Pavana Gowda: ‘ನನ್ನವನಿಗೆ’ ಅಂತ ಕವನ ಬರೆದ ಪಾವನಾ! ನಟಿ ಹೇಳಿದ್ದು ಯಾರ ಬಗ್ಗೆ ಗೊತ್ತಾ? | | ACTPnews

Kannada Actress Pavana Gowda Wrote a Poem and Share the video on social media


ಅವನಿಗೆ ಅವಳು ಬೇಕಿತ್ತು..

ಪಾವನಾ ಗೌಡ ಬರೆದ ಕವಿತೆ ಚೆನ್ನಾಗಿದೆ. ನಾಲ್ಕೈದು ಸಾಲಿನ ಈ ಕವಿತೆ ಖುಷಿಕೊಡುತ್ತದೆ. ಹುಡುಗಿಯೊಬ್ಬಳ ಮನದ ಆಳವನ್ನ ಇದು ಹೇಳುತ್ತದೆ. ತನ್ನಿಂದ ಆ ಹುಡುಗ ಏನು ನಿರೀಕ್ಷೆ ಮಾಡ್ತಿದ್ದಾನೆ ಅನ್ನೋದನ್ನು ಈ ಕವಿತೆ ಹೇಳುತ್ತದೆ.
ಇವಳಿಗಾದರು ಏನು ಗೊತ್ತಿತ್ತು…(ಚಿತ್ರ ಕೃಪೆ: ಪಾವನಾ ಗೌಡ ಇನ್‌ಸ್ಟಾಗ್ರಾಮ್)

ಅವನಿಗೆ ಹುಬ್ಬೇರಿಸುವಂತೆ ಕಾಣುವ ಅವಳು ಬೇಕಿತ್ತು ಅನ್ನುವ ಲೈನ್ ಕೂಡ ಬರುತ್ತದೆ. ಇದು ಅವನ ಮನದಾಳದ ಒಟ್ಟು ಚಿತ್ರಣವನ್ನ ಕಟ್ಟಿಕೊಡುವಂತೆ ಇದೆ. ಈ ಕವಿತೆ ಹೀಗೆ ಸಾಗುತ್ತದೆ.

ಅವನಿಗೆ ಹಾಡುವವಳು ಬೇಕಿತ್ತು..

ಕುಣಿಸುವವಳು ಬೇಕಿತ್ತು..

ನಗಿಸುವವಳು ಬೇಕಿತ್ತು..

ಮುದ್ದಿಸುವವಳು ಬೇಕಿತ್ತು..

ಮನ ಮೋಹಿಸುವವಳು ಬೇಕಿತ್ತು..

ಸೌಂದರ್ಯವತಿ ಬೇಕಿತ್ತು.

ಕಲಾಸರಸ್ವತಿ ಬೇಕಿತ್ತು..

ಯೋಗಕ್ಷೇಮ ಕೇಳುವವಳು ಬೇಕಿತ್ತು..

ಕಷ್ಟ-ಸುಖ ಹಂಚಿಕೊಳ್ಳುವವಳು ಬೇಕಿತ್ತು..

ಏಳುವ ಮುನ್ನವೇ ಎಲ್ಲವನ್ನು ಅರಿಯುವಳು ಬೇಕಿತ್ತು…

ಎಲ್ಲರೂ ನೋಡಿ ಹುಬ್ಬೇರಿಸುವಂತ “ಅವಳು” ಬೇಕಿತ್ತು..

ಇದು ಇಡೀ ಕವಿತೆಯ ಕೆಲವು ಸಾಲುಗಳಾಗಿವೆ. ಸ್ವತಃ ಪಾವನಾ ಇದನ್ನ ಹೇಳಿದ್ದಾರೆ. ಫೀಲ್ ಮಾಡಿಕೊಂಡೇ ಹೇಳಿದ್ದಾರೆ. ಪುಟ್ಟ ವಿಡಿಯೋದಲ್ಲಿ ಇದನ್ನ ಕ್ಯಾಪ್ಚರ್ ಕೂಡ ಮಾಡಿದ್ದಾರೆ.

Kannada Actress Pavana Gowda Wrote a Poem and Share the video on social media

ಅವನಿಗೆ ಹಾಡುವವಳು ಬೇಕಿತ್ತು..(ಚಿತ್ರ ಕೃಪೆ: ಪಾವನಾ ಗೌಡ ಇನ್‌ಸ್ಟಾಗ್ರಾಮ್)

ಚೆಂದಗೆ ರೆಡಿ ಆಗಿ ಕುಳಿತ ಪಾವನಾ ಗೌಡ, ಇಲ್ಲಿ ಕೈಯಲ್ಲೊಂದು ನವಿಲು ಗರಿ ಕೂಡ ಹಿಡಿದುಕೊಂಡಿದ್ದಾರೆ. ಇದು ಇಡೀ ವಿಡಿಯೋಗೆ ಒಂದು ಬ್ಯೂಟಿಫುಲ್ ಟಚ್ ಕೊಟ್ಟಿದೆ.

ಆದರೆ, ಈಗ ಮೇಲೆ ಹೇಳಿದ ಸಾಲುಗಳು ಅವನ ವರ್ಶನ್ ಆಗಿದೆ. ಆದರೆ, ಅವಳ ವರ್ಶನ್‌ನ ಇನ್ನೆರಡು ಸಾಲು ಹೀಗೆ ಸಾಗುತ್ತವೆ.

ಇವಳಿಗಾದರು ಏನು ಗೊತ್ತಿತ್ತು…

ಕೋಣೆಯಲ್ಲಿದ್ದ ಬಚ್ಚಲು

ಅಡಿಗೆ ಮನೆಯಲ್ಲಿದ್ದ ಒಲೆ

ಬಾಗಿಲ ಹಿಂದಿನ ಪೊರಕೆ

ಟ್ರೈನಿಂಗ್…ಇದಿಷ್ಟೆ ಸಿಕ್ಕಿತ್ತು..

ಈ ಸಾಲುಗಳು ಹುಡುಗಿಯ ಮನದ ವಾಸ್ತವದ ಚಿತ್ರಣವೇ ಆಗಿವೆ. ಹೀಗೆ ಪಾವನಾ ಗೌಡ ಈ ಒಂದು ಕವಿತೆ ಬರೆದಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್‌ನ ಪೇಜ್ ಅಲ್ಲಿ ತಾವೆ ಕವಿತೆ ಹೇಳಿದ ಪುಟ್ಟದೊಂದು ವಿಡಿಯೋ ಹಂಚಿಕೊಂಡಿದ್ದಾರೆ.

ಈ ಮೂಲಕ ಇದು ನನ್ನ ಎರಡನೇ ಕವಿತೆ ಆಗಿದೆ. ನಿಮ್ಮಲ್ಲಿ ಅದೆಷ್ಟು ಜನಕ್ಕೆ ಇದು ಫೀಲ್ ಆಯಿತು ಅಂತಲೇ ಕೇಳಿದ್ದಾರೆ. ಹಾಗೆ ಇದು ಕೇಳುವಂತನೇ ಇದೆ. ಇದನ್ನ ಪಾವನಾ ಅಷ್ಟೆ ಮನ ಮುಟ್ಟುವ ರೀತಿನೇ ಹೇಳಿದ್ದಾರೆ ಅಂತಲೇ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed