Last Updated:
ನಮ್ರತಾ ಗೌಡ ಮದುವೆ ಮಾತು ಕತೆ ನಡೀತಾ ಇದಿಯೇ? ಮದುವೆ ಬಗ್ಗೆ ನಮ್ರತಾ ಯುನಿಕ್ ಕನಸುಗಳನ್ನು ಕಂಡಿರೋದು ಯಾಕೆ? ಈ ವಿಷಯ ಇಲ್ಲಿದೆ ಓದಿ.
ಬಿಗ್ ಬಾಸ್ (Bigg Boss) ಖ್ಯಾತಿಯ ನಟಿ ನಮ್ರತಾ ಗೌಡ (Namratha Gowda) ಮದುವೆ ಬಗ್ಗೆ ಹೇಳಿಕೊಂಡಿದ್ದಾರೆ. ಮದುವೆಗೆ ಎಂತಹ ಸೀರೆ ತೆಗೆದುಕೊಳ್ಳಬೇಕು? ತಮ್ಮ ಮದುವೆ (Marriage) ಹೇಗೆ ಇರಬೇಕು? ಅದೆಷ್ಟು ಟ್ರೆಂಡಿ ಆಗಿರಬೇಕು? ಈ ಎಲ್ಲ ಇಂಟ್ರಸ್ಟಿಂಗ್ (Interesting) ವಿಷಯ ಹೇಳಿಕೊಂಡಿದ್ದಾರೆ. ಆದರೆ, ಇನ್ನು ಏನೆಲ್ಲ ಹೇಳಿಕೊಂಡಿದ್ದಾರೆ ಅನ್ನೊದು ಇಲ್ಲಿದೆ ಓದಿ.
ಟಾಪಿಕ್ ಚೇಂಜ್
(ಚಿತ್ರ ಕೃಪೆ: ನಮ್ರತಾ ಗೌಡ ಇನ್ಸ್ಟಾಗ್ರಾಮ್)
ಮದುವೆ ಯಾವಾಗ ಅಂದಗಾಲೂ ಮುಜುಗುರ ಆಗುತ್ತದೆ. ಆದರೆ, ಮದುವೆ ಅಂದ್ರೆ ಇಷ್ಟ ಆಗುತ್ತದೆ. ನನ್ನ ಮದುವೆಗೆ ಟ್ರೆಂಡ್ ಆಗುವ ಸೀರಿಯನ್ನ ತೆಗೆದುಕೊಳ್ಳುತ್ತೇನೆ ಅಂತಲೂ ನಮ್ರತಾ ಗೌಡ ಹೇಳಿಕೊಂಡಿದ್ದಾರೆ.
ನನ್ನ ಮದುವೆಯ ಸೀರೆಯಷ್ಟೆ ಅಲ್ಲ, ನನ್ನ ಹುಡುಗನ ಡ್ರೆಸ್ ಕೂಡ ಟ್ರೆಂಡ್ ಆಗಬೇಕು. ಆ ರೀತಿನೇ ಪ್ಲಾನ್ ಮಾಡ್ಬೇಕು ಅಂದುಕೊಳ್ಳುತ್ತಿದ್ದೇನೆ ಅಂತಲೂ ನಮ್ರತಾ ಗೌಡ ಹೇಳಿಕೊಂಡಿದ್ದಾರೆ.
ಆದರೆ, ಪಕ್ಕದಲ್ಲಿ ಇದ್ದವರು ಒಂದು ಪ್ರಶ್ನೆ ಕೇಳ್ತಾರೆ. ಹಾಗಾದರೆ, ಆದಷ್ಟು ಬೇಗ ಮದುವೆ ಹಾಗಾದ್ರೆ ಅಂತಲೇ ಹೇಳ್ತಾರೆ. ಇದಕ್ಕೆ ನಮ್ರತಾ ಏನ್ ಹೇಳ್ತಾರೆ ಗೊತ್ತಾ? ಮುಂದೆ ಇದೆ ಓದಿ.
ಸೀರೆ ಸುಗ್ಗಿಯಲ್ಲಿ ನಮ್ರತಾ ಅವರ ಪಕ್ಕದಲ್ಲಿಯೇ ಇದ್ದವರು ಆದಷ್ಟು ಬೇಗ ನಿಮ್ಮ ಮದುವೆ ಹಾಗಾದ್ರೆ ಅಂತ ಕೇಳಿದ್ದಕ್ಕೆ, ಮತ್ತೆ ಏನು? ಸೀರೆ ಬೆಲೆ ಎಷ್ಟು ಹೀಗೆ ಹೇಳಿ ನಮ್ರತಾ ಟಾಪಿಕ್ ಅನ್ನೆ ಚೇಂಜ್ ಮಾಡುತ್ತಾರೆ.
ಹುಡುಗರಿಗೂ ಸಂಕೋಚ…
(ಚಿತ್ರ ಕೃಪೆ: ನಮ್ರತಾ ಗೌಡ ಇನ್ಸ್ಟಾಗ್ರಾಮ್)
ನಮ್ರತಾ ಹೀಗೆ ಮಾತನಾಡಿರೋ ವಿಡಿಯೋ ವೈರಲ್ ಆಗಿದೆ. ಟಿವಿ-19 ಕನ್ನಡ ಚಾನೆಲ್ ಈ ಒಂದು ವಿಡಿಯೋ ಎಲ್ಲರ ಗಮನ ಸೆಳೆಯತ್ತಿದೆ. ಈ ಒಂದು ವಿಡಿಯೋದ ವಿಷಯ ಗಮನಿಸಿದ್ರೆ, ನಮ್ರತಾ ಆದಷ್ಟು ಬೇಗ ಮದುವೆ ಆಗ್ತಾರೆ ಅನಿಸುತ್ತದೆ. ಮದುವೆ ತಯಾರಿನೂ ಜೋರಾಗಿಯೇ ಇರುತ್ತದೆ ಅನ್ನುವುದು ತಿಳಿಯುತ್ತದೆ.
ಆದರೆ, ನಮ್ರತಾ ಗೌಡ ಎಲ್ಲೂ ನಾನು ಇವರನ್ನೆ ಮದುವೆ ಆಗುತ್ತೇನೆ. ಇವರೇ ನನ್ನ ಲೈಫ್ ಪಾರ್ಟ್ನರ್ ಅಂತ ಯಾರ ಹೆಸರು ತೆಗೆದುಕೊಂಡಿಲ್ಲ.
ಮದುವೆ ಬಗ್ಗೆ ಯಾರಾದರು ಕೇಳಿದ್ರೆ ಸಂಕೋಚ ಆಗುತ್ತದೆ. ಮುಜುಗರ ಕೂಡ ಆಗುತ್ತದೆ. ಆದರೆ, ಈ ಒಂದು ಫೀಲಿಂಗ್ ಹೆಣ್ಣು ಮಕ್ಕಳಿಗಷ್ಟೆ ಅಲ್ಲ, ಗಂಡು ಮಕ್ಕಳಿಗೂ ಆಗುತ್ತದೆ. ಅವರಿಗೂ ಅದೇ ರೀತಿಯ ಅನುಭವ ಆಗುತ್ತದೆ ಅಲ್ವಾ ಅಂತಲೂ ನಮ್ರತಾ ಪ್ರಶ್ನೆ ಮಾಡಿದ್ದಾರೆ.
ಹೀಗೆ ಪ್ರಶ್ನೆ ಮಾಡಿರೋ ಈ ಒಂದು ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ರೂಪದಲ್ಲಿಯೇ ಹರಿದಾಡುತ್ತಿದೆ ಅಂತಲೂ ಹೇಳಬಹುದು.
Bangalore [Bangalore],Bangalore,Karnataka













