ಗಂಧದ ಗುಡಿ ಎಷ್ಟು ನಿಮಿಷದ ಸಿನಿಮಾ (ಚಿತ್ರ ಕೃಪೆ: ಅಶ್ವಿನಿ ಪುನೀತ್ ರಾಜ್‌ಕುಮಾರ್ ಇನ್‌ಸ್ಟಾಗ್ರಾಮ್)
ಈ ಚಿತ್ರದ ಮೇಲೆ ಪುನೀತ್ ತುಂಬಾನೆ ಕೆಲಸ ಮಾಡಿದ್ದರು. ಕರ್ನಾಟಕದ ಕಾಡು ಮೇಡು ಅಲೆದಿದ್ದರು. ವೈಲ್ಡ್ ಲೈಫ್ ಫೋಟೋಗ್ರಾಫರ್ ಅಮೋಘ ವರ್ಷ ಇಲ್ಲಿ ಪುನೀತ್ ಅವರ ಜೊತೆಗೆ ಇದ್ದರು. ಇವರ ಈ ಚಿತ್ರ ಇದೀಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿದೆ. ಇಲ್ಲಿವರೆಗೂ ನೋಡದೇ ಇರೋದು ಇಲ್ಲಿ ಈ ಚಿತ್ರ ವೀಕ್ಷಿಸಬಹದು.
ಪುನೀತ್ ಅವರ ಈ ಒಂದು ಕೊನೆಯ ಚಿತ್ರ ತುಂಬಾನೆ ದೊಡ್ಡ ಚಿತ್ರವೇನು ಅಲ್ಲ, 1 ಗಂಟೆ 38 ನಿಮಿಷದ ಚಿತ್ರ ಇದಾಗಿದೆ. ಥಿಯೇಟರ್ ಅಲ್ಲಿ ಈ ಚಿತ್ರ ಪುನೀತ್ ಮೊದಲ ಪುಣ್ಯ ಸ್ಮರಣೆ ಹಿಂದಿನ ದಿನ ರಿಲೀಸ್ ಆಗಿತ್ತು.
ಅಂದ್ರೆ ಅಕ್ಟೊಬರ್-28, 2022 ರಂದು ಈ ಚಿತ್ರ ರಿಲೀಸ್ ಆಗಿತ್ತು. ಥಿಯೇಟರ್‌ಗೆ ಬಂದ್ಮೇಲೆ ಈ ಸಿನಿಮಾ ಅಮೆಜಾನ್ ಪ್ರೈಮ್‌ಗೆ ಬಂದಿದೆ. ಇಂದಿಗೂ ಈ ಚಿತ್ರ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಸಿಗುತ್ತದೆ.
ಪುನೀತ್ ಅಭಿನಯದ ಚಕ್ರವ್ಯೂಹ ಚಿತ್ರವೂ ಅಮೆಜಾನ್ ಪ್ರೈಮ್ ಅಲ್ಲಿದೆ. ಆದರೆ, ಕನ್ನಡದ ವರ್ಶನ್ ಇಲ್ಲಿ ಸಿಗೋದಿಲ್ಲ. ಬದಲಾಗಿ ತೆಲುಗು ಭಾಷೆಗೆ ಡಬ್ ಆಗಿರೋ ಚಿತ್ರವೇ ಇಲ್ಲಿ ದೊರೆಯುತ್ತದೆ.
ಗಂಧದ ಗುಡಿ ಸಿನಿಮಾ
ಅಂದ್ಹಾಗೆ ಈ ಚಿತ್ರಕ್ಕೆ ತೆಲುಗು ಭಾಷೆಯಲ್ಲಿ ಸಿವಿಲ್ ಎಂಜಿನಿಯರ್ ಅಂತಲೇ ಈ ಚಿತ್ರಕ್ಕೆ ಹೆಸರಿದೆ. ಈ ಚಿತ್ರವನ್ನ ಎಂ.ಸರವಣನ್ ಡೈರೆಕ್ಷನ್ ಮಾಡಿದ್ದಾರೆ.
ಈ ಚಿತ್ರದಲ್ಲಿ ತಮಿಳು ಆ್ಯಕ್ಟರ್ ಅರುಣ್ ವಿಜಯ್ ನಟಿಸಿದ್ದಾರೆ. ರಚಿತಾ ರಾಮ್ ಈ ಚಿತ್ರದಲ್ಲಿ ಪುನೀತ್‌ಗೆ ಜೋಡಿ ಆಗಿದ್ದಾರೆ. ಏಪ್ರಿಲ್-29,2016 ರಂದು ಈ ಚಿತ್ರ ತೆರೆಗೆ ಬಂದಿತ್ತು. ಇದೀಗ ಅಮೆಜಾನ್ ಓಟಿಟಿಯಲ್ಲಿ ಇದು ಲಭ್ಯವಿದೆ.
ಪುನೀತ್ ಅಭಿನಯದ ಅಜಯ್ ಚಿತ್ರವೂ ಅಮೆಜಾನ್ ಅಲ್ಲಿದೆ. ಆದರೆ, ಇಲ್ಲಿ ಹಿಂದಿ ಡಬ್ ಸಿನಿಮಾನೇ ಸಿಗುತ್ತದೆ. ಇದಕ್ಕೆ ಜಬರ್ದಸ್ತ್ ತೇವರ್ ಅಂತಲೇ ಹೆಸರಿದೆ.
ಈ ಚಿತ್ರ 2006 ಮೇ-4 ರಂದು ರಿಲೀಸ್ ಆಗಿತ್ತು. ಮೆಹರ್ ರಮೇಶ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು. ಅನುರಾಧಾ ಮೆಹ್ತಾ ಅವರು ಈ ಚಿತ್ರದಲ್ಲಿ ಅಪ್ಪುಗೆ ಜೋಡಿ ಆಗಿದ್ದರು. ಪ್ರಕಾಶ್ ರಾಜ್ ಈ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಈಗ ಅಮೆಜಾನ್ ಪ್ರೈಮ್ ವಿಡಿಯೋದಲ್ಲೂ ಇದೆ.
ಅಪ್ಪು ‘ಅಜಯ್’ ಸಿನಿಮಾ
ಪುನೀತ್ ರಾಜ್‌ಕುಮಾರ್ ಅವರ ಪಿಆರ್‌ಕೆ ಸಂಸ್ಥೆಯಿಂದ ಕವಲುದಾರಿ ಚಿತ್ರ ನಿರ್ಮಾಣಗೊಂಡಿತ್ತು. ನಟ ರಿಷಿ ಹಾಗೂ ಅನಂತ್ ನಾಗ್ ಈ ಚಿತ್ರದಲ್ಲಿದ್ದರು.
ಇವರ ಈ ಚಿತ್ರವನ್ನ ಹೇಮಂತ್ ರಾವ್ ಡೈರೆಕ್ಷನ್ ಮಾಡಿದ್ದರು. ಏಪ್ರಿಲ್-12,2019 ರಂದು ಈ ಚಿತ್ರ ರಿಲೀಸ್ ಆಗಿತ್ತು. ಇದು ಅಮೆಜಾನ್ ಪ್ರೈಮ್ ವಿಡಿಯೋದಲ್ಲೂ ಇದೆ.
ಪುನೀತ್ ನಿರ್ಮಾಣದ ಮಾಯಾಬಜಾರ್ ಚಿತ್ರವೂ ಇದೇ ಅಮೆಜಾನ್ ಪ್ರೈಮ್ ಅಲ್ಲಿದೆ. ಈ ಚಿತ್ರದಲ್ಲಿ ವಸಿಷ್ಠ ಸಿಂಹ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ, ಸುಧಾ ರಾಣಿ ಹೀಗೆ ಇನ್ನು ಹಲವು ಕಲಾವಿದರು ನಟಿಸಿದ್ದಾರೆ.
ರಾಧಾಕೃಷ್ಣ ರೆಡ್ಡಿ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಫೆಬ್ರವರಿ-22,2020 ರಂದು ಈ ಚಿತ್ರ ತೆರೆ ಕಂಡಿತ್ತು. ಪುನೀತ್ ಚಿತ್ರ ಪ್ರೇಮಿಗಳು ಈ ಎಲ್ಲ ಸಿನಿಮಾಗಳನ್ನ ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಇಂದಿಗೂ ನೋಡಬಹುದು.












