Last Updated:
ಬೆಂಗಳೂರು SMVT-LTT ಹೊಸ ದ್ವೈವಾರ್ಷಿಕ ಎಕ್ಸ್‌ಪ್ರೆಸ್ ಮೇ 23ರಿಂದ, ತುಮಕೂರು ಸೇರಿ ಹಲವು ನಿಲ್ದಾಣಗಳಲ್ಲಿ ನಿಲುಗಡೆ, 1209 ಕಿಮೀಗೆ 24 ಗಂಟೆ ತೆಗೆದುಕೊಳ್ಳುವ ಆಮೆಗತಿಗೆ ಪ್ರಯಾಣಿಕರ ಆಕ್ರೋಶ.
ಬೆಂಗಳೂರಿನಿಂದ (Bengaluru) ವಾಣಿಜ್ಯ ನಗರಿ ಮುಂಬೈಗೆ (Mumbai) ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆ ಕೊನೆಗೂ ಒಂದು ಸಿಹಿ ಸುದ್ದಿ ನೀಡಿದೆ. ಹೊಸದಾಗಿ SMVT ಬೆಂಗಳೂರು ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ದ್ವೈವಾರ್ಷಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಘೋಷಿಸಲಾಗಿದೆ. ಆದರೆ, ಈ ಸಂತಸದ ಬೆನ್ನಲ್ಲೇ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಒಂದು ನಿರಾಶಾದಾಯಕ ಟ್ವಿಸ್ಟ್ ನೀಡಿದೆ. ಹೊಸ ಟ್ರೈನ್ (New Train) ಸಿಕ್ಕಿತು ಎಂದು ಖುಷಿಪಡುವಷ್ಟರಲ್ಲೇ, ಅದರ ಆಮೆಗತಿಯ ವೇಳಾಪಟ್ಟಿ ನೋಡಿ ಪ್ರಯಾಣಿಕರು ಬೇಸರಗೊಂಡಿದ್ದಾರೆ.
ಈ ರೈಲು ಬೆಂಗಳೂರು ಮತ್ತು ಮುಂಬೈ ನಡುವಿನ 1,209 ಕಿಲೋಮೀಟರ್ ದೂರವನ್ನು ಕ್ರಮಿಸಲು ಬರೋಬ್ಬರಿ 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೌದು, ಇದರ ಸರಾಸರಿ ವೇಗ ಕೇವಲ ಗಂಟೆಗೆ 52 ಕಿಮೀ ಮಾತ್ರ. ಇದು ಕನಿಷ್ಠ ಸೂಪರ್ ಫಾಸ್ಟ್ ರೈಲಿನ ವೇಗಕ್ಕಿಂತಲೂ ಕಡಿಮೆಯಾಗಿದೆ.
ಈ ಆಮೆಗತಿಯ ದೀರ್ಘ ವೇಳಾಪಟ್ಟಿಯನ್ನು ರೈಲ್ವೆ ಪ್ರಯಾಣಿಕರು ತೀವ್ರವಾಗಿ ಟೀಕಿಸಿದ್ದಾರೆ. ಕರ್ನಾಟಕ ರೈಲ್ವೆ ವೇದಿಕೆಯ ಕೆ ಎನ್ ಕೃಷ್ಣ ಪ್ರಸಾದ್ ಅವರು ಮಾತನಾಡಿ, ರೈಲಿನ ಸಮಯ ಅತ್ಯಂತ ನಿರಾಶಾದಾಯಕವಾಗಿದೆ. ಆದರೂ ಯಶವಂತಪುರದಲ್ಲಿ ನಿಲುಗಡೆ ನೀಡಿರುವುದು ಸ್ವಲ್ಪಮಟ್ಟಿಗೆ ಪ್ರಯಾಣಿಕರಿಗೆ ಸಹನೀಯಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹೊಸ ರೈಲು ಸಿಕ್ಕರೂ ಮುಂಬೈ ತಲುಪಲು ಒಂದು ಇಡೀ ದಿನ ಕಳೆಯಬೇಕಲ್ಲ ಎಂಬ ಚಿಂತೆ ಈಗ ಪ್ರಯಾಣಿಕರನ್ನು ಕಾಡುತ್ತಿದೆ.
Bangalore [Bangalore],Bangalore,Karnataka













