Last Updated:
ರಣಬೀರ್ ಕಪೂರ್ ಅಭಿನಯದ ಲವ್ ಆ್ಯಂಡ್ ವಾರ್ ಚಿತ್ರದ ಪೋಸ್ಟರ್ ರಿಲೀಸ್ ಆಗಿದೆ. ಆದರೆ, ಮೂರನೇ ದಿನ ಈ ಚಿತ್ರದ ಮತ್ತೊಬ್ಬ ನಾಯಕ ವಿಕ್ಕಿ ಕೌಶಲ್ ಪೋಸ್ಟರ್ ರಿಲೀಸ್ ಆಗಿದೆ. ಇಲ್ಲಿ ವಿಕ್ಕಿ ಹುಚ್ಚು ಪ್ರೇಮಿ ತರವೇ ಕಾಣಿಸುತ್ತಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.
ಮೊನ್ನೆಯಿಂದಲೇ ಈ ಲವ್ ಆ್ಯಂಡ್ ವಾರ್ ಚಿತ್ರದ (Love and War Movie) ಸುದ್ದಿ ಇದೆ. ಈ ಚಿತ್ರದ ಒಂದೊಂದೇ ಪೋಸ್ಟರ್ ಹೊರ ಬರ್ತಿವೆ. ಪ್ರತಿ ಪೋಸ್ಟರ್ ವಿಶೇಷವಾಗಿವೆ. ಡೈರೆಕ್ಟರ್ ಸಂಜಯ್ ಲೀನಾ ಬನ್ಸಾರಿ (Sanjay Leela Bhansali) ತಾವು ಬರೆದ ಪಾತ್ರಗಳ ಪೋಸ್ಟರ್ ಬ್ಯಾಕ್ ಟು ಬ್ಯಾಕ್ ರಿಲೀಸ್ ಮಾಡ್ತಿದ್ದಾರೆ. ರಣಬೀರ್ ಕಪೂರ್ ಲುಕ್ ಮೊದಲು ರಿಲೀಸ್ ಆಯಿತು. ಆಲಿಯಾ ಭಟ್ (Aliya Bhat) ಅವರ ಲುಕ್ ಏನು ಕಡಿಮೆ ಇಲ್ಲ. ಆದರೆ, ವಿಕ್ಕಿ ಕೌಶಲ್ (Vicky Kaushal) ಪಾತ್ರ ಹೇಗೆ ಇರುತ್ತದೆ ಅನ್ನುವ ಪ್ರಶ್ನೆ ಇತ್ತು. ಅದಕ್ಕೂ ಉತ್ತರ ಸಿಕ್ಕಿದೆ.
ಈ ಚಿತ್ರದಲ್ಲಿ ಯುದ್ಧ
(ಚಿತ್ರ ಕೃಪೆ: ವಿಕ್ಕಿ ಕೌಶಲ್ ಇನ್ಸ್ಟಾಗ್ರಾಮ್)
ಈ ಚಿತ್ರದಲ್ಲಿ ತ್ರಿಕೋನ ಪ್ರೇಮ ಕತೆ ಇದೆ. ಆಲಿಯಾ ಭಟ್ ಈ ಚಿತ್ರದಲ್ಲಿದ್ದಾರೆ. ರಣಬೀರ್ ಕಪೂರ್ ಚಿತ್ರದ ಇನ್ನೂ ಒಬ್ಬ ನಾಯಕರಾಗಿದ್ದಾರೆ. ಈ ತ್ರಿಕೋನ ಪ್ರೇಮ ಕತೆಯನ್ನ ಡೈರೆಕ್ಟರ್ ಸಂಜಯ್ ಲೀನಾ ಬನ್ಸಾಲಿ ಹೇಗೆಲ್ಲ ಹೇಳಿದ್ದಾರೆ ಅನ್ನುವ ಕುತೂಹಲ ಇದೆ.
ಲವ್ ಆ್ಯಂಡ್ ವಾರ್ ಚಿತ್ರದಲ್ಲಿ ಲವ್ ಅಷ್ಟೆ ಅಲ್ಲ, ವಾರ್ ಕೂಡ ಇದೆ. ಈಗಾಗಲೇ ಚಿತ್ರದ ಪ್ರಮುಖ ದೃಶ್ಯಗಳ ಚಿತ್ರೀಕರಣ ಆಗಿದೆ.
ವಿಕ್ಕಿ ಕೌಶಲ್ ಈ ಚಿತ್ರದಲ್ಲಿ ಹುಚ್ಚು ಪ್ರೇಮಿ ಅನಿಸುತ್ತಾರೆ. ಈ ಒಂದು ವಿಷಯವನ್ನ ಚಿತ್ರದ ಈಗೀನ ಪೋಸ್ಟರ್ಗಳೇ ಹೇಳುತ್ತವೆ.
ಮುಂದಿನ ವರ್ಷ….
(ಚಿತ್ರ ಕೃಪೆ: ವಿಕ್ಕಿ ಕೌಶಲ್ ಇನ್ಸ್ಟಾಗ್ರಾಮ್)
ಎರಡು ಪೋಸ್ಟರ್ಗಳಲ್ಲಿ ಎರಡು ರೀತಿನೇ ವಿಕ್ಕಿ ಕೌಶಲ್ ಕಾಣಿಸುತ್ತಾರೆ. ಒಂದು ಪೋಸ್ಟರ್ ಅಲ್ಲಿ ಕೈಯಲ್ಲಿ ಹೂವಿನ ಗುಚ್ಚ ಇದೆ. ಇನ್ನೂ ಒಂದು ಪೋಸ್ಟರ್ ಅಲ್ಲಿ ಸಿಗರೇಟ್ ಹಚ್ಚಿರೋ ದೃಶ್ಯ ಇದೆ. ಎರಡರಲ್ಲೂ ವಿಕ್ಕಿ ಕೌಶಲ್ ಫೀಲಿಂಗ್ ಬೇರೆ ಇದೆ.
ಈ ಚಿತ್ರ ಮುಂದಿನ ವರ್ಷ ರಿಲೀಸ್ ಆಗುತ್ತಿದೆ. ಜನವರಿ-21,2027 ರಂದು ಇದು ತೆರೆ ಕಾಣುತ್ತಿದೆ. ಸಂಜಯ್ ಲೀಲಾ ಬನ್ಸಾಲಿ ತಮ್ಮ ಈ ಚಿತ್ರ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.
ರಣಬೀರ್ ಕಪೂರ್ ಪೋಸ್ಟರ್ ಗಮನ ಸೆಳೆದಿದೆ. ಕೈಗೆ ರಕ್ತ ಮೆತ್ತಿದೆ. ಆದರೆ, ಸ್ಟೈಲ್ ಏನೂ ಚೇಂಜ್ ಆಗಿಲ್ಲ. ನೀಲಿ ಬಣ್ಣದ ವಿಂಟೇಜ್ ಕಾರ್ ಚಲಾಯಿಸಿಕೊಂಡು ರಣಬೀರ್ ಕಪೂರ್ ಸಾಗ್ತಾನೇ ಇದ್ದಾರೆ.
ಚಿತ್ರ ತಂಡದಿಂದ ಸೆಪ್ಟೆಂಬರ್-24 ರಂದು ಹೊರ ಬಂದ ಮೊದಲ ಪೋಸ್ಟರ್ ಇದಾಗಿದೆ. ಮರು ದಿನ ಸೆಪ್ಟೆಂಬರ್-25 ರಂದು ಆಲಿಯಾ ಭಟ್ ಪೋಸ್ಟರ್ ಬಂದಿದೆ.
ಸೆಪ್ಟೆಂಬರ್-26 ರಂದು ಮೂರನೇ ಪೋಸ್ಟರ್ ರಿಲೀಸ್ ಆಗಿದೆ. ಈ ಪೊಸ್ಟರ್ ಅಲ್ಲಿ ವಿಕ್ಕಿ ಕೌಶಲ್ ಲುಕ್ ರಿವೀಲ್ ಆಗಿದೆ ಅಂತ ಹೇಳಬಹುದು.














