Last Updated:
ಪುಟ್ಟಕ್ಕ ಮಕ್ಕಳು ಸೀರಿಯಲ್ ಖ್ಯಾತಿಯ ಕಂಠಿ ಸಿನಿಮಾ ಹೀರೋ ಆಗಿದ್ದಾರೆ. ಇನ್ನು ಹೆಸರಿಡದ ಈ ಚಿತ್ರಕ್ಕೆ ಮುಹೂರ್ತ ಕೂಡ ಆಗಿದೆ. ಚಿತ್ರದಲ್ಲಿ ಮಳೆ ಪ್ರಮುಖ ಪಾತ್ರವಹಿಸುತ್ತದೆ. ಆದರೆ, ಇದು ಮುಂಗಾರು ಮಳೆ ರೀತಿ ಸಿನಿಮಾ ಅಲ್ಲ. ಇಲ್ಲಿ ಬೇರೆ ವಿಷಯ ಇದೆ. ಅದರ ವಿವರ ಮುಂದೆ ಇದೆ ಓದಿ.
ಹ್ಯಾಟ್ರಿಕ್ ಶಿವರಾಜ್ ಕುಮಾರ್ (Shiva Rajkumar) ಅವರು ಈ ಯವ ನಟನ ಪ್ರತಿಭೆಯನ್ನ ಮೆಚ್ಚಿಕೊಂಡಿದ್ದರು. ರಿಯಾಲಿಟಿ ಶೋದಲ್ಲಿ ಡ್ಯಾನ್ಸ್ ನೋಡಿ ಕಳೆದು ಹೋಗಿದ್ದರು. ಶಿವರಾಜ್ ಕುಮಾರ್ (Shiva Rajkumar) ಅವರ ಓಂ ಚಿತ್ರದ ಆ ಸಿಗರೇಟ್ ಹಚ್ಚುವ ಸೀನ್ ಅನ್ನ ವೇದಿಕೆ ಮೇಲೆ ರೀ-ಕ್ರಿಯೇಟ್ ಕೂಡ ಮಾಡಿದ್ದರು. ಇದನ್ನೆಲ್ಲ ನೋಡಿದ ಶಿವಣ್ಣ ಭೇಷ್ ಅಂತಲೇ ಹೇಳಿದ್ರು. ಹಾಗೆ ಶಿವಣ್ಣನಿಂದ ಮೆಚ್ಚುಗೆ ಪಡೆದುಕೊಂಡ ಆ ಯವ ನಟ ಇದೀಗ ಸಿನಿಮಾ ಹೀರೋ ಆಗಿದ್ದಾರೆ. ಇವರ ಮೊದಲ ಚಿತ್ರಕ್ಕೆ ಇನ್ನು ಹೆಸರಿಟ್ಟಿಲ್ಲ. ಆದರೆ ಸಿನಿಮಾ ಲಾಂಚ್ ಆಗಿದೆ. ಟಗರು ಪಲ್ಯ ಚಿತ್ರದ (Tagaru Palya) ಡೈರೆಕ್ಟರ್ ಈ ಸಿನಿಮಾ (Movie) ಮಾಡ್ತಿದ್ದಾರೆ. ಇವರಿಗೆ ಇದು ನಿರ್ದೇಶನದ 2ನೇ ಚಿತ್ರವೇ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಕಂಠಿ ಯಾರು ಅಂತ ಗೊತ್ತೇ ಇರುತ್ತದೆ. ಅಷ್ಟು ಫೇಮಸ್ ಆಗಿರೋದು ಸಿನಿಮಾದಿಂದ ಅಲ್ಲ. ಸೀರಿಯಲ್ ಅಲ್ಲಿ ನಟಿಸೋ ಮೂಲಕ ಈ ಕಂಠಿ ಎಲ್ಲರ ಗಮನಕ್ಕೂ ಬಂದಿದ್ದಾರೆ.
ಧನುಷ್ ಮೊದಲ ಸಿನಿಮಾ
ಧನುಷ್ ಲುಕ್ ಚೆನ್ನಾಗಿದೆ. ಕಂಠಿ ಅನ್ನುವ ಪಾತ್ರಕ್ಕೆ ಸೂಕ್ತವಾಗಿಯೇ ಇತ್ತು. ಆದರೆ, ಇದೀಗ ಸೀರಿಯಲ್ ನಿಂದ ಈ ಧನುಷ್ ಸಿನಿಮಾಗೆ ಕಾಲಿಟ್ಟಿದ್ದಾರೆ.
ಟಗರು ಪಲ್ಯ ಚಿತ್ರದ ಡೈರೆಕ್ಟರ್ ಉಮೇಶ್ ಕೆ ಕೃಪ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಈ ಮೂಲಕ ಧನುಷ್ ಮೊದಲ ಚಿತ್ರದ ಡೈರೆಕ್ಟರ್ ಆಗಿದ್ದಾರೆ.
ಧನುಷ್ ಅಭಿನಯದ ಈ ಚಿತ್ರಕ್ಕೆ ಮುಹೂರ್ತ ಆಗಿದೆ. ಬೆಂಗಳೂರಿನ ಬಂಡೆ ಮಹಾಕಾಳಮ್ಮ ದೇವಸ್ಥಾನದಲ್ಲಿ ಚಿತ್ರದ ಪೂಜೆ ಆಗಿದೆ. ಈ ಚಿತ್ರದಲ್ಲಿ ನವ ನಟಿ ಮನಸ್ವಿ ಈ ಚಿತ್ರದ ನಾಯಕಿ ಆಗಿದ್ದಾರೆ.
ಮನಸ್ವಿ ಈಗಾಗಲೆ ಕೆಲವು ಚಿತ್ರದಲ್ಲಿ ನಟಿಸಿದ್ದಾರೆ. ಸೀರಿಯಲ್ ಕೂಡ ಮಾಡಿದ್ದಾರೆ. ಆದರೆ, ಈ ಚಿತ್ರದಲ್ಲಿ ನಟ ಧನುಷ್ಗೆ ಜೋಡಿ ಆಗಿದ್ದಾರೆ.
ಚಿತ್ರದ ಲಾಂಚ್; ಮಳೇನೆ ಹೈಲೈಟ್
ಧನುಷ್ ಹಾಗೂ ಮನಸ್ವಿ ಅಭಿನಯದ ಈ ಚಿತ್ರದಲ್ಲಿ ಎಂತಹ ಕಥೆ ಇದೆ. ಈ ಪ್ರಶ್ನೆಗೆ ಉತ್ತರವನ್ನು ಚಿತ್ರ ತಂಡ ಕೊಟ್ಟಿದೆ. ಸಿನಿಮಾದಲ್ಲಿ ಎಮೋಷನ್ಸ್ ಇದೆ. ಕಾಮಿಡಿ ಮತ್ತು ಪ್ರೀತಿನೂ ಇದೆ.
ಇದಕ್ಕೂ ಹೆಚ್ಚಾಗಿ ಇದು ಒಂದು ನಾಡಿನ ಕಥೆಯ ಚಿತ್ರ ಆಗಿದೆ. ಟಗರು ಪಲ್ಯ ಆದ್ಮೇಲೆ ಡೈರೆಕ್ಟರ್ ಉಮೇಶ್ ಕೆ ಕೃಪ ಈ ಚಿತ್ರ ಮಾಡುತ್ತಿದ್ದಾರೆ. ಇದರ ಚಿತ್ರೀಕರಣದ ಮಾಹಿತಿಯನ್ನೂ ಮುಹೂರ್ತದ ದಿನವೇ ಹಂಚಿಕೊಂಡಿದ್ದಾರೆ.
ಧನುಷ್ ಮತ್ತು ಮನಸ್ವಿ ಅವರ ಈ ಚಿತ್ರಕ್ಕೆ ಮಳೆ ಮುಖ್ಯ ಪಾತ್ರ ನಿರ್ವಹಿಸುತ್ತದೆ. ಅಂದ್ರೆ ಇಡೀ ಕಥೆಗೆ ಮಳೆ ಮುಖ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಚಿತ್ರವನ್ನ ಮಳೆಗಾಲದಲ್ಲಿಯೇ ಚಿತ್ರೀಕರಣ ಮಾಡುವ ಪ್ಲಾನ್ ಕೂಡ ಇದೆ.
ಇದೀಗ ಮಳೆಗಾಲವು ಶುರು ಆಗಿದೆ. ಮುಂದಿನ ವಾರದಿಂದಲೇ ಚಿತ್ರೀಕರಣ ಶುರು ಆಗುತ್ತಿದೆ. ಆಗುಂಬೆ, ಚಿಕ್ಕಮಗಳೂರು, ಕಾರ್ಕಳ ಕಡೆಗಳಲ್ಲಿ ಈ ಸಿನಿಮಾದ ಶೂಟಿಂಗ್ ಪ್ಲಾನ್ ಆಗಿದೆ.
ಮೊದಲ ಹಂತದ ಶೂಟಿಂಗ್ ಅನ್ನ ಇಲ್ಲಿ ಮಾಡೋಕೆ ಚಿತ್ರ ತಂಡ ಪಕ್ಕಾ ರೆಡಿ ಆಗುತ್ತಿದೆ. ಪಳನಿ ಡಿ ಸೇನಾಪತಿ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಎಸ್ ಕೆ ರಾವ್ ಛಾಯಾಗ್ರಹಣ ಮಾಡುತ್ತಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













