Pawan Wadeyar: ‘ಬೇಲ್-2’ ಸಿನಿಮಾ ಪಕ್ಕನಾ? ಸೀಕ್ವೆಲ್ ಬಗ್ಗೆ ಡೈರೆಕ್ಟರ್ ಪವನ್ ಒಡೆಯರ್ ಹೇಳಿದ್ದೇನು? | | ACTPnews

Pawan Wadeyar: 'ಬೇಲ್-2' ಸಿನಿಮಾ ಪಕ್ಕನಾ? ಸೀಕ್ವೆಲ್ ಬಗ್ಗೆ ಡೈರೆಕ್ಟರ್ ಪವನ್ ಒಡೆಯರ್ ಹೇಳಿದ್ದೇನು? |


ಬೇಲ್-2 ಸಿನಿಮಾ ಯಾವಾಗ

ಪವನ್ ಒಡೆಯರ್ ಖುಷಿಯಲ್ಲಿದ್ದಾರೆ. ಬೇಲ್ ಚಿತ್ರಕ್ಕೆ ಎಲ್ಲೆಡೆ ಒಳ್ಳೆ ರೆಸ್ಪಾನ್ಸ್ ಬರ್ತಿದೆ. ಶೋಗಳು ಹೌಸ್‌ಫುಲ್ ಆಗುತ್ತಿವೆ. ಈ ಖುಷಿಯನ್ನು ಹಂಚಿಕೊಂಡಿರೋ ಪವನ್ ಒಡೆಯರ್ ಪಾರ್ಟ್-2 ಬಗ್ಗೆನೂ ಹೇಳಿಕೊಂಡಿದ್ದಾರೆ.

ಬೇಲ್-2 ಯಾವಾಗ ಅನ್ನುವ ಪ್ರಶ್ನೆಗೆ ನಗ್ತಾನೇ ಉತ್ತರ ಕೊಟ್ಟಿದ್ದಾರೆ. ಬೇಲ್-2 ಚಿತ್ರದ ಐಡಿಯಾ ಇದೆ. ಸದ್ಯ ಎಲ್ಲೆಡೆ ಬೇಲ್ ಒನ್ ಚಿತ್ರದ ಸಕ್ಸಸ್ ಪ್ರವಾಸದಲ್ಲಿಯೇ ಇದ್ದೇವೆ. ಇದೆಲ್ಲ ಮುಗಿದ್ಮೇಲೆ ಪಾರ್ಟ್-2 ಐಡಿಯಾ ಬಗ್ಗೆ ಚರ್ಚೆ ಶುರು ಮಾಡುತ್ತೇವೆ ಅಂತಲೇ ಪವನ್ ಹೇಳಿದ್ದಾರೆ.

ಚಿತ್ರ ಯಾರಿಗೆ ಹಿಟ್ ಮಾಡ್ತಿದೆ

ಬೇಲ್ ಚಿತ್ರ ಯಾರಿಗೆ ಹಿಟ್ ಮಾಡ್ತಿದೆ. ಈ ಸಿನಿಮಾದಲ್ಲಿ ಯಾರನ್ನೋ ಹಿಟ್ ಮಾಡಿದಂತೆ ಇದೆ. ಈ ಒಂದು ಪ್ರಶ್ನೆಗೆ ಪವನ್ ಉತ್ತರಿಸಿದ್ದಾರೆ.

ಈ ಚಿತ್ರ ಯಾರನ್ನೂ ಹಿಟ್ ಮಾಡುತ್ತಿಲ್ಲ. ಸಮಾಜದಲ್ಲಿ ನಡೀತಿರೊ ವಿಷಯವನ್ನ ನಾವು ಹಿಟ್ ಮಾಡ್ತಿದ್ದೇವೆ. ಈ ಚಿತ್ರದಲ್ಲಿ ಕಾನೂನು ಮತ್ತು ಹೀರೋನ ಕತೆ ಇದೆ.

ಶಿವಣ್ಣನ ದಪ್ಪ ಮೀಸೆ ಕಥೆ

ಈ ಚಿತ್ರದಲ್ಲಿ ಶಿವಣ್ಣನಿಗೆ ದಪ್ಪ ಮೀಸೆ ಗೆಟಪ್ ಕೊಟ್ಟಿದ್ದೇವೆ. ಆದರೆ, ಈ ಮೀಸೆ ವಿಷಯ ಹೇಳಿದಾಗ ಶಿವಣ್ಣ ಯೋಚನೆ ಮಾಡಿ ಅಂತ ಹೇಳಿದ್ದರು. ಈ ಗೆಟಪ್ ವರ್ಕ್ ಆಗುತ್ತಾ ಇಲ್ವಾ ನೋಡಿ ಅಂತಲೂ ಹೇಳಿದ್ದರು.

ಆದರೆ, ಶಿವಣ್ಣನ ಈ ದಪ್ಪು ಮೀಸೆಯ ಗೆಟಪ್ ಅನ್ನ ಮೊದಲು AI ಮೂಲಕವೇ ಕ್ರಿಯೇಟ್ ಮಾಡಿದೇವು. ಇದನ್ನ ನೋಡಿ ಶಿವಣ್ಣ ಒಪ್ಪಿದರು. ಜನ ಕೂಡ ಈಗ ಮೆಚ್ಚಿಕೊಂಡಿದ್ದಾರೆ.

ಬೇಲ್ ಥಿಯೇಟರ್ ವಿಸಿಟ್

ಬೇಲ್ ಚಿತ್ರದ ಥಿಯೇಟರ್ ವಿಸಿಟ್ ಮಾಡ್ತಾ ಇದ್ದೇವೆ. ನಾವು ಹೋದ ಜಾಗದಲ್ಲಿ ಈ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಶೋ ಹೌಸ್ ಫುಲ್ ಕೂಡ ಆಗಿವೆ.

ಹುಬ್ಬಳ್ಳಿಯಿಂದ ನಾವು ಮುಂದೆ ದಾವಣಗೆರೆಗೆ ಹೋಗುತ್ತೇವೆ. ಅಲ್ಲಿಂದ ಚಿತ್ರದುರ್ಗಕ್ಕೂ ಹೋಗುತ್ತೇವೆ ಅಂತಲೂ ಡೈರೆಕ್ಟರ್ ಪವನ್ ಒಡೆಯರ್ ಹೇಳಿದ್ದಾರೆ.

ಭಾರೀ ಸ್ವಾಗತ ನೋಡಿ

ಹುಬ್ಬಳ್ಳಿಯ ಅಪ್ಸರ ಥಿಯೇಟರ್ ಅಲ್ಲಿ ಭವ್ಯ ಸ್ವಾಗತ ಸಿಕ್ಕಿದೆ. ಸಾರೋಟ್ ಅಲ್ಲಿಯೇ ಶಿವಣ್ಣ, ಪವನ್ ಒಡೆಯರ್, ದೀಕ್ಷಿತ್ ಶೆಟ್ಟಿ ಅವರ ಮೆರವಣಿಗೆ ಮಾಡಲಾಗಿದೆ.

ಈ ಒಂದು ಸಾರೋಟ್ ಅಲ್ಲಿಯೇ ಶಿವಣ್ಣ, ಪವನ್ ಒಡೆಯರ್ ಅವರಿಗೆ ಸನ್ಮಾನ ಕೂಡ ಮಾಡಲಾಗಿದೆ. ಥಿಯೇಟರ್ ಒಳಗೆ ಬಂದ ಶಿವಣ್ಣ ಹಾಗೂ ಪವನ್ ಒಡೆಯರ್ ಅವರನ್ನ ನೋಡಲು ಜನ ಮುಗಿ ಬಿದ್ದಿರೋದು ಇದೆ. ಒಟ್ಟಾರೆ, ಪವನ್ ಒಡೆಯರ್ ಹುಬ್ಬಳ್ಳಿ ಜನರ ಪ್ರೀತಿಯನ್ನ ಸ್ವೀಕರಿಸಿ ಖುಷಿಪಟ್ಟಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed