Petrol & Diesel: ಇನ್ಮೇಲೆ ಈ ತಪ್ಪು ಮಾಡಿದ್ರೆ ಶಿಕ್ಷೆ ಖಂಡಿತ; ಏನು ಹೇಳುತ್ತೆ ಹೊಸ ನಿಯಮ? ಪೆಟ್ರೋಲ್‌ ತರೋಕೆ ಖಡಕ್‌ ನಿಬಂಧನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಕಠಿಣ ಕ್ರಮ


Last Updated:

ರಾಜ್ಯದಲ್ಲಿ ಇಂಧನ ಕೊರತೆ ತಡೆಯಲು ಹೊಸ ಮಾರ್ಗಸೂಚಿ, ಅನಧಿಕೃತ ಕಂಟೇನರ್‌ಗಳಿಗೆ ಪೆಟ್ರೋಲ್ ಡೀಸೆಲ್ ನಿಷೇಧ, ನಿಯಮ ಉಲ್ಲಂಘನೆಗೆ ಜೈಲು, ದಂಡ, ಲೈಸೆನ್ಸ್ ರದ್ದು, ಮುಟ್ಟುಗೋಲು ಶಿಕ್ಷೆ

ಕಠಿಣ ಕ್ರಮ
ಕಠಿಣ ಕ್ರಮ

ಬೆಂಗಳೂರು; ಜಾಗತಿಕ ಮಾರುಕಟ್ಟೆಯಲ್ಲಿ(Global Market) ತಲೆದೋರಿರುವ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂಧನ (Fuel) ಕೊರತೆಯಾಗದಂತೆ ತಡೆಯಲು ನಾಗರಿಕ ಹಾಗೂ ಆಹಾರ ಸರಬರಾಜು ಇಲಾಖೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಹೊರಡಿಸಿದೆ. ಗ್ರಾಹಕರ ಹಿತ ಮತ್ತು ಸುರಕ್ಷತೆ (Security) ದೃಷ್ಟಿಯಿಂದ ರಾಜ್ಯದ ಎಲ್ಲ ಇಂಧನ ವಿತರಣಾ ಕೇಂದ್ರಗಳಿಗೆ (Retail Outlets) ಈ ಸೂಚನೆ ನೀಡಲಾಗಿದ್ದು, ನಿಯಮ ಮೀರಿದ ಪೆಟ್ರೋಲ್ ಬಂಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟವಾಗಿ ಎಚ್ಚರಿಸಲಾಗಿದೆ. ಇದು ಕೇವಲ ರಾಜ್ಯಕ್ಕೆ ಸೀಮಿತವಲ್ಲ. Petroleum Act, 1934 ಮತ್ತು Petroleum Rules, 2002ರ ಅಡಿ ಇದು ಇಡೀ ದೇಶದಲ್ಲಿ ನಿಷೇಧಿತ ಕ್ರಮ.

ಇಷ್ಟೇ ಪೆಟ್ರೋಲ್‌ ತುಂಬಿಸಬೇಕು ಎಂಬ ನಿಯಮ

ಪೆಟ್ರೋಲಿಯಂ ನಿಯಮಗಳು 2002ರ ಅನ್ವಯ ಪ್ರಮುಖ ಸೂಚನೆಗಳೇನೆಂದರೆ ಇಂಧನ ಕೇಂದ್ರಗಳು ವಾಹನಗಳ ಟ್ಯಾಂಕ್‌ಗಳಿಗೆ ಅಥವಾ ಅಧಿಕೃತ ಕಂಟೇನರ್‌ಗಳಿಗೆ ಮಾತ್ರ ಗರಿಷ್ಠ 200 ಲೀಟರ್ ಮಿತಿಯಲ್ಲಿ ಇಂಧನ ತುಂಬಿಸಬಹುದು. ಬಾಟಲಿ, ಕ್ಯಾನ್ ಅಥವಾ ಯಾವುದೇ ಅನಧಿಕೃತ ಕಂಟೇನರ್‌ನಲ್ಲಿ ಪೆಟ್ರೋಲ್/ಡೀಸೆಲ್ ನೀಡುವುದು ಸಂಪೂರ್ಣ ನಿಷೇಧ. Rule 3 ಪ್ರಕಾರ ಅಧಿಕೃತ ಲೈಸೆನ್ಸ್ ಹೊಂದಿದವರಿಗೆ ಮಾತ್ರ ಇಂಧನ ನೀಡಬಹುದು.

ರೂಲ್ಸ್‌ 4-5 ಹೇಳೋದೇನು?

Rule 4 & 5 ಪ್ರಕಾರ ಕಂಟೇನರ್‌ಗಳು Chief Controller of Explosives ಅನುಮೋದಿತ ಮೆಟಲ್ ಜೆರ್ರಿ ಕ್ಯಾನ್ ಆಗಿರಬೇಕು. ಪ್ಲಾಸ್ಟಿಕ್ ಬಾಟಲಿ ಸಂಪೂರ್ಣ ನಿಷೇಧ. ಇದರ ಜೊತೆಗೆ Explosives Act 1884, Motor Spirit and High-Speed Diesel Regulation Order 2005 ಮತ್ತು Environment (Protection) Act 1986 ಕೂಡ ಇದನ್ನು ನಿಯಂತ್ರಿಸುತ್ತವೆ.

ಪರವಾನಿಗೆ ರದ್ಧತಿಯ ಎಚ್ಚರಿಕೆ

ರಿಟೇಲ್ ಔಟ್‌ಲೆಟ್‌ಗಳು ದೊಡ್ಡ ಮಟ್ಟದ ಬಲ್ಕ್ ಇಂಧನ ಪೂರೈಕೆ ಮಾಡುವಂತಿಲ್ಲ. ಅಂತಹ ವ್ಯವಹಾರ ಕೇವಲ ನೇರ ಮಾರಾಟ ಕಾರ್ಯವಿಧಾನ ಮೂಲಕ ಮಾತ್ರ ನಡೆಸಬೇಕು. ಬಲ್ಕ್ ಕಾರ್ಯಾಚರಣೆಗಳಲ್ಲಿ ಅವ್ಯವಹಾರ ನಡೆದರೆ ಅದು ಸುರಕ್ಷತೆ ಮತ್ತು ಲೈಸೆನ್ಸಿಂಗ್ ನಿಯಮಗಳ ಗಂಭೀರ ಉಲ್ಲಂಘನೆ, ಪರವಾನಗಿ ರದ್ದತಿ ಖಚಿತ. ವಿಶೇಷವಾಗಿ ಕೃಷಿ ಚಟುವಟಿಕೆ ಮತ್ತು ಜಲಚರ ಸಾಕಣೆಗೆ ಅಗತ್ಯವಿರುವ ಡೀಸೆಲ್ ಪೂರೈಕೆಯಲ್ಲಿ ವ್ಯತ್ಯಯವಾಗದಂತೆ ಅಧಿಕಾರಿಗಳು ರೈತರ ಬೇಡಿಕೆ ಪರಿಶೀಲಿಸಿ ಸೂಕ್ತ ಇಂಧನ ವಿತರಿಸಲು ಸ್ಪಷ್ಟ ಸೂಚನೆ ನೀಡಲಾಗಿದೆ.

ಶಿಕ್ಷೆ ಏನೆಲ್ಲಾ ಕೊಡಲಾಗುತ್ತದೆ?

ಇದನ್ನೂ ಓದಿ: Heart Health: ನಿಂತೇ ಹೋಗಿದ್ದ ಹೃದಯಗಳಿಗೆ ಜೀವ ತುಂಬಿದ ‘ಯಾಂತ್ರಿಕ ಪಂಪ್‌ಗಳು’: ಬೆಂಗಳೂರಿನಲ್ಲಿ ನಡೆದ ವೈದ್ಯಕೀಯ ಲೋಕದ ಅಚ್ಚರಿ ಇದು!

ಶಿಕ್ಷೆ ಎಷ್ಟು ಗಂಭೀರ ಎಂದರೆ Petroleum Act, 1934ರ Section 23 ಪ್ರಕಾರ ಮೊದಲ ಅಪರಾಧಕ್ಕೆ 1 ತಿಂಗಳ ಜೈಲು ಅಥವಾ ₹1,000 ದಂಡ ಅಥವಾ ಎರಡೂ. ಮತ್ತೆ ಮಾಡಿದರೆ 3 ತಿಂಗಳ ಜೈಲು ಅಥವಾ ₹5,000 ದಂಡ ಅಥವಾ ಎರಡೂ. Section 24 ಅಡಿ ಪೆಟ್ರೋಲಿಯಂ ಮತ್ತು ಕಂಟೇನರ್ ಸಂಪೂರ್ಣ ಮುಟ್ಟುಗೋಲು (Confiscation), ಪಂಪ್ ಡೀಲರ್‌ಗಳಿಗೆ ಲೈಸೆನ್ಸ್ ರದ್ದು ಮತ್ತು ಕ್ರಿಮಿನಲ್ ಪ್ರಕರಣ. ಬೆಂಕಿ ಅಥವಾ ಅಪಘಾತಕ್ಕೆ ಕಾರಣವಾದರೆ ಇನ್ನಷ್ಟು ಗಂಭೀರ ಶಿಕ್ಷೆ. ಒಡಿಶಾ, ಗೋವಾ, ಅಸ್ಸಾಂ ಸೇರಿ ಹಲವು ರಾಜ್ಯಗಳಲ್ಲಿ ಇತ್ತೀಚೆಗೆ ನಮ್ಮ ರಾಜ್ಯದಲ್ಲೂ ಇದನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed