Last Updated:
ಕಾನ್ಸ್ ಅಲ್ಲಿ ಪ್ರಿಯಾಂಕಾ ಉಪೇಂದ್ರ ಅವರ ಸೆಪ್ಟೆಂಬರ್-21 ಪ್ರದರ್ಶನ ಕಂಡಿದೆ. ಮೆಚ್ಚುಗೆಯನ್ನು ಪಡೆದುಕೊಂಡಿದೆ. ಇದೀಗ ಈ ವಾರ ಈ ಚಿತ್ರ ರಿಲೀಸ್ ಆಗುತ್ತಿದೆ. ಆದರೆ, ಈ ಚಿತ್ರಕ್ಕೆ ಬೆಂಗಳೂರಿನಲ್ಲಿ 7 ಶೋಗಳು ಮಾತ್ರ ಸಿಕ್ಕಿದೆ. ಇದರ ಜೊತೆಗೆ ಕನ್ನಡದ ಕೆಲವು ಚಿತ್ರಗಳು ರಿಲೀಸ್ ಆಗುತ್ತಿವೆ. ಇವುಗಳ ಒಂದಷ್ಟು ವಿವರ ಮಾಹಿತಿನೂ ಇಲ್ಲಿದೆ.
ಪ್ರಿಯಾಂಕಾ ಉಪೇಂದ್ರ (Priyanka Upendra) ಅವರು ಒಂದು ಗ್ಲಾಮರ್ ಲೆಸ್ (Glamourless) ಸಿನಿಮಾ ಮಾಡಿದ್ದಾರೆ. ಈ ಚಿತ್ರದಲ್ಲಿ ಇವರು ಕೇರ್ ಟೇಕರ್ ರೋಲ್ ಮಾಡಿದ್ದಾರೆ. ಮೊನ್ನೆ ಮೇ-16 ರಂದು ಈ ಚಿತ್ರ ಕಾನ್ಸ್ ಚಲನ ಚಿತ್ರೋತ್ಸವದಲ್ಲೂ (Cannes Film Festival) ಈ ಚಿತ್ರ ಪ್ರದರ್ಶನ ಕಂಡಿದೆ. ಮೆಚ್ಚುಗೆ ಕೂಡ ಪಡೆದುಕೊಂಡಿದೆ. ಚಿತ್ರ ತಂಡ ಮೊದಲೇ ಹೇಳಿದಂತೆ ಇದೀಗ ಈ ಚಿತ್ರ ಈ ವಾರ ರಿಲೀಸ್ (This Week Release) ಆಗುತ್ತಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಅಲ್ಲಿ 7 ಶೋಗಳು ಮಾತ್ರ ಈ ಚಿತ್ರಕ್ಕೆ ಸಿಕ್ಕಿವೆ. ಈ ಬಗೆಗನ ಇನ್ನಷ್ಟು ವಿವರ ಇಲ್ಲಿದೆ ಓದಿ.
ಸೆಪ್ಟೆಂಬರ್-21 ಚಿತ್ರದಲ್ಲಿ ಒಂದು ಗಂಭೀರ ವಿಷಯವೇ ಇದೆ. ಆಲ್ಝೈಮರ್ಸ್ ಸಮಸ್ಯೆಯಿಂದ ಬಳಲುವ ಹಿರಿಯ ವ್ಯಕ್ತಿಯ ಸುತ್ತವೆ ಈ ಚಿತ್ರ ಇದೆ.
ಬೆಂಗಳೂರಿನಲ್ಲಿ 7 ಶೋಗಳು..
ಈ ಚಿತ್ರ ಕನ್ನಡ ಮತ್ತು ಹಿಂದಿಯಲ್ಲಿ ತಯಾರಾಗಿದೆ. ಕಾನ್ಸ್ ಚಿತ್ರೋತ್ಸವದಲ್ಲೂ ಈ ಸಿನಿಮಾ ಪ್ರದರ್ಶನ ಆಗಿದೆ. ಮೆಚ್ಚುಗೆ ಪಡೆದುಕೊಂಡಿದೆ.
ಮೊದಲೆ ಹೇಳಿಂತೆ ಈ ಚಿತ್ರ ಮೇ-22 ರಂದು ಈ ಚಿತ್ರ ರಿಲೀಸ್ ಆಗಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಅಲ್ಲಿ ಈ ಚಿತ್ರಕ್ಕೆ 7 ಶೋಗಳು ಸಿಕ್ಕಿವೆ.
ಈ ಚಿತ್ರದಲ್ಲಿ ಬಾಲಿವುಡ್‌ನ ನಟ ಪ್ರವೀಣ್ ಸಿಂಗ್ ಸಿಸೋಡಿಯಾ ಇಲ್ಲಿ ಆಲ್ಝೈಮರ್ಸ್ ಸಮಸ್ಯೆ ಇರೋ ವ್ಯಕ್ತಿಯ ಪಾತ್ರ ಮಾಡಿದ್ದಾರೆ. ಪ್ರಿಯಾಂಕಾ ಉಪೇಂದ್ರ ಅವರು ಈ ವ್ಯಕ್ತಿಯ ಕೇರ್ ಟೇಕ್ ರೋಲ್ ಮಾಡಿದ್ದಾರೆ.
ಪ್ರಿಯಾಂಕಾ ಉಪೇಂದ್ರ ಸೆಪ್ಟೆಂಬರ್-21 ಇವತ್ತೇ ರಿಲೀಸ್; ಕೇವಲ 7 ಶೋ ಇವೆ ನೋಡಿ!
ಇವರಲ್ಲದೆ ಈ ಚಿತ್ರದಲ್ಲಿ ಜರೀನಾ ವಹಾಬ್ ಹಾಗೂ ಅಮಿತ್ ಬೆಹ್ಲ್ ನಟಿಸಿದ್ದಾರೆ. ಇವರ ಈ ಚಿತ್ರಕ್ಕೆ ಕಾನ್ಸ್ ಅಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಆದರೆ, ಥಿಯೇಟರ್ ಅಲ್ಲಿ ಈ ಸಿನಿಮಾ ಯಾವ ರೀತಿ ಹೋಗುತ್ತದೆ ಅನ್ನುವ ಕುತೂಹಲ ಇದೆ.
ಈ ವಾರ ಮೇ-22 ರಂದು ಕನ್ನಡದಲ್ಲಿ ಇನ್ನು ಕೆಲವು ಚಿತ್ರಗಳು ಬರ್ತಿವೆ. ಈ ಚಿತ್ರಗಳ ಹೆಸರು ಹೀಗಿವೆ. ಉಗ್ರ ಮರ್ಧಿನಿ, ಮಕ್ಕಳ ಸೈನ್ಯ, ಅಸುರನ ಕೈಯಲ್ಲಿ ಪಾರಿಜಾತ, ಕುಚುಕು ಮತ್ತು ಲಾಕ್‌ಡೌನ್ ಹೆಸರಿನ ಚಿತ್ರಗಳು ರಿಲೀಸ್ ಅಗಿವೆ.
ಉಪೇಂದ್ರ ಕೂಡ ಈ ಚಿತ್ರವನ್ನ ಪ್ರಮೋಟ್ ಮಾಡಿದ್ದಾರೆ. ಕಾನ್ಸ್ ಅಲ್ಲೂ ಈ ಚಿತ್ರ ಪ್ರದರ್ಶನ ಆಗಿದೆ. ಹಾಗಾಗಿಯೇ ಈ ಚಿತ್ರ ರಿಲೀಸ್ ಮುಂಚೇನೆ ಎಲ್ಲರ ಗಮನ ಸೆಳೆದಿದೆ ಅಂತ ಹೇಳಬಹುದು.
Bangalore [Bangalore],Bangalore,Karnataka
May 22, 2026 11:40 AM IST













