Last Updated:
ಪ್ರಿಯಾಂಕಾ ಉಪೇಂದ್ರ ಅವರು ರೆಡ್ ಹಾರ್ಟ್ ಇಮೋಜಿ ಹಂಚಿಕೊಂಡಿದ್ದಾರೆ. ಉಪ್ಪಿ ಜೊತೆಗಿನ ಕೆಲವು ಚೆಂದದ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದನ್ನ ನೋಡಿದವರು ಏನಂದ್ರು ಅನ್ನೋದು ಇಲ್ಲಿದೆ ಓದಿ.
ಪ್ರಿಯಾಂಕಾ ಉಪೇಂದ್ರ (Priyaka Upendra) ಅವರು ಕಾನ್ಸ್ನಿಂದ ವಾಪಾಸ್ ಬಂದಿದ್ದಾರೆ. ಅಲ್ಲಿವರೆಗೂ ಅಲ್ಲಿಯ ತಮ್ಮ ಸುಮಾರು ಅಪ್ಡೇಟ್ಗಳನ್ನ ಕೊಟ್ಟಿದ್ದಾರೆ. ರೆಡ್ ಕಾರ್ಪೆಟ್ (Red Carpet) ಮೇಲೆ ವಾಕ್ ಮಾಡಿರೋ ತಮ್ಮ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಡಿಯೋಗಳನ್ನು ಶೇರ್ (Video Share) ಮಾಡಿಕೊಂಡಿದ್ದಾರೆ. ಅಲ್ಲಿಂದ ಬಂದ್ಮೇಲೆ ಪ್ರಿಯಾಂಕಾ ಉಪೇಂದ್ರ (Priyaka Upendra) ಒಂದು ಕೆಲಸ ಕೂಡ ಮಾಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.
ಪ್ರಿಯಾಂಕಾ ಉಪೇಂದ್ರ ಸ್ಪೆಷಲ್ ಪೋಸ್ಟ್ ; ರೆಡ್ ಹಾರ್ಟ್ ಇಮೋಜಿ ಹಾಕಿದ್ಯಾಕೆ ಗೊತ್ತಾ?
ಫ್ರಾನ್ಸ್ ಅಲ್ಲಿ ನಡೆದ ಈ ಚಿತ್ರೋತ್ಸವದ ರೆಡ್ ಕಾರ್ಪೆಟ್ ಮೇಲೆ ಪ್ರಿಯಾಂಕಾ ಅವರು ವಾಕ್ ಮಾಡಿದ್ದರು. ಚೆಂದದ ಗೌನ್ ತೊಟ್ಟು ಅಷ್ಟೆ ಚೆನ್ನಾಗಿಯೆ ಕಾಣಿಸಿಕೊಂಡಿದ್ದರು. ಕೆಂಪು ಬಣ್ಣದ ಗೌನ್ ತೊಟ್ಟು ಸಮುದ್ರ ತೀರದಲ್ಲೂ ಅಷ್ಟೆ ಚೆಂದನೇ ಪೋಸ್ ಕೊಟ್ಟಿದ್ದರು. ಆ ಫೋಟೋಗಳು ವೈರಲ್ ಆಗಿದ್ದವು.
ಸೆಪ್ಟೆಂಬರ್-21 ಚಿತ್ರಕ್ಕೆ ಕಾನ್ಸ್ ಅಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ. ಮರುವಿನ ಕಾಯಿಲೆ ಇರೋ ವ್ಯಕ್ತಿಯ ಸುತ್ತವೇ ಈ ಸಿನಿಮಾ ಇದೆ. ಇದರಲ್ಲಿ ನಟಿ ಪ್ರಿಯಾಂಕಾ ಉಪೇಂದ್ರ ಅವರು ಆ ವ್ಯಕ್ತಿಯ ಕೇರ್ ಟೇಕರ್ ಪಾತ್ರವನ್ನ ಮಾಡಿದ್ದರು.
ಈ ಪಾತ್ರಕ್ಕಾಗಿ ಡಿ ಗ್ಲಾಮರ್ ಆಗಿಯೇ ಕಾಣಿಸಿಕೊಂಡಿದ್ದರು. ಕರೆನ್ ಕ್ಷಿತಿ ಸುವರ್ಣ ಅವರು ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಇವರ ಈ ಮೊದಲ ಪ್ರಯತ್ನದ ಚಿತ್ರಕ್ಕೆ ಕಾನ್ಸ್ ಅಲ್ಲಿ ಮೆಚ್ಚುಗೆನೂ ವ್ಯಕ್ತವಾಗಿದೆ.
ಇನ್ಸ್ಟಾಗ್ರಾಮ್ ಅಲ್ಲಿ ಪೋಸ್ಟ್
(ಚಿತ್ರ ಕೃಪೆ: ಪ್ರಿಯಂಕಾ ಉಪೇಂದ್ರ ಇನ್ಸ್ಟಾಗ್ರಾಮ್)
ಸೆಪ್ಟೆಂಬರ್-21 ಚಿತ್ರ ರಿಲೀಸ್ ಆಗಿದೆ. ಮೇ-22 ರಂದು ಈ ಚಿತ್ರ ತೆರೆ ಕಂಡಿದೆ. ಬೆಂಗಳೂರಿನ ಮಲ್ಟಿಪ್ಲೆಕ್ಸ್ ಅಲ್ಲಿ ಈ ಸಿನಿಮಾಗೆ ಕೇವಲ 7 ಶೋಗಳು ಮಾತ್ರ ಸಿಕ್ಕಿವೆ.
ಆದರೆ, ಈ ಚಿತ್ರದ ರಿಲೀಸ್ ಸಮಯದಲ್ಲಿ ಪ್ರಿಯಂಕಾ ಉಪೇಂದ್ರ ಇಂಡಿಯಾಗೆ ಬಂದಿರಲಿಲ್ಲ ಅನ್ನುವ ಸುದ್ದಿನೂ ಇದೆ. ಇದರ ಹೊರತಾಗಿ ಇದೀಗ ಪ್ರಿಯಾಂಕಾ ಉಪೇಂದ್ರ ಅವರು ಇಂಡಿಯಾಗೆ ಬಂದಿದ್ದಾರೆ ಅನ್ನುವ ನ್ಯೂಸ್ ಕೂಡ ಇದೆ.
ಪ್ರಿಯಾಂಕಾ ಉಪೇಂದ್ರ ಅವರು ಇನ್ಸ್ಟಾಗ್ರಾಮ್ ಅಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಇವರು ತಮ್ಮ ಕೆಲವು ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
ಹಬ್ಬಕ್ಕೆ ರೆಡಿ ಆದ ರೀತಿಯಲ್ಲಿಯೇ ಪ್ರಿಯಾಂಕಾ ಇಲ್ಲಿ ಕಾಣಿಸುತ್ತಿದ್ದಾರೆ. ಉಪೇಂದ್ರ ಅವರು ಕೂಡ ಹಾಗೆ ಕಾಣಿಸುತ್ತಿದ್ದಾರೆ. ಆದರೆ, ಈ ಫೋಟೋಗಳು ಹಬ್ಬದಲ್ಲಿಯೇ ತೆಗೆದಿರೋ ಹಾಗಿದೆ.
ಚಂದ..ಚಂದ ಈ ಜೋಡಿ…
(ಚಿತ್ರ ಕೃಪೆ: ಪ್ರಿಯಂಕಾ ಉಪೇಂದ್ರ ಇನ್ಸ್ಟಾಗ್ರಾಮ್)
ಪ್ರಿಯಾಂಕಾ ಉಪೇಂದ್ರ ಅವರು ಒಂದಷ್ಟು ಫೋಟೋಗಳಲ್ಲಿ ಅಷ್ಟೆ ಚೆನ್ನಾಗಿ ಕಾಣಿಸುತಿದ್ದಾರೆ. ಹಾಗಂತ ಈ ಫೋಟೋಗಳ ಜೊತೆಗೆ ಏನೂ ಬರೆಯೋಕೆ ಹೋಗಿಲ್ಲ.
ಬದಲಾಗಿ ಒಂದು ರೆಡ್ ಹಾರ್ಟ್ ಇರೋ ಇಮೋಜಿ ಹಂಚಿಕೊಂಡಿದ್ದಾರೆ. ಅಷ್ಟು ಬಿಟ್ಟರೆ, ಇದನ್ನ ನೋಡಿದವರು ಮೆಚ್ಚುಗೇನೂ ವ್ಯಕ್ತಪಡಿಸಿದ್ದಾರೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
May 25, 2026 11:23 PM IST













