Pavithra Gowda: ಪವಿತ್ರಾ ಗೌಡ ಜಾಮೀನು ಅರ್ಜಿಗೆ ಪ್ರಾಸಿಕ್ಯೂಷನ್‌ನಿಂದ ಆಕ್ಷೇಪ! ವಿಚಾರಣೆ ಮುಂದೂಡಿಕೆ | | ACTPnews

ದರ್ಶನ್-ಪವಿತ್ರಾ


Last Updated:

Pavithra Gowda: ಪವಿತ್ರಾ ಗೌಡ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆಯಾಗಿದೆ. ಪ್ರಾಸಿಕ್ಯೂಷನ್ ಏನಂದ್ರು?

ದರ್ಶನ್-ಪವಿತ್ರಾ
ದರ್ಶನ್-ಪವಿತ್ರಾ

ಚಿತ್ರದುರ್ಗ ರೇಣುಕಾಸ್ವಾಮಿ ಕೊಲೆ (Renukaswamy Case) ಪ್ರಕರಣಕ್ಕೆ ಸಂಬಂಧಿಸಿ ಆರೋಪಿ 1 ಆಗಿರುವ ಪವಿತ್ರಾ ಗೌಡ (Pavithra Gowda) ಜೈಲು ಸೇರಿ ಭರ್ತಿ 1 ವರ್ಷ ಆಗಿದೆ. ಈ ಸಂದರ್ಭದಲ್ಲಿ ಪವಿತ್ರಾ ಗೌಡ ಅವರು ಜಾಮೀನು (Bail) ಕೋರಿ ಅರ್ಜಿ ಸಲ್ಲಿಸಿದ್ದು ಇಂದು ಅರ್ಜಿ ವಿಚಾರಣೆಗೆ ಬಂದಿದೆ.

ಪರಪ್ಪನ ಅಗ್ರಹಾರದಲ್ಲಿ 30 ಮಂದಿ ಕೈದಿಗಳ ನಡುವೆ ಸಂಕಷ್ಟಕ್ಕೆ ಸಿಲುಕಿದ್ದ ಪವಿತ್ರಾ ಗೌಡಗೆ ಇದೀಗ ಆ ಬ್ಯಾರಕ್​ನಿಂದ ಬಿಡುಗಡೆ ಭಾಗ್ಯ ಲಭಿಸಿದೆ. ಇದೀಗ ಆರೋಪಿಯನ್ನ ಜೈಲು ಅಧಿಕಾರಿಗಳು ಮತ್ತೊಂದು ಬ್ಯಾರಕ್​​ಗೆ ಶಿಫ್ಟ್ ಮಾಡಿದ್ದು, ಪವಿತ್ರಾ ಗೌಡ ಫುಲ್​ ಖುಷ್ ಆಗಿದ್ದಾರೆ. ಆದರೆ ಚಿಂತೆ ಇನ್ನೂ ಮುಗಿದಿಲ್ಲ!

ಹೌದು ಪವಿತ್ರಾ ಗೌಡಗೆ ಇಷ್ಟಪಟ್ಟಂತೆ ಬ್ಯಾರಕ್ ಸಿಕ್ಕಿರಬಹುದು. ಆದರೆ ಬ್ಯಾರಕ್ ಸಿಕ್ಕಿದಷ್ಟು ಸುಲಭವಾ ಬೇಲ್ ಸಿಗೋದು? ಸದ್ಯ ಪವಿತ್ರಾ ಗೌಡ ಸಲ್ಲಿಸಿದ ಅರ್ಜಿಯ ವಿಚಾರಣೆಯೂ ನಡೆದಿದೆ.

ರೇಣುಕಾಸ್ವಾಮಿಯ ಕೊಲೆ ಆರೋಪಿ ಪವಿತ್ರಾ ಗೌಡ ಜಾಮೀನು ಅರ್ಜಿ ವಿಚಾರಣೆ ಇಂದು ನಡೆಯಲಿದೆ. ಪವಿತ್ರಾ ಗೌಡ ಅರೆಸ್ಟ್ ಆಗಿ ಒಂದು ವರ್ಷ ಕಳೆದ ಹಿನ್ನಲೆ ಪವಿತ್ರಾಗೌಡ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ತಾಯಿ ಆರೋಗ್ಯದ ಸಮಸ್ಯೆ, ಮಗಳ ಆರೈಕೆ ಮಾಡುವುದಿದೆ. ಹಾಗಾಗಿ ಜಾಮೀನು ನೀಡಬೇಕು ಎಂದು ಕೇಳಿದ್ದಾರೆ. ತನ್ನ ಆರೋಗ್ಯ ಸಮಸ್ಯೆಯೂ ಇದೆ. ಹಾಗೆಯೇ ತನ್ನ ಮೇಲಿನ ಆರೋಪಗಳೆಲ್ಲವು ಸುಳ್ಳು ಎಂದು ಅರ್ಜಿಯಲ್ಲಿ ಪವಿತ್ರಾ ಗೌಡ ಹೇಳಿದ್ದರು.

ಆದರೆ ಯಾಕೋ ಜಾಮೀನು ಸಿಗುವಂತೆ ಕಾಣಿಸುತ್ತಿಲ್ಲ. ಪವಿತ್ರಾ ಅರ್ಜಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಪ್ರಾಸಿಕ್ಯೂಷನ್ ಖಡಕ್ ವಾದ ಮಂಡಿಸುವ ಸಾಧ್ಯತೆ ಇದೆ.

ವರದಿ: ಮುನಿರಾಜು ಕೆಜಿ, ನ್ಯೂಸ್​18 ಕನ್ನಡ ಪ್ರತಿನಿಧಿ ಬೆಂಗಳೂರು



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed