Last Updated:
ಪತಿಯ ಮರಣದ ನಂತರ ವಿಧವೆ ಮಗುವನ್ನು ದತ್ತು ಪಡೆದರೆ, ಆ ಮಗುವನ್ನು ಆಕೆಯ ಮೃತ ಪತಿಯೂ ದತ್ತು ಪಡೆದಿದ್ದಾನೆ ಎಂದು ಕಾನೂನುಬದ್ಧವಾಗಿ ಪರಿಗಣಿಸಲಾಗುತ್ತದೆ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಆದ್ದರಿಂದ, ಮಹಿಳೆಯ ಮರಣದ ನಂತರ, ಮಗುವಿಗೆ ಅವರ ತಂದೆಯ (ಮೃತ ಪತಿಯ) ಆಸ್ತಿಯಲ್ಲಿ ಅವರ ಪಾಲಿನ ಹಕ್ಕು ಇರುತ್ತದೆ ಎಂದು ಕೊರ್ಟ್ ತಿಳಿಸಿದೆ.
ಒಬ್ಬ ವಿಧವೆ (Widow) ಮಗುವನ್ನು ದತ್ತು ಪಡೆದರೆ, ಸಮಾಜ ಅಥವಾ ಕುಟುಂಬ ಆಕೆಯ ಹಕ್ಕುಗಳನ್ನು ಪ್ರಶ್ನೆಗಳನ್ನೆತ್ತುತ್ತವೆ. ಕಾನೂನು ಪ್ರಕಾರ ಮಹಿಳೆ ತನ್ನ ದತ್ತು ಮಗನಿಗೆ ತನ್ನ ಬಳಿ ಇರುವ ಯಾವುದೇ ವಸ್ತುವನ್ನು ನೀಡಬಹುದು. ಆದರೆ ಅವಳು ತನ್ನ ಮಗನಿಗೆ ತನ್ನ ಮೃತ ಗಂಡನ ಆಸ್ತಿಯಲ್ಲಿ ಪಾಲು ನೀಡಬಹುದೇ? ಅವನು ಪೂರ್ವಜರ ಆಸ್ತಿಯನ್ನು ಆನುವಂಶಿಕವಾಗಿ ಪಡೆಯಲು ಸಾಧ್ಯವಾಗುತ್ತದೆಯೇ? ವಿಧವೆಯೊಬ್ಬರು ದತ್ತು ಪಡೆದ ಮಗು ತನ್ನ ಮೃತ ಗಂಡನ ಆಸ್ತಿಗೆ ಉತ್ತರಾಧಿಕಾರಿಯಾಗಬಹುದೇ? ಈ ಎಲ್ಲಾ ಪ್ರಶ್ನೆಗಳಿಗೆ ಅಲಹಾಬಾದ್ ಹೈಕೋರ್ಟ್‌ನ ತೀರ್ಪು ಉತ್ತರಿಸಿದೆ.














