Last Updated:
ರಾಜ್ಯದಲ್ಲಿ ಇಂಧನ ಕೊರತೆ ತಡೆಯಲು ಹೊಸ ಮಾರ್ಗಸೂಚಿ, ಅನಧಿಕೃತ ಕಂಟೇನರ್ಗಳಿಗೆ ಪೆಟ್ರೋಲ್ ಡೀಸೆಲ್ ನಿಷೇಧ, ನಿಯಮ ಉಲ್ಲಂಘನೆಗೆ ಜೈಲು, ದಂಡ, ಲೈಸೆನ್ಸ್ ರದ್ದು, ಮುಟ್ಟುಗೋಲು ಶಿಕ್ಷೆ
ಬೆಂಗಳೂರು; ಜಾಗತಿಕ ಮಾರುಕಟ್ಟೆಯಲ್ಲಿ(Global Market) ತಲೆದೋರಿರುವ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂಧನ (Fuel) ಕೊರತೆಯಾಗದಂತೆ ತಡೆಯಲು ನಾಗರಿಕ ಹಾಗೂ ಆಹಾರ ಸರಬರಾಜು ಇಲಾಖೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಹೊರಡಿಸಿದೆ. ಗ್ರಾಹಕರ ಹಿತ ಮತ್ತು ಸುರಕ್ಷತೆ (Security) ದೃಷ್ಟಿಯಿಂದ ರಾಜ್ಯದ ಎಲ್ಲ ಇಂಧನ ವಿತರಣಾ ಕೇಂದ್ರಗಳಿಗೆ (Retail Outlets) ಈ ಸೂಚನೆ ನೀಡಲಾಗಿದ್ದು, ನಿಯಮ ಮೀರಿದ ಪೆಟ್ರೋಲ್ ಬಂಕ್ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ಎಚ್ಚರಿಸಲಾಗಿದೆ. ಇದು ಕೇವಲ ರಾಜ್ಯಕ್ಕೆ ಸೀಮಿತವಲ್ಲ. Petroleum Act, 1934 ಮತ್ತು Petroleum Rules, 2002ರ ಅಡಿ ಇದು ಇಡೀ ದೇಶದಲ್ಲಿ ನಿಷೇಧಿತ ಕ್ರಮ.
ಪೆಟ್ರೋಲಿಯಂ ನಿಯಮಗಳು 2002ರ ಅನ್ವಯ ಪ್ರಮುಖ ಸೂಚನೆಗಳೇನೆಂದರೆ ಇಂಧನ ಕೇಂದ್ರಗಳು ವಾಹನಗಳ ಟ್ಯಾಂಕ್ಗಳಿಗೆ ಅಥವಾ ಅಧಿಕೃತ ಕಂಟೇನರ್ಗಳಿಗೆ ಮಾತ್ರ ಗರಿಷ್ಠ 200 ಲೀಟರ್ ಮಿತಿಯಲ್ಲಿ ಇಂಧನ ತುಂಬಿಸಬಹುದು. ಬಾಟಲಿ, ಕ್ಯಾನ್ ಅಥವಾ ಯಾವುದೇ ಅನಧಿಕೃತ ಕಂಟೇನರ್ನಲ್ಲಿ ಪೆಟ್ರೋಲ್/ಡೀಸೆಲ್ ನೀಡುವುದು ಸಂಪೂರ್ಣ ನಿಷೇಧ. Rule 3 ಪ್ರಕಾರ ಅಧಿಕೃತ ಲೈಸೆನ್ಸ್ ಹೊಂದಿದವರಿಗೆ ಮಾತ್ರ ಇಂಧನ ನೀಡಬಹುದು.
Rule 4 & 5 ಪ್ರಕಾರ ಕಂಟೇನರ್ಗಳು Chief Controller of Explosives ಅನುಮೋದಿತ ಮೆಟಲ್ ಜೆರ್ರಿ ಕ್ಯಾನ್ ಆಗಿರಬೇಕು. ಪ್ಲಾಸ್ಟಿಕ್ ಬಾಟಲಿ ಸಂಪೂರ್ಣ ನಿಷೇಧ. ಇದರ ಜೊತೆಗೆ Explosives Act 1884, Motor Spirit and High-Speed Diesel Regulation Order 2005 ಮತ್ತು Environment (Protection) Act 1986 ಕೂಡ ಇದನ್ನು ನಿಯಂತ್ರಿಸುತ್ತವೆ.
ಶಿಕ್ಷೆ ಏನೆಲ್ಲಾ ಕೊಡಲಾಗುತ್ತದೆ?
ಶಿಕ್ಷೆ ಎಷ್ಟು ಗಂಭೀರ ಎಂದರೆ Petroleum Act, 1934ರ Section 23 ಪ್ರಕಾರ ಮೊದಲ ಅಪರಾಧಕ್ಕೆ 1 ತಿಂಗಳ ಜೈಲು ಅಥವಾ ₹1,000 ದಂಡ ಅಥವಾ ಎರಡೂ. ಮತ್ತೆ ಮಾಡಿದರೆ 3 ತಿಂಗಳ ಜೈಲು ಅಥವಾ ₹5,000 ದಂಡ ಅಥವಾ ಎರಡೂ. Section 24 ಅಡಿ ಪೆಟ್ರೋಲಿಯಂ ಮತ್ತು ಕಂಟೇನರ್ ಸಂಪೂರ್ಣ ಮುಟ್ಟುಗೋಲು (Confiscation), ಪಂಪ್ ಡೀಲರ್ಗಳಿಗೆ ಲೈಸೆನ್ಸ್ ರದ್ದು ಮತ್ತು ಕ್ರಿಮಿನಲ್ ಪ್ರಕರಣ. ಬೆಂಕಿ ಅಥವಾ ಅಪಘಾತಕ್ಕೆ ಕಾರಣವಾದರೆ ಇನ್ನಷ್ಟು ಗಂಭೀರ ಶಿಕ್ಷೆ. ಒಡಿಶಾ, ಗೋವಾ, ಅಸ್ಸಾಂ ಸೇರಿ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ನಮ್ಮ ರಾಜ್ಯದಲ್ಲೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.
Bangalore [Bangalore],Bangalore,Karnataka













