Eesa Butt: 20 ಸಿಕ್ಸರ್, 30 ಬೌಂಡರಿ, 279 ರನ್! 13ನೇ ವಯಸ್ಸಿನಲ್ಲಿ ಸಂಚಲನ ಸೃಷ್ಟಿಸಿದ ಕ್ರಿಕೆಟಿಗನ ಪುತ್ರ! | ಕ್ರೀಡಾ ಸುದ್ದಿ | ACTPnews

ಇಸಾ ಬಟ್


Last Updated:

13 ವರ್ಷದ ಇಸಾ ಬಟ್ ಅಂಡರ್-14 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಧೂಳೆಬ್ಬಿಸಿದ್ದಾರೆ.

ಇಸಾ ಬಟ್
ಇಸಾ ಬಟ್

ವೈಭವ್​ ಸೂರ್ಯವಂಶಿ (Vaibhav Suryavanshi), ಜಸ್ಟ್​ 15 ವರ್ಷದಲ್ಲೇ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ (Batting)​ ಮೂಲಕ ಮೈದಾನದಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಅತಿ ಚಿಕ್ಕ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್​ಗೆ (International Cricket) ಪದಾರ್ಪಣೆ ಮಾಡಿ ದಾಖಲೆ ಬರೆದಿದ್ದಾರೆ. ಇದೀಗ ಮತ್ತೊಬ್ಬ ಕ್ರಿಕೆಟಿಗ ಪುತ್ರನೊಬ್ಬ ತನ್ನ 13ನೇ ವಯಸ್ಸಿನಲ್ಲಿ ಭರ್ಜರಿ ಬ್ಯಾಟಿಂಗ್ ಮೂಲಕ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದ್ದಾರೆ.

ಜಿಂಬಾಬ್ವೆ ಕ್ರಿಕೆಟ್ ತಂಡದ ನಾಯಕ ಸಿಕಂದರ್ ರಜಾ ಅವರ ಮಗ ಇಸಾ ಬಟ್, ಕೇವಲ 13ನೇ ವಯಸ್ಸಿನಲ್ಲಿ 20 ಭರ್ಜರಿ ಸಿಕ್ಸರ್‌ಗಳೊಂದಿಗೆ 279 ರನ್‌ಗಳ ಅಸಾಧಾರಣ ಇನ್ನಿಂಗ್ಸ್ ಆಡಿ ಕ್ರಿಕೆಟ್​​ ಜಗತ್ತಿನಲ್ಲಿ ಸಂಚಲನ ಸೃಷ್ಟಿಸಿದ್ದಾರೆ.

20 ಸಿಕ್ಸರ್‌, 30 ಬೌಂಡರಿಗಳು, 279 ರನ್‌ಗಳು!

13 ವರ್ಷದ ಇಸಾ ಬಟ್ ಅಂಡರ್-14 ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಧೂಳೆಬ್ಬಿಸಿದ್ದಾರೆ. ಪಂದ್ಯದ ವೇಳೆ ಹೆಲೆನಿಕ್ ಅಕಾಡೆಮಿ (Hellenic Academy) ಪರವಾಗಿ ಆಡಿದ ಇಸಾ ಬಟ್, ಸಿಬಿಸಿ ವಿರುದ್ಧ ಕೇವಲ 146 ಎಸೆತಗಳಲ್ಲಿ 279 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದಾರೆ. 191.10 ರ ಸ್ಟ್ರೈಕ್ ರೇಟ್‌ನಲ್ಲಿ ಆಡಿದ ಇವರ ಇನ್ನಿಂಗ್ಸ್‌ನಲ್ಲಿ 20 ಸಿಕ್ಸರ್‌ಗಳು ಮತ್ತು 30 ಬೌಂಡರಿಗಳು ಸೇರಿದ್ದವು.

ತಂದೆಯಂತೆ ಇಸಾ ಬಟ್ ಕೂಡ ತಂಡದ ನಾಯಕ

ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಿಕಂದರ್ ರಜಾ ಜಿಂಬಾಬ್ವೆ ತಂಡವನ್ನು ಮುನ್ನಡೆಸುವ ರೀತಿಯಲ್ಲೇ, ಇಸಾ ಬಟ್ ಕೂಡ ಹೆಲೆನಿಕ್ ಅಕಾಡೆಮಿ ತಂಡದ ಕ್ಯಾಪ್ಟನ್​ ಆಗಿದ್ದಾರೆ. ನಾಯಕತ್ವದ ಜೊತೆಗೆ ಇಸಾ ವಿಕೆಟ್ ಕೀಪರ್ ಕೂಡ ಹೌದು. ಅಂದರೆ ತಮ್ಮ ಆಲ್-ರೌಂಡರ್ ತಂದೆಯಂತೆ ಇವರೂ ಕೂಡ ಬಹುಮುಖ ಕೌಶಲ್ಯದ ಆಟಗಾರರಾಗಿದ್ದಾರೆ.
ತಂದೆಯೊಂದಿಗೆ ಒಂದು ಪಂದ್ಯ ಆಡುವ ಆಸೆ

ಇಸಾ ಬಟ್ ತಮ್ಮ ತಂದೆ ಸಿಕಂದರ್ ರಜಾ ಅವರನ್ನು ತಮ್ಮ ಆದರ್ಶ ಎಂದು ಪರಿಗಣಿಸುತ್ತಾರೆ. ಇದರೊಂದಿಗೆ ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಮತ್ತು ಬಾಬರ್ ಅಜಮ್ ಅವರ ನೆಚ್ಚಿನ ಕ್ರಿಕೆಟಿಗರಾಗಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ಇಸಾ ಬಟ್, ತಂದೆಯೊಂದಿಗೆ ಒಂದೇ ಪಂದ್ಯದಲ್ಲಿ ಆಡಬೇಕೆಂಬ ತಮ್ಮ ಕನಸನ್ನು ಹಂಚಿಕೊಂಡಿದ್ದರು.

ಇಸಾ ಬಟ್ ಅವರ ಪ್ರಕಾರ, ಅವರ ತಂದೆಯ ವಯಸ್ಸು ಹೆಚ್ಚಾಗುತ್ತಿದ್ದು, ಅವರು ನಿವೃತ್ತಿಯ ಅಂಚಿನಲ್ಲಿದ್ದಾರೆ. ತಮಗೆ 18 ವರ್ಷ ತುಂಬುವವರೆಗೆ ತಮ್ಮ ತಂದೆ ಕನಿಷ್ಠ ಯಾವುದಾದರೂ ಒಂದು ಮಾದರಿಯ ಕ್ರಿಕೆಟ್‌ನಲ್ಲಾದರೂ ಮುಂದುವರಿಯುತ್ತಾರೆ ಎಂದು ಅವರು ಆಶಿಸುತ್ತೇನೆ. ತಂದೆಯೊಂದಿಗೆ ಒಂದು ಪಂದ್ಯ ಆಡಬೇಕು, ಆ ನಂತರ ಅವರು ಬೇಕಾದರೂ ನಿವೃತ್ತರಾಗಬಹುದು ಎಂದು ಇಸಾ ಬಟ್ ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed