Priya Sudeep: ಸುದೀಪ್-ಸಂಚಿತ್ ಇಬ್ಬರೂ ತೂಕದ ಮಾತುಗಾರರೇ! ಸೀಕ್ರೆಟ್ ರಿವೀಲ್ ಮಾಡಿದ ಪ್ರಿಯಾ | | ACTPnews

ಸುದೀಪ್-ಸಂಚಿತ್ ಇಬ್ಬರೂ ತೂಕದ ಮಾತುಗಾರರೇ; ಪ್ರಿಯಾ ಮಾಡಿದ್ರು ರಿವೀಲ್!


Last Updated:

ಕಿಚ್ಚ ಸುದೀಪ್ ಮತ್ತು ಸಂಚಿತ್ ಸಂಜೀವ್ ಅವರಲ್ಲಿ ಏನು ಸಾಮ್ಯತೆ ಇದೆ.? ಇವರ ಗುಣಗಳು ಹೇಗಿವೆ? ಈ ಪ್ರಶ್ನೆಗಳಿಗೆ ಪ್ರಿಯಾ ಸುದೀಪ್ ಉತ್ತರ ಕೊಟ್ಟಿದ್ದಾರೆ. ಅದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಅದರ ವಿವರ ಮುಂದೆ ಇದೆ ಓದಿ.

ಸುದೀಪ್-ಸಂಚಿತ್ ಇಬ್ಬರೂ ತೂಕದ ಮಾತುಗಾರರೇ; ಪ್ರಿಯಾ ಮಾಡಿದ್ರು ರಿವೀಲ್!
ಸುದೀಪ್-ಸಂಚಿತ್ ಇಬ್ಬರೂ ತೂಕದ ಮಾತುಗಾರರೇ; ಪ್ರಿಯಾ ಮಾಡಿದ್ರು ರಿವೀಲ್!

ಮಾಂಗೋ ಪಚ್ಚ ಚಿತ್ರದ (Mango Pachcha Movie) ನಾಯಕ ಸಂಚಿತ್ ಸಂಜೀವ್ (Sanchith Sanjeev) ಪಕ್ಕಾ ಸುದೀಪ್ ತರವೇ ಕಾಣಿಸುತ್ತಾರೆ. ಚಿತ್ರದ ಹಲವು ಕಡೆಗೆ ಅದೇ ಮ್ಯಾನರಿಸಂ ಇದೆ. ಮಾವನ ಪ್ರಭಾವ ಸಂಚಿತ್ ಮೇಲೆ ಇದ್ದೇ ಇದೆ ಅನಿಸುತ್ತದೆ. ಹಾಗೆ ಸುದೀಪ್ (Sudeepa) ಮತ್ತು ಸಂಚಿತ್ (Sanjeev) ನಡುವೆ ಏನ್ ಸಾಮ್ಯತೆ ಇದೆ ಅನ್ನೋ ಪ್ರಶ್ನೆನೂ ಬರುತ್ತದೆ. ಸುದೀಪ್ ವೈಫ್ ಪ್ರಿಯಾ ಸುದೀಪ್ ಈ ಬಗ್ಗೆ ಮಾತನಾಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.

ತೂಕದ ಮಾತುಗಾರ

ಸಂಚಿತ್ ಮತು ಸುದೀಪ್ ಒಂದೇ ತರ ಇದ್ದಾರೆ. ಇಬ್ಬರೂ ತೂಕದ ಮಾತುಗಳನ್ನೆ ಆಡುತ್ತಾರೆ. ಅಷ್ಟೆ ಕಾಮ್ ಆಗಿಯೇ ಇಬ್ಬರು ಇರ್ತಾರೆ. ಇಬ್ಬರು ಸುಮ್ನೆ ಏನೋ ಮಾತನಾಡೋದಿಲ್ಲ.

Priya Sudeep Share unknown Facts of kichcha Sudeep Sanchith Sanjeev

ಸುದೀಪ್-ಸಂಚಿತ್ ಒಂದು ಸಾಮ್ಯತೆ ಇದೆ

(ಚಿತ್ರ ಕೃಪೆ: ಸುದೀಪ್ ಇನ್‌ಸ್ಟಾಗ್ರಾಮ್)

ಯೋಚನೆ ಮಾಡಿಯೇ ಮಾತನಾಡುತ್ತಾರೆ. ಇವರ ಮಾತುಗಳಲ್ಲಿ ತೂಕ ಇರುತ್ತದೆ. ಹಾಗೆ ಸಂಚಿತ್ ಸಂಜೀವ್ ತುಂಬಾನೆ ಒಳ್ಳೆಯ ಹುಡುಗ. ಮನೆಯಲ್ಲಿ ಯಾರೇ ಏನೇ ಹೇಳಿದರು ಅಷ್ಟೆ. ಇಲ್ಲ ಅಂತ ಹೇಳೋದೇ ಇಲ್ಲ. ಓಕೆ ಅಂತಲೇ ಹೇಳೋದು.

ಸಂಚಿತ್ ಇರ್ತಾನೆ

ಸಂಚಿತ್ ಇರ್ತಾನೆ. ಸಂಚಿ ಮಾಡ್ತಾನೆ. ಈ ರೀತಿಯ ಅಭಿಪ್ರಾಯ ಇದ್ದೇ ಇದೆ. ಸಂಚಿತ್ ನಿಜಕ್ಕೂ ಹಾಗೇನೆ ಇರೋದು. ಸಂಚಿತ್ ತುಂಬಾನೆ ಕೂಲ್ ಆಗಿಯೇ ಇರೋದು.

ಹಾಗೆ ಮಾತುಗಳು ಕಡಿಮೆ ಇರುತ್ತವೆ. ಹೆಚ್ಚಿಗೆ ಮಾತು ಆಡೋದೇ ಇಲ್ಲ. ಆಡಿದರೂ ಅದು ತೂಕದ ಮಾತುಗಳೇ ಆಗಿರುತ್ತದೆ. ಸಂಚಿತ್ ಮತ್ತು ನನ್ನ ಬಾಂಡಿಂಗ್ ಅಮ್ಮ ಮತ್ತು ಮಗನ ಬಾಂಡಿಂಗೇ ಆಗಿದೆ.

ಕತೆಗೆ ಸಂಚಿತ್ ಸೂಟ್

ಮ್ಯಾಂಗೋ ಪಚ್ಚ ಚಿತ್ರದ ಕತೆಯನ್ನ ಸಂಚಿತ್‌ಗಾಗಿಯೇ ಬರೆದಿರೋದಲ್ಲ. ಈ ಕತೆಗೆ ಸಂಚಿತ್ ಸೂಟ್ ಆಗಿದ್ದಾನೆ. ಚಿತ್ರ ನೋಡಿದ್ಮೇಲೆ ನಮಗೂ ಹಾಗೆ ಅನಿಸುತ್ತಿದೆ.

Priya Sudeep Share unknown Facts of kichcha Sudeep Sanchith Sanjeev

ತೂಕದ ಮಾತುಗಾರ

(ಚಿತ್ರ ಕೃಪೆ: ಸುಪ್ರಿಯಾನ್ವಿ ಸ್ಟುಡಿಯೋ ಇನ್‌ಸ್ಟಾಗ್ರಾಮ್)

ಸಂಚಿತ್ ತನ್ನ ಸ್ಟ್ರೆಂತ್ ಏನು ಅನ್ನೋದನ್ನ ತಿಳಿದುಕೊಂಡಿದ್ದಾನೆ. ಹಾಗೆ ನನಗಾಗಲಿ, ಸುದೀಪ್ ಅವರಿಗೆ ಆಗಲಿ, ಸಂಚಿತ್‌ನನ್ನ ದೊಡ್ಡ ಮಟ್ಟದಲ್ಲಿ ಲಾಂಚ್ ಮಾಡ್ಬೇಕು ಅಂತ ಏನೂ ಇರಲಿಲ್ಲ. ಆದರೆ, ಈ ಕತೆಗೆ ಸಂಚಿತ್ ಸೂಟ್ ಆಗಿರೋದು. ಹಾಗಾಗಿಯೇ ಈ ಸಿನಿಮಾ ಆಯಿತು ಅಂತ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ.
ಕಿಚ್ಚ-ಪಚ್ಚ ಹೇಗೆ

ಸುದೀಪ್ ಅವರು ಆರಂಭದಲ್ಲಿ ಕಿಚ್ಚ, ಹುಚ್ಚ ಹೆಸರಿನ ಸಿನಿಮಾ ಮಾಡಿದ್ದಾರೆ. ಇದನ್ನ ಮನದಲ್ಲಿಯೇ ಇಟ್ಟುಕೊಂಡು ನಾವು ಚಿತ್ರಕ್ಕೆ ಟೈಟಲ್ ಏನೂ ಇಟ್ಟಿಲ್ಲ.

ಡೈಲಾಗ್ ಅಲ್ಲಿತ್ತು

ಸಿನಿಮಾದ ಒಂದು ಡೈಲಾಗ್ ಬರುತ್ತದೆ. ಸಂಚಿತ್ ಸ್ನೇಹಿತರ ತಂಡದಲ್ಲಿ ಗೆಳೆಯರು ಸಂಚಿತ್ ಪಾತ್ರವನ್ನ ಪಚ್ಚ ಅಂತಲೇ ಕರೀತಾರೆ. ಅದು ಸೌಂಡಿಂಗ್ ಚೆನ್ನಾಗಿದೆ. ಯಾಕೆ ಇದನ್ನೆ ಟೈಟಲ್ ಇಡಬಾರದು ಅಂತ ಯೋಚನೆ ಮಾಡಿದೇವು.

ಎಲ್ಲರಿಗೂ ಇದೇ ಟೈಟಲ್ ಇಷ್ಟ ಆಯಿತು. ಹಾಗೆ ಈ ಟೈಟಲ್ ಇಟ್ಟಿರೋದು. ಆದರೆ, ಟೈಟಲ್ ಇಟ್ಟ ಮೇಲೆ ನಮಗೂ ಅನಿಸ್ತು. ಕಿಚ್ಚ ಮತ್ತು ಪಚ್ಚ ಹೋಲಿಕೆ ಇದೇ ಅಲ್ವೇ ಅಂತಲೇ ಫೀಲ್ ಆಯಿತು ಅಂತಲೇ TV-9 ಕನ್ನಡ ಸಂದರ್ಶನದಲ್ಲಿಯೇ ಪ್ರಿಯಾ ಸುದೀಪ್ ಹೇಳಿಕೊಂಡಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports