣ ಹೇಳಿದ್ದೇನು?
ರಾಧಿಕಾ ಪಂಡಿತ್ ಈ ಪೋಸ್ಟ್ ಅಲ್ಲಿ ಏನೋ ವಿಶೇಷ ಇದೆ; ವಾಣಿ ಹರಿಕೃಷ್ಣ ಹೇಳಿದ್ದೇನು?

ನಿಮ್ಮೆಲ್ಲರ ಬೇಡಿಕೆ ಮೇರೆಗೆ ಒಂದಷ್ಟು ಸೆಲ್ಫಿ (selfie) ಕಲೆಕ್ಟ್ ಮಾಡಿಕೊಂಡಿದ್ದೇನೆ. ಅದಕ್ಕೆ ನನ್ನ ನೆಚ್ಚಿನ ಗಾಯಕಿ ಮತ್ತು ಗೀತರಚನೆಕಾರರ ಹಾಡನ್ನು ಬಳಕೆ ಮಾಡಿದ್ದೇನೆ. ಹೀಗೆ ಹೇಳಿರೋ ರಾಧಿಕಾ ಪಂಡಿತ್ ತಮ್ಮ ಹಾಗೂ ಯಶ್ (Yash) ಜೊತೆಗಿನ ಒಂದಷ್ಟು ಸೆಲ್ಫಿ ಫೋಟೋ ತೆಗೆದುಕೊಂಡು ಒಂದು ವಿಡಿಯೋ ಮಾಡಿದ್ದಾರೆ. ಇದಕ್ಕೆ ವಾಣಿ ಹರಿಕೃಷ್ಣ ಅವರು ಕಡ್ಡಿಪುಡಿ ಚಿತ್ರಕ್ಕೆ ಹಾಡಿರೋ ಹಾಡನ್ನ ಹಿನ್ನೆಲೆಯಲ್ಲಿ ಬಳಕೆ ಮಾಡಿದ್ದಾರೆ. ಜಯಂತ್ ಕಾಯ್ಕಿಣಿ (Jayant Kaikini) ಅವರ ಸಾಹಿತ್ಯದ ಈ ಹಾಡು ಫೋಟೋಗಳಿಗೆ ಸೂಕ್ತವಾಗಿದೆ. ವಿಶೇಷವೆಂದ್ರೆ ಇದನ್ನ ನೋಡಿರೋ ಗಾಯಕಿ ವಾಣಿ ಹರಿಕೃಷ್ಣ (Vani Harikrishna) ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಯಶ್ ಮತ್ತು ರಾಧಿಕಾ ತಮ್ಮ ಮದುವೆಗೆ ಕೊಟ್ಟಿದ್ದ ಸಂಪಿಗೆ ಮರದ ವಿಡಿಯೋ ಬಗ್ಗೆನೂ ಹೇಳಿಕೊಂಡಿದ್ದಾರೆ. ಇನ್ನು ಒಂದು ವಿಶೇಷ ವಿಷಯವನ್ನು ಹೇಳಿಕೊಂಡಿದ್ದಾರೆ. ಅದೇನು ಅನ್ನೊದು ಇಲ್ಲಿದೆ ಓದಿ.

ಜೀವವೇ ಪ್ರೀತಿಸು…

ಜೀವವೇ ಪ್ರೀತಿಸು ಜೀವ ಹೋಗುವಂತೆ. ಇದು ಕಡ್ಡಿಪುಡಿ ಚಿತ್ರದ ಹಾಡಾಗಿದೆ. ಜಯಂತ್ ಕಾಯ್ಕಿಣಿ ಇದನ್ನ ಬರೆದಿದ್ದಾರೆ. ವಿ.ಹರಿಕೃಷ್ಣ ಅವರ ಸಂಗೀತದಲ್ಲಿ ವಾಣಿ ಹರಿಕೃಷ್ಣ ಇದನ್ನ ಹಾಡಿದ್ದಾರೆ.

radhika pandit singer vani harikrishna special post interesting facts

ಜೀವವೇ ಪ್ರೀತಿಸು…

(ಚಿತ್ರ ಕೃಪೆ: ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್)

ರಾಧಿಕಾ ಪಂಡಿತ್ ಅವರಿಗೆ ಈ ಗೀತೆ ತುಂಬಾನೆ ಇಷ್ಟ ಆಗುತ್ತದೆ. ಶಿವಣ್ಣ ಜೊತೆಗೆ ನಟಿಸಿದ ಕಡ್ಡಿಪುಡಿ ಚಿತ್ರದಲ್ಲಿ ಈ ಗೀತೆ ತುಂಬಾನೆ ಚೆನ್ನಾಗಿ ಬಂದಿತ್ತು. ಇದನ್ನೇ ಈಗ ರಾಧಿಕಾ ಪಂಡಿತ್ ಅವರು ತಮ್ಮ ಮತ್ತು ಯಶ್ ಅವರ ಸೆಲ್ಫಿ ಫೋಟೋಗಳ ಹಿನ್ನೆಲೆಯಲ್ಲಿ ಬಳಕೆ ಮಾಡಿದ್ದಾರೆ.
ನನ್ನ ಫೇವರಿಟ್ ಸಾಂಗ್

ನನ್ನ ಸೆಲ್ಫಿಗಳಿಗೆ ಹೆಚ್ಚಿನ ಪ್ರೀತಿಯನ್ನ ನೀವೆಲ್ಲ ತೋರಿಸಿದ್ದೀರಿ. ಮತ್ತು ಇವುಗಳಿಗೆ ಅಷ್ಟೆ ಬೇಡಿಕೆ ಕೂಡ ಇದೆ. ಹಾಗಾಗಿಯೇ ಎಲ್ಲವನ್ನೂ ಒಟ್ಟುಗೂಡಿಸಿದ್ದೇನೆ. ಅದಕ್ಕೆ ನನ್ನ ನೆಚ್ಚಿನ ಗಾಯಕಿ ಮತ್ತು ಗೀತರಚನಾಕಾರರ ಹಾಡನ್ನ ಬಳಕೆ ಮಾಡಿದ್ದೇನೆ ಅಂತಲೆ ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.

ಈ ಒಂದು ವಿಡಿಯೋವನ್ನ ಹಾಕೋದಲ್ಲದೆ ಹ್ಯಾಪಿ ವೀಕೆಂಡ್ ಅಂತಲೂ ಹೇಳಿದ್ದಾರೆ. ಈ ಒಂದು ವಿಶೇಷ ವಿಡಿಯೋ ನೋಡಿದ ಗಾಯಕಿ ವಾಣಿ ಹರಿಕೃಷ್ಣ ಕಾಕತಾಳಿಯದ ಒಂದು ವಿಷಯ ಹೇಳಿದ್ದಾರೆ. ಆ ವಿಡಿಯೋವನ್ನು ಕೂಡ ತಮ್ಮ ಸ್ಟೇಟಸ್ ಅಲ್ಲಿ ಹಂಚಿಕೊಂಡಿದ್ದಾರೆ.

ನೀವು ಕೊಟ್ಟ ಸಂಪಿಗೆ ಗಿಡ

ರಾಧಿಕಾ ಪಂಡಿತ್ ಮತ್ತು ಯಶ್ ಅವರು ತಮ್ಮ ಮದುವೆಗೆ ಸಿನಿಮಾ ಇಂಡಸ್ಟ್ರಿಯ ಆಪ್ತರಿಗೆ, ಸ್ನೇಹಿತರಿಗೆ ಆಹ್ವಾನ ಕೊಟ್ಟಿದ್ದರು. ಲಗ್ನಪತ್ರಿಕೆಯ ಜೊತೆಗೆ ಒಂದೊಂದು ಗಿಡವನ್ನು ಕೊಟ್ಟಿದ್ದರು.

radhika pandit singer vani harikrishna special post interesting facts

ನೀವು ಕೊಟ್ಟ ಸಂಪಿಗೆ ಗಿಡ

(ಚಿತ್ರ ಕೃಪೆ: ರಾಧಿಕಾ ಪಂಡಿತ್ ಇನ್‌ಸ್ಟಾಗ್ರಾಮ್)

ಈ ಗಿಡಗಳಲ್ಲಿ ಸಂಪಿಗೆ ಗಿಡಗಳು ಇದ್ದವು. ಆ ಗಿಡವನ್ನ ವಾಣಿ ಹರಿಕೃಷ್ಣ ಅವರು ತಮ್ಮ ಮನೆಯ ಆವರಣದಲ್ಲಿ ನೆಟ್ಟಿದ್ದರು. ಅದು ಈಗ ದೊಡ್ಡ ಮರವಾಗುತ್ತಿದೆ.

ಆದರೆ ಇದು ಹೂ ಬಿಡೋದಿಲ್ವೇ

ವಾಣಿ ಹರಿಕೃಷ್ಣ ಅವರ ಮನೆಗೆ ಬಂದ ಸಂಪಿಗೆ ಮರ ಹೆಣ್ಣಲ್ಲ. ಅದು ಗಂಡು ಅಂತ ಗೊತ್ತಾಗಿದೆ. ಹಾಗಾಗಿಯೇ ಗೊತ್ತಿರೋರನ್ನ ಕೇಳಿದಾಗ ಇದು ಗಂಡು ಅಂತ ಹೇಳಿದ್ದಾರೆ. ಈ ಕಾರಣಕ್ಕೆ ಇದು ಹೂವು ಬಿಡೋದಿಲ್ಲ ಅನ್ನೋದನ್ನು ವಾಣಿ ಹರಿಕೃಷ್ಣ ಹೇಳಿಕೊಂಡಿದ್ದಾರೆ.

ಹೀಗೆ ಹೇಳಿಕೊಂಡಿರೋ ವಿಡಿಯೋವನ್ನ ಜೂನ್-13 ರಂದು ಇನ್‌ಸ್ಟಾಗ್ರಾಮ್ ತಮ್ಮ ಸ್ಟೇಟಸ್ ಅಲ್ಲಿ ಹಾಕಿಕೊಂಡಿದ್ದಾರೆ. ಕಾಕತಾಳಿಯ ಅಂದ್ರೆ ರಾಧಿಕಾ ಅವರು ವಾಣಿ ಕೃಷ್ಣ ಅವರ ಹಾಡಿರೋ ಹಾಡಿನ ವಿಡಿಯೋವನ್ನು ಈ ದಿನವೇ ಹಂಚಿಕೊಂಡಿದ್ದಾರೆ. ಹಾಗಾಗಿಯೇ ಎಂತಹ ಕಾಕತಾಳಿಯ ಅಂತಲೇ ವಾಣಿ ಹರಿಕೃಷ್ಣ ಕಾಮೆಂಟ್ ಬಾಕ್ಸ್ ಅಲ್ಲಿ ಹೇಳಿಕೊಂಡಿದ್ದಾರೆ.

ನನ್ನ ಫೇವರಿಟ್ ನಟಿ

ವಾಣಿ ಹರಿಕೃಷ್ಣ ಅವರು ರಾಧಿಕಾ ಅವರ ಬಗ್ಗೆನೂ ಬರೆದುಕೊಂಡಿದ್ದಾರೆ. ರಾಧಿಕಾ ಪಂಡಿತ್ ಅವರು ನನ್ನ ನೆಚ್ಚಿನ ನಾಯಕಿ ಅಂತಲೂ ಇನ್‌ಸ್ಟಾಗ್ರಾಮ್‌ ತಮ್ಮ ಸ್ಟೇಟಸ್ ಅಲ್ಲೇ ಬರೆದುಕೊಂಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed