New Movie Release: ಹಾರರ್ ಕಾಮಿಡಿ, ಅಮ್ಮ-ಮಗನ ಸೆಂಟಿಮೆಂಟ್ಸ್! ಈ ವಾರ ರಿಲೀಸ್ ಆಗ್ತಿರೋ ಕನ್ನಡ ಮೂವಿಸ್ ಇವು | | ACTPnews

ತಾರೀಖು 10, ಸಿನಿಮಾ 4; ನಾಳೆ ಬರ್ತಿರೋ ಕನ್ನಡ ಚಿತ್ರಗಳು ಯಾವವು?


Last Updated:

ಡಾಲಿ ಧನಂಜಯ್ ಅಭಿನಯದ ಮದರ್ ಪ್ರಾಮಿಸ್ ಚಿತ್ರ ರಿಲೀಸ್ ಆಗುತ್ತಿದೆ. ಈ ಚಿತ್ರದ ಜೊತೆಗೆ ಕನ್ನಡದ ಇನ್ನು ಮೂರು ಸಿನಿಮಾಗಳು ತೆರೆ ಕಾಣ್ತಿವೆ. ಈ ಎಲ್ಲ ಚಿತ್ರಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ.

ತಾರೀಖು 10, ಸಿನಿಮಾ 4; ನಾಳೆ ಬರ್ತಿರೋ ಕನ್ನಡ ಚಿತ್ರಗಳು ಯಾವವು?
ತಾರೀಖು 10, ಸಿನಿಮಾ 4; ನಾಳೆ ಬರ್ತಿರೋ ಕನ್ನಡ ಚಿತ್ರಗಳು ಯಾವವು?

ಡಾಲಿ ಧನಂಜಯ್ (Daali Dhananjaya) ಅಭಿನಯದ ಮದರ್ ಪ್ರಾಮಿಸ್ ಚಿತ್ರ (Mother Promise Movie) ಜುಲೈ-10 ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದ ಜೊತೆಗೆ ಕನ್ನಡದ (Kannada) ಇನ್ನೂ ಮೂರು ಹೊಸಬರ ಚಿತ್ರಗಳೂ (Newcomer Movies) ಬರ್ತಿವೆ. ಹಾಗಾಗಿಯೇ ಈ ವಾರ ಒಂದಲ್ಲ, ಎರಡಲ್ಲ, ನಾಲ್ಕು ಚಿತ್ರಗಳು ರಿಲೀಸ್ ಆಗುತ್ತಿದೆ. ಈ ನಾಲ್ಕು ಚಿತ್ರಗಳ ಸಂಕ್ಷಿಪ್ತ ಚಿತ್ರಣ ಇಲ್ಲಿದೆ ಓದಿ.

ಮದರ್ ಪ್ರಾಮಿಸ್

ಮದರ್ ಪ್ರಾಮಿಸ್ ಚಿತ್ರದ ಬಗ್ಗೆ ಒಳ್ಳೆ ಅಭಿಪ್ರಾಯ ಇದೆ. ಪ್ರೀಮಿಯರ್ ಶೋದಲ್ಲಿ ಜನ ಈ ಚಿತ್ರ ಮೆಚ್ಚಿಕೊಂಡಿದ್ದಾರೆ. ಮನಸಾರೆ ನಕ್ಕು ನಲಿದು ಹೋಗಿದ್ದಾರೆ.
daali dhananjaya mother promise and three other kannada movie release on same day

ಮದರ್ ಪ್ರಾಮಿಸ್

ಡಾಲಿ ಧನಂಜಯ್ ಅಭಿನಯದ ಈ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಕತೆನೂ ಇದೆ. ಆದರೆ, ಇಲ್ಲಿ ಹಾಸ್ಯಕ್ಕೆ ಹೆಚ್ಚಿಗೆ ಒತ್ತು ಕೊಟ್ಟಿದ್ದಾರೆ. ಮದರ್ ಸೆಂಟಿಮೆಂಟ್ಸ್ ಕೂಡ ಇದೆ. ಅದರ ನಡುವೆ ನಗುವಿನ ಮಜಾ ಇದೆ. ಎಲ್ಲವೂ ಇರೋ ಈ ಚಿತ್ರ ಜುಲೈ-10 ರಂದು ತೆರೆ ಕಾಣುತ್ತಿದೆ.

ಪೂರ್ಣ ಮೈಸೂರು ಡೈರೆಕ್ಷನ್

ಈ ಚಿತ್ರವನ್ನ ಪೂರ್ಣ ಮೈಸೂರು ಡೈರೆಕ್ಷನ್ ಮಾಡಿದ್ದಾರೆ. ಈ ಚಿತ್ರಕ್ಕೆ ನವನೀತ್ ಶ್ಯಾಮ್ ಸಂಗೀತ ಕೊಟ್ಟಿದ್ದಾರೆ. ಗೀತಾ, ವಿನಯ್ ಪ್ರಸಾದ್, ಡಾಲಿ ಧನಂಜಯ್ ಸೇರಿದಂತೆ ಹೊಸಬರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

ಈ ಚಿತ್ರ ಚೆನ್ನಾಗಿದೆ ಅಂತ ರಾಜ್ ಬಿ ಶೆಟ್ಟಿ ಕೂಡ ಹೇಳಿದ್ದಾರೆ. ಪ್ರೀಮಿಯರ್ ಶೋದಲ್ಲಿ ಚಿತ್ರ ನೋಡಿದವರ ಅಭಿಪ್ರಾಯವು ಚೆನ್ನಾಗಿಯೇ ಬಂದಿವೆ. ಮೊದಲ ದಿನ ಈ ಸಿನಿಮಾವನ್ನ ಜನ ಹೇಗೆ ತೆಗೆದುಕೊಳ್ಳುತ್ತಾರೆ ಅನ್ನುವ ಕುತೂಹಲವು ಈಗ ಹೆಚ್ಚಾಗಿದೆ.

daali dhananjaya mother promise and three other kannada movie release on same day

ರಕ್ಕಿ ಸಿನಿಮಾ ರಿಲೀಸ್
ರಕ್ಕಿ ಸಿನಿಮಾ ರಿಲೀಸ್

ರಕ್ಕಿ ಹೊಸಬರ ಚಿತ್ರವೇ ಆಗಿದೆ. ರಕ್ಕಿ ಅನ್ನುವ ಯುವ ನಟನೇ ಈ ಚಿತ್ರದ ನಾಯಕ ಆಗಿದ್ದಾರೆ. ಡೈರೆಕ್ಟರ್ ವೆಂಕಟ್ ಭಾರದ್ವಾಜ್ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ.

ಇಂಗ್ಲಿಷ್ ಟೈಟಲ್ ಸಿನಿಮಾ

ಕನ್ನಡದಲ್ಲಿ ಈ ವಾರ ಬರ್ತಿರೋ ಚಿತ್ರಗಳಲ್ಲಿ Boys Never Compromise ಅನ್ನುವ ಚಿತ್ರವೂ ಬರ್ತಿದೆ. ಇದು ಕನ್ನಡ ಚಿತ್ರವೇ ಆಗಿದೆ.

daali dhananjaya mother promise and three other kannada movie release on same day

ಇಂಗ್ಲಿಷ್ ಟೈಟಲ್ ಸಿನಿಮಾ

ಆದರೆ, ಇದಕ್ಕೆ ಇಂಗ್ಲಿಷ್ ಟೈಟಲ್ ಇಟ್ಟಿದ್ದಾರೆ. ಇದರಲ್ಲಿ ಹಾರರ್ ಮತ್ತು ಕಾಮಿಡಿ ಕಂಟೆಂಟ್ ಇದೆ. ಹರೀಶ್ ಜಲ್ಗೆರೆ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಪ್ರಮೋದ್ ಭಾರತೀಯ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ.

ಶ್ರೀಕೃಷ್ಣ ಸಿನಿಮಾ

ಶ್ರೀಕೃಷ್ಣ ಹೆಸರಿನ ಕನ್ನಡ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಇದು ಕೂಡ ಹೊಸಬರ ಚಿತ್ರವೇ ಆಗಿದೆ. ಶಂಕರರಾಜ ವರ್ಮಾ ಈ ಚಿತ್ರವನ್ನ ಡೈರೆಕ್ಷನ್ ಮಾಡಿದ್ದಾರೆ. ಶಂಕರರಾಜ ವರ್ಮ, ಚೈತ್ರಾ ತೋಟದ್, ಪ್ರದೀಪ್ ಪೂಜಾರಿ ಸೇರಿದಂತೆ ಇನ್ನು ಅನೇಕರು ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಎಲ್ಲ ಸಿನಿಮಾಗಳಲ್ಲಿ ಮದರ್ ಪ್ರಾಮಿಸ್ ಚಿತ್ರದ ಪ್ರಚಾರ ಜೋರಾಗಿಯೇ ಆಗಿದೆ. ಇತರ ಚಿತ್ರಗಳು ಒಂದು ಹಂತಕ್ಕೆ ಪ್ರಚಾರದ ಪ್ರಯತ್ನ ಮಾಡಿವೆ ಅಂತಲೂ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed