Last Updated:
ಶ್ರೀಮುರಳಿ ಅವರು ಕರ್ಲಿ ಹೇರ್ ಲುಕ್ ಅಲ್ಲಿಯೇ ಇದ್ದಾರೆ. ಇದು ಯಾವ ಚಿತ್ರಕ್ಕೆ ಅನ್ನುವ ಪ್ರಶ್ನೆ ಇತ್ತು. ಇದಕ್ಕೆ ಪರಾಕ್ ಚಿತ್ರದ ಟೀಸರ್ ಉತ್ತರ ಕೊಟ್ಟಿದೆ. ಈ ಟೀಸರ್ ನೋಡಿದ್ರೆ ಆಯಿತು. ಹೊಸ ಭರವಸೆನೂ ಮೂಡುತ್ತದೆ. ಆ ರೀತಿಯ ಒಂದು ಟೀಸರ್ನಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ.
ಶ್ರೀಮುರಳಿ (Sriimurali) ಅಭಿನಯದ ಪರಾಕ್ ಚಿತ್ರದ (Paraak Movie) ಟೀಸರ್ ಪ್ರಾಮಿಸಿಂಗ್ ಆಗಿದೆ. ಮೊದಲ ನೋಟದಲ್ಲಿಯೇ ಸೆಳೆದು ಬಿಡುತ್ತದೆ. ಈ ಹಿಂದಿನ ಚಿತ್ರಗಳಲ್ಲಿ ಶ್ರೀಮುರಳಿ ಈ ರೀತಿ ಕಾಣಿಸಿಕೊಂಡಿಯೇ ಇಲ್ಲ. ಆದರೆ, ಈ ಚಿತ್ರದಲ್ಲಿ ಶ್ರೀಮುರಳಿ (Sriimurali) ಖಡಕ್ ಆಗಿಯೇ ಕಾಣಿಸಿಕೊಂಡಿದ್ದಾರೆ. ಲಾಂಗ್ ಕರ್ಲಿ ಹೇರ್ ಲುಕ್ ಇದೆ. ಶರ್ಟ್ ಲೆಸ್ ದೇಹದ ಮೇಲೆ ಕತ್ತಿ ಹಾಗೂ ಮಚ್ಚಿನ ಏಟಿನ ಗಾಯಗಳೂ ಇವೆ. ಇದರೊಟ್ಟಿಗೆ ಎಣ್ಣೆ ಏಟು ಬೇರೆ. ಎಲ್ಲವೂ ಇರೋ ಈ ಒಂದು ಚಿತ್ರ ಪಕ್ಕಾ ಆ್ಯಕ್ಷನ್ ಸಿನಿಮಾ ಅನ್ನೋದು ತಿಳಿಯುತ್ತದೆ. ತುಂಬಾನೆ ಅಳೆದು ತೂಗಿ ಈ ಪಾತ್ರ ಒಪ್ಪಿದಂತೆ ಇದೆ. ಕಾರಣ ಪರಾಕ್ ಚಿತ್ರದ (Paraak Movie) ಈ ಪಾತ್ರವೇ ಆ ರೀತಿ ಇದೆ. ಲಾಂಗು ಮತ್ತು ಮಚ್ಚು ಇಲ್ಲಿ ಇನ್ನಿಲ್ಲದಂತೆ ಝಳಪಿಸುತ್ತವೆ. ಆದರೆ, ಇಲ್ಲೊಂದು ಟೇಪ್ ರೆಕಾರ್ಡ್ ರ್ ಇದೆ. ‘ಏತಕೆ’ ಅನ್ನುವ ಹಾಡು ಇದರಲ್ಲಿ ಪ್ಲೇ ಆಗುತ್ತದೆ. ಅದನ್ನ ಕೇಳ್ತಾ ಹೋದ್ರೆ ವಿಭಿನ್ನವಾದ ಅನುಭವವೂ ಆಗುತ್ತದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಸಖತ್ ಆ್ಯಕ್ಷನ್ ಮತ್ತು ಟೇಪ್ ರೆಕಾರ್ಡರ್
ಆದರೆ, ಉಗ್ರಾಯುಧಮ್ ಚಿತ್ರ ಒಪ್ಪಿದ್ದರು. ಹಾಗಾಗಿಯೇ ಈ ಲುಕ್ ಈ ಚಿತ್ರಕ್ಕೇನೆ ಇರಬೇಕು ಅನ್ನುವ ಅಂದಾಜಿತ್ತು. ಆದರೆ, ಅದು ಪರಾಕ್ ಚಿತ್ರಕ್ಕಾಗಿಯೇ ಅನ್ನೋದು ಇದೀಗ ರಿವೀಲ್ ಆಗಿದೆ.
ಡೈರೆಕ್ಟರ್ ಹಾಲೇಶ್ ಕೊಗುಂಡಿ ಈ ಚಿತ್ರದಲ್ಲಿ ನಾಯಕ ನಟ ಶ್ರೀಮುರಳಿ ಅವರಿಗೆ ಸಖತ್ ರೋಲ್ ಬರೆದಿದ್ದಾರೆ. ಅದು ಹೇಗಿದೆ ಅನ್ನೋದನ್ನ ಪರಾಕ್ ಚಿತ್ರದ ಈಗೀನ ಟೀಸರ್ ಹೇಳುತ್ತದೆ.
ಈ ಟೀಸರ್ ಅಲ್ಲಿ ಶ್ರೀಮುರಳಿ ಅವರ ಪಾತ್ರದ ಸಂಪೂರ್ಣ ಚಿತ್ರಣ ಇದೆ. ಲಾಂಗ್ ಕರ್ಲಿ ಹೇರ್ ಸ್ಟೈಲ್, ಮೈತುಂಬಾ ಲಾಂಗ್ ಮತ್ತು ಮಚ್ಚಿನ ಏಟಿನ ಗಾಯಗಳು, ಅದಾಗಲೇ ಎಡಗೈಗೆ ಬಿದ್ದ ಏಟನ್ನ ಹೊಲಿದುಕೊಳ್ಳುತ್ತಿರೋದು ಹೀಗೆ ಸುಮಾರು ವಿಷಯಗಳು ಇದರಲ್ಲಿವೆ.
ಈ ಚಿತ್ರದಲ್ಲಿ ಟೇಪ್ ರೆಕಾರ್ಡರ್ ಕೂಡ ಮಹತ್ವದ ಪಾತ್ರ ಅನಿಸುತ್ತದೆ. ನಾಯಕ ನಟ ಶ್ರೀಮುರಳಿ ಪಾತ್ರ ಇಲ್ಲಿ ಸಂಗೀತ ಪ್ರೇಮಿನೂ ಅನಿಸುತ್ತದೆ.
ಹೊಸ ಅವತಾರದಲ್ಲಿ ಬಂದ ಶ್ರೀಮುರಳಿ
ಆ ರೀತಿಯ ಮಧುರವಾದ ಹಾಡನ್ನೆ ಇಲ್ಲಿ ಪ್ಲೇ ಮಾಡಲಾಗಿದೆ. ‘ಏತಕೆ ಈ ಬಿಗುಮಾನ’ ಅನ್ನುವ ಹಾಡಿನ ಹಿನ್ನೆಲೆಯಲ್ಲಿಯೇ ಆ್ಯಕ್ಷನ್ಗಳು ಇಲ್ಲಿ ನಡೆಯುತ್ತದೆ. ಈ ಹಾಡು ಮಧ್ಯದಲ್ಲಿಯೇ ಶುರು ಆಗುತ್ತದೆ. ಆದರೆ, ಇಡೀ ಟೀಸರ್ಗೆ ಬೇರೆಯದ್ದೆ ಒಂದು ಸೈಲೆಂಟ್ ಫೀಲ್ ಕೊಡುತ್ತದೆ ನೋಡಿ.
ಈ ಚಿತ್ರಕ್ಕೆ ಚರಣ್ ರಾಜ್ ಮ್ಯೂಸಿಕ್ ಮಾಡಿದ್ದಾರೆ. ಸಪ್ತಸಾಗರದಾಚೆ ಎಲ್ಲೋ ಚಿತ್ರಕ್ಕೂ ಇವರೇ ಮ್ಯೂಸಿಕ್ ಮಾಡಿದ್ದರು. ಇಲ್ಲಿ ಬರುವ ಟೇಪ್ ರೆಕಾರ್ಡರ್ ನೋಡಿದಾಗ ಆ ಚಿತ್ರ ನೆನಪಿಗೆ ಬರುತ್ತದೆ.
ಶ್ರೀಮುರಳಿ ಅವರ ಕರ್ಲಿ ಹೇರ್ ಲುಕ್ ನೊಡಿದಾಗ, ಮಾರ್ಕ್ ಚಿತ್ರದ ಕಿಚ್ಚ ಸುದೀಪ್ ಲುಕ್ ಕಣ್ಮುಂದೆ ಬರುತ್ತದೆ. ಆದರೆ, ಈ ಕತೆ ಮತ್ತು ಶ್ರೀಮುರಳಿ ಅವರ ಲುಕ್ ಆ್ಯಂಡ್ ಫೀಲ್ ಬೇರೆ ರೀತಿನೇ ಇವೆ. ಇಡೀ ಚಿತ್ರದಲ್ಲಿ ಅದನ್ನ ಗಮನಿಸಬಹುದು. ಅಂತಹ ಈ ಚಿತ್ರದ ಟೀಸರ್ ಸದ್ಯ ಹೊಸ ಭರವಸೆ ಮೂಡಿಸುತ್ತಿದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka
Jul 13, 2026 12:56 PM IST














