Astrology: ದೀರ್ಘಾವಧಿಯ ಸಂಪತ್ತನ್ನು ಊಹಿಸುವಾಗ ಗುರು ಮತ್ತು ಶನಿಯ ಪಾತ್ರ ಎಷ್ಟು ಮಹತ್ವದ್ದು? | How important is the role of Jupiter and Saturn in predicting long-term wealth? | ಜ್ಯೋತಿಷ್ಯ | ACTPnews

Astrology: ದೀರ್ಘಾವಧಿಯ ಸಂಪತ್ತನ್ನು ಊಹಿಸುವಾಗ ಗುರು ಮತ್ತು ಶನಿಯ ಪಾತ್ರ ಎಷ್ಟು ಮಹತ್ವದ್ದು? | How important is the role of Jupiter and Saturn in predicting long-term wealth? | ಜ್ಯೋತಿಷ್ಯ


ಆರೋಗ್ಯ, ವ್ಯವಹಾರ, ಸಂತಾನ ಹಾಗೂ ದೀರ್ಘಾವಧಿಯ ಸಂಪತ್ತಿನ ವಿಷಯವಾಗಿಯೂ ಜ್ಯೋತಿಷ್ಯದ ಮೂಲಕ ತಿಳಿಯಬಹುದಾಗಿದೆ ಎನ್ನಲಾಗುತ್ತದೆ. ಆದರೆ ಈ ಬಗ್ಗೆ ತಿಳಿಯಬೇಲಾದರೆ ನಮ್ಮ ಜಾತಕದಲ್ಲಿ ಗುರು ಹಾಗೂ ಶನಿಯ ಪಾತ್ರ ಬಲು ಮಹತ್ವವಾಗಿರುತ್ತದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಹಾಗಾದರೆ ಇವೆರಡೇ ಅಂದ್ರೆ ಗುರು ಹಾಗೂ ಶನಿ ಏಕೆ ಅಷ್ಟೊಂದು ಮಹತ್ವವಾಗಿವೆ ಎಂಬುದನ್ನು ಮೊದಲು ತಿಳಿದುಕೊಳ್ಳೋಣ.

ಗುರು ಗ್ರಹ:

ಜಾತಕದಲ್ಲಿ ಗುರು ಯಾವಾಗಲಿದ್ದರೂ ಪ್ರಗತಿ, ಸಮೃದ್ಧತೆ ಹಾಗೂ ಉತ್ತಮ ಸಮಯವನ್ನು ಪ್ರತಿನಿಧಿಸುತ್ತಾನೆ ಎನ್ನಲಾಗಿದೆ. ವ್ಯಕ್ತಿಯೊಬ್ಬರ ಜಾತಕ ಚಾರ್ಟ್ ನಲ್ಲಿ ಗುರುವಿನ ಸ್ಥಾನ ಬಲಿಷ್ಠವಾಗಿದ್ದರೆ ಆ ವ್ಯಕ್ತಿ ಆರ್ಥಿಕವಾಗಿ ಸಾಕಷ್ಟು ಬೆಳವಣಿಗೆ ಕಾಣುತ್ತಾನೆ.

ಉಚ್ಛ ಗುರುವಿನ ಸ್ಥಾನವು ಉದಾರತೆ, ಅಶಾವಾದವನ್ನು ಪ್ರೋತ್ಸಾಹಿಸುವುದರಿಂದ ಇವು ಸ್ವಾಬಾವಿಕವಾಗಿಯೇ ಆರ್ಥಿಕ ಸಂಪನ್ಮೂಲಗಳನ್ನು ಆಕರ್ಷಿಸುತ್ತವೆ ಎನ್ನಲಾಗಿದೆ. ಜಾತಕದಲ್ಲಿ ಗುರುವಿನ ಸ್ಥಾನ ಎರಡನೇ ಅಥವಾ ಹನ್ನೊಂದನೇ ಮನೆಯಲ್ಲಿ ಬಲಶಾಲಿಯಾಗಿದ್ದರೆ ಹೂಡಿಕೆ, ವ್ಯಾಪಾರ ಮುಂತಾದವುಗಳಲ್ಲಿ ಸಾಕಷ್ಟು ಯಶಸ್ಸು ದೊರೆಯುತ್ತದೆ.

ಇದನ್ನು ಓದಿ: ಈ 3 ರಾಶಿಯವರಿಗೆ ರಾಜಯೋಗ! ಅದೃಷ್ಟದ ಮಳೆ ಸುರಿಸುತ್ತಾನೆ ಶನಿದೇವ!

ಆದರೆ ಗುರು ಕೇವಲ ಅಂಧಕಾರದಲ್ಲಿ ಸಂಪತ್ತನ್ನು ಮಾತ್ರವೇ ಕರಗಿಸುತ್ತ ಸಾಗುವುದಿಲ್ಲ, ಸಮತೋಲನ ಕಾಯ್ದುಕೊಳ್ಳುವ ಪಾಠವನ್ನೂ ಹೇಳಿಕೊಡುತ್ತಾನೆ. ಗುರು ನಮ್ಮ ಬಳಿ ಇದ್ದಾನೆಂದು ಮೈಮರೆತು ನಡೆದರೆ ಅಪಾಯಗಳನ್ನೂ ಸಹ ತಂದೊಡ್ಡಬಹುದು. ಹಾಗಾಗಿ ಗುರುವಿನ ಸ್ಥಾನ ಅದೃಷ್ಟದ ಜೊತೆಗೆ ಬುದ್ಧಿಮತ್ತೆಯೂ ನಮ್ಮೊಂದಿಗಿರಬೇಕು ಎಂಬ ಪಾಠವನ್ನ ಗುರು ಕಲಿಸುತ್ತಾನೆ.

ಶನಿ ಗ್ರಹ:

ಜೀವನದಲ್ಲಿ ಶಿಸ್ತು ಎಂದರೆ ಶನಿ. ರಚನೆ, ಶ್ರಮ, ಪಕ್ಕಾ ಯೋಜನೆ ಮುಂತಾದ ಆಯಾಮಗಳನ್ನೊಳಗೊಂಡಿರುತ್ತಾನೆ ಶನಿ. ಜೀವನದಲ್ಲಿ ಒಂದು ಕಡೆ ಗುರು ಅವಕಾಶಗಳನ್ನು ಹುಡುಕಿ ನಿಮ್ಮ ಬಳಿ ತಂದರೆ, ಶನಿ ಆ ಅವಕಾಶಗಳು ಗಟ್ಟಿ ಬುನಿಯಾದಿಯ ಮೇಲೆ ನಿರ್ಮಿತವಾಗಿವೆ ಎಂಬುದನ್ನು ಖಚಿತಪಡಿಸಿಕೊಳ್ಳುತ್ತದೆ.

ಆದರೆ ನೆನಪಿಡಿ ಶನಿಯು ತಾಳ್ಮೆಗೆ ತುಂಬ ಮಹತ್ವ ನೀಡುತ್ತಾನೆ ಹಾಗೂ ತಾಳ್ಮಯಿದ್ದವರಿಗೆ ಉತ್ತಮವಾಗಿ ಫಲ ನೀಡುತ್ತಾನೆ. ಉದಾಹರಣೆಗೆ ನಿಮ್ಮ ಬಳಿ ಅಪಾರ ಹಣ ಬಂತೆಂದರೆ ಶನಿ ನೀವು ಅದನ್ನು ಬುದ್ಧಿಮತ್ತೆಯಿಂದ ಇನ್ನು ಹಲವು ಲಾಭದಾಯಕ ಅಂಶಗಳಲ್ಲಿ ಹೂಡಿಕೆ ಮಾಡಿ ಮಗದಷ್ಟು ಹಣವನ್ನು ಭವಿಷ್ಯದಲ್ಲಿ ಲಾಭಗಳಿಸುವಂತೆ ಪ್ರೇರೇಪಿಸುತ್ತಾನೆ.

ಇದನ್ನು ಓದಿ: ಹೊಸ ವರ್ಷದಲ್ಲಿ ಈ ಐದು ರಾಶಿಯವರಿಗೆ ಅದೃಷ್ಟವೋ ಅದೃಷ್ಟ! ನಿಮ್ಮ ರಾಶಿ ಇದಿಯಾ ನೋಡಿ?

ಶನಿಯು ಜಾತಕದಲ್ಲಿ ಉತ್ತಮ ಸ್ಥಾನದಲ್ಲಿದ್ದರೆ, ನಿಮಗೆ ನಿಧಾನವಾಗಿಯಾದರೂ ಸರಿ ಸುಸ್ಥಿರವಾಗಿ ಆದಾಯ ಬರುವಂತೆ ನೋಡಿಕೊಳ್ಳುತ್ತಾನೆ. ಶನಿಯ ಫಲವು ಸಾಕಷ್ಟು ಶಿಸ್ತಿನ ಮೂಲಕ ನಡೆಸಲ್ಪಡುತ್ತದೆ. ಅದೇ ಶನಿ ಜಾತಕದಲ್ಲಿ ಸರಿಯಾದ ಸ್ಥಾನದಲ್ಲಿಲ್ಲದೆ ಹೋದರೆ ಆರ್ಥಿಕ ಪರದಾಟಗಳನ್ನು ತೋರ್ಸಿಯುತ್ತಾನೆ ಹಾಗೂ ಸರಿಯಾದ ಜವಾಬ್ದಾರಿಗಳನ್ನು ಕಲಿಸುತ್ತಾನೆ.

ಗುರು ಮತ್ತು ಶನಿ ಪರಸ್ಪರ ಪೂರಕವಾಗಿರುತ್ತವೆ. ಗುರುವು ಬೆಳವಣಿಗೆಯನ್ನು ಪ್ರೇರೇಪಿಸುತ್ತದೆ, ಶನಿಯು ಬೆಳವಣಿಗೆಯನ್ನು ಬುದ್ಧಿವಂತಿಕೆಯಿಂದ ನಿರ್ವಹಿಸುತ್ತದೆ ಎಂದು ಖಚಿತಪಡಿಸುತ್ತದೆ. ಒಟ್ಟಾಗಿ, ಅವರು ಪ್ರಾಯೋಗಿಕತೆಯೊಂದಿಗೆ ಆಶಾವಾದವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತಾರೆ. ಚಾರ್ಟ್‌ನಲ್ಲಿ ಅವರ ನಿಯೋಜನೆಯನ್ನು ವಿಶ್ಲೇಷಿಸುವುದು ಹಣಕಾಸಿನ ಸಾಮರ್ಥ್ಯ ಮತ್ತು ಸ್ಥಿರತೆಗೆ ಅಮೂಲ್ಯವಾದ ಒಳನೋಟಗಳನ್ನು ನೀಡುತ್ತದೆ.

ಈ ಗ್ರಹಗಳ ಪ್ರಭಾವವನ್ನು ಅರ್ಥಮಾಡಿಕೊಳ್ಳುವುದು ಸಂಪತ್ತು ಕೇವಲ ಅದೃಷ್ಟ ಅಥವಾ ಕಠಿಣ ಪರಿಶ್ರಮದ ಬಗ್ಗೆ ಅಲ್ಲ – ಇದು ಶಾಶ್ವತ ಯಶಸ್ಸಿಗೆ ಎರಡನ್ನೂ ಸಂಯೋಜಿಸುವುದು ಎಂದು ನಮಗೆ ನೆನಪಿಸುತ್ತದೆ.

Disclaimer

ಇಲ್ಲಿ ನೀಡಿರುವ ಎಲ್ಲಾ ಮಾಹಿತಿಯನ್ನು ಜ್ಯೋತಿಷ್ಯ ಶಾಸ್ತ್ರಜ್ಞರು ಮತ್ತು ತಜ್ಞರನ್ನು ಸಂಪರ್ಕಿಸಿ ರಾಶಿ, ಧರ್ಮ ಮತ್ತು ಶಾಸ್ತ್ರಗಳಿಗೆ ಅನುಸಾರವಾಗಿ ನೀಡಲಾಗಿದೆ. ಯಾವುದೇ ಘಟನೆ-ದುರ್ಘಟನೆ ಅಥವಾ ಲಾಭ-ನಷ್ಟಗಳು ಕೇವಲ ಕಾಕತಾಳೀಯ. ಸಾರ್ವಜನಿಕ ಹಿತದೃಷ್ಟಿಯಿಂದ ಜ್ಯೋತಿಷಿಗಳ ಮಾಹಿತಿ ನೀಡಲಾಗಿದೆ. ಇಲ್ಲಿ ತಿಳಿಸಿರುವ ಯಾವುದೇ ಮಾಹಿತಿಯನ್ನು ಲೋಕಲ್ 18 ವ್ಯಕ್ತಿಗತವಾಗಿ ಸಮರ್ಥಿಸಿಕೊಳ್ಳುವುದಿಲ್ಲ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed