GT vs RCB Final: 4 ಫೈನಲ್, ಒಂದೇ ಅರ್ಧಶತಕ, ಆರ್​​​ಸಿಬಿಗೆ ದೊಡ್ಡ ತಲೆ ನೋವಾದ ಸ್ಟಾರ್ ಪ್ಲೇಯರ್ ಕಳಪೆ ಪ್ರದರ್ಶನ! ಇಂದಾದ್ರು ಕೈ ಹಿಡಿತಾರಾ ಲೆಜೆಂಡರಿ ಬ್ಯಾಟರ್? | ಕ್ರೀಡಾ ಸುದ್ದಿ | ACTPnews

ಆರ್‌ಸಿಬಿ


Last Updated:

ಐಪಿಎಲ್ 2026 ರ ಫೈನಲ್ ಪಂದ್ಯವನ್ನು ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಸಜ್ಜಾಗಿವೆ. ಗುಜರಾತ್ ತಂಡಕ್ಕೆ ಟ್ರೋಫಿ ಎತ್ತುವ ಸುವರ್ಣಾವಕಾಶವಿದೆ. ವಿರಾಟ್ ಕೊಹ್ಲಿ ಅವರ ಐಪಿಎಲ್ ಫೈನಲ್ ದಾಖಲೆ ಆರ್‌ಸಿಬಿ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ.

ಆರ್‌ಸಿಬಿ
ಆರ್‌ಸಿಬಿ

ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯಲಿದೆ. ಎರಡೂ ತಂಡಗಳು (Teams) ಟೂರ್ನಿಯುದ್​ದಕ್ಕೂ ಅದ್ಭುತ ಪ್ರದರ್ಶನ ನೀಡಿವೆ. ಈಗ ಉಭಯ ತಂಡಗಳು ತಮ್ಮ ಎರಡನೇ ಐಪಿಎಲ್ ಟ್ರೋಫಿಯನ್ನು ಗೆಲ್ಲುವ ನಿರೀಕ್ಷೆಯಲ್ಲಿವೆ. ಐಪಿಎಲ್ 2026 ರಲ್ಲಿ ಆರ್​​ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ (Virat Kohli) ಕೂಡ ಅಸಾಧಾರಣ ಪ್ರದರ್ಶನ ನೀಡಿದ್ದಾರೆ. ಹೀಗಾಗಿ ಆರ್‌ಸಿಬಿ ಅಭಿಮಾನಿಗಳು (Fans) ಫೈನಲ್‌ನಲ್ಲಿ ಕೊಹ್ಲಿ ಅವರಿಂದ ಬಿಗ್ ಇನ್ನಿಂಗ್ಸ್‌ಗಾಗಿ ಆಶಿಸುತ್ತಿದ್ದಾರೆ. ಆದಾಗ್ಯೂ, ಐಪಿಎಲ್ ಫೈನಲ್‌ಗಳಲ್ಲಿ ವಿರಾಟ್ ಅವರ ದಾಖಲೆ ಇಲ್ಲಿಯವರೆಗೆ ಕಳಪೆಯಾಗಿದೆ. ಈ ಪ್ರವೃತ್ತಿ ಮುಂದುವರಿದರೆ, ಆರ್​​ಸಿಬಿ ತಂಡದ ಮೇಲೆ ಭಾರೀ ಪರಿಣಾಮ ಬೀರಲಿದೆ.

ಕೊಹ್ಲಿ ಐಪಿಎಲ್ ಫೈನಲ್ ದಾಖಲೆ

ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಇದುವರೆಗೆ ನಾಲ್ಕು ಐಪಿಎಲ್ ಫೈನಲ್‌ಗಳಲ್ಲಿ ಆಡಿದ್ದು, ಕೇವಲ 139 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿಯ ಸ್ಟ್ರೈಕ್ ರೇಟ್ 127.52 ಆಗಿದೆ. ಅವರ ಗರಿಷ್ಠ ಸ್ಕೋರ್ 54, ಇದು ಐಪಿಎಲ್ 2016 ರ ಫೈನಲ್‌ನಲ್ಲಿ ಅವರು ಗಳಿಸಿದ್ದರು. ಇದು ಫೈನಲ್‌ಗಳಲ್ಲಿ ಕೊಹ್ಲಿಯ ಪ್ರದರ್ಶನ ಸಾಧಾರಣವಾಗಿದೆ ಎಂದು ಹೇಳುತ್ತದೆ.

ಜಿಟಿ ವಿರುದ್ಧ ಕೊಹ್ಲಿ ಪ್ರದರ್ಶನ

ಫೈನಲ್ಸ್ ನಲ್ಲಿ ವಿರಾಟ್ ಕೊಹ್ಲಿ ಅವರ ಪ್ರದರ್ಶನ ಅದ್ಭುತವಾಗಿಲ್ಲದಿರಬಹುದು. ಆದರೆ ಅವರು ಜಿಟಿ ವಿರುದ್ಧ ಸಾಕಷ್ಟು ರನ್ ಗಳಿಸಿದ್ದಾರೆ. ಇಲ್ಲಿಯವರೆಗೆ ಜಿಟಿ ವಿರುದ್ಧ ಕೊಹ್ಲಿ 9 ಪಂದ್ಯಗಳನ್ನು ಆಡಿದ್ದು, 503 ರನ್ ಗಳಿಸಿದ್ದಾರೆ. ಅವರ ಸರಾಸರಿ 71.85 ರಷ್ಟಲ್ಲಿ ರನ್ ಕಲೆ ಹಾಕಿದ್ದಾರೆ. ಕೊಹ್ಲಿ ತಮ್ಮ ಬ್ಯಾಟ್​​ನಿಂದ ನಾಲ್ಕು ಅರ್ಧಶತಕ ಮತ್ತು ಒಂದು ಶತಕವನ್ನು ಸಿಡಿಸಿದ್ದಾರೆ.

ಐಪಿಎಲ್ 2026 ರಲ್ಲಿ ವಿರಾಟ್ ಫಾರ್ಮ್

ಐಪಿಎಲ್ 2026 ರಲ್ಲಿ ವಿರಾಟ್ ಕೊಹ್ಲಿ ಅದ್ಭುತ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ವಿರಾಟ್ ಕೊಹ್ಲಿ ಇದುವರೆಗೆ 15 ಪಂದ್ಯಗಳನ್ನು ಆಡಿದ್ದು ಒಟ್ಟು 600 ರನ್ ಚಚ್ಚಿದ್ದಾರೆ. ಅವರ ಸರಾಸರಿ 50 ಮತ್ತು ಸ್ಟ್ರೈಕ್ ರೇಟ್ 164.38. ಉತ್ತಮ ಫಾರ್ಮ್​ನಲ್ಲಿರುವ ವಿರಾಟ್ ಕೊಹ್ಲಿ ಫೈನಲ್‌ನಲ್ಲೂ ದೊಡ್ಡ ಸ್ಕೋರ್ ಗಳಿಸುವ ಗುರಿಯನ್ನು ಹೊಂದಿದ್ದಾರೆ. ಜಿಟಿ ವಿರುದ್ಧ ಅದ್ಭುತ ದಾಖಲೆ ಹೊಂದಿರುವ ವಿರಾಟ್ ಕೊಹ್ಲಿ ಇಂದು ಮತ್ತೊಂದು ಐತಿಹಾಸಿಕ ಇನ್ನಿಂಗ್ಸ್ ಆಡಿದರೆ, ಆರ್​​ಸಿಬಿಗೆ ಮತ್ತೊಂದು ಟ್ರೋಫಿ ಸಿಗುವುದು ಖಚಿತ.

ಫೈನಲ್ ಪಂದ್ಯ ಎಲ್ಲಿ?

ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಆವೃತ್ತಿಯಲ್ಲಿ ಆರ್‌ಸಿಬಿ ಇದೇ ಮೈದಾನದಲ್ಲಿ ಟ್ರೋಫಿಯನ್ನು ಗೆದ್ದಿತ್ತು. ಈಗ ವಿರಾಟ್ ಕೊಹ್ಲಿ ಮತ್ತು ನಾಯಕ ರಜತ್ ಪಾಟೀದಾರ್ ನೇತೃತ್ವದಲ್ಲಿ ಆರ್​ಸಿಬಿ ಆ ಇತಿಹಾಸವನ್ನು ಪುನರಾವರ್ತಿಸಲು ಎದುರು ನೋಡುತ್ತಿದೆ. ಆರ್‌ಸಿಬಿ ಮತ್ತು ಜಿಟಿ ನಡುವಿನ ಫೈನಲ್ ಪಂದ್ಯ ಸಂಜೆ 7:30 ಕ್ಕೆ ಆರಂಭವಾಗಲಿದ್ದು, ಎರಡೂ ತಂಡಗಳ ನಾಯಕರು ಸಂಜೆ 7 ಗಂಟೆಗೆ ಟಾಸ್ ಮಾಡಲು ಮೈದಾನಕ್ಕೆ ಆಗಮಿಸಲಿದ್ದಾರೆ.

ಕನ್ನಡ ಸುದ್ದಿ/ ನ್ಯೂಸ್/ಕ್ರೀಡೆ/

GT vs RCB Final: 4 ಫೈನಲ್, ಒಂದೇ ಅರ್ಧಶತಕ, ಆರ್​​​ಸಿಬಿಗೆ ದೊಡ್ಡ ತಲೆ ನೋವಾದ ಸ್ಟಾರ್ ಪ್ಲೇಯರ್ ಕಳಪೆ ಪ್ರದರ್ಶನ! ಇಂದಾದ್ರು ಕೈ ಹಿಡಿತಾರಾ ಲೆಜೆಂಡರಿ ಬ್ಯಾಟರ್?



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed