NEET Row: ದುಡುಕಿನ ನಿರ್ಧಾರ ತೆಗೆದುಕೊಂಡ ಮತ್ತೋರ್ವ ನೀಟ್ ವಿದ್ಯಾರ್ಥಿನಿ! ಕಾರಣ ಕೇಳಿದ್ರೆ ಶಾಕ್ ಆಗ್ತೀರಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

News18


Last Updated:

‘My Dream Remains Incomplete’: ಮೇ 3 ರಂದು ನೀಟ್ ಪರೀಕ್ಷೆ ಬರೆದಿದ್ದ ಆಕೆ, ಹೊಸ ಪರೀಕ್ಷಾ ವೇಳಾಪಟ್ಟಿ ಪ್ರಕಟವಾದ ನಂತರ ಜೂನ್ 21 ರಂದು ಮತ್ತೆ ಪರೀಕ್ಷೆ ಬರೆದಿದ್ದಳು. ವಿದ್ಯಾರ್ಥಿನಿ ವೈದ್ಯೆಯಾಗಲು ಬಯಸಿದ್ದಳು ಮತ್ತು 300 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಭರವಸೆ ಹೊಂದಿದ್ದಳು.

News18
News18

ಮುಂಬೈ: ನೀಟ್ ಪತ್ರಿಕೆ ಸೋರಿಕೆಯ ಕಳಂಕ ಇನ್ನೂ ಕಮ್ಮಿಯಾಗಿಲ್ಲ. ಈ ಸಂಬಂಧ ಗೊಂದಲಗಳು ಮುಂದುವರೆದಿರುವ ಸಮಯದಲ್ಲೇ ಮತ್ತೊಂದು ನೀಟ್ ವಿದ್ಯಾರ್ಥಿನಿ (NEET Student Died) ಬದುಕಿನ ಪಯಣವನ್ನು ನಿಲ್ಲಿಸಿದ್ದಾಳೆ.

ಹೌದು.. ಮಹಾರಾಷ್ಟ್ರದ ಅಹಲ್ಯಾನಗರ ಜಿಲ್ಲೆಯ 19 ವರ್ಷದ ವಿದ್ಯಾರ್ಥಿನಿಯೊಬ್ಬಳು ನೀಟ್ ಮರು ಪರೀಕ್ಷೆಯಲ್ಲಿ ನಿರೀಕ್ಷಿಸಿದಷ್ಟು ಅಂಕಗಳನ್ನು ಗಳಿಸಲು ವಿಫಲಳಾದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆಕೆಗೆ ಮರು ಪರೀಕ್ಷೆಯಲ್ಲಿ ಕೇವಲ 11 ಅಂಕಗಳು ಕಡಿಮೆ ಬಂದ ಕಾರಣ ಅರ್ಹತೆ ಪಡೆಯಲು ವಿಫಲಳಾಗಿದ್ದಳು, ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.

ಪೊಲೀಸರ ಪ್ರಕಾರ, ಮೃತ ವಿದ್ಯಾರ್ಥಿನಿ ಕರ್ಜತ್ ತಾಲೂಕಿನ ಜಲಾಲ್ಪುರ್ ಗ್ರಾಮದ ನಿವಾಸಿ. ಮೇ 3 ರಂದು ನೀಟ್ ಪರೀಕ್ಷೆ ಬರೆದಿದ್ದ ಆಕೆ, ಹೊಸ ಪರೀಕ್ಷಾ ವೇಳಾಪಟ್ಟಿ ಪ್ರಕಟವಾದ ನಂತರ ಜೂನ್ 21 ರಂದು ಮತ್ತೆ ಪರೀಕ್ಷೆ ಬರೆದಿದ್ದಳು. ವಿದ್ಯಾರ್ಥಿನಿ ವೈದ್ಯೆಯಾಗಲು ಬಯಸಿದ್ದಳು ಮತ್ತು 300 ಕ್ಕೂ ಹೆಚ್ಚು ಅಂಕಗಳನ್ನು ಗಳಿಸುವ ಭರವಸೆ ಹೊಂದಿದ್ದಳು, ಆದರೆ ನೀಟ್ ಮರು ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಬೇಕಾಗಿದ್ದ 177 ಅಂಕಗಳಿಗೆ ಹೋಲಿಸಿದರೆ 166 ಅಂಕಗಳನ್ನು ಗಳಿಸಿದಳು. ಇದರಿಂದಾಗಿ ಅರ್ಹತೆ ಪಡೆಯಲು 11 ಅಂಕಗಳ ಕೊರತೆ ಉಂಟಾಗಿ ಆಕೆ ತೀವ್ರ ಆಘಾತಕ್ಕೊಳಗಾಗಿದ್ದಳು ಎಂದು ತಿಳಿದು ಬಂದಿದೆ.

ಜುಲೈ 25, ಶನಿವಾರ ಸಂಜೆ 4:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಳ್ಳಲು ತನ್ನ ತಂದೆ ಮತ್ತು ಸಹೋದರ ಆಷಾಢಿ ಏಕಾದಶಿ ಹಬ್ಬಕ್ಕೆ ಪಂಢರಪುರಕ್ಕೆ ಹೋಗಿದ್ದಾಗ, ಆಕೆಯ ತಾಯಿ ಮನೆಯಲ್ಲಿದ್ದರು. ವಿದ್ಯಾರ್ಥಿನಿ ತನ್ನ ಅಧ್ಯಯನ ಕೋಣೆಗೆ ಹೋಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ. ಬಹಳ ಸಮಯದವರೆಗೆ ಯಾವುದೇ ಚಲನೆ ಕೇಳಿಸದಿದ್ದಾಗ, ಆಕೆಯ ತಾಯಿ ಬಾಗಿಲು ತೆರೆದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ನಂತರ ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಲಾಯಿತು.

ತನಿಖೆಯ ಸಮಯದಲ್ಲಿ, ಪೊಲೀಸರಿಗೆ ಕೋಣೆಯಲ್ಲಿ ಒಂದು ಆತ್ಮಹತ್ಯೆ ಪತ್ರವೂ ಸಿಕ್ಕಿದೆ. ಅದರಲ್ಲಿ, ನೀಟ್ ಪರೀಕ್ಷೆಯಲ್ಲಿ ತಾನು ನಿರೀಕ್ಷಿಸಿದಷ್ಟು ಅಂಕಗಳನ್ನು ಗಳಿಸದ ಕಾರಣ ತಾನು ಖಿನ್ನತೆಗೆ ಒಳಗಾಗಿದ್ದೇನೆ ಮತ್ತು ವೈದ್ಯೆಯಾಗುವ ಕನಸು ನನಸಾಗಿಲ್ಲ ಎಂದು ಬರೆದಿದ್ದಾಳೆ. ತನ್ನ ಸಾವಿಗೆ ತನ್ನ ಪೋಷಕರು ಅಥವಾ ಸಹೋದರನನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಬರೆದಿದ್ದಾಳೆ.

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದವು ಈಗಾಗಲೇ ದೇಶವನ್ನೇ ಬೆಚ್ಚಿಬೀಳಿಸಿದೆ. ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಪರೀಕ್ಷೆಯ ಪಾರದರ್ಶಕತೆ, ಅದರ ಸುಧಾರಣೆಗಳು ಮತ್ತು ವಿದ್ಯಾರ್ಥಿಗಳ ಮೇಲೆ ಹೆಚ್ಚುತ್ತಿರುವ ಮಾನಸಿಕ ಒತ್ತಡದ ಬಗ್ಗೆ ದೀರ್ಘ ಚರ್ಚೆಗಳು ನಡೆಯುತ್ತಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed