Nivedita Gowda: ಗರಿ ಬಿಚ್ಚಿ ಕುಣಿದ ನಿವೇದಿತಾ ಗೌಡ- ಕಿಶನ್! ವೈರಲ್ ಆಯ್ತು ನವಿಲೇ ಡ್ಯಾನ್ಸ್ | | ACTPnews

Niveditha Gowda Kishen Bilagali Kalavida Movie Navile song Recreated Video Viral


ಹೇ ನವಿಲೇ ಹೆಣ್ಣ ನವಿಲೇ

ಈ ಹಾಡಿನಲ್ಲಿ ನವಿಲಿನ ಬಣ್ಣನೆ ಇದೆ. ಹೆಣ್ಣಿಗೆ ಹೋಲಿಸುವ ಕೆಲಸವೂ ಆಗಿದೆ. ಹಂಸಲೇಖ ಅವರ ಸಂಗೀತ ಮತ್ತು ಸಾಹಿತ್ಯದ ಈ ಕಲಾವಿದ ಚಿತ್ರದ ಹಾಡು ಇಂದಿಗೂ ತಾಜಾತನದ ಅನುಭವ ಕೊಡುತ್ತದೆ.

ಬಾಡಿಗೆಯ ಗರಿಗಳು…

(ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್‌ಸ್ಟಾಗ್ರಾಮ್)

ಆದರೆ, ಡ್ಯಾನ್ಸರ್ ಕಿಶನ್ ಬಿಳಗಲಿ ನೃತ್ಯ ಇಲ್ಲಿ ಹೊಸದೊಂದು ಕಲ್ಪನೆ ಕಟ್ಟಿಕೊಡುತ್ತದೆ. ಬೆನ್ನಿಗೆ ನವಿಲು ಗರಿಯಗಳನ್ನ ಕಟ್ಟಿಕೊಂಡು ಗಂಡು ನವಿಲಿನಂತೆ ನೃತ್ಯ ಮಾಡಿದ್ದಾರೆ.

ನಿವೇದಿತಾ ಇಲ್ಲಿ ಹೆಣ್ಣು ನವಿಲು

ಬೇಬಿ ಡಾಲ್ ನಿವೇದಿತಾ ಗೌಡ ಇಲ್ಲಿ ಹೆಣ್ಣು ನವಿಲು ಆಗಿದ್ದಾರೆ. ಕೆಲವೇ ಕೆಲವು ನವಿಲು ಗರಿಗಳ ಉಡುಪು ತೊಟ್ಟಿದ್ದಾರೆ. ನೀಲಿ ಬಣ್ಣದ ಕಾಸ್ಟೂಮ್ ತೊಟ್ಟು ನವಿಲಿನಂತೆ ನಾಟ್ಯ ಮಾಡಿದ್ದಾರೆ.

ಕಿಶನ್ ಅಂತಲೂ ತೇಟ್ ನವಿಲೇ ಆಗಿದ್ದಾರೆ. ಎಲ್ಲೆಡೆ ನವಿಲು ಗರಿಯನ್ನ ಅಂಟಿಸಿಕೊಂಡಿದ್ದಾರೆ. ಈ ಗರಿಗಳ ಜೊತೆಗೆ ನೃತ್ಯ ಮಾಡುವುದು ಅಷ್ಟು ಸುಲಭವೇನೂ ಅಲ್ಲ. ಆದರೆ, ಕಿಶನ್ ಅದನ್ನ ಅಷ್ಟೆ ಚೆನ್ನಾಗಿ ಮಾಡಿದ್ದಾರೆ.

ಬ್ರೋ ರಸಿಕ ನೀನು

ಕಲಾವಿದ ಚಿತ್ರದ ಹಾಡಿನ ಈ ಹೊಸ ರೂಪದ ವಿಡಿಯೋಗೆ ಹೆಚ್ಚಾಗಿ ಕಾಂಪ್ಲಿಂಟ್ಸ್ ಬಂದಿವೆ. ಮುದ್ದು ನವಿಲು ಗರಿ ಅಂತ ಅದ್ಯಾರೋ ಬರೆದಿದ್ದಾರೆ.

Very nice performance,Very beautiful,Super anna ಅನ್ನು ಕಾಂಪ್ಲಿಮೆಂಟ್ಸ್ ಕೂಡ ಇವೆ. ಆದರೆ, ಇದರಲ್ಲಿಯೇ ಒಂದು ಕಾಂಪ್ಲಿಮೆಂಟ್ ಇದೆ. ಅದು “ಬ್ರೋ ರಸಿಕ ನೀನು” ಅನ್ನೋದೇ ಆಗಿದೆ.

Niveditha Gowda Kishen Bilagali Kalavida Movie Navile song Recreated Video Viral

ಬ್ರೋ ರಸಿಕ ನೀನು

(ಚಿತ್ರ ಕೃಪೆ: ಕಿಶನ್ ಬಿಳಗಲಿ ಇನ್‌ಸ್ಟಾಗ್ರಾಮ್)

ಸೂಪರ್ ವಿಡಿಯೋ

ಈ ಒಂದು ವಿಡಿಯೋ ಚೆನ್ನಾಗಿದೆ. ನೀಲಿ ಫೀಲ್ ಕೊಡುತ್ತದೆ. ಎರಡು ನವಿಲು ಕುಣಿದ ಅನುಭವ ಕೊಡುತ್ತದೆ. ಕಿಶನ್-ನಿವೇದಿತಾ ಇಲ್ಲಿ ನಿಜಕ್ಕೂ ಸುಂದರವಾಗಿಯೇ ಕಾಣಿಸುತ್ತಿದ್ದಾರೆ.

ಈ ಒಂದು ರೀಲ್ಸ್ ವಿಡಿಯೋವನ್ನ ಕಿಶನ್ ಹಂಚಿಕೊಂಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಶೇರ್ ಮಾಡಿದ್ದಾರೆ. ಇದರೊಟ್ಟಿಗೆ ಒಂದಷ್ಟು ಬರೆದುಕೊಂಡಿದ್ದಾರೆ.

ಬಾಡಿಗೆಯ ಗರಿಗಳು…

ಈ ಒಂದು ಮಾತನ್ನ ಕಿಶನ್ ಇಲ್ಲಿ ಒತ್ತಿ ಹೇಳಿದ್ದಾರೆ. ನಾವು ಧರಿಸಿರೋ ಗರಿಗಳು ನಮ್ಮವಲ್ಲ, ಇವುಗಳನ್ನ ಬಾಡಿಗೆಗೆ ತಂದಿದ್ದೇವೆ ಅಂತ ಬರೆದಿದ್ದಾರೆ.

ಆದರೆ, ಈ ಸಾಲು ಬರೆಯುವ ಮೊದಲು ನವಿಲೇ ಅಂತ ಕನ್ನಡದಲ್ಲಿಯೇ ಬರೆದಿದ್ದಾರೆ. ಇಂಗ್ಲಿಷ್ ಅಲ್ಲಿ Note: feathers are rented!!! ಅಂತಲೇ ಬರೆದುಕೊಂಡಿದ್ದಾರೆ.

ಕಿಶನ್ ಕ್ರಿಯೇಟಿವ್ ಡ್ಯಾನ್ಸ್

ಕಿಶನ್ ನಿಜಕ್ಕೂ ಅದ್ಭುತ ಕ್ರಿಯೇಟಿವ್ ಕಲಾವಿದರೇ ಆಗಿದ್ದಾರೆ. ಕನ್ನಡದ ಹಾಡುಗಳಿಗೆ ಹೊಸ ರೀತಿಯ ಟಚ್ ಕೊಡ್ತಾನೇ ಬಂದಿದ್ದಾರೆ.

ರವಿಚಂದ್ರನ್ ಸಿನಿಮಾಗಳ ಹಾಡುಗಳನ್ನು ಕಿಶನ್ ರೀ-ಕ್ರಿಯೇಟ್ ಮಾಡಿರೋದು ಇದೆ. ಬೇರೆ ಚಿತ್ರಗಳ ಹಿಟ್ ಹಾಡುಗಳನ್ನು ಬೇರೆ ರೂಪದಲ್ಲಿ ತೋರಿಸಿದ್ದಾರೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed