Niveditha Gowda: ಕಿಶನ್ ಬೆನ್ನಲ್ಲೇ ಕ್ಷಮೆ ಯಾಚಿಸಿದ ನಿವೇದಿತಾ ಗೌಡ! ಹೇಳಿದ್ದೇನು? | | ACTPnews

ಕಿಶನ್ ಆಯಿತು ಈಗ ನಿವೇದಿತಾನು ಕ್ಷಮೆ ಕೇಳಿಯೇ ಬಿಟ್ಟರು!


Last Updated:

ಬೆಳಗ್ಗೆ ಕಿಶನ್ ಬಿಳಗಲಿ ಕ್ಷಮೆ ಕೇಳಿದರು. ಮಧ್ಯಾಹ್ನ ನಿವೇದಿತಾ ಗೌಡ Sorry ಹೇಳಿದರು. ಬಾಡಿಗೆಗೆ ನವಿಲು ಗರಿ ಪಡೆದು ಬಳಸುವುದು ತಪ್ಪು ಅಂತ ಗೊತ್ತಿರಲಿಲ್ಲ. ಆದರೆ, ಈಗ ಅರ್ಥ ಆಗಿದೆ. ನಮ್ಮನ್ನ ಕ್ಷಮಿಸಿ ಅಂತಲೇ ಹೇಳಿದ್ದಾರೆ. ನಿವೇದಿತಾ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ಕಿಶನ್ ಆಯಿತು ಈಗ ನಿವೇದಿತಾನು ಕ್ಷಮೆ ಕೇಳಿಯೇ ಬಿಟ್ಟರು!
ಕಿಶನ್ ಆಯಿತು ಈಗ ನಿವೇದಿತಾನು ಕ್ಷಮೆ ಕೇಳಿಯೇ ಬಿಟ್ಟರು!

ಬೆಳಗ್ಗೆ ಕಿಶನ್ ಬಿಳಗಲಿ (Kishen Bilagali) ಕ್ಷಮೆ ಕೇಳಿದರು. ಮಧ್ಯಾಹ್ನದ ಹೊತ್ತಿಗೆ ನಿವೇದಿತಾ ಗೌಡ (Niveditha Gowda) ಸಾರಿ ಹೇಳಿದರು. ಇಬ್ಬರು ತಮ್ಮ ಇನ್‌ಸ್ಟಾಗ್ರಾಮ್‌ನ ಪೇಜ್ ಅಲ್ಲಿಯೇ ಒಂದೊಂದು ವಿಡಿಯೋ ಹಂಚಿಕೊಂಡಿದ್ದಾರೆ. ನವಿಲು ಗರಿಗಳನ್ನ (Peacock Feather) ಬಾಡಿಗೆಗೆ ಪಡೆದು ಬಳಸುವುದು ಕೂಡ ತಪ್ಪು ಅನ್ನೋದು ಗೊತ್ತಿರಲಿಲ್ಲ. ಹಾಗಾಗಿಯೇ ನಮ್ಮಿಂದ ತಪ್ಪಾಗಿದೆ ಅಂತ ನಿವೇದಿತಾ ಗೌಡ (Niveditha Gowda) ಕೂಡ ಕ್ಷಮೆ ಕೇಳಿದ್ದಾರೆ. ವಿಡಿಯೋದಲ್ಲಿ ಇನ್ನು ಏನೆಲ್ಲ ಹೇಳಿದ್ದಾರೆ ಅನ್ನೋದು ಇಲ್ಲಿದೆ ಓದಿ.

ನಮಗೆ ಗೊತ್ತಿರಲಿಲ್ಲ….

ನಮಗೆ ಗೊತ್ತಿರಲಿಲ್ಲ. ನವಿಲು ಗರಿಯಗಳನ್ನ ಬಾಡಿಗೆಗೆ ಪಡೆದರು, ಬಳಸುವುದು ಅಪರಾಧ ಅಂತ ಈಗ ಗೊತ್ತಾಗಿದೆ. ನಮ್ಮಿಂದ ತಪ್ಪಾಗಿದೆ. ಹಾಗಾಗಿ ನಾವು ಕ್ಷಮೆ ಕೇಳುತ್ತೇವೆ ಅಂತಲೇ ನಿವೇದಿತಾ ಗೌಡ ಹೇಳಿದ್ದಾರೆ.

niveditha Gowda apologized for peacock feather used in reels video

ನಮಗೆ ಗೊತ್ತಿರಲಿಲ್ಲ (ಚಿತ್ರ ಕೃಪೆ: ನಿವೇದಿತಾ ಗೌಡ ಇನ್‌ಸ್ಟಾಗ್ರಾಮ್)
ಡ್ಯಾನ್ಸರ್ ಕಿಶನ್ ಡೈರೆಕ್ಷನ್ ಅಲ್ಲಿ ಹೇ ನವಿಲೆ ಹಾಡಿಗೆ ನಿವೇದಿತಾ ಗೌಡ ನವಿಲು ಗರಿ ಇರೋ ಕಾಸ್ಟೂಮ್ ತೊಟ್ಟು ಡ್ಯಾನ್ಸ್ ಮಾಡಿದ್ದರು. ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಕಲಾವಿದ ಚಿತ್ರದ ಹೇ ನವಿಲೆ ಹಾಡನ್ನೆ ಕಿಶನ್ ಮತ್ತು ನಿವೇದಿತಾ ಗೌಡ ಡ್ಯಾನ್ಸ್ ಮೂಲಕ ರೀ-ಕ್ರಿಯೇಟ್ ಮಾಡಿದ್ದರು.
ತಪ್ಪು ಅಂತ ಅರ್ಥ ಆಗಿದೆ

ನವಿಲು ಗರಿಗಳನ್ನ ಬಳಕೆ ಮಾಡಿರೋದು ತಪ್ಪಾಗಿದೆ. ಆದರೆ, ಇವುಗಳನ್ನ ನಾವು ಬಾಡಿಗೆಗೆ ತಂದು ಬಳಕೆ ಮಾಡಿದ್ದೇವೆ. ಅದು ತಪ್ಪು ಅನ್ನೋದು ಈಗ ಅರ್ಥ ಆಗಿದೆ.

1972 ವೈಲ್ಡ್ ಲೈಫ್ ಆ್ಯಕ್ಟ್ ಪ್ರಕಾರ ತಪ್ಪಾಗುತ್ತದೆ. ಹಾಗಾಗಿಯೇ ನಮ್ಮಿಂದ ತಪ್ಪಾಗಿದೆ. ಅದಕ್ಕೇನೆ ನಾವು ಕ್ಷಮೆ ಕೇಳುತ್ತೇವೆ. ಈ ವಿಚಾರವಾಗಿ ನಡೆಯುವ ತನಿಖೆಗೂ ಸಹಕರಿಸುತ್ತೇವೆ ಅಂತ ನಿವೇದಿತಾ ಗೌಡ ವಿಡಿಯೋ ಮೂಲಕ ಹೇಳಿದ್ದಾರೆ. ಈ ಒಂದು ವಿಡಿಯೋವನ್ನ ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ.

ಕಿಶನ್ ಬಿಳಗಲಿ ಕ್ಷಮೆ

ಕಿಶನ್ ಬಿಳಗಲಿ ಕೂಡ ಕ್ಷಮೆ ಕೇಳಿದ್ದಾರೆ. ತಮ್ಮಿಂದ ತಪ್ಪಾಗಿದೆ. ಆದರೆ, ನವಿಲು ಗರಿಯನ್ನ ಬಾಡಿಗೆಗೆ ಪಡೆದು ಬಳಕೆ ಮಾಡಿದ್ದೇವೆ. ನಮ್ಮ ಒಂದು ಹಾಡಿಗೆ ಬೇರೆ ಬೇರೆ ಟೀಮ್ ವರ್ಕ್ ಮಾಡುತ್ತದೆ.

niveditha Gowda apologized for peacock feather used in reels video

ತಪ್ಪು ಅಂತ ಅರ್ಥ ಆಗಿದೆ

(ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್‌ಸ್ಟಾಗ್ರಾಮ್)

ಆದರೆ, ನಾನು ಮಾಡಿರೋದು ಸರಿ ಅಂತ ಹೇಳುವುದಿಲ್ಲ. ನಾನು ಮಾಡಿರೋದು ತಪ್ಪೇ ಆಗಿದೆ. ಹಾಗಾಗಿ ಇದಕ್ಕೆ ಕ್ಷಮೆ ಕೇಳುತ್ತೇನೆ. ಇನ್ಮುಂದೆ ಈ ರೀತಿ ತಪ್ಪಾಗುವುದಿಲ್ಲ ಅಂತಲೇ ಕಿಶನ್ ಬಿಳಗಲಿ ಹೇಳಿದ್ದಾರೆ. ಈ ಮಾತುಗಳ ತಮ್ಮ ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲೂ ಶೇರ್ ಮಾಡಿಕೊಂಡಿದ್ದಾರೆ.

ಅರಣ್ಯ ಇಲಾಖೆಗೆ ದೂರು

ಈ ವಿಚಾರವಾಗಿಯೇ ಸಾಮಾಜಿಕ ಕಾರ್ತಕರ್ತ ದಿನೇಶ್ ಕಲ್ಲಹಳ್ಳಿ ಅವರು ಅರಣ್ಯ ಇಲಾಖೆಗೆ ದೂರು ಕೊಟ್ಟಿದ್ದರು. ನವಿಲು ಗರಿ ಧರಿಸಿ ರೀಲ್ಸ್ ಮಾಡಿದ್ದಾರೆ. ಇವು ನಿಜವಾದ ನವಿಲು ಗರಿ ಅಂತ ಅನುಮಾನದ ಇದೆ. ಹಾಗಾಗಿಯೇ ಸಮಗ್ರ ತನಿಖೆ ನಡೆಸಬೇಕು ಅಂತ ದೂರು ಕೊಟ್ಟಿದ್ದರು.

ಇದು ನಿಜವಾದ ಗರಿನಾ? ಅಥವಾ ಕೃತಕ ಗರಿನಾ ಅನ್ನೋದನ್ನ ವೈಜ್ಞಾನಿಕವಾಗಿ ದೃಢೀಕರಿಸಬೇಕು. ಒಂದು ವೇಳೆ ನೈಜವಾಗಿದ್ದರೆ, ಅದರ ಮೂಲ ಮತ್ತು ಸಾಗಣೆ ಬಗ್ಗೆ ತನಿಖೆ ಆಗ್ಬೇಕು ಅಂತ ದೂರು ಕೊಟ್ಟಿದ್ದರು.

ಈ ಎಲ್ಲ ಬೆಳವಣಿಗೆಯ ಬಳಿಕ ಕಿಶನ್ ಬಿಳಗಲಿ ತಮ್ಮ ರೀಲ್ಸ್ ವಿಡಿಯೋವನ್ನ ತೆಗೆದಿದ್ದಾರೆ. ನನ್ನಿಂದ ತಪ್ಪಾಗಿದೆ. ಈ ತಪ್ಪು ಯಾರೂ ಮಾಡ್ಬೇಡಿ. ಇನ್ಮುಂದೆ ಈ ರೀತಿ ತಪ್ಪಾಗುವುದಿಲ್ಲ ಅಂತಲೂ ಕಿಶನ್ ಹೇಳಿಕೊಂಡಿದ್ದಾರೆ. ಈಗಾಗಲೇ ಹೇಳಿದಂತೆ ನಿವೇದಿತಾ ಗೌಡ ಕೂಡ ಕ್ಷಮೆ ಕೇಳಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *