ಇದಲ್ಲದೆ, ಸೀಸನ್ 3 ಮತ್ತು ಸೀಸನ್ 4 ಅನ್ನು ಆರಂಭದಿಂದಲೂ ಒಂದೇ ದೊಡ್ಡ ಕಥೆಯ ಭಾಗಗಳಾಗಿ ಯೋಜಿಸಲಾಗಿತ್ತು ಎಂದು ಅವರು ಬಹಿರಂಗಪಡಿಸಿದರು.
ವೆರೈಟಿ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ರಾಜ್ ನಿಧಿಮೋರು, “ನಾವು ‘ದಿ ಫ್ಯಾಮಿಲಿ ಮ್ಯಾನ್’ ಸೀಸನ್ 3 ಮತ್ತು ಸೀಸನ್ 4 ಅನ್ನು ಮೊದಲಿನಿಂದಲೂ ಒಂದೇ ಕಥೆಯ ಎರಡು ಭಾಗಗಳೆಂದು ಪರಿಗಣಿಸಿದ್ದೇವೆ. ಕೆಲವು ವೀಕ್ಷಕರು ಸೀಸನ್ 3 ಮಧ್ಯದಲ್ಲಿ ಕೊನೆಗೊಂಡಿದೆ ಎಂದು ಭಾವಿಸಿರಬಹುದು. ಆದರೆ ನಮ್ಮ ದೃಷ್ಟಿಯಲ್ಲಿ, ಮುಖ್ಯ ಕಥೆ ಕಂಟಿನ್ಯೂ ಆಗುವ ಹಂತಕ್ಕೆ ಬಂದಿದೆ ಎಂದಿದ್ದಾರೆ.
ಆದಾಗ್ಯೂ ಶ್ರೀಕಾಂತ್ ತಿವಾರಿ ಅವರ ಪ್ರಯಾಣ ಇನ್ನೂ ಪೂರ್ಣಗೊಂಡಿಲ್ಲ. ಆ ಕಥೆ ಮುಂದಿನ ಸೀಸನ್ನಲ್ಲಿ ಸ್ವಾಭಾವಿಕವಾಗಿ ಮುಂದುವರಿಯುತ್ತದೆ. ಅದಕ್ಕಾಗಿಯೇ ನಾವು ಪ್ರಸ್ತುತ ಕಥೆ ವೇಗವಾಗಿ ಬರೆಯುತ್ತಿದ್ದೇವೆ. ಆ ಕಥೆಯ ಎರಡನೇ ಭಾಗವನ್ನು ನಾವು ಪ್ರೇಕ್ಷಕರ ಮುಂದೆ ತರಬೇಕಾಗಿದೆ” ಎಂದು ಹೇಳಿದರು.
ಇತ್ತೀಚೆಗೆ ನ್ಯೂಸ್18 ಶೋಷಾ ಜೊತೆಗಿನ ವಿಶೇಷ ಸಂದರ್ಶನದಲ್ಲಿ ನಟ ಮನೋಜ್ ಬಾಜಪೇಯಿ ಸೀಸನ್ 4 ರ ಬಗ್ಗೆ ಆಸಕ್ತಿದಾಯಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ನಿರ್ದೇಶಕರಾದ ರಾಜ್ & ಡಿಕೆ ಪ್ರಸ್ತುತ ತಮ್ಮ ಮತ್ತೊಂದು ಸರಣಿ ‘ಫರ್ಜಿ’ ಚಿತ್ರೀಕರಣದಲ್ಲಿ ನಿರತರಾಗಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್’ ನ ಹೊಸ ಸೀಸನ್ನ ಕೆಲಸಗಳು ಫರ್ಜಿ ಕೆಲಸಗಳಿ ಮುಗಿದ ತಕ್ಷಣ ಪ್ರಾರಂಭವಾಗಲಿದೆ ಎಂದು ಅವರು ಹೇಳಿದರು. “ಸ್ಕ್ರಿಪ್ಟ್ನ ಅಂತಿಮ ಡ್ರಾಫ್ಟ್ ಇನ್ನೂ ಪೂರ್ಣಗೊಂಡಿಲ್ಲ. ಅದು ಮುಗಿದ ನಂತರ, ನಟರ ಡೇಟ್ಸ್ ಫೈನಲ್ ಮಾಡಲಾಗುತ್ತದೆ” ಎಂದು ಮನೋಜ್ ಬಾಜಪೇಯಿ ಬಹಿರಂಗಪಡಿಸಿದರು.
“ಸದ್ಯಕ್ಕೆ, ರಾಜ್ ಮತ್ತು ಡಿಕೆ ಅವರ ಸಂಪೂರ್ಣ ಗಮನ ‘ಫರ್ಜಿ’ ಮೇಲಿದೆ. ಆ ಯೋಜನೆ ಪೂರ್ಣಗೊಂಡ ನಂತರ, ‘ದಿ ಫ್ಯಾಮಿಲಿ ಮ್ಯಾನ್’ ಸೀಸನ್ 4 ರ ಕೆಲಸ ವೇಗ ಪಡೆಯುತ್ತದೆ” ಎಂದು ಅವರು ಹೇಳಿದರು.
ಸೀಸನ್ 4 ರ ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮನೋಜ್ ಬಾಜಪೇಯಿ, “ಈ ಬಾರಿ ಹೆಚ್ಚು ಸಮಯ ಕಾಯುವ ಅಗತ್ಯವಿಲ್ಲ. ನನ್ನ ಅಂದಾಜಿನ ಪ್ರಕಾರ, ಈ ಸೀಸನ್ ಮುಂದಿನ ವರ್ಷದ ದ್ವಿತೀಯಾರ್ಧದಲ್ಲಿ ಬಿಡುಗಡೆಯಾಗುವ ಸಾಧ್ಯತೆಯಿದೆ” ಎಂದು ಹೇಳಿದರು.
‘ದಿ ಫ್ಯಾಮಿಲಿ ಮ್ಯಾನ್’ ಭವಿಷ್ಯದ ಬಗ್ಗೆಯೂ ಅವರು ಪ್ರಮುಖ ಹೇಳಿಕೆಗಳನ್ನು ನೀಡಿದರು. “ಒಪ್ಪಂದದ ಪ್ರಕಾರ, ನಮ್ಮ ಒಪ್ಪಂದಗಳು ನಾಲ್ಕನೇ ಸೀಸನ್ನೊಂದಿಗೆ ಕೊನೆಗೊಳ್ಳುತ್ತವೆ” ಎಂದು ಅವರು ಹೇಳಿದರು. ಇದು ಸೀಸನ್ 4 ಕೊನೆಯ ಸೀಸನ್ ಆಗಿರುತ್ತದೆಯೇ ಎಂಬ ಅನುಮಾನಗಳನ್ನು ಹುಟ್ಟುಹಾಕಿದೆ.
ಇದಕ್ಕೆ ಮನೋಜ್ ತಮಾಷೆಯಾಗಿ ಪ್ರತಿಕ್ರಿಯಿಸುತ್ತಾ, “ಯಾರಿಗೂ ತಿಳಿದಿಲ್ಲ. ಪ್ರೈಮ್ ವಿಡಿಯೋ ಈ ಕಥೆಯನ್ನು ಮತ್ತೊಮ್ಮೆ ದೊಡ್ಡ ಬಜೆಟ್ನೊಂದಿಗೆ ಮುಂದುವರಿಸಲು ಬಯಸಬಹುದು” ಎಂದು ಹೇಳಿದರು. “ಸದ್ಯಕ್ಕೆ, ನಾವು ಈ ಕಥೆಯನ್ನು ನಾಲ್ಕನೇ ಸೀಸನ್ನೊಂದಿಗೆ ಕೊನೆಗೊಳಿಸುವ ಬಗ್ಗೆ ಯೋಚಿಸುತ್ತಿದ್ದೇವೆ. ಅದರ ನಂತರ ನಾವು ಅದನ್ನು ಮುಂದುವರಿಸುತ್ತೇವೆಯೇ ಅಥವಾ ಇಲ್ಲವೇ ಎಂಬುದು ಸಂಪೂರ್ಣವಾಗಿ ಪ್ರೈಮ್ ವಿಡಿಯೋದ ನಿರ್ಧಾರವನ್ನು ಅವಲಂಬಿಸಿರುತ್ತದೆ ಎಂದಿದ್ದಾರೆ.
‘ದಿ ಫ್ಯಾಮಿಲಿ ಮ್ಯಾನ್’ ಭಾರತೀಯ OTT ಜಗತ್ತಿನಲ್ಲಿ ಅತ್ಯಂತ ಯಶಸ್ವಿ ಸ್ಪೈ ಥ್ರಿಲ್ಲರ್ ಸರಣಿಗಳಲ್ಲಿ ಒಂದಾಗಿದೆ. ಮನೋಜ್ ಬಾಜಪೇಯಿ ನಿರ್ವಹಿಸಿದ ಶ್ರೀಕಾಂತ್ ತಿವಾರಿ ಪಾತ್ರವು ಈ ಸರಣಿಯಲ್ಲಿ ಹೆಚ್ಚಿನ ಜನಪ್ರಿಯತೆಯನ್ನು ಗಳಿಸಿದೆ. ಮಧ್ಯಮ ವರ್ಗದ ಕುಟುಂಬ ವ್ಯಕ್ತಿಯಾಗಿ ಕಾಣಿಸಿಕೊಳ್ಳುವ ಶ್ರೀಕಾಂತ್, ರಾಷ್ಟ್ರೀಯ ಭದ್ರತಾ ಸಂಸ್ಥೆಯಲ್ಲಿ ರಹಸ್ಯವಾಗಿ ಕೆಲಸ ಮಾಡುತ್ತಾರೆ. ದೇಶವನ್ನು ರಕ್ಷಿಸುವ ಕಾರ್ಯಾಚರಣೆಗಳಲ್ಲಿ ಭಾಗವಹಿಸುತ್ತಾರೆ.












