Nivin Pauly: 11 ವರ್ಷಗಳ ಬಳಿಕ ಒಂದಾಗುತ್ತಿದೆ ‘ಪ್ರೇಮಂ’ ಜೋಡಿ! ನಿವಿನ್ ಪೌಲಿ 50ನೇ ಸಿನಿಮಾ ಅನೌನ್ಸ್ | | ACTPnews

ನಟ ನಿವಿನ್ ಪೌಲಿ


Last Updated:

ಸೂಪರ್ ಹಿಟ್ ಪ್ರೇಮಂ (Premam) ಚಿತ್ರದ ಮೂಲಕ ಭಾರತೀಯ ಸಿನಿಪ್ರೇಕ್ಷಕರ ಮನ ಗೆದ್ದಿದ್ದ ನಟ ನಿವಿನ್ ಪೌಲಿ ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ 12 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ.

ನಟ ನಿವಿನ್ ಪೌಲಿ
ನಟ ನಿವಿನ್ ಪೌಲಿ

ಮಲಯಾಳಂ (Malayalam) ಸಿನಿರಂಗದ ಅಭಿಮಾನಿಗಳು ಹಲವು ದಿನಗಳಿಂದ ಎದುರು ನೋಡುತ್ತಿದ್ದ ಮಹತ್ವದ ಘೋಷಣೆ ಕೊನೆಗೂ ಹೊರಬಿದ್ದಿದೆ. ಸೂಪರ್ ಹಿಟ್ ಪ್ರೇಮಂ (Premam) ಚಿತ್ರದ ಮೂಲಕ ಭಾರತೀಯ ಸಿನಿಪ್ರೇಕ್ಷಕರ ಮನ ಗೆದ್ದಿದ್ದ ನಟ ನಿವಿನ್ ಪೌಲಿ ಮತ್ತು ನಿರ್ದೇಶಕ ಆಲ್ಫೋನ್ಸ್ ಪುತ್ರೇನ್ 12 ವರ್ಷಗಳ ಬಳಿಕ ಮತ್ತೆ ಒಂದಾಗಿದ್ದಾರೆ. ಈ ಬಾರಿ ಅವರು ‘ವಿಜಯಂ’ ಎಂಬ ಹೊಸ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರಲಿದ್ದು, ಚಿತ್ರದ ಘೋಷಣೆ ಸಿನಿಪ್ರಿಯರಲ್ಲಿ ಹೊಸ ಸಂಚಲನ ಮೂಡಿಸಿದೆ.

2015ರಲ್ಲಿ ಬಿಡುಗಡೆಯಾದ ಪ್ರೇಮಂ ಸಿನಿಮಾ ಮಲಯಾಳಂ ಚಿತ್ರರಂಗದಲ್ಲಿ ಹೊಸ ದಾಖಲೆಗಳನ್ನು ನಿರ್ಮಿಸಿತ್ತು. ಪ್ರೇಮಕಥೆಯನ್ನು ಹೊಸ ರೀತಿಯಲ್ಲಿ ತೆರೆ ಮೇಲೆ ತಂದಿದ್ದ ಆ ಸಿನಿಮಾ ದೇಶಾದ್ಯಂತ ಜನಪ್ರಿಯತೆ ಗಳಿಸಿತ್ತು. ಈಗ ಅದೇ ಯಶಸ್ವಿ ಜೋಡಿ ಮತ್ತೊಮ್ಮೆ ಒಂದಾಗಿರುವುದು ಅಭಿಮಾನಿಗಳಿಗೆ ಸಂತಸದ ವಿಚಾರವಾಗಿದೆ. ಹಲವು ವರ್ಷಗಳಿಂದ ಈ ಜೋಡಿ ಮತ್ತೆ ಸಿನಿಮಾ ಮಾಡಲಿದೆಯೇ ಎಂಬ ಪ್ರಶ್ನೆ ಕೇಳಿಬರುತ್ತಿತ್ತು. ಇದೀಗ ‘ವಿಜಯಂ’ ಚಿತ್ರದ ಘೋಷಣೆಯೊಂದಿಗೆ ಆ ನಿರೀಕ್ಷೆಗೆ ಅಧಿಕೃತ ಉತ್ತರ ಸಿಕ್ಕಿದೆ.

‘ವಿಜಯಂ’ ಚಿತ್ರದ ಶೀರ್ಷಿಕೆ ಅನಾವರಣವನ್ನು ಕೇರಳದ ಎರ್ನಾಕುಲಂನ ಐತಿಹಾಸಿಕ ಪದ್ಮಾ ಥಿಯೇಟರ್‌ನಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ವಿಶೇಷ ಕಾರ್ಯಕ್ರಮದ ಮೂಲಕ ಬಿಡುಗಡೆ ಮಾಡಲಾಯಿತು. ಹಾಗೆಯೇ ಇದು ನಿವಿನ್ ಪೌಲಿಯ ಅವರ 50ನೇ ಸಿನಿಮಾ.

ಚಿತ್ರದ ಹಿನ್ನೆಲೆ ಸಂಗೀತವನ್ನು ಕೇರಳ ಮೂಲದ ಸ್ಟೀವ್ ಕೊಟ್ಟೂರ್ ಸಂಯೋಜಿಸುತ್ತಿದ್ದಾರೆ. ಅವರು ಈಗಾಗಲೇ ಹಲವು ಮಹತ್ವದ ಯೋಜನೆಗಳಲ್ಲಿ ಕೆಲಸ ಮಾಡಿದ್ದು, ತಮ್ಮ ವಿಶಿಷ್ಟ ಸಂಗೀತ ಶೈಲಿಯಿಂದ ಗಮನ ಸೆಳೆದಿದ್ದಾರೆ. ಬೃಹತ್ ಸಿನಿಮಾಗಳ ಹಿನ್ನೆಲೆ ಸಂಗೀತದಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುವ ಅವರು ಈ ಚಿತ್ರದ ಮೂಲಕ ಮತ್ತೊಮ್ಮೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಲಿದ್ದಾರೆ.

ಪ್ರೇಮಂ ಚಿತ್ರದ ಯಶಸ್ಸಿನ ನಂತರ ಇದೇ ಜೋಡಿ ಮತ್ತೊಮ್ಮೆ ಒಂದಾಗಿರುವುದು ಸಹಜವಾಗಿಯೇ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ವಿಭಿನ್ನ ಕಥಾಹಂದರ, ರೇಸಿಂಗ್ ಹಿನ್ನೆಲೆ ಮತ್ತು ಅನುಭವಿ ತಾಂತ್ರಿಕ ತಂಡದ ಬೆಂಬಲದಿಂದ ‘ವಿಜಯಂ’ ಮಲಯಾಳಂ ಚಿತ್ರರಂಗದ ಮತ್ತೊಂದು ಬಹುನಿರೀಕ್ಷಿತ ಸಿನಿಮಾವಾಗಿ ಹೊರಹೊಮ್ಮಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed