Last Updated:
ಬಾಲಿವುಡ್ನ ಖಳನಾಯಕ ನಟ ಪ್ರದೀಪ್ ರಾವತ್ ಕನ್ನಡ ಸ್ಟಾರ್ ನಟರ ಚಿತ್ರಗಳಲ್ಲಿಯೂ ಅಬ್ಬರಿಸಿದ್ದಾರೆ. ತಮ್ಮ ವಿಶೇಷ ಮ್ಯಾನರಿಸಂನಿಂದಲೇ ಶಿವಣ್ಣ, ಉಪೇಂದ್ರ, ದರ್ಶನ್, ಸುದೀಪ್ ಚಿತ್ರಗಳಲ್ಲೂ ಅಟ್ಟಹಾಸ ಮರೆದಿದ್ದಾರೆ. ಇವರ ಕನ್ನಡ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಬಾಲಿವುಡ್ ನಟ ಪ್ರದೀಪ್ ರಾವತ್ (Pradeep Rawat) ಕನ್ನಡ ಸಿನಿಮಾದಲ್ಲಿ (Kannada Movies) ತಮ್ಮದೇ ಛಾಪು ಮೂಡಿಸಿದ್ದಾರೆ. ಏನಪ್ಪ ಇದು ಈ ರೀತಿ ಇದ್ದಾರೆ ವಿಲನ್ ಅನ್ನುವ ಮಟ್ಟಿಗೆ ಬೆಳ್ಳಿ ತೆರೆ ಮೇಲೆ ಅಬ್ಬರಿಸಿದ್ದಾರೆ. ಕನ್ನಡದ ನಾಯಕ ನಟರಾದ ದರ್ಶನ್ ಚಿತ್ರದಲ್ಲೂ (Darshan Movie) ಪ್ರದೀಪ್ ರಾವತ್ (Pradeep Rawat) ಅಬ್ಬರಿಸಿದ್ದಾರೆ. ಕಿಚ್ಚನ ಬಚ್ಚನ್ ಚಿತ್ರದಲ್ಲೂ ಪ್ರದೀಪ್ ಅಟ್ಟಹಾಸ ಮರೆದಿದ್ದಾರೆ. ಕನ್ನಡದ ಇನ್ನು ಕೆಲವು ಚಿತ್ರಗಳಲ್ಲು ಪ್ರದೀಪ್ ರಾವತ್ ವಿಲನ್ ಪಾತ್ರವನ್ನೆ ಮಾಡಿದ್ದಾರೆ. ಇವರ ಖಡಕ್ ಮತ್ತು ವಿಚಿತ್ರ ಮ್ಯಾನರಿಸಂನಿಂದಲೇ ಪ್ರೇಕ್ಷಕರ ಮನದಲ್ಲಿ ವಿಲನ್ ಅನ್ನುವ ಫೀಲ್ ಮೂಡಿಸಿದ್ದಾರೆ. ಇವರ ಕನ್ನಡ ಚಿತ್ರಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.
ಗಜ ಚಿತ್ರದಲ್ಲಿ ಅಬ್ಬರ
ಈ ಚಿತ್ರದಲ್ಲಿ ಇವರು ಸೂರಪ್ಪ ಅನ್ನುವ ರೋಲ್ ಮಾಡಿದ್ರು. ಈ ಪಾತ್ರದ ಮೂಲಕ ಕನ್ನಡಿಗರ ಗಮನ ಸೆಳೆದರು. ಕನ್ನಡದಲ್ಲಿ ಪ್ರದೀಪ್ ರಾವತ್ ಸಿನಿಮಾ ಯಾವುದು ಅಂತ ಕೇಳಿದರೆ ಸಾಕು, ಈ ಗಜ ಚಿತ್ರವೇ ಮೊದಲು ಬರುತ್ತದೆ ನೋಡಿ. ಈ ಚಿತ್ರವನ್ನ ಕೆ.ಮಾದೇಶ್ ಡೈರೆಕ್ಷನ್ ಮಾಡಿದ್ದರು. ನವ್ಯ ನಾಯರ್ ಇಲ್ಲಿ ದರ್ಶನ್ಗೆ ಜೋಡಿ ಆಗಿದ್ದರು.
ಬಚ್ಚನ್ ಚಿತ್ರದಲ್ಲೂ ಪ್ರದೀಪ್ ರಾವತ್ ಆ್ಯಕ್ಟ್ ಮಾಡಿದ್ದಾರೆ. ಮಿನಿಸ್ಟರ್ ಮಧುಸೂಧನ್ ಅನ್ನುವ ಪಾತ್ರ ಮಾಡಿದ್ದರು. ಇಲ್ಲೂ ಇವರ ಅಬ್ಬರ ಜೋರಾಗಿಯೇ ಇತ್ತು.
ಕಿಚ್ಚ ಸುದೀಪ್ ಅಭಿನಯದ ಈ ಚಿತ್ರದಲ್ಲಿ ಪಾರುಲ್ ಯಾದವ್ ನಾಯಕಿ ಆಗಿದ್ದರು. ಶಶಾಂಕ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದರು.
ಕಿಚ್ಚನ ಜೊತೆ ಬಚ್ಚನ್
ಪ್ರದೀಪ್ ರಾವತ್ ಅವರು ಕನ್ನಡದಲ್ಲಿ ಅಭಿನಯಿಸಿರೋ ಅಷ್ಟೂ ಚಿತ್ರಗಳಲ್ಲಿ ವಿಲನ್ ರೋಲ್ ಮಾಡಿದ್ದಾರೆ. ಇವರ ಈ ಚಿತ್ರಗಳ ಪಟ್ಟಿದಲ್ಲಿ ಉಪೇಂದ್ರ ಅವರ ಚಿತ್ರವೂ ಇದೆ.
ಶಿವರಾಜ್ ಕುಮಾರ್ ಅಭಿನಯದ ಶಿವಲಿಂಗ ಚಿತ್ರದಲ್ಲೂ ಪ್ರದೀಪ್ ರಾವತ್ ಇದ್ದಾರೆ. ಇಲ್ಲಿ ಇವರು ‘ಬಾಬಾ’ ರೋಲ್ ಮಾಡಿದ್ದರು.
ಉಪ್ಪಿ ಚಿತ್ರದಲ್ಲೂ ಅಭಿನಯ
ಈ ಬಾಬಾ ರೋಲ್ ಅಲ್ಲಿ ಪ್ರದೀಪ್ ರಾವತ್ ಗಮನ ಸೆಳೆದಿದ್ದರು. ಈ ಚಿತ್ರದಲ್ಲಿ ಹಾರರ್ ಕಂಟೆಂಟ್ ಇತ್ತು. ಇದರಲ್ಲೂ ಪ್ರದೀಪ್ ರಾವತ್ ತಮ್ಮ ವಿಶೇಷ ಮ್ಯಾನರಿಸಂ ಮೂಲಕವೂ ಸೆಳೆದಿದ್ದರು ನೋಡಿ.
ಇವರು ದಕ್ಷಿಣದ ಹಲವು ಚಿತ್ರಗಳಲ್ಲಿ ತಮ್ಮ ಛಾಪು ಮೂಡಿಸಿದ್ದಾರೆ. ಆದರೆ, ಆಗಸ್ಟ್-4 ರಂದು ನಿಧನ ಹೊಂದಿದ್ದಾರೆ. ಕ್ಯಾನ್ಸರ್ನಿಂದಲೇ ಇವರು ಹಲವು ದಿನಗಳಿಂದಲೇ ಬಳಲುತ್ತಿದ್ದರು.
Bangalore [Bangalore],Bangalore,Karnataka
Aug 05, 2026 11:37 AM IST














