New Show: ಜೀ ಕನ್ನಡದಲ್ಲಿ ಹೊಸ ಶೋ, ಕುತೂಹಲ ಹೆಚ್ಚಿಸಿದ ಪ್ರೋಮೋ! | | ACTPnews

ಜೀ ಕನ್ನಡದಲ್ಲಿ ಹೊಸ ಶೋ; ಕುತೂಹಲ ಹೆಚ್ಚಿಸಿದ ಪ್ರೋಮೋ!


Last Updated:

ಜೀ ಕನ್ನಡದಲ್ಲಿ ಹೊಸ ರಿಯಾಲಿಟಿ ಶೋ ಬರ್ತಿದೆ. ಅದರ ಪ್ರೋಮೋ ಹಳ್ಳಿ ಪವರ್ ನೆನಪಿಸುತ್ತಿದೆ. ಆದರೆ, ಇದಕ್ಕೆ ಚಿಕ್ಕದಾಗಿ HP ಅಂತಲೇ ಹೆಸರಿಟ್ಟಿದ್ದಾರೆ. Reloaded ಅನ್ನೋದು ಇದೆ. ಈ ಶೋದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಜೀ ಕನ್ನಡದಲ್ಲಿ ಹೊಸ ಶೋ; ಕುತೂಹಲ ಹೆಚ್ಚಿಸಿದ ಪ್ರೋಮೋ!
ಜೀ ಕನ್ನಡದಲ್ಲಿ ಹೊಸ ಶೋ; ಕುತೂಹಲ ಹೆಚ್ಚಿಸಿದ ಪ್ರೋಮೋ!

ಜೀ ಕನ್ನಡದಲ್ಲಿ (Zee Kannada) ಹೊಸದೊಂದು ರಿಯಾಲಿಟಿ ಶೋ (New Reality Show) ಶುರು ಆಗುತ್ತಿದೆ. ಇದರ ಪ್ರೋಮೋ ನೋಡಿದ್ರೆ ಇದು ಹಳ್ಳಿ ಪವರ್ ಅಂತಲೇ ಫಿಲ್ ಆಗುತ್ತದೆ. ಎತ್ತಿನ ಬಂಡಿಯ ಚಕ್ರ ಎಲ್ಲೆಡೆ ಸುತ್ತುತ್ತದೆ. ಹಳ್ಳಿ-ಸಿಟಿ ಹೀಗೆ ಸಾಗುವ ಈ ಒಂದು ಚಕ್ರ ಎಲ್ಲರಿಗೂ ಹಳ್ಳಿ ಪವರ್ (Halli Power) ನೆನಪಿಸುತ್ತದೆ. ಅದಕ್ಕೂ ಹೆಚ್ಚಾಗಿ ಈ ಪ್ರೋಮೋದೊಂದಿಗೆ (Promo) ಬರೆದ ಸಾಲುಗಳು ಆ್ಯಂಕರ್ ಅಕುಲ್ ಬಾಲಾಜಿ ಅವರನ್ನ ನೆನಪಿಸುತ್ತವೆ. ಆ ರೀತಿಯ ಈ ಒಂದು ಪ್ರೋಮೋದ ಇನ್ನಷ್ಟು ವಿವರ ಇಲ್ಲಿದೆ ಓದಿ.

HP ಅಂದ್ರೆ ಏನು

ಈ ಒಂದು ಪ್ರೋಮೋದ ಕೊನೆಯಲ್ಲಿ ಚಕ್ರ ಬಂದು ಹಳ್ಳಿಯೊಂದರ ಅಂಗಳದಲ್ಲಿ ಬಂತು ನಿಲ್ಲುತ್ತದೆ. ಅಲ್ಲಿಗೆ HP Reloaded ಅನ್ನುವ ಸಾಲು ತೆರೆ ಮೇಲೆ ಬರುತ್ತವೆ.

zee kannada new show promo shares on social media

ಹಳ್ಳಿ ಪವರ್ ಸೀಸನ್-2?

(ಚಿತ್ರ ಕೃಪೆ: ಜೀ ಕನ್ನಡ ಇನ್‌ಸ್ಟಾಗ್ರಾಮ್)

ಅಂದ್ರೆ ಇಲ್ಲಿ HP ಅರ್ಥ ಏನು? ಇದನ್ನ ಸ್ವಲ್ಪ ವಿಸ್ತರಿಸಿದ್ರೆ, ಹಳ್ಳಿ ಪವರ್ ಅಂತಲೇ ಅರ್ಥ ಬರುತ್ತದೆ. ಇದಕ್ಕೆ ಪೂರಕ ಅನ್ನುವ ಹಾಗೆ ಪ್ರೋಮೋದಲ್ಲಿ ಹಳ್ಳಿಯ ಗಲ್ಲಿಗಳಿವೆ, ಹೊಲ ಗೆದ್ದೆಗಳ ಚಿತ್ರಣ ಇದೆ. ಹಳ್ಳಿಯ ಸಲೂನ್ ಶಾಪ್ ಕಾಣಿಸುತ್ತದೆ. ಎತ್ತಿನ ಬಂಡಿಯ ಚಕ್ರ ಊರ ಒಳಗೆ ಬರೋದನ್ನ ನೋಡಿ ಮಕ್ಕಳು ತುಂಬಾನೆ ಖುಷಿ ಪಡ್ತಾರೆ.

ಹಳ್ಳಿ ಪವರ್ ಸೀಸನ್-2?

ಹೌದು, ಈ ಒಂದು ಪ್ರೋಮೋ ನೋಡಿದ್ರೆ ಇದೇ ಪ್ರಶ್ನೆ ಬರುತ್ತದೆ. ಹಳ್ಳಿ ಪವರ್ ಸೀಸನ್-2 ಮತ್ತೆ ಶುರು ಆಗುತ್ತಿದಿಯೇ ಅನ್ನುವ ಪ್ರಶ್ನೆ ಹುಟ್ಟಿಕೊಳ್ಳುತ್ತಿದೆ.

ಆದರೆ, ಈ ಒಂದು ಪ್ರೋಮೋ ಅಧಿಕೃತವಾಗಿಯೇ ಹೊರ ಬಂದಿದೆ. ಜೀ ಕನ್ನಡದ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿಯೇ ಇದು ಶೇರ್ ಆಗಿದೆ. ಇದರೊಟ್ಟಿಗೆ ಚೆಂದದ ಎರಡು ಲೈನ್ ಕೂಡ ಇವೆ.

ಆ ಲೈನ್ ಏನ್ ಗೊತ್ತಾ

ಪ್ರೋಮೋ ಜೊತೆಗೆ ಇರೋ ಆ ಲೈನ್ ಈ ರೀತಿ ಇವೆ. Cool ಆಗಿರೋ ಮಾಸ್ ಆ್ಯಂಕರ್ ಸಾರಥ್ಯದಲ್ಲಿ, ಹೈ ವೋಲ್ಟೇಜ್ ರಿಯಾಲಿಟಿ ಶೋ ಬರ್ತಿದೆ! ಯಾವ್ದು ಅಂತ ಕಾಮೆಂಟ್ ಮಾಡಿ.

zee kannada new show promo shares on social media

HP ಅಂದ್ರೆ ಏನು

(ಚಿತ್ರ ಕೃಪೆ: ಜೀ ಕನ್ನಡ ಇನ್‌ಸ್ಟಾಗ್ರಾಮ್)

ಈ ಇಂಟ್ರಸ್ಟಿಂಗ್ ಲೈನ್ ಜೊತೆಗೆ ಬಂದ ಪ್ರೋಮೋಗೆ ಸಾಕಷ್ಟು ಕಾಮೆಂಟ್ ಬಂದಿವೆ. ಅವುಗಳ ಸಾಂಪಲ್ ಇಲ್ಲಿದೆ. ರಗಡ್ ಮಜಾ ಈಗ ಬರೋದೈತಿ ನೋಡ (ಹಳ್ಳಿ ಪವರ್ ಅಲ್ಲಿ ಅಕುಲ್ ಹೇಳ್ತಿದ್ದ ಸಾಲು ಇದು.) ಕೂಲ್ ಕೂಲ್ ಅಕುಲ್ ಅನ್ನೋದು ಇಲ್ಲಿದೆ. ಹಳ್ಳಿ ಪವರ್ ಅಂತಲೂ ಅನೇಕರು

ಹಳ್ಳಿ ಪವರ್ ಹೇಗಿತ್ತು ಗೊತ್ತೇ

ಸಂಗೊಳ್ಳಿ ರಾಯಣ್ಣನ ಊರು ಸಂಗೊಳ್ಳಿಯಲ್ಲಿಯೇ ಈ ಹಳ್ಳಿ ಪವರ್ ನಡೆದಿತ್ತು. ಸಿಟಿ ಹೆಣ್ಣುಮಕ್ಕಳು ಹಳ್ಳಿಯಲ್ಲಿ ಜೀವನ ಮಾಡಬೇಕಿತ್ತು. ಹಳ್ಳಿ ಹೆಣ್ಣುಮಕ್ಕಳು ಏನೆಲ್ಲ ಮಾಡ್ತಾರೋ ಅದನ್ನೆ ಇಲ್ಲಿ ಟಾಸ್ಕ್ ಆಗಿಯೇ ಈ ಹುಡುಗಿಯರು ಮಾಡಬೇಕಿತ್ತು.

ಆ್ಯಂಕರ್ ಅಕುಲ್ ಬಾಲಾಜಿ ಇಲ್ಲಿ ಸಖತ್ ಆಗಿಯೇ ಟಾಸ್ಕ್ ಕೊಡ್ತಾ ಇದ್ದರು. ಅಷ್ಟೆ ರಗಡ್ ಆಗಿಯೇ ಈ ಶೋ ಇರ್ತಾ ಇತ್ತು. ವಾರಾಂತ್ಯದಲ್ಲಿ ಮನರಂಜನೆ ಕೂಡ ಇರ್ತಾ ಇತ್ತು. ಸಂಗೊಳ್ಳಿಯ ಜನ ಈ ಒಂದು ಶೋವನ್ನ ತುಂಬಾನೆ ಎಂಜಾಯ್ ಮಾಡಿದರು. ಈಗ ‘HP’ ಹೊಸ ರೂಪದಲ್ಲಿಯೇ ಬರ್ತಿದೆ ಅನ್ನೋ ಮಾಹಿತಿ ಸಿಗುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed