Last Updated:
ಪೆದ್ದಿ ಚಿತ್ರದ ಹೆಲ್ಲಲ್ಲಲ್ಲೊ ಐಟಂ ಸಾಂಗ್ ಅಲ್ಲಿ ಶಿವಣ್ಣ ಕೂಡ ಇದ್ದಾರೆ. ಶಿವಣ್ಣ ಹೇಳಿದ್ಮೇಲೆ ಶಿಷ್ಯ ಪೆದ್ದಿ ಇಲ್ಲಿ ಡ್ಯಾನ್ಸ್ ಮಾಡ್ತಾರೆ. ಆದರೆ, ಶಿವಣ್ಣ ಇಲ್ಲಿ ಡ್ಯಾನ್ಸ್ ಮಾಡಿದ್ದಾರೋ ಇಲ್ವೋ ಅನ್ನುವ ವಿವರ ಇಲ್ಲಿದೆ ಓದಿ.
ಪೆದ್ದಿ ಚಿತ್ರ (Peddi Movie) ರಿಲೀಸ್ ಆಗ್ತೋದೋ ಇಲ್ವೋ ಅನ್ನುವ ಸುದ್ದಿನೂ ಇದೆ. ಇದರ ಬೆನ್ನಲ್ಲಿಯೆ ಪ್ರಮೋಷನ್ ಕೆಲಸವು ನಡೆಯುತ್ತಿದೆ. ಎ.ಆರ್.ರೆಹಮಾನ್ (A R Rahman) ಸಂಗೀತದ ಹೆಲ್ಲಲ್ಲಲ್ಲೋ ಹಾಡಿನ ವಿಡಿಯೋ ರಿಲೀಸ್ ಆಗಿದೆ. ಹೈ ಎನರ್ಜಿಟಿಕ್ ಸಾಂಗ್ ಇದಾಗಿದೆ. ಶ್ರುತಿ ಹಾಸನ್ (Shruthi Haasan) ಮತ್ತು ರಾಮ್ ಚರಣ್ (Ram Charan) ಇಲ್ಲಿ ಸಖತ್ ಆಗಿಯೆ ಕುಣಿದು ಕುಪ್ಪಳಿಸಿದ್ದಾರೆ. ಆದರೆ, ಇಲ್ಲಿ ಜಾನ್ವಿ ಕಪೂರ್ ಎಂಟ್ರಿನೂ ಆಗುತ್ತದೆ. ಮೂವರು ಡ್ಯಾನ್ಸ್ ಮಾಡಿರೋ ಈ ಹಾಡಿನ ಸಂಪೂರ್ಣ ವಿಶ್ಲೇಷಣೆ ಇಲ್ಲಿದೆ ಓದಿ.
ಶಿವಣ್ಣ ಹೇಳಿದ್ಮೇಲೆ…
ವೇದಿಕೆ ಮೇಲೆ ಶ್ರುತಿ ಹಾಸನ್ ಡ್ಯಾನ್ಸ್ ಮಾಡ್ತಾ ಇರ್ತಾರೆ. ಆದರೆ, ಪೆದ್ದಿಗೂ ಡ್ಯಾನ್ಸ್ ಮಾಡುವ ಆಸೆ ಇರುತ್ತದೆ. ಹಾಗಂತ ಗುರು ಗೌರ್ ನಾಯ್ಡು ಹೇಳುವವರೆಗೂ ಪೆದ್ದಿ ವೇದಿಕೆ ಹತ್ತೋದಿಲ್ಲ. ಆದರೆ, ಶಿವಣ್ಣ ಗ್ರೀನ್ ಸಿಗ್ನಲ್ ಕೊಡ್ತಾರೆ. ಅಲ್ಲಿಂದ ಹಂಗಾಮ ಶುರು ಆಗಿ ಬಿಡುತ್ತದೆ ನೋಡಿ.
ಹೆಲ್ಲಲ್ಲಲ್ಲೊ ಹಾಡು ಹೈ ಎನರ್ಜಿಟಿಕ್ ಆಗಿದೆ. ಇದನ್ನ ಅಷ್ಟು ಸುಲಭಕ್ಕೆ ಮಾಡೋಕೆ ಆಗೋದಿಲ್ಲ. ಜಾನಿ ಮಾಸ್ಟರ್ ಅಷ್ಟು ಎನರ್ಜಿ ಬೇಡುವ ಸ್ಟೆಪ್‌ಗಳನ್ನೆ ಇಲ್ಲಿ ಕಪೋಸ್ ಮಾಡಿದ್ದಾರೆ.
ಜಾನ್ವಿ ಕಪೂರ್, ರಾಮ್ ಚರಣ್, ಶ್ರುತಿ ಹಾಸನ್ ಒಟ್ಟಿಗೆ ಡ್ಯಾನ್ಸ್ ಮಾಡುವ ಸುಮಾರು ಸ್ಟೆಪ್ಸ್ ಇಲ್ಲಿವೆ. ಆದರೆ, ಶಿವಣ್ಣ ಇಲ್ಲಿ ನಡುವೆ ಬಂದು ಡ್ಯಾನ್ಸ್ ಮಾಡುವ ಸೀನ್ ಏನೂ ಇಲ್ಲ. ಪೆದ್ದಿ ಕೂಡ ಗುರುವನ್ನ ಎಳೆದು ವೇದಿಕೆ ಹತ್ತಿಸುವ ಕೆಲಸ ಮಾಡೋದಿಲ್ಲ.
ಇದರ ಹೊರತಾಗಿ ಈ ಹಾಡು ಹಳ್ಳಿಗಾಡಿನ ಐಟಂ ನಂಬರ್ ಆಗಿದೆ. ಸಂತೆಗೊಮ್ಮೆ ಬರುವ ಈ ಬೆಡಗಿಗಾಗಿಯೇ ಹಳ್ಳಿ ಜನ ಕಾಯ್ತಾನೇ ಇರ್ತಾರೆ ಅನ್ನೋದು ಈ ಹಾಡಿನ ಸಾಲುಗಳಲ್ಲಿಯೇ ತಿಳಿಯುತ್ತದೆ. ಪೆದ್ದಿಗೂ ವಾರಕೊಮ್ಮೆ ಬಾ ಅಂತ ಹೇಳುವ ಸಾಲುಗಳು ಇಲ್ಲಿವೆ. ಇದಕ್ಕಾಗಿ ದುಡ್ಡು ತೆಗೆದಿಡು ಅನ್ನುವ ಅರ್ಥದ ಸಾಲುಗಳು ಇಲ್ಲಿ ಬರುತ್ತವೆ.
ಪೆದ್ದಿ ಚಿತ್ರದ ಈ ಹಾಡು ಬಹು ಭಾಷೆಯಲ್ಲಿ ರಿಲೀಸ್ ಆಗಿದೆ. ಕನ್ನಡದಲ್ಲಿ ವರದರಾಜ ಚಿಕ್ಕಬಳ್ಳಾಪುರ ಈ ಗೀತೆಯನ್ನ ಬರೆದಿದ್ದಾರೆ. ರಕ್ಷಿತಾ ಸುರೇಶ್ ಈ ಗೀತೆಯನ್ನ ಕನ್ನಡದಲ್ಲಿ ಹಾಡಿದ್ದಾರೆ.
ಹೆಲ್ಲಲ್ಲಲ್ಲೊ ಹಂಗಾಮ
ಮೇ-24 ರಂದು ಈ ಗೀತೆ ರಿಲೀಸ್ ಆಗಿದೆ. ಬೆಳಗ್ಗೆ 11 ಗಂಟೆ ಹೊತ್ತಿಗೆ ಇದು ಬಿಡುಗಡೆ ಆಗಿದೆ. ಹೈ ಎನರ್ಜಿ ಇರೋ ಈ ಗೀತೆಯನ್ನ ಸೆಟ್ ಅಲ್ಲಿಯೇ ಶೂಟಿಂಗ್ ಮಾಡಿದ್ದಾರೆ.
ಪೆದ್ದಿ ಚಿತ್ರದ ಈ ಹಾಡನ್ನ ಶ್ರೀಮಂತವಾಗಿಯೇ ತೆಗೆದಿದ್ದಾರೆ. ಹಳ್ಳಿಯ ಫೀಲ್ ಬರುವ ಸೆಟ್ ಅನ್ನೆ ಇಲ್ಲಿ ಹಾಕಿದ್ದಾರೆ. ಈ ಹಾಡಿನಲ್ಲಿ ಡ್ಯಾನ್ಸರ್ ಕೂಡ ಜಾಸ್ತಿನೇ ಇದ್ದಾರೆ.
ಇವರ ನಡುವೆ ಶ್ರುತಿ ಹಾಸನ್ ಹಾಗೂ ರಾಮ್ ಚರಣ್ ಡ್ಯಾನ್ಸ್ ಮಾಡ್ತಾರೆ. ಜಾನ್ವಿ ಕಪೂರ್ ಜೋಡಿ ಆಗುತ್ತಾರೆ. ಹೀಗೆ ಮೂವರು ಈ ಹಾಡಿನಲ್ಲಿ ಸಖತ್ ಆಗಿಯೇ ಡ್ಯಾನ್ಸ್ ಮಾಡಿದ್ದಾರೆ.
ಜೂನ್-4 ರಂದು ಪೆದ್ದಿ ಚಿತ್ರ ರಿಲೀಸ್ ಆಗುತ್ತಿದೆ. ವಿಶ್ವದಾದ್ಯಂತ ಇದು ತೆರೆಗೆ ಬರ್ತಿದೆ. ಬುಚಿ ಬಾಬು ಸನಾ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಎ.ಆರ್.ರೆಹಮಾನ್ ಸಂಗೀತ ಕೊಟ್ಟಿದ್ದಾರೆ. ರತ್ನವೇಲು ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ ಅಂತ ಹೇಳಬಹುದು.
Bangalore [Bangalore],Bangalore,Karnataka













