Peddi Trailer Review: ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್! ಇದು ಮೂರು ಆಟಗಳ ಸ್ಪೂರ್ತಿದಾಯಕ ಸಿನಿಮಾ | | ACTPnews

Ram Charan Shiva Rajkumar Janhvi Kapoor Peddi Movie Trailer Release


ಒಂದಲ್ಲ..ಮೂರು ಆಟ ರಿವೀಲ್

ಪೆದ್ದಿ ಚಿತ್ರದ ಟ್ರೈಲರ್ ಪ್ರಾಮಿಸಿಂಗ್ ಆಗಿದೆ. ಪೆದ್ದಿ ಅದೆಷ್ಟು ಸೂಪರ್ ವ್ಯಕ್ತಿ ಅನ್ನೋದು ತಿಳಿಯುತ್ತಿದೆ. ಇಡೀ ಹಳ್ಳಿಯ ಯುವಕರಿಗೆ ಪೆದ್ದಿ ಅದೆಷ್ಟು ಸ್ಪೂರ್ತಿದಾಯಕ ಅನ್ನೋದು ಇದರಲ್ಲಿ ತಿಳಿಯುತ್ತದೆ.

ಟ್ರೈಲರ್ ಅಲ್ಲಿ ಪೆದ್ದಿ ಚಿತ್ರದ ಕಥೆ ರಿವೀಲ್

ಕುಸ್ತಿಗೆ ಯಾರು ಸ್ಪೂರ್ತಿ? ಈ ಪ್ರಶ್ನೆಗೆ ಹಳ್ಳಿಯ ಯುವಕರಿಂದ ಪೆದ್ದಿ ಅನ್ನುವ ಹೆಸರು ಬರುತ್ತದೆ. ಕ್ರಿಕೆಟ್‌ಗೆ ಯಾರು ಪ್ರೇರಣೆ ಅಂದ್ರೆ ಸಾಕು, ಅಲ್ಲೂ ಪೆದ್ದಿ ನೇಮ್ ಬರುತ್ತದೆ.

ರನ್ನಿಂಗ್ ಅಲ್ಲೂ ಪೆದ್ದಿ ಹವಾ

ಪೆದ್ದಿ ಚಿತ್ರದಲ್ಲಿ ಬರುವ ಹಳ್ಳಿ ಯುವಕರಿಗೆ ಪೆದ್ದಿ ಕುಸ್ತಿ ಮತ್ತು ಕ್ರಿಕೆಟ್‌ಗೆ ಅಷ್ಟೆ ಸ್ಪೂರ್ತಿ ಆಗಿರೋದಿಲ್ಲ. ರನ್ನಿಂಗ್‌ ಅಲ್ಲೂ ಪೆದ್ದಿನೆ ಸ್ಪೂರ್ತಿ ಆಗಿದ್ದಾರೆ. ಅದನ್ನೂ ಯುವಕರು ಇಲ್ಲಿ ಹೇಳಿಕೊಳ್ಳುತ್ತಾರೆ.

ಪೆದ್ದಿ ಗುರು ಈ ಶಿವಣ್ಣ

ಪೆದ್ದಿಗೆ ಇಲ್ಲಿ ಶಿವಣ್ಣ ಗುರು ಆಗಿದ್ದಾರೆ. ಕುಸ್ತಿ ಕಲಿಸಿಕೊಡುವ ಗುರು ಆಗಿದ್ದಾರೆ. ಗೌರ್ ನಾಯ್ಡು ಅನ್ನುವ ಪಾತ್ರವನ್ನ ಮಾಡಿದ್ದಾರೆ. ಈ ಪಾತ್ರಕ್ಕೆ ಒಳ್ಳೆ ಡೈಲಾಗ್ ಇವೆ.

ಇವುಗಳಲ್ಲಿ ಸದ್ಯಕ್ಕೆ ಟ್ರೈಲರ್ ಅಲ್ಲಿ ಒಂದೇ ಒಂದು ಡೈಲಾಗ್ ರಿವೀಲ್ ಆಗಿದೆ. “ಆಟ ಗೆಲ್ಲೋದಲ್ಲ, ಬದುಕುವುದು ಮುಖ್ಯ” ಅನ್ನೋ ಮಾತು ಇಡೀ ಟ್ರೈಲರ್ ಅಲ್ಲಿ ಗಮನ ಸೆಳೆಯುತ್ತದೆ.

ಆಟಾನೇ ನನ್ನ ಪೊಗರು

ಪೆದ್ದಿ ಪಾತ್ರಧಾರಿ ರಾಮ್ ಚರಣ್ ಮಾತು ಇಲ್ಲಿ ಖಡಕ್ ಆಗಿವೆ. ಆಟಾನೇ ನನ್ನ ಪೊಗರು ಅಂತ ಹೇಳುವ ಡೈಲಾಗ್ ಖುಷಿಕೊಡುತ್ತದೆ.

Ram Charan Shiva Rajkumar Janhvi Kapoor Peddi Movie Trailer Release

ಪೆದ್ದಿ ಗುರು ಈ ಶಿವಣ್ಣ

ಈ ಒಂದು ಪೊಗರಲ್ಲಿಯೇ ರಾಮ್ ಚರಣ್ ಒಂದಲ್ಲ, ಎರಡಲ್ಲ, ಕ್ರಿಕೆಟ್, ಕುಸ್ತಿ ಹಾಗೂ ರನ್ನಿಂಗ್ ಹೀಗೆ ಮೂರು, ಮೂರು ಆಟದಲ್ಲೂ ಮಾಸ್ಟರ್ ಆಗಿರುತ್ತಾರೆ.

ರಾಮ್ ಚರಣ್ ರೋಮ್ಯಾನ್ಸ್

ರಾಮ್ ಚರಣ್‌ಗೆ ಇಲ್ಲಿ ನಟಿ ಜಾಹ್ನವಿ ಕಪೂರ್ ಜೋಡಿ ಆಗಿದ್ದಾರೆ. ಈ ಪಾತ್ರ ಗಯ್ಯಾಳಿ ಪಾತ್ರವೇ ಆಗಿದೆ. ಪುಷ್ಪ ಚಿತ್ರದಲ್ಲಿ ರಶ್ಮಿಕಾ ತರವೇ ವರ್ತಿಸುತ್ತಾರೆ ಅನಿಸುತ್ತದೆ.

ಜಾಹ್ನವಿ ನೋಡಿ ಪೆದ್ದಿ ಹೇಳುವ ಡೈಲಾಗ್ ಕೂಡ ಚೆನ್ನಾಗಿದೆ. “ಆಕಾಶದಿಂದ ಚುಕ್ಕಿಗಳು ಉದುರಿ ಬೀಳ್ತವೆ ಅಂತಾರಲ್ಲ, ಒಂದು ಚುಕ್ಕಿ ಏನಾದ್ರೂ ವಿಜಯನಗರದಲ್ಲಿ ಉರಳಿ ಬಿದ್ದೈತೇನೋ” ಅನ್ನುವ ಈ ಡೈಲಾಗ್ ಮಜಾ ಕೊಡುತ್ತದೆ.

ಜೂನ್-4 ರಂದು ರಿಲೀಸ್

ಪೆದ್ದಿ ಚಿತ್ರ ಜೂನ್-4 ರಂದು ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಇದು ತೆರೆ ಕಾಣುತ್ತಿದೆ. ಎ.ಆರ್.ರೆಹಮಾನ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ರತ್ನವೇಲು ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed