Pramod Maravanthe: ‘ಯಶ್ ಕಾಲ್ ಮಾಡಿದ್ಮೇಲೆ ಮನಸ್ಸು ನಿರಾಳ’; ‘ಮನಮೋಹಕ’ ರೈಟರ್ ಪ್ರಮೋದ್ ಮರವಂತೆ ಜೊತೆ Exclusive ಟಾಕ್! | | ACTPnews

"ಯಶ್ ಕಾಲ್ ಮಾಡಿದ್ಮೇಲೆ ಮನಸ್ಸು ನಿರಾಳ"; ಪ್ರಮೋದ್ ಮರವಂತೆ ಜತೆ Exclusive ಟಾಕ್!


Last Updated:

ಪ್ರಮೋದ್ ಮರವಂತೆ ಫಸ್ಟ್ ಟೈಮ್ ಯಶ್ ಜೊತೆಗೆ ಕೆಲಸ ಮಾಡಿದ್ದಾರೆ. ಮನಮೋಹಕ ಹಾಡನ್ನ ಬರೆಯೋ ಮುಂಚೆ ಯಶ್ ಕಾಲ್ ಕೂಡ ಮಾಡಿದ್ದಾರೆ. ಏನೆಲ್ಲ ಮಾತನಾಡಿದ್ದಾರೆ. ಈ ಹಾಡು ಹೇಗೆಲ್ಲ ಶುರು ಆಯಿತು. ಈ ವಿಷಯವನ್ನ ಪ್ರಮೋದ್ ಮರವಂತೆ ನ್ಯೂಸ್-18 ಕನ್ನಡ ಡಿಜಿಟಲ್ ಜೊತೆಗಿನ Exclusive ಸಂದರ್ಶನದಲ್ಲಿಯೇ ಹೇಳಿಕೊಂಡಿದ್ದಾರೆ. ಇನ್ನು ಏನೆಲ್ಲ ಹೇಳಿಕೊಂಡಿದ್ದಾರೆ ಅನ್ನೋದು ಇಲ್ಲಿದೆ ಓದಿ.

"ಯಶ್ ಕಾಲ್ ಮಾಡಿದ್ಮೇಲೆ ಮನಸ್ಸು ನಿರಾಳ"; ಪ್ರಮೋದ್ ಮರವಂತೆ ಜತೆ Exclusive ಟಾಕ್!
“ಯಶ್ ಕಾಲ್ ಮಾಡಿದ್ಮೇಲೆ ಮನಸ್ಸು ನಿರಾಳ”; ಪ್ರಮೋದ್ ಮರವಂತೆ ಜತೆ Exclusive ಟಾಕ್!

ಪ್ರಮೋದ್ ಮರವಂತೆ (Pramod Maravanthe) ಫಸ್ಟ್ ಟೈಮ್ ಯಶ್ ಜೊತೆಗೆ ಕೆಲಸ ಮಾಡಿದ್ದಾರೆ. ರವಿ ಬಸ್ರೂರು ಸ್ಟುಡಿಯೋದಲ್ಲಿ ಕೆಜಿಎಫ್ (KGF) ಟೈಮ್ ಅಲ್ಲಿ ಯಶ್ ಅವರನ್ನ ನೋಡಿರೋದು ಇದೆ. ಆದರೆ, ಟಾಕ್ಸಿಕ್ ಮೂಲಕವೇ ಕೆಲಸ ಮಾಡಿದ್ದಾರೆ. ಮನಮೋಹಕ ಅನ್ನುವ ಹಾಡನ್ನ ಬರೆಯೋ ಅವಕಾಶ ಬಂದಾಗ ಇವರಿಗೆ ಸಣ್ಣ ಒತ್ತಡವೂ ಇತ್ತು. ಅತಿ ದೊಡ್ಡ ಅವಕಾಶ ಹೇಗೆಲ್ಲ ಬಳಕೆ ಮಾಡ್ಬೇಕು ಅನ್ನುವ ಯೋಚನೆ ಕೂಡ ಇತ್ತು. ಇದರ ನಡುವೆ ಯಶ್ (Yash) ಕಾಲ್ ಬಂದಾಗ ಮಾತನಾಡಿರೋದು ತುಂಬಾ ಹೊತ್ತೇನು ಅಲ್ಲ, 10 ನಿಮಿಷ ಅಷ್ಟೆ ನೋಡಿ. ಅಷ್ಟರಲ್ಲಿಯೇ ಮನದಲ್ಲಿರೋ ಆತಂಕವೆಲ್ಲ ಕರಗಿ ಹೋಗಿದೆ. ಮುಂದೆ ಏನೆಲ್ಲ ಆಯಿತು ಅನ್ನೋದನ್ನ ಸ್ವತಃ ಪ್ರಮೋದ್ ಮರವಂತೆ (Pramod Maravanthe) ನ್ಯೂಸ್-18 ಕನ್ನಡ ಜೊತೆಗೆ Exclusive ಆಗಿಯೇ ಮಾತನಾಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.

“ಯಶ್ ಸರ್ ಕಾಲ್” ಮಾಡಿದ್ರು

ಆ ದಿನ ಮಧ್ಯಾಹ್ನದ ಹೊತ್ತು ಮನಮೋಹಕ ಹಾಡಿನ ಟ್ಯೂನ್ ಬಂತು. ಇದನ್ನ ಕೇಳಿದಾಕ್ಷಣ ಸಾಲುಗಳ ಬಗ್ಗೆ ಯೋಚನೆ ಏನೂ ಮಾಡಲ್ಲಿಲ್ಲ. ಇದು ಹೊಸ ರೀತಿಯ ಟ್ಯೂನ್ ಇದೆ.

Pramod Maravanthe News18 Kannada Digital Exclusive Talk on Toxic Manamohaka Song

“ಯಶ್ ಕಾಲ್ ಮಾಡಿದ್ಮೇಲೆ ಮನಸ್ಸು ನಿರಾಳ”

(ಚಿತ್ರ ಕೃಪೆ: ಟಾಕ್ಸಿಕ್ ಸಿನಿಮಾ ಪೇಜ್ ಇನ್‌ಸ್ಟಾಗ್ರಾಮ್)

ಇದನ್ನ ಮತ್ತೆ ಮತ್ತೆ ಕೇಳ್ಬೇಕು ಅಂತಲೇ ಕೇಳಿದ್ದಾನೆ ಹೋಗಿದ್ದಾರೆ. ಅಷ್ಟರಲ್ಲಿಯೇ ಸಂಜೆ 7 ಗಂಟೆ ಹೊತ್ತಿಗೆ ಯಶ್ ಕಾಲ್ ಮಾಡಿದ್ದಾರೆ.

8 ರಿಂದ 10 ನಿಮಿಷ ಟಾಕ್

ಯಶ್ ಅವರು ಸಡನ್ ಆಗಿಯೇ ಹಾಡು ಬರೆಯೋ ವಿಷಯಕ್ಕೆ ಬರಲಿಲ್ಲ. ಬದಲಾಗಿ, ನಾನು ಬರೆದ ಹಾಡುಗಳ ಬಗ್ಗೆ ಹೇಳಿದರು. ತಾವು ಯಾಕೆ ಇಷ್ಟಪಡ್ತಿರೋದಾಗಿಯೂ ಹೇಳಿಕೊಂಡರು.
ಮರು ದಿನವೇ ಪಲ್ಲವಿ ಕಳಿಸಿದೆ

ಮನಮೋಹಕ ಹಾಡಿನ ಪಲ್ಲವಿಯನ್ನ ಮಾತ್ರ ಮರು ದಿನವೇ ಕಳಿಸಿದೆ. ಈ ಪಲ್ಲವಿ ಕಳಿಸಿ ಆದ್ಮೇಲೆ ಓಕೆ ಕೂಡ ಆಯಿತು. ಇದನ್ನ ಕಳಿಸಿ ಸುಮಾರು ಮೂರು ನಾಲ್ಕು ದಿನ ಆದ್ಮೇಲೆ ಚರಣ ಕಳಿಸಿದೆ. ಈ ಚರಣ ಒಂದಲ್ಲ, ನಾಲ್ಕು ವರ್ಶನ್ ಇತ್ತು.

ಆದರೆ, ಈ ಒಂದು ಹಾಡನ್ನ ಫೆಬ್ರವರಿ ತಿಂಗಳಲ್ಲಿಯೇ ಬರೆದಿದ್ದೇನೆ. ಮಾರ್ಚ್‌ ತಿಂಗಳಲ್ಲಿಯೇ ಚಿತ್ರ ಬರುತ್ತದೆ ಅಂತ ಅನೌನ್ಸ್ ಆಗಿತ್ತು ಅಲ್ವೇ? ಹಾಗಾಗಿಯೇ ಸ್ವಲ್ಪ ಬೇಗ ಬೇಕು ಅಂತಲೇ ಹೇಳಿದ್ದರು. ಹಾಗಾಗಿಯೇ ಆಗಲೇ ಬರೆದು ಕಳಿಸಿದ್ದೇ ನೋಡಿ.

Pramod Maravanthe News18 Kannada Digital Exclusive Talk on Toxic Manamohaka Song

ಪ್ರಮೋದ್ ಮರವಂತೆ ಜತೆ Exclusive ಟಾಕ್

(ಚಿತ್ರ ಕೃಪೆ: ಪ್ರಮೋದ್ ಮರವಂತೆ ಇನ್‌ಸ್ಟಾಗ್ರಾಮ್)

ಒಂದೇ ಚರಣ, ಒಂದು ಪಲ್ಲವಿ

ಮನಮೋಹಕ ಹಾಡು ತುಂಬಾ ಏನು ದೊಡ್ಡದಿಲ್ಲ. ಒಂದು ಚರಣ ಮತ್ತು ಒಂದು ಪಲ್ಲವಿ ಇದೆ. ಇದನ್ನ ಬರೆದು ಕಳಿಸಿದ್ಮೇಲೆ ಆ ಕಡೆಯಿಂದ ಓಕೆ ಅನ್ನುವ ರಿಪ್ಲೈ ಕೂಡ ಬಂತು.

ಇದಾದ್ಮೇಲೆ ಮೊನ್ನೆ ಇಡೀ ಹಾಡು ನೋಡಿದಾಗ ತುಂಬಾನೆ ಖುಷಿ ಆಯಿತು. ವಿಷ್ಯೂಲಿ ತುಂಬಾನೆ ಚೆನ್ನಾಗಿ ಬಂದಿದೆ. ಯಶ್ ಅವರು ಈ ಚಿತ್ರದಲ್ಲಿ ತುಂಬಾನೆ ಚೆನ್ನಾಗಿಯೂ ಕಾಣುತ್ತಾರೆ. ಹಾಡು ಕೂಡ ಚೆನ್ನಾಗಿಯೇ ಬಂದಿದೆ. ನನ್ನ ಪತ್ನಿ ಸುಚೇತಾ ತುಂಬಾನೆ ಖುಷಿಪಟ್ಟರು. ಯಶ್ ಸಿನಿಮಾ ಅಂದಾಗ ತುಂಬಾನೆ ಎಕ್ಸೈಟ್ ಕೂಡ ಆಗಿದ್ದರು.

ಕೆಜಿಎಫ್ ಟೈಮ್ ನೋಡಿದ್ದೆ

ಕೆಜಿಎಫ್ ಚಿತ್ರದ ಸಮಯದಲ್ಲಿ ಯಶ್ ಅವರನ್ನ ನೋಡಿದ್ದೇನೆ. ರವಿ ಬಸ್ರೂರು ಅವರ ಸ್ಟುಡಿಯೋದಲ್ಲಿಯೇ ಈ ಚಿತ್ರದ ಕೆಲಸ ನಡೀತಾಯಿತ್ತು. ಆಗಲೇ ಇವರನ್ನ ನೋಡಿದ್ದೇನೆ.

ಆದರೆ, ಮಾತನಾಡೋಕೆ ಹೋಗಿಲ್ಲ. ತೊಂದರೆ ಕೊಡ್ಬಾರ್ದು ಅಂತ ಸುಮ್ನೆ ನೋಡಿ ಬರ್ತಾ ಇದ್ದೆ. ಆದರೆ, ಇವರ ಟಾಕ್ಸಿಕ್ ಚಿತ್ರಕ್ಕೆ ಹಾಡು ಬರೆಯುವ ಅವಕಾಶ ಸಿಕ್ಕಾಗ ತುಂಬಾನೆ ಖುಷಿನೂ ಆಯಿತು. ಒತ್ತಡವು ಇತ್ತು.

ಇಷ್ಟು ದೊಡ್ಡ ಅವಕಾಶ ಹೇಗೆ ಅನ್ನುವ ಭಯನು ಇತ್ತು. ಆದರೆ ಯಶ್ ಅವರ ಜೊತೆಗೆ ಮಾತನಾಡಿದ್ಮೇಲೆ ಎಲ್ಲವೂ ನಿರಾಳ ಆಯಿತು. ಆ ಮೇಲೆ ಸುಮಾರು ಸಲ ಇವರ ಜೊತೆಗೆ ಮಾತನಾಡಿದ್ದೇನೆ ಅಂತಲೇ ಲಿರಿಕ್ ರೈಟರ್ ಪ್ರಮೋದ್ ಮರವಂತೆ ನ್ಯೂಸ್-18 ಕನ್ನಡ ಡಿಜಿಟಲ್ Exclusive ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed