Parvathamma Rajkumar: ಆನಂದ್ ಅಂತ ಹೆಸರಿಟ್ಟರು, ಆ ಚಿತ್ರ ಹಿಟ್! ಅಮ್ಮನ ನೆನೆದ ಶಿವಣ್ಣ | | ACTPnews

ಆನಂದ್ ಅಂತ ಅಮ್ಮ ಹೆಸರಿಟ್ಟರು; ಆ ಚಿತ್ರ ಹಿಟ್; ಅಮ್ಮನ ನೆನೆದ ಶಿವಣ್ಣ!


Last Updated:

ದೊಡ್ಮನೆಯ ಪಾರ್ವತಮ್ಮನವರ 9 ನೇ ಪುಣ್ಯ ಸ್ಮರಣೆ ಇವತ್ತು. ರಾಘವೇಂದ್ರ ರಾಜಕುಮಾರ್ ಅಮ್ಮನ ಸ್ಮರಣೆ ಅಂತ ಬರೆದುಕೊಂಡಿದ್ದಾರೆ. ಶಿವರಾಜ್ ಕುಮಾರ್ ಆಗಾಗ ಅಮ್ಮನನ್ನ ನೆನಪಿಸಿಕೊಳ್ತಾನೇ ಇರ್ತಾರೆ. ದೊಡ್ಮನೆಯ ಈ ಅಮ್ಮನ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ.

ಆನಂದ್ ಅಂತ ಅಮ್ಮ ಹೆಸರಿಟ್ಟರು; ಆ ಚಿತ್ರ ಹಿಟ್; ಅಮ್ಮನ ನೆನೆದ ಶಿವಣ್ಣ!
ಆನಂದ್ ಅಂತ ಅಮ್ಮ ಹೆಸರಿಟ್ಟರು; ಆ ಚಿತ್ರ ಹಿಟ್; ಅಮ್ಮನ ನೆನೆದ ಶಿವಣ್ಣ!

ಶಿವರಾಜ್‌ ಕುಮಾರ್ (Shiva Rajkumar) ತಮ್ಮ ಅಮ್ಮನನ್ನ ನೆನಪಿಸಿಕೊಂಡಿದ್ದಾರೆ. ಆನಂದ್ (Anand) ಅಂತ ಅಮ್ಮನೆ ಹೆಸರಿಟ್ಟಿರು. ಆ ಚಿತ್ರ ಯಾವ ಲೆವೆಲ್‌ಗೆ ಹೋಯಿತು ಅನ್ನೋದು ಗೊತ್ತೇ ಇದೆ. ಅಮ್ಮನ ಆ ದೃಷ್ಟಿ ಗ್ರೇಟ್ ಅನ್ನುವ ಅರ್ಥದಲ್ಲಿಯೇ ಶಿವಣ್ಣ ಹೇಳಿಕೊಂಡಿದ್ದಾರೆ. ಪೆದ್ದಿ ಚಿತ್ರದ (Peddi Movie) ವಿಶೇಷ ಸಂದರ್ಶನದಲ್ಲಿಯೇ ಇದನ್ನ ಹೇಳಿಕೊಂಡಿದ್ದಾರೆ. ಪಾರ್ವತಮ್ಮನವರು (Parvathamma) ಹಾಗೆ ಇದ್ದರು. ಸಮಾಜಕ್ಕೆ ಒಳ್ಳೆಯ ಸಂದೇಶ ಕೊಡುವ ಚಿತ್ರಗಳನ್ನ ಮಾಡುತ್ತಿದ್ದರು. ಕತೆ-ಕಾದಂಬರಿಗಳನ್ನು ಓದುತ್ತಿದ್ದರು. ತುಂಬಾನೆ ಒಳ್ಳೆ ಕತೆ ಅನಿಸಿದಾಗ ಅದನ್ನ ಸಿನಿಮಾ ಮಾಡೋಕೆ ಯೋಚನೆ ಮಾಡುತ್ತಿದ್ದರು. ಇವರ ಯೋಚನೆಗೆ ಚಿ.ಉದಯ್ ಶಂಕರ್ ಸಾಥ್ ಕೊಡುತ್ತಿದ್ದರು. ಅಣ್ಣಾವ್ರ ಸಹೋದರ ವರದಪ್ಪನವರು ಜೊತೆ ಇರ್ತಾ ಇದ್ದರು. ಇದನ್ನ ಈಗ ಹೇಳೋಕೆ ಕಾರಣ ಇದೆ. ಅದೇನು ಅನ್ನೋದು ಇಲ್ಲಿದೆ ಓದಿ.

ಅಮ್ಮನ ಪುಣ್ಯ ಸ್ಮರಣೆ

ರಾಘವೇಂದ್ರ ರಾಜಕುಮಾರ್ ಅಮ್ಮನ ಸ್ಮರಣಿಸಿದ್ದಾರೆ. ಮೇ-31, 2017 ರಂದು ಪಾರ್ವತಮ್ಮನವರು ನಿಧನರಾದರು. ಇವರು ಹೋಗಿ ಈ ವರ್ಷಕ್ಕೆ 9 ಆಗುತ್ತದೆ. ಈ ದಿನ ಇವರ 9 ನೇ ಪುಣ್ಯ ಸ್ಮರಣೆ.

Parvathamma Rajkumar 9th Death Anniversary

ಅಮ್ಮನ ನೆನೆದ ಶಿವಣ್ಣ

(ಚಿತ್ರ ಕೃಪೆ: ಶಿವರಾಜ್ ಕುಮಾರ್ ಇನ್‌ಸ್ಟಾಗ್ರಾಮ್)

ಇವರನ್ನ ಮನೆ ಮಂದಿ ಸೇರಿ ಅನೇಕ ನಾಯಕಿಯರು ನೆನಪಿಸಿಕೊಳ್ಳುತ್ತಾರೆ. ಕಾರಣ, ಸುಧಾರಾಣಿ, ರಮ್ಯಾ, ರಕ್ಷಿತಾ ಅವರಂತಹ ಕನ್ನಡದ ಕಲಾವಿದೆಯರನ್ನ ಪಾರ್ವತಮ್ಮನವರೇ ಪರಿಚಯಿಸಿದ್ದಾರೆ.

ರಾಜಕುಮಾರ್ ಹಿಂದಿನ ಶಕ್ತಿ

ರಾಜಕುಮಾರ್ ಅವರು ಒಳ್ಳೆ ಸಿನಿಮಾಗಳನ್ನ ಕೊಟ್ಟಿದ್ದಾರೆ. ಸಮಾಜಮುಖಿ ಚಿತ್ರಗಳನ್ನ ಮಾಡಿದ್ದಾರೆ. ಇವರ ಸಿನಿಮಾಗಳ ಆಯ್ಕೆ ಹಿಂದೆ ಪಾರ್ವತಮ್ಮನವರು ಇರ್ತಾ ಇದ್ದರು.

ಇವರು ಒಳ್ಳೆ ಕತೆಗಳನ್ನ ಓದುತ್ತಿದ್ದರು. ಕತೆ, ಕಾದಂಬರಿ ಅಂತ ತರಿಸಿಕೊಂಡು ಓದುತ್ತಿದ್ದರು. ಅವುಗಳಲ್ಲಿ ಸಿನಿಮಾ ಮಾಡಬಹುದು ಅನಿಸೋ ಕತೆಗಳನ್ನ ಅಣ್ಣಾವ್ರ ಸಹೋದರ ವರದಪ್ಪನವರ ಜೊತೆಗೂ ಚರ್ಚೆ ಮಾಡುತ್ತಿದ್ದರು. ಚಿ.ಉದಯ್ ಶಂಕರ್ ಅವರೂ ಇದಕ್ಕೆ ಸಾಥ್ ಕೊಡ್ತಿದ್ದರು. ಹೀಗೆ ಒಳ್ಳೆ ಕತೆ ಫೈನಲ್ ಆಗುತ್ತಿದ್ದವು.

ಆನಂದ್ ಟೈಟಲ್ ಕೊಟ್ಟವರು ಯಾರು

ಶಿವಣ್ಣ ಅಭಿನಯದ ಆನಂದ್ ಚಿತ್ರದ ಟೈಟಲ್ ಅನ್ನ ಪಾರ್ವತಮ್ಮನವರೇ ಕೊಟ್ಟಿದ್ದರು. ಈ ಮೂಲಕ ಹಿರಿಯ ಪುತ್ರ ಶಿವಣ್ಣನನ್ನ ಇಂಡಸ್ಟ್ರಿಗೆ ಪರಿಚಯಿಸಿದರು.

Parvathamma Rajkumar 9th Death Anniversary

ರಾಜಕುಮಾರ್ ಹಿಂದಿನ ಶಕ್ತಿ

(ಚಿತ್ರ ಕೃಪೆ: ರಾಘವೇಂದ್ರ ರಾಜಕುಮಾರ್ ಇನ್‌ಸ್ಟಾಗ್ರಾಮ್)

ಈ ಚಿತ್ರದಲ್ಲಿ ಕನ್ನಡದ ನಟಿ ಸುಧಾರಾಣಿ ಅವರು ಪರಿಚಯ ಆದರು. ಈ ಚಿತ್ರದ ಆದ್ಮೇಲೆ ರಥಸಪ್ತಮಿ, ಮನಮೆಚ್ಚಿದ ಹುಡುಗಿ, ಹೀಗೆ ಒಳ್ಳೆ ಸಿನಿಮಾಗಳನ್ನ ಕೊಟ್ಟರು. ಬ್ಯಾಕ್ ಟು ಬ್ಯಾಕ್ ಈ ಚಿತ್ರಗಳು ಬಂದು ಹಿಟ್ ಆದವು. ಹಾಗಾಗಿಯೇ ಶಿವಣ್ಣನನ್ನ ಹ್ಯಾಟ್ರಿಕ್ ಹೀರೋ ಅಂತಲೇ ಕರೆಯುತ್ತಾರೆ.

ಅಪ್ಪು ಚಿತ್ರದಿಂದ ಪುನೀತ್ ಎಂಟ್ರಿ

ಪುನೀತ್ ರಾಜ್‌ಕುಮಾರ್ ಅಭಿನಯದ ಅಪ್ಪು ಚಿತ್ರವನ್ನು ದೊಡ್ಮನೆಯಿಂದ ಪಾರ್ವತಮ್ಮನವರೇ ನಿರ್ಮಾಣ ಮಾಡಿದ್ದರು. ಈ ಚಿತ್ರವೂ ಹಿಟ್ ಆಯಿತು. ಪುನೀತ್ ಮುಂದೆ ಪವರ್ ಸ್ಟಾರ್ ಆಗಿರೋದು ಗೊತ್ತೆ ಇದೆ.

ರಾಘವೇಂದ್ರ ರಾಜಕುಮಾರ್ ಅಭಿನಯದ ಚಿರಂಜೀವಿ ಸುಧಾಕರ ಚಿತ್ರವನ್ನು ಪಾರ್ವತಮ್ಮನವರೇ ನಿರ್ಮಾಣ ಮಾಡಿದ್ದರು. ಹೀಗೆ ಪಾರ್ವತಮ್ಮನವರು ಸಿನಿಮಾ ಮತ್ತು ಮನೆ ಎರಡೂ ನೋಡಿಕೊಳ್ಳುತ್ತಿದ್ದರು.

ಆ ರೀತಿನೇ ಇದ್ದ ಪಾರ್ವತಮ್ಮನವರು 9 ವರ್ಷದ ಹಿಂದೆ ಕ್ಯಾನ್ಸರ್ ತೊಂದರೆಯಿಂದ ಎಲ್ಲರನ್ನ ಅಗಲಿದ್ದಾರೆ. ಇವರನ್ನ ಮನೆ ಮಂದ ಸೇರಿದಂತೆ ಇಂಡಸ್ಟ್ರಿ ಕೂಡ ಸ್ಮರಿಸುತ್ತದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed