Last Updated:
ರಚಿತಾ ರಾಮ್ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಭೇಟಿ, ಸರಳ ಭಕ್ತಿ, ಅಭಿಮಾನಿಗಳ ಜೊತೆ ಆತ್ಮೀಯ ಸಂಭಾಷಣೆ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್.
ಮಂಡ್ಯ: ಸ್ಯಾಂಡಲ್‍ವುಡ್‍ನ (Sandalwood) ಸ್ಟಾರ್ ನಟಿ, ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅವರು ಮಂಡ್ಯ (Mandya) ಜಿಲ್ಲೆಯ ಮೇಲುಕೋಟೆಯತ್ತ ಮುಖ ಮಾಡಿದ್ದಾರೆ. ತಮ್ಮ ಮನೆ ದೇವರಾದ (God) ಚೆಲುವನಾರಾಯಣಸ್ವಾಮಿಯ ದರ್ಶನ ಪಡೆಯಲು ಆಗಮಿಸಿದ ನಟಿ, ಭಕ್ತಿಪರವಶರಾಗಿ ವಿಶೇಷ ಪೂಜೆ ಸಲ್ಲಿಸಿ ಗಮನ ಸೆಳೆದಿದ್ದಾರೆ.
ಏನಿದು ವಿಶೇಷ?
ಪಾಂಡವಪುರ ತಾಲೂಕಿನ ಐತಿಹಾಸಿಕ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಸ್ಥಾನವು ನಟಿ ರಚಿತಾ ರಾಮ್ ಅವರ ಮನೆ ದೇವರಾಗಿದೆ. ಇದೇ ಕಾರಣಕ್ಕೆ ಸಮಯ ಸಿಕ್ಕಾಗಲೆಲ್ಲಾ ಇಲ್ಲಿಗೆ ಬರುವ ರಚಿತಾ ರಾಮ್, ಈ ಬಾರಿಯೂ ದೇವಸ್ಥಾನದಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಸಮಯ ಕಳೆದರು. ಸರಳ ಡ್ರೆಸ್ ತೊಟ್ಟು, ಹಣೆಗೆ ನಾಮವಿಟ್ಟುಕೊಂಡು ಅತ್ಯಂತ ಭಕ್ತಿಭಾವದಿಂದ ದೇವರ ಪೂಜೆಯಲ್ಲಿ ಪಾಲ್ಗೊಂಡರು.
ಗುರೂಜಿ ಆಶೀರ್ವಾದ
ದೇವರ ದರ್ಶನದ ನಂತರ, ದೇವಾಲಯದ ಸ್ಥಾನಿಕಂ ಶ್ರೀನಿವಾಸನ್ ಗುರೂಜಿಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ನಟಿ ದೇವಾಲಯಕ್ಕೆ ಬಂದಿರುವ ವಿಷಯ ತಿಳಿದ ತಕ್ಷಣ, ಅವರ ಅಭಿಮಾನಿಗಳು ಮತ್ತು ಸ್ಥಳೀಯ ಭಕ್ತರು ದೇವಸ್ಥಾನದ ಆವರಣದಲ್ಲಿ ಜಮಾಯಿಸಿದ್ದರು. ಯಾರೇ ಅಂದುಕೊಂಡರೂ ಅಹಂ ಇಲ್ಲದೆ, ಅಭಿಮಾನಿಗಳೊಂದಿಗೆ ಆತ್ಮೀಯವಾಗಿ ಮಾತನಾಡಿದ ರಚಿತಾ ರಾಮ್ ಎಲ್ಲರ ಮನಗೆದ್ದರು.
ಭಾರೀ ಮೆಚ್ಚುಗೆ
ಸಿನಿಮಾಗಳ ಸದ್ದು ಗದ್ದಲದಿಂದ ದೂರ ಉಳಿದು, ದೇವಸ್ಥಾನದ ಶಾಂತ ವಾತಾವರಣದಲ್ಲಿ ರಚಿತಾ ರಾಮ್ ಕಾಣಿಸಿಕೊಂಡಿದ್ದು ಅವರ ಭಕ್ತರಿಗೆ ಅಚ್ಚರಿ ಮತ್ತು ಸಂತೋಷವನ್ನು ನೀಡಿದೆ. ಸ್ಟಾರ್ ನಟಿಯಾಗಿದ್ದರೂ ದೇವಸ್ಥಾನದಲ್ಲಿ ಸರಳವಾಗಿ ನಡೆದುಕೊಂಡ ನಟಿಯ ಈ ಗುಣಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.
Location :
Mandya,Mandya,Karnataka













