PM Modi: ಮೋದಿ ರಾಜಕೀಯ ಪರ್ವದ ಹೊಸ ಮೈಲಿಗಲ್ಲು! ನೆಹರು ಸಾರಥ್ಯ vs ಮೋದಿ ಪಥ; ಭಾರತದ ಆಡಳಿತದಲ್ಲಿ ಅಡಗಿದೆ ಅಚ್ಚರಿಯ ವ್ಯತ್ಯಾಸ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

PM Modi: ಇತಿಹಾಸವನ್ನ ಮತ್ತೆ ಬರೆಯಲಾಗುತ್ತಿದೆ. ಹೌದು, ಪ್ರಧಾನಿ ನರೇಂದ್ರ ಮೋದಿಯವರು ಇದೇ ಜೂನ್ 10, 2026 ರಂದು, ಸತತ 4,399 ದಿನಗಳ ಅಧಿಕಾರ ಪೂರ್ಣಗೊಳಿಸುವ ಮೂಲಕ ಭಾರತೀಯ ರಾಜಕೀಯ ಇತಿಹಾಸದಲ್ಲಿಯೇ ಅಭೂತಪೂರ್ವ ಮೈಲಿಗಲ್ಲೊಂದನ್ನು ದಾಟಲಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

News18
News18

ನವದೆಹಲಿ: ಇತಿಹಾಸವನ್ನ ಮತ್ತೆ ಬರೆಯಲಾಗುತ್ತಿದೆ. ಹೌದು, ಪ್ರಧಾನಿ (Prime Minister) ನರೇಂದ್ರ ಮೋದಿಯವರು (Narendra Modi) ಇದೇ ಜೂನ್ 10, 2026 ರಂದು, ಸತತ 4,399 ದಿನಗಳ ಅಧಿಕಾರ ಪೂರ್ಣಗೊಳಿಸುವ ಮೂಲಕ ಭಾರತೀಯ ರಾಜಕೀಯ ಇತಿಹಾಸದಲ್ಲಿಯೇ ಅಭೂತಪೂರ್ವ ಮೈಲಿಗಲ್ಲೊಂದನ್ನು ದಾಟಲಿದ್ದಾರೆ. ಅದುವೇ, ದೇಶದಲ್ಲಿ ಅತಿ ಹೆಚ್ಚು ಕಾಲ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ ಎಂಬ ಜವಾಹರಲಾಲ್ ನೆಹರು (Jawaharlal Nehru) ಅವರ ದಾಖಲೆಯನ್ನು ಮೋದಿ ಮುರಿಯಲಿದ್ದಾರೆ. ಇದರೊಂದಿಗೆ, ದೇಶದ ಅತ್ಯಂತ ದೀರ್ಘಾವಧಿ ಸೇವೆ ಸಲ್ಲಿಸಿದ ಚುನಾಯಿತ ಪ್ರಧಾನಿ (Elected Prime Minister) ಎಂಬ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ. ಆ ಕುರಿತ ವರದಿ ಇಲ್ಲಿದೆ.

2014 ರಿಂದಲೂ ಜನಾದೇಶ

ಮೇ 26, 2014ರಂದು ಮೊದಲ ಬಾರಿಗೆ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೋದಿ, ಅಂದಿನಿಂದ ಇಂದಿನವರೆಗೆ ಸತತವಾಗಿ ಬೃಹತ್ ಜನಾದೇಶ ಪಡೆದು ಅಧಿಕಾರದಲ್ಲಿದ್ದಾರೆ. ಇನ್ನೂ, ಜವಾಹರಲಾಲ್ ನೆಹರು ಅವರು ಸ್ವಾತಂತ್ರ್ಯದ ನಂತರ 1947ರಿಂದ 1964ರವರೆಗೆ ದೇಶದ ಮೊದಲ ಪ್ರಧಾನಿಯಾಗಿದ್ದರು. ಆದ್ರೆ, ಚುನಾಯಿತ ಪ್ರಧಾನಿಯಾಗಿ ನೆಹರು ಅಧಿಕಾರಾವಧಿಯು 1952ರ ಮೊದಲ ಸಾರ್ವತ್ರಿಕ ಚುನಾವಣೆಯಿಂದ ಆರಂಭವಾಯಿತು. ಅದರಂತೆ, ಈ ಲೆಕ್ಕದಲ್ಲಿ ಅವರ ಚುನಾಯಿತ ಅವಧಿ 4,398 ದಿನ.!

ದಶಕಗಳ ಕಾಲ ದೇಶದ ರಾಜಕೀಯ ಚಟುವಟಿಕೆಗಳು ನೆಹರು-ಗಾಂಧಿ ಯುಗದ ಆಡಳಿತ ಶೈಲಿಯಾಗಿತ್ತು. ಆದ್ರೆ, ಮೋದಿಯವರು ಆ ಲೆಕ್ಕಾಚಾರವನ್ನೇ ಬದಲಿಸಿ, “ಜನಕಲ್ಯಾಣ ಯೋಜನೆಗಳು, ರಾಷ್ಟ್ರೀಯ ಭದ್ರತೆಗೆ ಆದ್ಯತೆ, ಸಾಂಸ್ಕೃತಿಕ ರಾಷ್ಟ್ರೀಯತೆಯ ನಿರೂಪಣೆ” ಎಂಬ ಈ ಮೂರು ಅಸ್ತ್ರಗಳ ಮೂಲಕ ಸಾಂಪ್ರದಾಯಿಕ ವೋಟ್​ಬ್ಯಾಂಕ್​ ರಾಜಕಾರಣವನ್ನು ಮೀರಿ ತಮ್ಮದೇ ಆದ ಆಡಳಿತವನ್ನ ನಡೆಸುತ್ತಿದ್ದಾರೆ. ಅದರಂತೆ, ಈ 12 ವರ್ಷಗಳಲ್ಲಿ ದೇಶದ ಆಡಳಿತದ ವೇಗವೂ ಬದಲಾಗಿದೆ. ಲಕ್ಷಾಂತರ ಕಿ.ಮೀ ರಾಷ್ಟ್ರೀಯ ಹೆದ್ದಾರಿ, ರೈಲ್ವೆ ಆಧುನೀಕರಣ, ಡಿಜಿಟಲ್ ಪೇಮೆಂಟ್ ಕ್ರಾಂತಿ, ಡಿಬಿಟಿ ಮೂಲಕ ನೇರ ಹಣ ವರ್ಗಾವಣೆ. ಜೊತೆಗೆ ಜಿಎಸ್‌ಟಿಯಂತಹ ತೆರಿಗೆ ಸುಧಾರಣೆ, ದೀರ್ಘಕಾಲ ಬಾಕಿ ಉಳಿದಿದ್ದ ರಾಷ್ಟ್ರೀಯ ಭದ್ರತೆಗೆ ಸಂಬಂಧ ಪಟ್ಟಂತಹ ನಿರ್ಧಾರಗಳು, ದೊಡ್ಡ ಶಾಸಕಾಂಗ ಬದಲಾವಣೆಗಳು – ಎಲ್ಲವೂ ಸಹ ಭಾರೀ ಬಹುಮತದೊಂದಿಗೆ ಸಾಧ್ಯವಾಗುತ್ತಿದೆ.

ನೆಹರು ಯುಗದಿಂದ ನವ ಭಾರತದತ್ತ

ನೆಹರು ಕಾಲದಲ್ಲಿ ಭಾರತವು ಸಮಾಜವಾದಿ ಆರ್ಥಿಕ ಮಾದರಿ ಮತ್ತು ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸಿತ್ತು. ಆದ್ರೆ, ಮೋದಿ ಯುಗದಲ್ಲಿ ಭಾರತವು ಮಾರುಕಟ್ಟೆ ಚಾಲಿತ ಆರ್ಥಿಕತೆ ಮತ್ತು ಪ್ರಾಯೋಗಿಕ ವಿದೇಶಾಂಗ ನೀತಿಗೆ ತಿರುಗಿದೆ. ಭಾರತವನ್ನು ವಿಶ್ವಗುರುವಾಗಿಸುವತ್ತ ಸಾಗುತ್ತಿದೆ. ಅದರ ಫಲವೇ G20 ಅಧ್ಯಕ್ಷತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯದ ಮಾದರಿ ಹೀಗೆ…

ಮುಂದುವರೆದು, ಮೋದಿ ಅಧಿಕಾರಾವಧಿಯಲ್ಲಿ ಜಿಎಸ್​ಟಿ ಮತ್ತು ದೊಡ್ಡ ರಾಷ್ಟ್ರೀಯ ಭದ್ರತಾ ಕ್ರಮಗಳ ಮೂಲಕ ಭಾರತ ಆಧುನಿಕ ಜಗತ್ತಿನಲ್ಲಿ ಹೊಸ ಅಧ್ಯಾಯ ಬರೆದಿದೆ. ಹಾಗಾಗಿ, ನರೇಂದ್ರ ಮೋದಿ ಅವರ ಈ ಮೈಲಿಗಲ್ಲು ಕೇವಲ ಅಧಿಕಾರದಲ್ಲಿ ಕಳೆದ ದಿನಗಳ ಲೆಕ್ಕವಲ್ಲ, ಬದಲಾಗಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ನವ ಭಾರತದ ಸ್ಪಷ್ಟ ಪ್ರತಿಬಿಂಬವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed