Last Updated:
72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಮಂಗಳೂರಿನ ಆತೀಶ್ ಎಸ್. ಶೆಟ್ಟಿ ‘ಮಿಥ್ಯ’ ಚಿತ್ರಕ್ಕೆ ಅತ್ಯುತ್ತಮ ಬಾಲನಟ ಪ್ರಶಸ್ತಿ ಪಡೆದಿದ್ದಾರೆ. ‘ಕೇಕ್’ ಚಿತ್ರಕ್ಕೆ ರಾಜ್ಯ ಪ್ರಶಸ್ತಿಯೂ ಲಭಿಸಿದೆ.
ಮಂಗಳೂರು: ಸಿನಿಮಾ (Film) ಲೋಕದಲ್ಲಿ ಮತ್ತೊಂದು ಕರಾವಳಿ (Coastal) ತಾರೆ ಮಿಂಚುತ್ತಿದೆ. ನಿನ್ನೆ ಘೋಷಣೆಯಾದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ (Award) ಕರಾವಳಿಯ ಬಾಲಪ್ರತಿಭೆ (Child Prodigy) ಆತೀಶ್ ಎಸ್. ಶೆಟ್ಟಿ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ಬಾಚಿಕೊಳ್ಳುವ ಮೂಲಕ ಇಡೀ ರಾಜ್ಯವೇ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಮಂಗಳೂರಿನ ಬಿಕರ್ನಕಟ್ಟೆಯ ನಿವಾಸಿ, ಎಂಆರ್ ಪಿಎಲ್ ಉದ್ಯೋಗಿ ಸತೀಶ್ ಶೆಟ್ಟಿ ಮತ್ತು ಉಪನ್ಯಾಸಕಿ ಭಾರತಿ ಶೆಟ್ಟಿಯವರ ಪುತ್ರನಾದ ಆತೀಶ್, ಸದ್ಯ ಸಂತ ಅಲೋಶಿಯಸ್ ಕಾಲೇಜಿನ ವಿದ್ಯಾರ್ಥಿ. ನಟನೆಯಲ್ಲಿ ಹುಟ್ಟಿನಿಂದಲೇ ಪ್ರತಿಭೆ ಹೊಂದಿರುವ ಇವರು, ಯುಕೆಜಿಯಿಂದಲೇ ಕ್ಯಾಮೆರಾ ಎದುರು ನಿಂತವರು.
‘ಮಜಾ ಭಾರತ್’ ರಿಯಾಲಿಟಿ ಶೋ ಮೂಲಕ ಮನೆಮಾತಾದ ಆತೀಶ್, ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’, ‘ವಿಕ್ರಾಂತ್ ರೋಣ’, ‘ಕಾಂತಾರ’ ಸೇರಿದಂತೆ ಸುಮಾರು 20ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಚ್ಚರಿಯ ಸಂಗತಿಯೆಂದರೆ, ಆತೀಶ್ ಅವರ ಸಹೋದರ ಅವೀಶ್ ಶೆಟ್ಟಿ ಕೂಡ ಇದೇ ‘ಮಿಥ್ಯ’ ಸಿನಿಮಾದಲ್ಲಿ ಬಾಲಕಿಯ ಪಾತ್ರದಲ್ಲಿ ಮಿಂಚಿದ್ದಾರೆ.
ಸಾಮಾನ್ಯವಾಗಿ ನಟರು ಪ್ರಶಸ್ತಿ ಪಡೆಯಲು ವರ್ಷಗಳ ಕಾಲ ಕಾಯಬೇಕು, ಆದರೆ ಆತೀಶ್ ಶೆಟ್ಟಿ ಒಂದೇ ವರ್ಷದಲ್ಲಿ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಎರಡನ್ನೂ ಗೆದ್ದು ಇತಿಹಾಸ ಸೃಷ್ಟಿಸಿದ್ದಾರೆ. ‘ಕೇಕ್’ ಸಿನಿಮಾದ ನಟನೆಗೆ ಈ ಬಾರಿಯ ರಾಜ್ಯ ಪ್ರಶಸ್ತಿಯೂ ಇವರಿಗೆ ಲಭಿಸಿದೆ.
Dakshina Kannada,Karnataka














