Narendra Modi: ನೆಲ್ಲಿಕಾಯಿ ಬಗ್ಗೆ ಮೋದಿ ಮಾತು! ಮಹಿಳೆಯರ ಆದಾಯ ಹೆಚ್ಚಿಸಿದ ಕೃಷಿ ಬಗ್ಗೆ ಪ್ರಧಾನಿ ಮೆಚ್ಚುಗೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ನೆಲ್ಲಿಕಾಯಿ ಬಗ್ಗೆ ಮೋದಿ ಮಾತು


Last Updated:

Narendra Modi: ಮನ್ ಕಿ ಬಾತ್ 138ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿಯವರು ನೆಲ್ಲಿಕಾಯಿ ಬಗ್ಗೆ, ಅದರ ಗುಣ ವಿಶೇಷತೆ, ಆರೋಗ್ಯ ಲಾಭದ ಬಗ್ಗೆ ಮಾತನಾಡಿದ್ದಾರೆ. ಇಂಡಿಯನ್ ಗೂಸ್‌ಬೆರಿ ಅಥವಾ ಆಮ್ಲಾ ಬಗ್ಗೆ ಮುಕ್ತಕಂಠದಿಂದ ಹೊಗಳಿದ್ದಾರೆ.

ನೆಲ್ಲಿಕಾಯಿ ಬಗ್ಗೆ ಮೋದಿ ಮಾತು
ನೆಲ್ಲಿಕಾಯಿ ಬಗ್ಗೆ ಮೋದಿ ಮಾತು

ದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ಜನಪ್ರಿಯ ರೆಡಿಯೋ ಕಾರ್ಯಕ್ರಮ ಮನ್ ಕಿ ಬಾತ್ (Mann Ki Baat) ನೂತನ ಸಂಚಿರೆ ಇಂದು ಪ್ರಸಾರವಾಗಿದೆ. ಮನ್ ಕಿ ಬಾತ್ 138ನೇ ಸಂಚಿಕೆಯಲ್ಲಿ ನರೇಂದ್ರ ಮೋದಿ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. ಇದೇ ಸಂಚಿಕೆಯಲ್ಲಿ ಅವರು ನೆಲ್ಲಿಕಾಯಿ ಬಗ್ಗೆ, ಅದರ ಗುಣ ವಿಶೇಷತೆ, ಆರೋಗ್ಯ ಲಾಭದ ಬಗ್ಗೆ ಮಾತನಾಡಿದ್ದಾರೆ. ಇಂಡಿಯನ್ ಗೂಸ್‌ಬೆರಿ (Indian gooseberry) ಅಥವಾ ಆಮ್ಲಾ (Amla) ಬಗ್ಗೆ ಮುಕ್ತಕಂಠದಿಂದ ಹೊಗಳಿದ್ದಾರೆ.

ನೆಲ್ಲಿಕಾಯಿ ಬಗ್ಗೆ ಮೋದಿ ಮನದ ಮಾತು

ನೆಲ್ಲಿಕಾಯಿ ನಮಗೆಲ್ಲರಿಗೂ ಚಿರಪರಿಚಿತ. ಮನೆಗಳಲ್ಲಿ ಉಪ್ಪಿನಕಾಯಿ, ಮುರಬ್ಬಾ ಮಾಡುತ್ತಾರೆ. ಅನೇಕರು ನೆಲ್ಲಿಕಾಯಿ ಜ್ಯೂಸ್ ಕುಡಿಯುತ್ತಾರೆ. ಚಳಿಗಾಲದಲ್ಲಿ ಚ್ಯವನಪ್ರಾಶ್‌ನಲ್ಲಿ ಇದು ಮುಖ್ಯ ಘಟಕ ಅಂತ ಮೋದಿ ಹೇಳಿದ್ದರೆ. ನಮ್ಮ ಹಿರಿಯರು ತಲೆಮಾರುಗಳಿಂದಲೂ ನೆಲ್ಲಿಕಾಯಿಯ ಗುಣಗಳ ಬಗ್ಗೆ ಹೇಳುತ್ತಾ ಬಂದಿದ್ದಾರೆ ಅಂತ ಮನ್ ಕಿ ಬಾತ್‌ನಲ್ಲಿ ವಿವರಿಸಿದ್ದಾರೆ.

ನೆಲ್ಲಿಕಾಯಿಯಿಂದ ಹೊಸ ಉದ್ಯೋಗಾವಕಾಶ

ಈ ನೆಲ್ಲಿಕಾಯಿ ಈಗ ಉತ್ತರ ಪ್ರದೇಶದ ಪ್ರತಾಪಗಢ ಜಿಲ್ಲೆಯಲ್ಲಿ ಹೊಸ ಅವಕಾಶಗಳನ್ನು ತೆರೆದಿದೆ. ಅಲ್ಲಿ ರೈತರು ತಲೆಮಾರುಗಳಿಂದಲೂ ನೆಲ್ಲಿಕಾಯಿ ಬೆಳೆಯುತ್ತಿದ್ದಾರೆ. ಇದು ಪ್ರತಾಪಗಢಕ್ಕೆ ಬಲವಾದ ಗುರುತನ್ನು ನೀಡಿದೆ ಅಂತ ಮೋದಿ ಹೇಳಿದ್ದಾರೆ. ಒಂದು ಜಿಲ್ಲೆ ಒಂದು ಉತ್ಪನ್ನ (ODOP) ಯೋಜನೆಯಿಂದ ನೆಲ್ಲಿಕಾಯಿ ಸಂಸ್ಕರಣೆಯಲ್ಲಿ ತೊಡಗಿರುವ ಸ್ಥಳೀಯ ಉದ್ಯಮಿಗಳಿಗೆ ಪ್ರೋತ್ಸಾಹ ಸಿಕ್ಕಿದೆ ಅಂತ ಪ್ರಸ್ತಾಪಿಸಿದ್ದಾರೆ.

ಇದನ್ನೂ ಓದಿ: Narendra Modi’s Assets: ನರೇಂದ್ರ ಮೋದಿ ಬಳಿ ಕಾರ್ ಇಲ್ಲ, ಭೂಮಿಯೂ ಇಲ್ಲ! ಪ್ರಧಾನಿ ಆಸ್ತಿ ಎಷ್ಟು ಗೊತ್ತಾ?

ಪ್ರತಾಪಗಢದಲ್ಲಿ ಸುಮಾರು 100 ನೆಲ್ಲಿಕಾಯಿ ಸಂಸ್ಕರಣಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ. ಸ್ವಸಹಾಯ ಗುಂಪುಗಳ ಮಹಿಳೆಯರು ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ದೇವಗಢ ಕಮಾಸಿ ಗ್ರಾಮದ ಸಾವಿತ್ರಿ ಫುಲೆ ಸ್ವಸಹಾಯ ಗುಂಪು ಸೇರಿದಂತೆ ಹಲವು ಸಂಘಟನೆಗಳಿವೆ. ಅಲ್ಲಿನ ಮಹಿಳೆಯರು ನೆಲ್ಲಿಕಾಯಿ ಕ್ಯಾಂಡಿ, ಮುರಬ್ಬಾ ಮತ್ತು ಜ್ಯೂಸ್ ತಯಾರಿಸುತ್ತಿದ್ದಾರೆ. ODOP ಮೂಲಕ ಹೊಸ ಮಾರುಕಟ್ಟೆಗಳು ಸಿಕ್ಕಿದ್ದರಿಂದ ಅವರ ಆದಾಯ ಹೆಚ್ಚಾಗಿದೆ ಎಂದಿದ್ದಾರೆ.

ನೆಲ್ಲಿಕಾಯಿಯಿಂದ ಆದಾಯ ಏರಿಕೆ

ವಿಂಧ್ಯವಾಸಿನಿ ಸ್ವಸಹಾಯ ಗುಂಪು: ನೆಲ್ಲಿಕಾಯಿ ಉಪ್ಪಿನಕಾಯಿ ಮತ್ತು ಜೀರ್ಣಕಾರಿ ಪುಡಿ ತಯಾರಿಸುತ್ತಿದ್ದಾರೆ. ಇವರಿಗೆ ಸಂಸ್ಕರಣಾ ಯಂತ್ರಗಳು, ಸಾಲ ಸೌಲಭ್ಯ ಮತ್ತು ಸ್ಥಳೀಯ ಮೇಳಗಳಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದೆ. ಇದರಿಂದ ಅವರ ಆದಾಯ ಗಣನೀಯವಾಗಿ ಹೆಚ್ಚಾಗಿದೆ ಅಂತ ಮೋದಿ ಪ್ರಶಂಸಿಸಿದ್ದಾರೆ.

ವೋಕಲ್ ಫಾರ್ ಲೋಕಲ್‌ಗೆ ಬೆಂಬಲ

ದೇಶದ ಪ್ರತಿಯೊಂದು ಪ್ರದೇಶಕ್ಕೂ ತನ್ನದೇ ಆದ ವಿಶೇಷತೆ ಇದೆ — ಒಂದು ಹಣ್ಣು, ಸಾಂಪ್ರದಾಯಿಕ ಕಲೆ ಅಥವಾ ಕೌಶಲ್ಯ. ODOP ಯೋಜನೆ ಈ ವಿಶೇಷತೆಗಳನ್ನು ಸ್ಥಳೀಯ ಮಾರುಕಟ್ಟೆಯಿಂದ ದೇಶದ ಇತರೆಡೆ ಮತ್ತು ವಿಶ್ವ ಮಾರುಕಟ್ಟೆಗೆ ತಲುಪಿಸುವುದನ್ನು ಗುರಿಯಾಗಿಟ್ಟುಕೊಂಡಿದೆ. ಇದು ವೋಕಲ್ ಫಾರ್ ಲೋಕಲ್ (Vocal for Local) ಮತ್ತು ಆತ್ಮನಿರ್ಭರ ಭಾರತಕ್ಕೆ ಬೆಂಬಲ ನೀಡುತ್ತದೆ. ಹಬ್ಬಗಳ ಸಮಯದಲ್ಲೂ ಸ್ಥಳೀಯ ಉತ್ಪನ್ನಗಳನ್ನು ಬಳಸುವುದನ್ನು ಮರೆಯಬಾರದು.

ರೀಲ್ಸ್ ಹಂಚಿಕೊಂಡ ಪ್ರಧಾನಿ ಮೋದಿ

ಇದೇ ಭಾಗವನ್ನು ಇನ್‌ಸ್ಟಾಗ್ರಾಮ್ ರೀಲ್ ಆಗಿ ಹಂಚಿಕೊಂಡಿರುವ ಮೋದಿ, ನೆಲ್ಲಿಕಾಯಿ ಕೇವಲ ಆರೋಗ್ಯಕ್ಕೆ ಮಾತ್ರವಲ್ಲ, ರೈತರು ಮತ್ತು ಮಹಿಳೆಯರ ಆರ್ಥಿಕ ಸಬಲೀಕರಣಕ್ಕೂ ಕಾರಣವಾಗುತ್ತಿದೆ ಅಂತ ಅಭಿಪ್ರಾಯಪಟ್ಟಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed