Obsession Movie: ಅಬ್ಬಬ್ಬಾ ಏನ್ ಸಿನಿಮಾ ಗುರೂ! ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸುತ್ತಿದೆ ‘ಒಬ್ಸೆಷನ್’ | | ACTPnews

Obsession


Last Updated:

ಒಬ್ಸೆಷನ್’ ಚಿತ್ರದ ಯಶಸ್ಸು ಕೇವಲ ವಿಮರ್ಶಕರ ಮೆಚ್ಚುಗೆಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕವಾಗಿಯೂ ಈ ಸಿನಿಮಾ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಚಿತ್ರವು 152.1 ಮಿಲಿಯನ್ ಡಾಲರ್‌ಗೂ ಅಧಿಕ ಗಳಿಕೆ ದಾಖಲಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಅಸಾಧಾರಣ ಪ್ರದರ್ಶನ ನೀಡುತ್ತಿದೆ.

Obsession
Obsession

ಇತ್ತೀಚಿನ ದಿನಗಳಲ್ಲಿ ವಿಶ್ವಾದ್ಯಂತ ಹೆಚ್ಚು ಚರ್ಚೆಯಾಗುತ್ತಿರುವ ಚಿತ್ರಗಳಲ್ಲಿ ‘ಒಬ್ಸೆಷನ್’ (Obsession) ಕೂಡಾ ಒಂದು. ಸೂಪರ್‌ನ್ಯಾಚುರಲ್ ಸೈಕಲಾಜಿಕಲ್ ಹಾರರ್ ಕಥಾಹಂದರದೊಂದಿಗೆ ತೆರೆಗೆ ಬಂದಿರುವ ಈ ಸಿನಿಮಾ ಪ್ರೇಕ್ಷಕರನ್ನು ಬೆಚ್ಚಿಬೀಳಿಸುವುದರ ಜೊತೆಗೆ ಬಾಕ್ಸ್ ಆಫೀಸ್‌ನಲ್ಲಿ ಅಚ್ಚರಿಯ ಸಾಧನೆ ಮಾಡುತ್ತಿದೆ. ಸಾಮಾನ್ಯವಾಗಿ ಭಾರಿ ಬಜೆಟ್, ಖ್ಯಾತ ನಟರು ಮತ್ತು ದೊಡ್ಡ ಪ್ರಮಾಣದ ಪ್ರಚಾರದ ಮೂಲಕ ಮಾತ್ರ ಜಾಗತಿಕ ಯಶಸ್ಸು ಸಾಧ್ಯ ಎಂಬ ಕಲ್ಪನೆಯನ್ನು ಈ ಸಿನಿಮಾ ಸಂಪೂರ್ಣವಾಗಿ ಬದಲಿಸಿದೆ.

ನಿರ್ದೇಶಕ ಕರ್ರಿ ಬಾರ್ಕರ್ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರ, ಅತ್ಯಂತ ಕಡಿಮೆ ವೆಚ್ಚದಲ್ಲಿ ನಿರ್ಮಾಣವಾದರೂ ಇಂದು ವಿಶ್ವದಾದ್ಯಂತ ಕೋಟಿ ಕೋಟಿ ರೂಪಾಯಿ ಗಳಿಕೆ ಮಾಡಿ ಹೊಸ ದಾಖಲೆಗಳನ್ನು ನಿರ್ಮಿಸುವತ್ತ ಮುನ್ನುಗ್ಗುತ್ತಿದೆ. ಸಿನಿಮಾ ಬಿಡುಗಡೆಯಾದ ಕೆಲವೇ ವಾರಗಳಲ್ಲಿ ಇದರ ಬಗ್ಗೆ ಸಾಮಾಜಿಕ ಜಾಲತಾಣಗಳು, ಸಿನಿಮಾ ವಿಮರ್ಶಕರು ಮತ್ತು ಪ್ರೇಕ್ಷಕರ ನಡುವೆ ಭಾರೀ ಚರ್ಚೆ ಆರಂಭವಾಗಿದೆ.

ಬಾಕ್ಸ್ ಆಫೀಸ್‌ನಲ್ಲಿ ದಾಖಲೆಗಳ ಮೇಲೆ ದಾಖಲೆ

‘ಒಬ್ಸೆಷನ್’ ಚಿತ್ರದ ಯಶಸ್ಸು ಕೇವಲ ವಿಮರ್ಶಕರ ಮೆಚ್ಚುಗೆಗೆ ಮಾತ್ರ ಸೀಮಿತವಾಗಿಲ್ಲ. ಆರ್ಥಿಕವಾಗಿಯೂ ಈ ಸಿನಿಮಾ ದೊಡ್ಡ ಮಟ್ಟದ ಸಾಧನೆ ಮಾಡಿದೆ. ಅಮೆರಿಕದ ಮಾರುಕಟ್ಟೆಯಲ್ಲಿ ಚಿತ್ರವು 152.1 ಮಿಲಿಯನ್ ಡಾಲರ್‌ಗೂ ಅಧಿಕ ಗಳಿಕೆ ದಾಖಲಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಅಸಾಧಾರಣ ಪ್ರದರ್ಶನ ನೀಡುತ್ತಿದೆ.

ಚಿತ್ರದ ವಿತರಣಾ ಹಕ್ಕುಗಳನ್ನು ಫೋಕಸ್ ಫೀಚರ್ಸ್ ಸಂಸ್ಥೆ ಪಡೆದುಕೊಂಡಾಗ ಈ ಮಟ್ಟದ ಯಶಸ್ಸನ್ನು ಯಾರೂ ಊಹಿಸಿರಲಿಲ್ಲ. ಟೊರಾಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ ವೇಳೆ ಸುಮಾರು 15 ಮಿಲಿಯನ್ ಡಾಲರ್ ಮೊತ್ತಕ್ಕೆ ವಿತರಣಾ ಹಕ್ಕುಗಳನ್ನು ಸ್ವಾಧೀನಪಡಿಸಿಕೊಂಡ ಸಂಸ್ಥೆಗೆ ಈ ಸಿನಿಮಾ ಭಾರೀ ಲಾಭ ತಂದುಕೊಟ್ಟಿದೆ.

‘ಒಬ್ಸೆಷನ್’ ಚಿತ್ರದ ಯಶಸ್ಸಿನ ಹಿಂದೆ ಇರುವ ದೊಡ್ಡ ಕಥೆಯೇ ನಿರ್ದೇಶಕ ಕರ್ರಿ ಬಾರ್ಕರ್ ಅವರ ಪಯಣ. ಅವರು ಮೊದಲು ಯೂಟ್ಯೂಬ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಂಡಿದ್ದರು. ಹಾಸ್ಯ ವಿಡಿಯೊಗಳು ಮತ್ತು ಹಾರರ್ ಕಂಟೆಂಟ್ ಮೂಲಕ ಜನಪ್ರಿಯತೆ ಗಳಿಸಿದ್ದ ಅವರು, ಸಿನಿಮಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಹೊಂದಿರಲಿಲ್ಲ.

ಇಂದಿನ ಹಾಲಿವುಡ್ ಸಿನಿಮಾಗಳ ಬಜೆಟ್‌ಗಳು ನೂರಾರು ಮಿಲಿಯನ್ ಡಾಲರ್‌ಗಳನ್ನು ತಲುಪುತ್ತಿರುವ ಸಂದರ್ಭದಲ್ಲಿ ‘ಒಬ್ಸೆಷನ್’ ಕೇವಲ 7.5 ಲಕ್ಷ ಡಾಲರ್ ವೆಚ್ಚದಲ್ಲಿ ನಿರ್ಮಾಣಗೊಂಡಿದೆ ಎನ್ನುವುದು ಅಚ್ಚರಿಯ ಸಂಗತಿ. ಕಡಿಮೆ ಪರಿಚಿತ ಕಲಾವಿದರನ್ನು ಬಳಸಿಕೊಂಡು ನಿರ್ಮಿಸಿದ ಈ ಸಿನಿಮಾ ವಿಷಯಾಧಾರಿತ ಕಥಾಹಂದರ ಮತ್ತು ಪರಿಣಾಮಕಾರಿ ನಿರೂಪಣೆಯ ಮೂಲಕ ಪ್ರೇಕ್ಷಕರನ್ನು ಸೆಳೆದಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports