NEET Passed Students: ‘ನಾವು ಯಾವುದೇ ಪಾರ್ಟಿಗೆ ಸೇರಿಲ್ಲ’! ಕೇಂದ್ರ ಸಚಿವರ ಮುಂದೆ ನೀಟ್ ಪಾಸ್ ಆದ ವಿದ್ಯಾರ್ಥಿಗಳ ಸ್ಪಷ್ಟನೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವಿದ್ಯಾರ್ಥಿಗಳ ಜೊತೆ ಕೇಂದ್ರ ಸಚಿವ


Last Updated:

NEET Passed Students: ಕೇಂದ್ರ ಸಚಿವರೂ ಆಗಿರುವ, ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಪಂಕಜ್ ಚೌಧರಿ, ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ತಮ್ಮ ಲಕ್ನೋ ನಿವಾಸದಲ್ಲಿ ಸ್ವಾಗತಿಸಿ ಅಭಿನಂದಿಸಿದರು. “ವಿದ್ಯಾರ್ಥಿಗಳು ದೇಶದ ದೊಡ್ಡ ಶಕ್ತಿ ಮತ್ತು ಅದರ ಭವಿಷ್ಯದ ಶಿಲ್ಪಿಗಳು” ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ವಿದ್ಯಾರ್ಥಿಗಳ ಜೊತೆ ಕೇಂದ್ರ ಸಚಿವ
ವಿದ್ಯಾರ್ಥಿಗಳ ಜೊತೆ ಕೇಂದ್ರ ಸಚಿವ

ಲಕ್ನೋ, ಉತ್ತರ ಪ್ರದೇಶ: ಈ ಬಾರಿ ನೀಟ್ ಪರೀಕ್ಷೆ ಉತ್ತೀರ್ಣರಾದ ವಿದ್ಯಾರ್ಥಿಗಳ (NEET Qualified Candidates) ಜೊತೆ ಕೇಂದ್ರ ಸಚಿವ (Union Minister) ಪಂಕಜ್ ಜೌಧರಿ (Pankaj Chaudhary) ಚರ್ಚೆ ನಡೆಸಿದರು. ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಪ್ರತಿಭಟನೆಯ ನಡುವೆಯೇ, ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥರೂ (Uttar Pradesh BJP chief) ಆಗಿರುವ ಕೇಂದ್ರ ಸಚಿವ ಪಂಕಜ್ ಚೌಧರಿ ಶುಕ್ರವಾರ ಲಕ್ನೋದಲ್ಲಿರುವ (Lucknow) ತಮ್ಮ ನಿವಾಸದಲ್ಲಿ ನೀಟ್ ಮರು ಪರೀಕ್ಷೆಯಲ್ಲಿ ಪಾಸ್ ಆಗಿ, ಅರ್ಹತೆ ಪಡೆದ ಅಭ್ಯರ್ಥಿಗಳನ್ನು ಭೇಟಿಯಾಗಿ ಚರ್ಚೆ ನಡೆಸಿದ್ರು.

ತಮ್ಮ ಮನೆಗೇ ಆಹ್ವಾನಿಸಿದ ಕೇಂದ್ರ ಸಚಿವ

ಕೇಂದ್ರ ಸಚಿವರೂ ಆಗಿರುವ, ಉತ್ತರ ಪ್ರದೇಶ ಬಿಜೆಪಿ ಮುಖ್ಯಸ್ಥ ಪಂಕಜ್ ಚೌಧರಿ, ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ತಮ್ಮ ಲಕ್ನೋ ನಿವಾಸದಲ್ಲಿ ಸ್ವಾಗತಿಸಿ ಅಭಿನಂದಿಸಿದರು. “ವಿದ್ಯಾರ್ಥಿಗಳು ದೇಶದ ದೊಡ್ಡ ಶಕ್ತಿ ಮತ್ತು ಅದರ ಭವಿಷ್ಯದ ಶಿಲ್ಪಿಗಳು” ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದ್ದಾರೆ.

ನೀಟ್ ಪಾಸ್ ಆದ ವಿದ್ಯಾರ್ಥಿಗಳ ಜೊತೆ ಚರ್ಚೆ

ನೀಟ್ ಪಾಸ್ ಆದ ವಿದ್ಯಾರ್ಥಿಗಳ ಜೊತೆ ಪಂಕಜ್ ಚೌಧರಿ ಚರ್ಚೆ ನಡೆಸಿದ್ರು. ಈ ವೇಳೆ ಈ ವಿದ್ಯಾರ್ಥಿಗಳು ತಾವು ಯಾವುದೇ ರಾಜಕೀಯ ಬಣಕ್ಕೆ ಸೇರಿದವರಲ್ಲ ಅಂತ ಸ್ಪಷ್ಟಪಡಿಸಿದ್ದಾರೆ. ನಮ್ಮ  ಏಕೈಕ ಉದ್ದೇಶ ತಮ್ಮ ಗುರಿಗಳನ್ನು ಸಾಧಿಸುವುದು ಮತ್ತು ರಾಷ್ಟ್ರದ ಅಭಿವೃದ್ಧಿಯಲ್ಲಿ ರಚನಾತ್ಮಕ ಪಾತ್ರ ವಹಿಸುವುದು ಎಂದು ಹೇಳಿದ್ದಾರೆ ಎಂದು ವರದಿಯಾಗಿದೆ.

ವಿಕಸಿತ ಭಾರತಕ್ಕೆ ವಿದ್ಯಾರ್ಥಿಗಳೇ ಸ್ಫೂರ್ತಿ

ಇನ್ನು ವಿದ್ಯಾರ್ಥಿ ಶಕ್ತಿ ಪ್ರಧಾನಿ ನರೇಂದ್ರ ಮೋದಿಯವರಿಗೆ ‘ವಿಕ್ಷಿತ ಭಾರತ’ ನಿರ್ಮಿಸಲು ಸ್ಫೂರ್ತಿ ನೀಡಿದೆ ಎಂದು ಒತ್ತಿ ಹೇಳಿದ ಪಂಕಜ್ ಚೌಧರಿ, ಯುವಕರು ಅಥವಾ ದೇಶದ ಭವಿಷ್ಯದ ಬಗ್ಗೆ ಯಾವುದೇ ರಾಜಕೀಯ ಇರಬಾರದು; ಬದಲಾಗಿ, ಸಕಾರಾತ್ಮಕ ವಿಧಾನದ ಮೂಲಕ ಪರಿಹಾರಗಳನ್ನು ಹುಡುಕಬೇಕು ಎಂದು ಸಲಹೆ ನೀಡಿದ್ರು.

ವಿದ್ಯಾರ್ಥಿಗಳ ಕಲ್ಯಾಣ ಪ್ರಮುಖ ಆದ್ಯತೆ

ವಿದ್ಯಾರ್ಥಿಗಳ ಕಲ್ಯಾಣ ಪ್ರಧಾನಿ ಮೋದಿಯವರ ಪ್ರಮುಖ ಆದ್ಯತೆಯಾಗಿದ್ದು, ಅವರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ ಎಂದು ಪಂಕಡ್ ಚೌಧರಿ ಹೇಳಿದರು. ಯುವಕರ ಭವಿಷ್ಯಕ್ಕೆ ಧಕ್ಕೆ ತರುವ ಯಾರನ್ನೂ ಬಿಡುವುದಿಲ್ಲ ಎಂಬ ಬದ್ಧತೆಯನ್ನು ಅವರು ದೃಢಪಡಿಸಿದರು.

ಹಿಂದಿನ ಸರ್ಕಾರದ ಅವಧಿಯಲ್ಲೂ ಸೋರಿಕೆ

ಪ್ರಶ್ನೆ ಪತ್ರಿಕೆ ಸೋರಿಕೆ ಒಂದು ಸಮಸ್ಯೆಯಾಗಿತ್ತು ಎಂದು ಒಪ್ಪಿಕೊಂಡ ಕೇಂದ್ರ ಸಚಿವರು, ಹಿಂದಿನ ಸರ್ಕಾರಗಳ ಅವಧಿಯಲ್ಲೂ ಡಜನ್‌ಗಟ್ಟಲೆ ಸೋರಿಕೆಗಳು ಸಂಭವಿಸಿವೆ ಎಂದು ಹೇಳಿದರು. ಪರೀಕ್ಷೆಗಳನ್ನು ಸೋರಿಕೆ ರಹಿತವಾಗಿಸಲು ಮೋದಿ ಸರ್ಕಾರ ಕಠಿಣ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಅವರು ಹೇಳಿದರು.

ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ರೆ ಕಠಿಣ ಕ್ರಮ

ನೀಟ್ ಸೋರಿಕೆಗೆ ಸಂಬಂಧಿಸಿದಂತೆ ಹಲವಾರು ಜನರನ್ನು ಬಂಧಿಸಲಾಗಿದೆ. ಕಳೆದ ತಿಂಗಳಲ್ಲಿ ಕಟ್ಟುನಿಟ್ಟಾಗಿ 3 ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಅವರು ಹೇಳಿದರು. ಪ್ರಕರಣಗಳ ತ್ವರಿತ ಇತ್ಯರ್ಥಕ್ಕಾಗಿ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸುವ ಮತ್ತು ಪ್ರಶ್ನೆಪತ್ರಿಕೆ ಸೋರಿಕೆಯಲ್ಲಿ ತಪ್ಪಿತಸ್ಥರೆಂದು ಕಂಡುಬಂದವರಿಗೆ ಕಠಿಣ ಶಿಕ್ಷೆ ವಿಧಿಸುವ ಪ್ರಧಾನಿ ಮೋದಿಯವರ ನಿರ್ಧಾರವನ್ನು ಉಲ್ಲೇಖಿಸಿದ್ದಾರೆ.

ಇದು ರಾಜಕೀಯ ಮಾಡೋ ಸಮಯವಲ್ಲ

ಇದು ರಾಜಕೀಯ ಮಾಡುವ ಸಮಯವಲ್ಲ ಮತ್ತು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸಬೇಕು ಎಂದು ಅವರು ಹೇಳಿದರು. ನೀಟ್‌ನಂತಹ ವಿಷಯಗಳನ್ನು ಸದನದಲ್ಲಿ ಚರ್ಚಿಸಬೇಕು ಮತ್ತು ಪರಿಹಾರಗಳನ್ನು ಕಂಡುಕೊಳ್ಳುವತ್ತ ಸಾಮೂಹಿಕ ಪ್ರಯತ್ನವನ್ನು ನಿರ್ದೇಶಿಸಬೇಕು ಎಂದು ಅವರು ಹೇಳಿದರು ಅಂತ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports