Prajwal Devaraj: ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್; ಜುಲೈ-24 ಕ್ಕೆ ಸಿಗೋಣ ಅಂತ ಹೇಳಿದ್ಯಾಕೆ? | | ACTPnews

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್


Last Updated:

ಪ್ರಜ್ವಲ್ ದೇವರಾಜ್ ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ್ದಾರೆ. ಈ ಸಲವೂ ನಾನು ಬೆಂಗಳೂರಿನಲ್ಲಿ ಇರೋದಿಲ್ಲ. ನಿಮ್ಮನ್ನ ರಂಜಿಸುವುದಕ್ಕಿಂತಲೂ ಅತಿ ದೊಡ್ಡ ಹಬ್ಬ ಯಾವುದು ಇದೆ ಹೇಳಿ? ಹಾಗಾಗಿ ಜುಲೈ-4 ರ ಬದಲು, ನಾವು ಜುಲೈ-24 ರಂದು ಸಿಗೋಣ ಅಂತಲೇ ಹೇಳಿದ್ದಾರೆ. ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್
ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್

ಪ್ರಜ್ವಲ್ ದೇವರಾಜ್ (Prajwal Devaraj) ಪ್ರತಿ ವರ್ಷ ಜುಲೈ-4 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ಆದರೆ, ಮೊದಲಿನ ಹಾಗೆ ಫ್ಯಾನ್ಸ್ (Fans) ಜೊತೆಗೆ ಆಚರಿಸಿಕೊಳ್ಳುವುದು ಕಡಿಮೆ ಆಗಿದೆ. ಶೂಟಿಂಗ್ (Shooting) ಅಂತ ಆ ಸಮಯದಲ್ಲಿ ಬ್ಯುಸಿನೇ ಇರ್ತಾರೆ. ಈ ಸಲ ಜುಲೈ-4 ರಂದು ಕೂಡ ಪ್ರಜ್ವಲ್ ದೇವರಾಜ್ (Prajwal Devaraj) ಶೂಟಿಂಗ್ ಅಲ್ಲಿಯೇ ಇದ್ದಾರೆ. ಹೈದ್ರಾಬಾದ್ ರಾಮೋಜಿ ರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ಮಾಡುತ್ತಿದ್ದಾರೆ. ಆದರೆ, ಶೂಟಿಂಗ್ ಅಲ್ಲಿದ್ದೇನೆ. ಹಾಗಾಗಿಯೇ ನಾನು ಈ ಸಲ ನನ್ನ ಜನ್ಮ ದಿನ ನಿಮ್ಮೊಟ್ಟಿಗೆ ಆಚರಿಸಿಕೊಳ್ಳಲು ಆಗೋದಿಲ್ಲ ಅಂತ ಹೇಳಿಲ್ಲ. ಬದಲಾಗಿ, ಕಾರಣಾಂತರಗಳಿಂದ ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ. ಜುಲೈ-24 ರಂದು ಕರಾವಳಿ ಚಿತ್ರ ರಿಲೀಸ್ ಇದೆ. ಥಿಯೇಟರ್ ಅಲ್ಲಿ ಸಿಗೋಣ ಅಂತ ಹೇಳಿದ್ದಾರೆ. ಇವರ ಮನವಿ ಇನ್ನಷ್ಟು ವಿವರ ಇಲ್ಲಿದೆ ಓದಿ.

ಪ್ರಜ್ವಲ್ ದೇವರಾಜ್ ಮನವಿ

ಪ್ರಜ್ವಲ್ ದೇವರಾಜ್ ಕಳೆದ ಎರಡ್ಮೂರು ವರ್ಷಗಳಿಂದಲೂ ಫ್ಯಾನ್ಸ್ ಜೊತೆಗೆ ಹುಟ್ಟುಹಬ್ಬ ಆಚರಿಸಿಕೊಳ್ತಾನೇ ಇಲ್ಲ. ಈ ಕಾರಣಕ್ಕಾಗಿಯೇ ಪ್ರಜ್ವಲ್ ದೇವರಾಜ್ ಕ್ಷಮೆ ಕೇಳ್ತಿರೋದು ಇದೆ.
prajwal devaraj ask sorry to fans on not to celebrate his birthday

ಜುಲೈ-24 ಕ್ಕೆ ಸಿಗೋಣ ಅಂತ ಹೇಳಿದ್ಯಾಕೆ?

(ಚಿತ್ರ ಕೃಪೆ: ಪ್ರಜ್ವಲ್ ದೇವರಾಜ್ ಇನ್‌ಸ್ಟಾಗ್ರಾಮ್)

ಈ ಸಲವೂ ಹಾಗೆ ಮಾಡಿದ್ದಾರೆ. ಕಾರಣಾಂತರಗಳಿಂದ ಈ ವರ್ಷ ನಾನು ಬೆಂಗಳೂರಿನಲ್ಲಿ ಇರೋದಿಲ್ಲ. ಹಾಗಾಗಿಯೇ ನಿಮ್ಮ ಜೊತೆಗೆ ನನ್ನ ಹುಟ್ಟುಹಬ್ಬ ಆಚರಿಸಿಕೊಳ್ಳಲು ಆಗುತ್ತಿಲ್ಲ. ಇದಕ್ಕಾಗಿ ಕ್ಷಮೆ ಇರಲಿ.

ನಿಮ್ಮನ್ನ ರಂಜಿಸೋದೇ ದೊಡ್ಡ ಹಬ್ಬ

ನಿಮ್ಮನ್ನ ರಂಜಿಸುವುದಕ್ಕಿಂತಲೂ ಬೇರೆ ಯಾವ ಹಬ್ಬ ಇದೆ. ಅದೇ ದೊಡ್ಡ ಹಬ್ಬ ಅಲ್ಲವೇ? ಈ ದಿನ ನೀವು ಬಡವರಿಗೆ ನೆರವಾಗೋ ಮೂಲಕ ನನಗೆ ಆಶೀರ್ವದಿಸಬೇಕು ಅಂತ ಕೇಳಿಕೊಂಡಿದ್ದಾರೆ.

ಥಿಯೇಟರ್ ಅಲ್ಲಿ ಸಿಗೋಣ

ಜುಲೈ-24 ರಂದು ಕರಾವಳಿ ಚಿತ್ರ ರಿಲೀಸ್ ಆಗುತ್ತಿದೆ. ಆ ದಿನ ನಾವೆಲ್ಲ ಥಿಯೇಟರ್ ಅಲ್ಲಿ ಸಿಗೋಣ. ನಿಮ್ಮನ್ನ ರಂಜಿಸೋದೇ ನನಗೆ ಅತಿ ದೊಡ್ಡ ಹಬ್ಬ ಅಂತಲೂ ಪ್ರಜ್ವಲ್ ದೇವರಾಜ್ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಬರೆದುಕೊಂಡಿದ್ದಾರೆ.

ಪ್ರಜ್ವಲ್ ದೇವರಾಜ್ ಚಿತ್ರ ಜೀವನದಲ್ಲಿ ಕರಾವಳಿ ಚಿತ್ರ ವಿಶೇಷ ಚಿತ್ರವೇ ಆಗಿದೆ. ಈ ಚಿತ್ರಕ್ಕಾಗಿಯೇ ಸಾಕಷ್ಟು ಕಷ್ಟಪಟ್ಟಿರೋದು ಇದೆ. ಯಕ್ಷಗಾನ ವೇಷವನ್ನು ಧರಿಸಿರೋದು ಇದೆ. ಈ ಚಿತ್ರದ ಬಗ್ಗೆ ತುಂಬಾನೆ ನಿರೀಕ್ಷೆ ಕೂಡ ಇಟ್ಟುಕೊಂಡಿದ್ದಾರೆ.

prajwal devaraj ask sorry to fans on not to celebrate his birthday

ಅಭಿಮಾನಿಗಳಲ್ಲಿ ಕ್ಷಮೆ ಕೇಳಿದ ಪ್ರಜ್ವಲ್ ದೇವರಾಜ್(ಚಿತ್ರ ಕೃಪೆ: ಪ್ರಜ್ವಲ್ ದೇವರಾಜ್ ಇನ್‌ಸ್ಟಾಗ್ರಾಮ್)
ಗುರುದತ್ ಗಾಣಿಗ

ಕರಾವಳಿ ಚಿತ್ರವನ್ನ ಗುರುದತ್ ಗಾಣಿಗ ಡೈರೆಕ್ಷನ್ ಮಾಡಿದ್ದಾರೆ. ಬಹು ವೆಚ್ಚದ ಈ ಚಿತ್ರವನ್ನ ಅಷ್ಟೆ ಚೆನ್ನಾಗಿಯೇ ತೆಗೆದಿದ್ದಾರೆ. ಇವರ ಈ ಚಿತ್ರದಲ್ಲಿ ಮಿತ್ರ, ಸಂಪದ, ರಾಜ್ ಬಿ ಶೆಟ್ಟಿ ಸೇರಿದಂತೆ ಇನ್ನು ಅನೇಕರು ಅಭಿನಯಿಸಿದ್ದಾರೆ.

ಸು ಫ್ರಮ್ ಸೋ ದಿನ…

ಸು ಫ್ರಮ್ ಸೋ ಚಿತ್ರ ಕಳೆದ ವರ್ಷ 2025 ರ ಜುಲೈ-25 ರಂದು ರಿಲೀಸ್ ಆಗಿತ್ತು. ಕೇವಲ ಐದಾರು ಕೋಟಿ ಬಜೆಟ್ ಅಲ್ಲಿಯೇ ಇದು ತಯಾರಾಗಿತ್ತು.

ಆದರೆ, ಇದು ಬಾಕ್ಸ್ ಆಫೀಸ್ ಅಲ್ಲಿ ಇತಿಹಾಸ ಮಾಡಿದೆ. ನೂರಾರು ಕೋಟಿ ಗಳಿಕೆ ಮಾಡಿ ಹೊಸ ದಾಖೆ ಮಾಡಿದೆ. ಈ ಚಿತ್ರದಂತೇನೆ ನಮ್ಮ ಚಿತ್ರವೂ ಒಳ್ಳೆ ಕಂಟೆಂಟ್ ಜೊತೆಗೆ ಬರ್ತಿದೆ ಅನ್ನುವುದನ್ನೇ ಚಿತ್ರ ತಂಡ ಹೇಳಿಕೊಂಡಿದೆ. ಇನ್ನುಳಿದಂತೆ ಜುಲೈ-24 ರಂದು ಕರಾವಳಿ ಸಿನಿಮಾ ರಿಲೀಸ್ ಆಗುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed