Last Updated:
ರಾಖ್ ವೆಬ್ ಸರಣಿ ಕ್ರೈಮ್ ಥ್ರಿಲ್ಲರ್ ಕತೆ ಹೊಂದಿದೆ. 1978 ಕಾಲಘಟ್ಟದ ಇಬ್ಬರು ಕೊಲೆಗಡುಕರ ಸುತ್ತ ಸಾಗೋ ಸರಣಿ ಇದಾಗಿದೆ. ಆ ಸಮಯದಲ್ಲಿ ಪೊಲೀಸರಿಗೆ ಇದು ಕಂಪ್ಲೀಟ್ ಹೊಸ ರೀತಿಯ ಕೇಸ್ ಆಗಿತ್ತು. ಹೇಗೆಲ್ಲ ಟ್ರೇಸ್ ಮಾಡ್ತಾರೆ. ಹೇಗೆಲ್ಲ ಕೊಲೆಗಡುಕರನ್ನ ಹಿಡಿತಾರೆ ಅನ್ನೋದು ರೋಚಕವಾಗಿದೆ. ಈ ಸರಣಿಯ ಇನ್ನಷ್ಟು ವಿವರ ಇಲ್ಲಿದೆ ಓದಿ.
ರಾಖ್….(Raakh) ಅಂದ್ರೆ ಬೂದಿ ಅಂತ ಅರ್ಥ. ಆದರೆ, ಈ ಒಂದು ವೆಬ್ ಸರಣಿಯಲ್ಲಿ (Web Series) 1978 ಕಾಲಘಟ್ಟದಲ್ಲಿ ನಡೆಯುವ ಕೊಲೆಗಳ ಕತೆ ಇದೆ. ಇಬ್ಬರು ಹದಿಹರೆಯದವರ ಅಪಹರಣ ಮತ್ತು ಕೊಲೆಯಿಂದ ಈ ಸರಣಿ ಶುರು ಆಗುತ್ತದೆ. ಆ ಕಾಲದಲ್ಲಿ ಈ ರೀತಿಯ ಕೇಸ್ ತುಂಬಾನೆ ಅಪರೂಪವೇ ಬಿಡಿ. ಆಗ ಪೊಲೀಸರು ಹೇಗೆಲ್ಲ ಪರದಾಡುತ್ತಾರೆ ಅನ್ನೋದನ್ನ ಈ ವೆಬ್ ಸರಣಿ ಹೇಳುತ್ತದೆ. ಅಮೆಜಾನ್ ಪ್ರೈಮ್ (Amazon Prime) ಅಲ್ಲಿ ಈ ಸರಣಿ ಜೂನ್-12 ರಿಂದ ಸ್ಟ್ರೀಮಿಂಗ್ (Streaming) ಆಗುತ್ತಿದೆ. ಈ ಸರಣಿ ಹೇಗಿದೆ ಅನ್ನೋದನ್ನ ಟ್ರೈಲರ್ ಹೇಳುತ್ತಿದೆ. ಇದರ ಸುತ್ತ ಇರೋ ಇನ್ನಷ್ಟು ವಿವರ ಇಲ್ಲಿದೆ ಓದಿ.
ದೆಹಲಿಯಲ್ಲಿ ಎರಡು ಕೊಲೆ ಆಗುತ್ತವೆ. ಅದಕ್ಕೂ ಮೊದಲು ಆ ಹದಿಹರೆಯದವರ ಅಪಹರಣ ಆಗಿರುತ್ತದೆ. ಇದರಿಂದ ದೆಹಲಿ ಪೊಲೀಸರಿಗೆ ಸಿಕ್ಕಾಪಟ್ಟೆ ಟೆನ್ಷನ್ ಆಗಿ ಬಿಡುತ್ತದೆ.
ಅವನ ಆ ಕಣ್ಣು, ಆ ಧ್ವನಿ
ಕಾರಣ ಈ ರೀತಿಯ ಕೊಲೆ ಮತ್ತು ಅಪಹರಣಗಳೆಲ್ಲ ತುಂಬಾನೆ ಅಪರೂಪವೇ ಆಗಿರುತ್ತವೆ. ಅದಕ್ಕೇನೆ ಸಬ್ ಇನ್ಸ್‌ಪೆಕ್ಟರ್ ಜಯಪ್ರಕಾಶ್ ಈ ಕೊಲೆಗಡುಗರ ಹಿಂದೆ ಬೀಳ್ತಾರೆ.
ಕೊಲೆ ಗಡುಕರಲ್ಲಿ ಒಬ್ಬನ ನಗು ವಿಚಿತ್ರವಾಗಿರುತ್ತದೆ. ಕಣ್ಣುಗಳಲ್ಲಿ ಆ ಕ್ರೌರ್ಯ ಕಾಣ್ತಾ ಇರುತ್ತದೆ. ಅದನ್ನ ನೋಡಿ ಬೆಚ್ಚಿ ಬಿದ್ದ ಹೆಣ್ಣುಮಕ್ಕಳು ಅದನ್ನೇ ಹೇಳ್ತಾ ಇರ್ತಾಳೆ.
ಆತನ ಆ ಕ್ರೌರ್ಯ ತುಂಬಿದ ಕಣ್ಣುಗಳು, ಆತನ ಆ ವಿಚಿತ್ರ ನಗು ಅಂತಲೇ ಪೊಲೀಸ್ ಜಯಪ್ರಕಾಶ್ ಅವರಿಗೆ ಹೇಳ್ತಾನೇ ಇರ್ತಾರೆ. ಜಯಪ್ರಕಾಶ್ ಅವರಿಗೆ ಎಲ್ಲಿ ಹೋದ್ರೂ ಒಂದು ಟೆನ್ಷನ್ ಇರುತ್ತದೆ. ಇನ್ಯಾರ ಕೊಲೆ ಮಾಡ್ತಾರೋ ಏನೋ ಅನ್ನು ಆತಂಕದಲ್ಲಿಯೇ ತನಿಖೆ ಮುಂದುವರೆದಿರುತ್ತದೆ.
ಈ ಕೊಲೆಗಾರರಲ್ಲಿ ಒಬ್ಬನ ಹೆಸರು ಬಾಬು ಮತ್ತೊಬ್ಬನ ಹೆಸರು ರಜ್ಜೋ ಅಂತಲೇ ಇರುತ್ತದೆ.
ಪೊಲೀಸರಿಗೆ ಫುಲ್ ಟೆನ್ಷನ್
ಈ ಕೊಲೆಗಾರರನ್ನ ಹಿಡಿಯಲು ಸಬ್ ಇನ್ಸ್‌ಪೆಕ್ಟರ್ ಜಯಪ್ರಕಾಶ್ ಸಾಕಷ್ಟು ಕಷ್ಟಪಡ್ತಾರೆ. ಸಮಯವನ್ನು ಲೆಕ್ಕಿಸದೆ ಬೆನ್ನಟ್ಟಿ ಹೋಗ್ತಾರೆ. ಹೀಗೆ ಸಾಗುವ ಈ ಒಂದು ಸರಣಿ ಅಮೆಜಾನ್ ಪ್ರೈಮ್ ಅಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ.
ರಾಖ್ ಅನ್ನುವ ಈ ವೆಬ್ ಸರಣಿ ಜೂನ್-12 ರಿಂದಲೇ ಪ್ರಸಾರ ಆಗುತ್ತಿದೆ. ಅಮೆಜಾನ್ ಪ್ರೈಮ್ ಈ ಒಂದು ಮಾಹಿತಿಯನ್ನ ಅಧಿಕೃತವಾಗಿಯೇ ಕೊಟ್ಟಿದೆ.
ರಾಖ್ ಸರಣಿಯಲ್ಲಿ ಸಬ್ ಇನ್ಸ್‌ಪೆಕ್ಟರ್ ಜಯಪ್ರಕಾಶ್ ಪಾತ್ರವನ್ನ ನಟ ಅಲಿ ಫಜಲ್ ಮಾಡಿದ್ದಾರೆ. ಬಾಬು ಪಾತ್ರವನ್ನ ನಟ ಆಕಾಶ್ ಮಖಿಜಾ ಮಾಡಿದ್ದಾರೆ. ರಜ್ಜೋ ಅನ್ನುವ ರೋಲ್ ಅನ್ನ ರಮಣ್‌ದೀಪ್ ಯಾದವ್ ಮಾಡಿದ್ದಾರೆ. ನಟಿ ಸೋನಾಲಿ ಬೇಂದ್ರೆ ಇಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.
ಇವರ ಈ ವೆಬ್ ಸರಣಿಯನ್ನ ಪ್ರೋಸಿತ್ ರಾಯ್ ಡೈರೆಕ್ಷನ್ ಮಾಡಿದ್ದಾರೆ. ಇದರ ಕಾರ್ಯಕಾರಿ ನಿರ್ಮಾಪಕರೂ ಇವರೇ ಆಗಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಈ ರಾಖ್ ಸರಣಿ ಇದೀಗ ಪ್ರಸಾರ ಆಗುತ್ತಿದೆ.
Bangalore [Bangalore],Bangalore,Karnataka
Jun 12, 2026 10:42 PM IST













