Prashanth Neel: ಡ್ರ್ಯಾಗನ್ ಸಿನಿಮಾ ಶಾಕಿಂಗ್ ಸತ್ಯ! ಡೈರೆಕ್ಟರ್ ಪ್ರಶಾಂತ್ ನೀಲ್ ಹೇಳಿದ್ದೇನು? | | ACTPnews

director prashanth neel share shocking facts of dragon movie


ಡ್ಯಾಗನ್ ಚಿತ್ರದಲ್ಲಿ ಏನಿದೆ ಗೊತ್ತಾ?

ಡ್ರ್ಯಾಗನ್ ಚಿತ್ರದಲ್ಲಿ ಒಂದು ಕತೆ ಇದೆ. ಅದು ಅದ್ಭುತವಾದ ಕತೇನೆ ಆಗಿದೆ. ಆದರೆ, ಸದ್ಯ ಗ್ಲಿಂಪ್ಸ್ ಅಲ್ಲಿ ಏನ್ ಕಥೆ ಹೇಳ್ತಿದ್ದೇವೆ ಅನ್ನುವುದನ್ನ ಮಾತ್ರ ಹೇಳುತ್ತಿದ್ದೇವೆ.
ಡ್ರ್ಯಾಗನ್ ಚಿತ್ರದಲ್ಲಿ ಮಗ್ನ

(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)

ಆದರೆ, ಈ ಸಿನಿಮಾ ನೋಡಿದಾಗ ನಿಮಗೆ ಒಂದು ಸತ್ಯ ಅರ್ಥ ಆಗುತ್ತದೆ. ನಿಮ್ಮ ಮನದಲ್ಲಿ ಸುಮಾರು ಕ್ಯಾರೆಕ್ಟರ್‌ಗಳು ಉಳಿಯುತ್ತವೆ. ಅಷ್ಟೊಂದು ವಿಷಯ ಈ ಚಿತ್ರದಲ್ಲಿದೆ. ಅದನ್ನ ಉತ್ತಮ ಕಲಾವಿದರೇ ಮಾಡಿದ್ದಾರೆ.

ಪ್ರತಿ ಕ್ಯಾರೆಕ್ಟರ್‌ಗೂ ಮಹತ್ವ ಇದೆ

ಡ್ರ್ಯಾಗನ್ ಚಿತ್ರದಲ್ಲಿ ಸಾಕಷ್ಟು ಪಾತ್ರಗಳಿವೆ. ಪ್ರತಿ ಪಾತ್ರಕ್ಕೂ ಇಲ್ಲಿ ಮಹತ್ವ ಕೊಡಲಾಗಿದೆ. ಸುಮ್ನೆ ಪಾತ್ರಗಳು ಬಂದು ಹೋಗುವುದಿಲ್ಲ.

ಈ ಹಿಂದಿನ ಚಿತ್ರಗಳಲ್ಲಿಯ ಪಾತ್ರಗಳ ಬಗ್ಗೆ ಜಾಸ್ತಿ ಹೇಳೋಕೆ ಹೋಗಿಲ್ಲ. ಆದರೆ, ಡ್ರ್ಯಾಗನ್ ಚಿತ್ರದ ವಿಚಾರದಲ್ಲಿ ಹಾಗೇನು ಇಲ್ಲ. ಎಲ್ಲ ಪಾತ್ರಗಳನ್ನ ಚೆನ್ನಾಗಿಯೇ ಡಿಸೈನ್ ಮಾಡಿದ್ದೇವೆ ಅನ್ನೋದನ್ನ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.

ಡ್ರ್ಯಾಗನ್ ಒಂದು ದೇಶ ಭಕ್ತಿ ಸಿನಿಮಾ

ಡ್ರ್ಯಾಗನ್ ಚಿತ್ರ ಸುಮ್ನೆ ಅಲ್ಲ. ಈ ಚಿತ್ರದಲ್ಲಿ ದೇಶ ಭಕ್ತಿಯ ಕತೆ ಇದೆ. ಇಲ್ಲಿವರೆಗೂ ಯಾರೂ ಹೇಳದ ಕಥೆಯನ್ನೆ ನಾವು ಇಲ್ಲಿ ಹೇಳುತ್ತಿದೆ. ಅಂತಹ ದೇಶ ಭಕ್ತಿಯ ಸಿನಿಮಾ ಇದಾಗಿದೆ.

ಪ್ರೇಕ್ಷಕರು ಇಲ್ಲಿ ದೇಶ ಭಕ್ತಿಯ ಒಂದು ಅದ್ಭುತ ಕತೆಯನ್ನ ನೋಡಿ ಹೋಗಬಹುದು ಅಂತಲೇ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ. ಹಾಗೆ ಈ ಚಿತ್ರವನ್ನು ನಾನು ನನ್ನದೇ ಕಲರ್ ಪ್ಯಾಲೆಟ್‌ ಅಲ್ಲಿಯೇ ಹೇಳುತ್ತಿದ್ದೇನೆ.

director prashanth neel share shocking facts of dragon movie

ಜೂನ್-11, 2027 ರಿಲೀಸ್

(ಚಿತ್ರ ಕೃಪೆ: ಪ್ರಶಾಂತ್ ನೀಲ್ ಇನ್‌ಸ್ಟಾಗ್ರಾಮ್)

ಮುಂದಿನ ಚಿತ್ರಗಳು ಕಲರ್ ಕಲರ್

ನಮ್ಮ ಮನೆಯಲ್ಲೂ ಒಂದೇ ಪ್ರಶ್ನೆ ಮಾಡ್ತಾರೆ. ಒಂದೇ ರೀತಿಯ ಸಿನಿಮಾ ಯಾಕೆ ಮಾಡೋದು ಅಂತ ಕೇಳ್ತಾರೆ. ಆದರೆ, ನಾನು ಪ್ರತಿ ಚಿತ್ರದಲ್ಲೂ ಬೇರೆ ಸ್ಟೋರಿಗಳನ್ನೆ ಹೇಳ್ತಾನೆ ಬಂದಿದ್ದೇನೆ.

ಡ್ರ್ಯಾಗನ್-2, ಸಲಾರ್-2, ಕೆಜಿಎಫ್-3 ಚಿತ್ರಗಳು ಮುಗಿದ್ಮೇಲೆ ಬೇರೆ ರೀತಿಯ ಕತೆ ಹೇಳುತ್ತೇನೆ. ಅದು ಅಷ್ಟೆ ಕಲರ್‌ಫುಲ್ ಆಗಿರುತ್ತದೆ ಅಂತಲೂ ಪ್ರಶಾಂತ್ ನೀಲ್ ಹೇಳಿಕೊಂಡಿದ್ದಾರೆ.

ಜೂನ್-11, 2027 ರಿಲೀಸ್

ಡ್ರ್ಯಾಗನ್ ಚಿತ್ರ ಮುಂದಿನ ವರ್ಷ ರಿಲೀಸ್ ಆಗುತ್ತದೆ. ಜೂನ್-11,2027 ರಂದು ಇದು ತೆರೆಗೆ ಬರ್ತಿದೆ. ಎರಡು ಭಾಗದಲ್ಲಿ ಇದು ರಿಲೀಸ್ ಆಗುತ್ತಿದೆ. ಮೊದಲ ಭಾಗ 11,2027 ರಂದು ಬಿಡುಗಡೆ ಆಗುತ್ತದೆ.

ಡ್ರ್ಯಾಗನ್ ಚಿತ್ರದಲ್ಲಿ ಮಗ್ನ

ಡೈರೆಕ್ಟರ್ ಪ್ರಶಾಂತ್ ನೀಲ್ ಸದ್ಯ ಡ್ರ್ಯಾಗನ್ ಚಿತ್ರದ ಬಗ್ಗೇನೆ ಹೆಚ್ಚು ಯೋಚನೆ ಮಾಡ್ತಾರೆ. ಸಲಾರ್-2 ಸೆಟ್ ಅಲ್ಲಿ ಇದ್ದರೂ ಕೂಡ ಡ್ರ್ಯಾಗನ್ ಸಿನಿಮಾದ ಯೋಚನೆ ಮಾಡುತ್ತಾರೆ.

ಹೊಸದಾಗಿ ಹೊಳೆದ ಐಡಿಯಾವನ್ನು ಕೂಡ ಡ್ರ್ಯಾಗನ್‌ ಚಿತ್ರಕ್ಕಾಗಿಯೇ ಮೀಸಲು ಇಡ್ತಾರೆ. ಡ್ರ್ಯಾಗನ್ ಚಿತ್ರದ ಕೆಲಸದಲ್ಲಿ ಅಷ್ಟೊಂದು ಮಗ್ನರಾಗಿದ್ದಾರೆ ಅಂತ ಸ್ವತಃ ಪ್ರಶಾಂತ್ ನೀಲ್ ಅವರು Galatta Plus ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ ಅಂತ ಹೇಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed