Nagamandala Movie: ನಾಗಮಂಡಲದ ಆ ಮನೆ ನೀರಿನಲ್ಲಿ ಮುಳುಗಿಯೇ ಹೋಯಿತು; ವಿಜಯಲಕ್ಷ್ಮಿ ಹೇಳಿದ ಆ ಕತೆ! | | ACTPnews

ನಾಗಮಂಡಲದ ಆ ಮನೆ ನೀರಿನಲ್ಲಿ ಮುಳುಗಿಯೇ ಹೋಯಿತು; ವಿಜಯಲಕ್ಷ್ಮಿ ಹೇಳಿದ ಆ ಕತೆ!


Last Updated:

ನಾಗಮಂಡಲದ ಆ ಮನೆಯ ಈಗ ಮುಳುಗಿ ಹೋಗಿದೆ. ಕೃಷ್ಣ ನದಿ ಡ್ಯಾಮ್ ಓಪನ್ ಮಾಡಿದಾಗಲೇ ಈ ಮನೆ ಮುಳುಗಿ ಹೋಗಿದೆ. ಈ ಮನೆ ಮುಳುಗುವ ಮುನ್ನ ವಿಜಯಲಕ್ಷ್ಮಿ ಆ್ಯಂಡ್ ಟೀಮ್ ಏನ್ ಮಾಡಿದರು ಅನ್ನೋದು ಇಲ್ಲಿದೆ ಓದಿ.

ನಾಗಮಂಡಲದ ಆ ಮನೆ ನೀರಿನಲ್ಲಿ ಮುಳುಗಿಯೇ ಹೋಯಿತು; ವಿಜಯಲಕ್ಷ್ಮಿ ಹೇಳಿದ ಆ ಕತೆ!
ನಾಗಮಂಡಲದ ಆ ಮನೆ ನೀರಿನಲ್ಲಿ ಮುಳುಗಿಯೇ ಹೋಯಿತು; ವಿಜಯಲಕ್ಷ್ಮಿ ಹೇಳಿದ ಆ ಕತೆ!

ಆ ಮನೆಯಲ್ಲಿ ಸುಮಾರು ದಿನ ಶೂಟಿಂಗ್ (Shooting) ಆಗಿತ್ತು. ಎಮೋಷನಲ್ ಕನೆಕ್ಷನ್ (Emotional Connection) ಕೂಡ ಶುರು ಆಗಿತ್ತು. ಮನೆಯಲ್ಲಿ ಹಾವುಗಳು ಇವೆ ಅನ್ನೊದು ಗೊತ್ತಿತ್ತು. ಟಿ.ಎಸ್.ನಾಗಾಭರಣರು ಇಲ್ಲಿ ಹಾವಿನ ಚಿತ್ರವನ್ನೆ ತೆಗೆಯುತ್ತಿದ್ದರು. ಆದರೆ, ಒಂದು ಬೇಸರ ಕೂಡ ಇತ್ತು. ಇನ್ನೇನು ಕೃಷ್ಣ ನದಿಯ ಡ್ಯಾಮ್‌ನ (Krishna River Dam) ಗೇಟ್ ಓಪನ್ ಮಾಡ್ತಾರೆ. ಇದರಿಂದ ಈ ಮನೆ ಮುಳುಗುತ್ತದೆ ಅನ್ನೋದು ಗೊತ್ತಿತ್ತು. ಅದಕ್ಕೇನೆ ಈ ಒಂದು ಕೆಲಸ ಮಾಡಿದೇವು. ಚಿತ್ರದ ನಾಯಕಿ ವಿಜಯಲಕ್ಷ್ಮಿ (Vijayalakshmi) ಆ ಒಂದು ವಿಷಯವನ್ನ ಹೇಳಿಕೊಂಡಿದ್ದಾರೆ. ಅದೇನು ಅನ್ನೋದು ಇಲ್ಲಿದೆ ಓದಿ.

ಮನೆ ಮುಳುಗೋದು ಗೊತ್ತಿತ್ತು…

ನಾಗಮಂಡಲ ಚಿತ್ರದ ಶೂಟಿಂಗ್ ಶಿರಸಿಯಲ್ಲೂ ನಡೆದಿದೆ. ಉತ್ತರ ಕರ್ನಾಟಕದ ಬಾಗಲಕೋಟೆಯಲ್ಲೂ ಆಗಿದೆ. ಹಾಗೆ ಉತ್ತರ ಕರ್ನಾಟಕದ ವಾಡೆಯಲ್ಲಿ ಈ ಒಂದು ಚಿತ್ರದ ಶೂಟಿಂಗ್ ಸುಮಾರು ದಿನ ಆಗಿದೆ.
Kannada Actress Vijayalakshmi Shares Unknown Facts of Nagamandala Movie

ಡ್ಯಾಮ್ ಓಪನ್ ಆಗುತ್ತದೆ…

ಈ ಮನೆಯಲ್ಲಿ ರಾತ್ರಿ ವೇಳೆ ಹಾವುಗಳು ಕೂಡ ಬರ್ತಿದ್ದವು. ಆದರೂ ಶೂಟಿಂಗ್ ಏನು ನಿಂತಿರಲಿಲ್ಲ. ಸಿನಿಮಾ ತಂಡದ ಸದಸ್ಯರು ಕೆಲಸ ಮಾಡ್ತಾನೇ ಇದ್ದರು. ಆದರೆ, ಈ ಮನೆಯಲ್ಲಿ ಶೂಟಿಂಗ್ ಮಾಡ್ತಾನೇ ಇವರಿಗೆ ಒಂದು ಸಣ್ಣ ಬೇಸರವು ಇತ್ತು. ಅದೇನೂ ಅನ್ನೋದು ಮುಂದೆ ಇದೆ ಓದಿ.

ಡ್ಯಾಮ್ ಓಪನ್ ಆಗುತ್ತದೆ…

ಕೃಷ್ಣ ನದಿಯ ಡ್ಯಾಮ್ ಗೇಟ್ ಓಪನ್ ಆಗುತ್ತದೆ. ನೀರು ಹರೆಯುತ್ತದೆ. ಹಿನ್ನೀರಿನ ಏರಿಯಾದಲ್ಲಿ ಬರುವ ಈ ಮನೆ ಮುಳುಗುತ್ತದೆ. ಇನ್ನು ಈ ಮನೆ ನೋಡ್ಬೇಕು ಅಂದ್ರು ಇರೋದೇ ಇಲ್ಲ ಅಂತಲೇ ಎಲ್ಲರಿಗೂ ಬೇಸರ ಇತ್ತು.

ವಿಜಯಲಕ್ಷ್ಮಿ ನೆನಪು…

ವಿಜಯಲಕ್ಷ್ಮಿ ಅವರು ಈ ವಿಷಯವನ್ನ ನೆನಪು ಮಾಡಿಕೊಂಡಿದ್ದಾರೆ. ಆರ್.ಜೆ.ರಾಜೇಶ್ ಅವರ Rajesh Reveals ಅವರ ಪಾಡ್‌ಕಾಸ್ಟ್ ಅಲ್ಲಿಯೇ ವಿಜಯಲಕ್ಷ್ಮಿ ಮನೆಯ ಈ ವಿಷಯ ಹೇಳಿಕೊಂಡಿದ್ದಾರೆ.

ಈ ಮನೆಯ ಇನ್ನು ನೋಡೋಕೂ ಸಿಗೋದಿಲ್ಲ. ಕೃಷ್ಣ ನದಿಯ ಡ್ಯಾಮ್ ಓಪನ್ ಮಾಡುತ್ತಾರೆ. ಆಗ ಈ ಮನೆ ಮುಳುಗುತ್ತದೆ. ಹಾಗಾಗಿಯೇ ಮತ್ತೊಮ್ಮೆ ನೋಡ್ಬೇಕು ಅಂತಲೇ ವಿಜಯಲಕ್ಷ್ಮಿ ಸೇರಿದಂತೆ ಇನ್ನಿತರರು ಮನೆಯನ್ನ ಮತ್ತೊಮ್ಮೆ ಹೋಗಿ ನೋಡಿ ಬಂದಿದ್ದರು. ಅದನ್ನೆ ಇಲ್ಲಿ ವಿಜಯಲಕ್ಷ್ಮಿ ನೆನಪು ಮಾಡಿಕೊಂಡಿದ್ದಾರೆ ಅಂತ ಹೇಳಬಹುದು.

Kannada Actress Vijayalakshmi Shares Unknown Facts of Nagamandala Movie

ವಿಜಯಲಕ್ಷ್ಮಿ ನೆನಪು…
ನಾಗಮಂಡಲ ಚಿತ್ರದ ಇತರ ವಿಚಾರ

ನಾಗಮಂಡಲದ ಚಿತ್ರ ಬಂದು 29 ವರ್ಷ ಆಗಿದೆ. 1997 ರಲ್ಲಿ ಈ ಚಿತ್ರ ತೆರೆ ಕಂಡಿತ್ತು. ಟಿ.ಎಸ್.ನಾಗಾಭರಣ ಈ ಸಿನಿಮಾ ಡೈರೆಕ್ಷನ್ ಮಾಡಿದ್ದರು.

ಗಿರೀಶ್ ಕಾರ್ನಾಡರು ಬರೆದ ನಾಟಕವೇ ಇದಾಗಿದೆ. ಶಂಕರ್ ನಾಗ್ ಅವರು ಈ ನಾಟಕವನ್ನ ಚಿತ್ರ ಮಾಡ್ಬೇಕು ಅಂತಲೇ ಅಂದುಕೊಂಡಿದ್ದರು.

ಆದರೆ, ಅಷ್ಟರಲ್ಲಿಯೇ ಶಂಕರ್‌ ನಾಗ್ ಹೋಗಿ ಬಿಟ್ಟರು. ಇವರ ಕನಸನ್ನ ಟಿ.ಎಸ್.ನಾಗಾಭರಣ ಅವರು ನನಸು ಮಾಡಿದರು. ಈ ಚಿತ್ರ ಜನರ ಹೃದಯವನ್ನು ಗೆದ್ದಿತ್ತು.

ಪ್ರಕಾಶ್ ರೈ ಡಬಲ್ ರೋಲ್

ಪ್ರಕಾಶ್ ರೈ ಈ ಚಿತ್ರದಲ್ಲಿ ಡಬಲ್ ರೋಲ್ ಮಾಡಿದ್ದಾರೆ. ಅಪ್ಪಣ್ಣನ ಅನ್ನುವ ಪಾತ್ರವನ್ನು ಇವರೇ ಮಾಡಿದ್ದಾರೆ. ನಾಗಪ್ಪ ಅನ್ನುವ ರೋಲ್ ಅನ್ನು ಇವರೇ ನಿರ್ವಹಿಸಿದ್ದಾರೆ.

ಇದರಲ್ಲಿ ವಿಜಯಲಕ್ಷ್ಮಿ ಅವರಿಗೆ ನಾಗಪ್ಪ ಪಾತ್ರವೇ ಹೆಚ್ಚು ಇಷ್ಟ ಆಗುತ್ತಿತ್ತು. ಕಾರಣ, ಈ ಪಾತ್ರ ತುಂಬಾನೆ ಸಾಫ್ಟ್ ಆಗಿದೆ. ಆದರೆ, ಅಪ್ಪಣ್ಣನ ರೋಲ್ ರಗಡ್ ಆಗಿಯೇ ಇದೆ.

ಇದರ ವೈಬ್ರೇಷನ್ ಬೇರೇನೆ ಇದೆ. ಹಾಗಾಗಿಯೇ ವಿಜಯಲಕ್ಷ್ಮಿ ಅವರು ಈ ಪಾತ್ರವನ್ನ ಅಷ್ಟಾಗಿ ಮೆಚ್ಚಿಕೊಳ್ಳುತ್ತಿರಲಿಲ್ಲ. ಹಾಗೆ ವಿಜಯಲಕ್ಷ್ಮಿ ಈ ಚಿತ್ರದಲ್ಲಿ ರಾಣಿ ಅನ್ನುವ ರೋಲ್ ಮಾಡಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed