New Train: ಐಟಿ ಸಿಟಿ ಜನರೇ ಗಮನಿಸಿ, ಮೇ 23 ರಿಂದ ಆರಂಭವಾಗಲಿದೆ ಹೊಸ ಟ್ರೈನ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews

ಬೆಂಗಳೂರಿನಿಂದ ಮುಂಬೈ ರೈಲು


Last Updated:

ಬೆಂಗಳೂರು SMVT-LTT ಹೊಸ ದ್ವೈವಾರ್ಷಿಕ ಎಕ್ಸ್‌ಪ್ರೆಸ್ ಮೇ 23ರಿಂದ, ತುಮಕೂರು ಸೇರಿ ಹಲವು ನಿಲ್ದಾಣಗಳಲ್ಲಿ ನಿಲುಗಡೆ, 1209 ಕಿಮೀಗೆ 24 ಗಂಟೆ ತೆಗೆದುಕೊಳ್ಳುವ ಆಮೆಗತಿಗೆ ಪ್ರಯಾಣಿಕರ ಆಕ್ರೋಶ.

ಬೆಂಗಳೂರಿನಿಂದ ಮುಂಬೈ ರೈಲು
ಬೆಂಗಳೂರಿನಿಂದ ಮುಂಬೈ ರೈಲು

ಬೆಂಗಳೂರಿನಿಂದ (Bengaluru) ವಾಣಿಜ್ಯ ನಗರಿ ಮುಂಬೈಗೆ (Mumbai) ಪ್ರಯಾಣಿಸುವ ಜನರಿಗೆ ನೈಋತ್ಯ ರೈಲ್ವೆ ಕೊನೆಗೂ ಒಂದು ಸಿಹಿ ಸುದ್ದಿ ನೀಡಿದೆ. ಹೊಸದಾಗಿ SMVT ಬೆಂಗಳೂರು ಮತ್ತು ಲೋಕಮಾನ್ಯ ತಿಲಕ್ ಟರ್ಮಿನಸ್ ನಡುವೆ ದ್ವೈವಾರ್ಷಿಕ ಎಕ್ಸ್‌ಪ್ರೆಸ್ ರೈಲು ಸಂಚಾರವನ್ನು ಘೋಷಿಸಲಾಗಿದೆ. ಆದರೆ, ಈ ಸಂತಸದ ಬೆನ್ನಲ್ಲೇ ರೈಲ್ವೆ ಇಲಾಖೆ ಪ್ರಯಾಣಿಕರಿಗೆ ಒಂದು ನಿರಾಶಾದಾಯಕ ಟ್ವಿಸ್ಟ್ ನೀಡಿದೆ. ಹೊಸ ಟ್ರೈನ್ (New Train) ಸಿಕ್ಕಿತು ಎಂದು ಖುಷಿಪಡುವಷ್ಟರಲ್ಲೇ, ಅದರ ಆಮೆಗತಿಯ ವೇಳಾಪಟ್ಟಿ ನೋಡಿ ಪ್ರಯಾಣಿಕರು ಬೇಸರಗೊಂಡಿದ್ದಾರೆ.

ಯಾವಾಗಿನಿಂದ ಆರಂಭ? ಎಲ್ಲೆಲ್ಲಿ ನಿಲ್ಲುತ್ತೆ?

ರೈಲು ಸಂಖ್ಯೆ 16553 ಬೆಂಗಳೂರು-LTT ಎಕ್ಸ್‌ಪ್ರೆಸ್ ಮೇ 23 ರಿಂದ ಮತ್ತು ರೈಲು ಸಂಖ್ಯೆ 16554 LTT-ಬೆಂಗಳೂರು ಎಕ್ಸ್‌ಪ್ರೆಸ್ ಮೇ 24 ರಿಂದ ಹಳಿ ಮೇಲಿಳಿಯಲಿವೆ. ಸಿಹಿ ಸುದ್ದಿ ಏನೆಂದರೆ, ಈ ರೈಲು ತುಮಕೂರಿನಲ್ಲಿಯೂ ನಿಲುಗಡೆ ಹೊಂದಲಿದೆ ಎಂದು ರೈಲ್ವೆ ಇಲಾಖೆ ಖಚಿತಪಡಿಸಿದೆ. ಬೆಂಗಳೂರಿನಿಂದ ಹೊರಡುವ ರೈಲು ರಾತ್ರಿ 10.13 ಕ್ಕೆ ತುಮಕೂರು ತಲುಪಲಿದ್ದು, ಮುಂಬೈನಿಂದ ಬರುವ ರೈಲು ರಾತ್ರಿ 8.03 ಕ್ಕೆ ತುಮಕೂರಿಗೆ ಆಗಮಿಸಲಿದೆ. ಇದಲ್ಲದೆ ದಾವಣಗೆರೆ, ಹುಬ್ಬಳ್ಳಿ, ಧಾರವಾಡ, ಬೆಳಗಾವಿ ಹಾಗೂ ಪುಣೆ ಸೇರಿದಂತೆ ಪ್ರಮುಖ ನಿಲ್ದಾಣಗಳಲ್ಲಿ ಇದು ನಿಲ್ಲಲಿದೆ ಎಂದು ಡೆಕ್ಕನ್ ಹೆರಾಲ್ಡ್ ವೆಬ್‍ಸೈಟ್ ವರದಿ ಮಾಡಿದೆ.
ಪ್ರಯಾಣಿಕರ ಆಕ್ರೋಶಕ್ಕೆ ಅಸಲಿ ಕಾರಣ ಇಲ್ಲಿದೆ

ಈ ರೈಲು ಬೆಂಗಳೂರು ಮತ್ತು ಮುಂಬೈ ನಡುವಿನ 1,209 ಕಿಲೋಮೀಟರ್ ದೂರವನ್ನು ಕ್ರಮಿಸಲು ಬರೋಬ್ಬರಿ 24 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಹೌದು, ಇದರ ಸರಾಸರಿ ವೇಗ ಕೇವಲ ಗಂಟೆಗೆ 52 ಕಿಮೀ ಮಾತ್ರ. ಇದು ಕನಿಷ್ಠ ಸೂಪರ್ ಫಾಸ್ಟ್ ರೈಲಿನ ವೇಗಕ್ಕಿಂತಲೂ ಕಡಿಮೆಯಾಗಿದೆ.

ಇದನ್ನೂ ಓದಿ: Train News: ಬೆಂಗಳೂರು-ಕಲಬುರಗಿ ಪ್ರಯಾಣಿಕರಿಗೆ ಬಂಪರ್ ಆಫರ್, ರೈಲ್ವೆ ಇಲಾಖೆಯಿಂದ ಸಿಕ್ತು ಭರ್ಜರಿ ಗಿಫ್ಟ್!

ಈ ಆಮೆಗತಿಯ ದೀರ್ಘ ವೇಳಾಪಟ್ಟಿಯನ್ನು ರೈಲ್ವೆ ಪ್ರಯಾಣಿಕರು ತೀವ್ರವಾಗಿ ಟೀಕಿಸಿದ್ದಾರೆ. ಕರ್ನಾಟಕ ರೈಲ್ವೆ ವೇದಿಕೆಯ ಕೆ ಎನ್ ಕೃಷ್ಣ ಪ್ರಸಾದ್ ಅವರು ಮಾತನಾಡಿ, ರೈಲಿನ ಸಮಯ ಅತ್ಯಂತ ನಿರಾಶಾದಾಯಕವಾಗಿದೆ. ಆದರೂ ಯಶವಂತಪುರದಲ್ಲಿ ನಿಲುಗಡೆ ನೀಡಿರುವುದು ಸ್ವಲ್ಪಮಟ್ಟಿಗೆ ಪ್ರಯಾಣಿಕರಿಗೆ ಸಹನೀಯಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಹೊಸ ರೈಲು ಸಿಕ್ಕರೂ ಮುಂಬೈ ತಲುಪಲು ಒಂದು ಇಡೀ ದಿನ ಕಳೆಯಬೇಕಲ್ಲ ಎಂಬ ಚಿಂತೆ ಈಗ ಪ್ರಯಾಣಿಕರನ್ನು ಕಾಡುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed