Nabha Natesh: ಮತ್ತೆ ಬಂದ ವಜ್ರಕಾಯದ ‘ಪಟಾಕ’! 10 ವರ್ಷಗಳ ಬಳಿಕ ಕನ್ನಡ ಮೀಡಿಯಾ ಮುಂದೆ ನಭಾ ಹೇಳಿದ್ದೇನು? | | ACTPnews

shiva rajkumar vajrakaya movie nabha natesh met kannada media after 10 years


ಪಟಾಕ ಪಾರ್ವತಿ..

ವಜ್ರಕಾಯ ಚಿತ್ರದಲ್ಲಿ ನಭಾ ನಟೇಶ್ ನಿಜಕ್ಕೂ ಅದ್ಭುತವಾಗಿ ನಟಿಸಿದ್ದರು. ಎರಡನೇ ಚಿತ್ರದಲ್ಲಿಯೇ ಶಿವಣ್ಣನ ಎದುರು ಅಬ್ಬರಿಸಿದ್ದರು.
ಪಟಾಕ ಪಾರ್ವತಿ..

(ಚಿತ್ರ ಕೃಪೆ: ನಭಾ ನಟೇಶ್ ಇನ್‌ಸ್ಟಾಗ್ರಾಮ್)

ಪ್ರತಿಭೆಯಿಂದಲೇ ಶಿವಣ್ಣನಿಂದಲೂ ಭೇಷ್ ಎನಿಸಿಕೊಂಡಿದ್ದರು. ಈ ಚಿತ್ರ ನೋಡಿದ ಜನರ ಕೂಡ ಈ ಪಾತ್ರವನ್ನ ಮೆಚ್ಚಿಕೊಂಡಿದ್ದರು. ಆದರೆ, ಈ ಚಿತ್ರ ಆದ್ಮೇಲೆ ನಭಾ ನಟೇಶ್ ತೆಲುಗು ಚಿತ್ರರಂಗದತ್ತ ಹೋದ್ರು. ಅಲ್ಲಿಯೇ ಸಿನಿಮಾ ಮಾಡಿದರು.

ರೂಪವೇ ಬದಲು

ನಭಾ ನಟೇಶ್ ಕಂಪ್ಲೀಟ್ ಚೇಂಜ್ ಆಗಿದ್ದಾರೆ. ಅಪಘಾತವಾದ ಕಾರಣ ಇವರ ಮುಖಕ್ಕೆ ಸರ್ಜರಿ ಎಲ್ಲ ಆಗಿದೆ. ಹಾಗಾಗಿಯೇ ಇವರು ಮೊದಲಿನ ತರ ಕಾಣಿಸೋದಿಲ್ಲ.

ಆದರೆ, ಇವರು ಅಷ್ಟೆ ಸುಂದರವಾಗಿಯೂ ಕಾಣಿಸುತ್ತಿದ್ದಾರೆ ಬಿಡಿ. ಹೆಚ್ಚು ಕಡಿಮೆ 10 ವರ್ಷ ಆದ್ಮೇಲೆ ಕನ್ನಡ ಮೀಡಿಯಾದ ಎದುರು ಇವರು ಕಾಣಿಸಿಕೊಂಡಿದ್ದಾರೆ.

ನಭಾ ಹೇಳಿದ್ರು ಈ ವಿಷಯ

ನಭಾ ನಟೇಶ್ ಅವರ ಮೊದಲ ಚಿತ್ರ ಪ್ರೀತಿ ಗೀತಿ ಇತ್ಯಾದಿ 2014 ರಂದು ಬಂದಿತ್ತು. ಆದರೆ, ಇದರಲ್ಲಿ ಗೆಸ್ಟ್ ರೋಲ್ ಇತ್ತು. ಪೂರ್ಣ ಪ್ರಮಾಣದ ರೋಲ್ ಅಂತ ಅಂತ ಬಂದ್ರೆ ಅದು ವಜ್ರಕಾಯ ಚಿತ್ರವೇ ಆಗಿತ್ತು.

ಈ ಚಿತ್ರದಲ್ಲಿ ನಭಾ ನಟೇಶ್ ನಿಜಕ್ಕೂ ಅದ್ಭುತವಾಗಿಯೇ ನಟಿಸಿದ್ದರು. ಈ ಚಿತ್ರ 2015 ರಂದು ತೆರೆ ಕಂಡಿತ್ತು. ಈ ಲೆಕ್ಕದಂತೆ ವಜ್ರಕಾಯ ಬಂದು ಈಗ 11 ವರ್ಷ ಆಗುತ್ತದೆ. ಆದರೆ, ನಭಾ ನಾನು ಕನ್ನಡ ಮೀಡಿಯಾ ಎದುರು ಬಂದು 10 ವರ್ಷ ಆಯಿತು ಅಂತ ಹೇಳಿದ್ದಾರೆ.

shiva rajkumar vajrakaya movie nabha natesh met kannada media after 10 years

ನಭಾ ಈಗ ಯಾಕೆ ಬಂದ್ರು

(ಚಿತ್ರ ಕೃಪೆ: ನಭಾ ನಟೇಶ್ ಇನ್‌ಸ್ಟಾಗ್ರಾಮ್)

ನಭಾ ಈಗ ಯಾಕೆ ಬಂದ್ರು

ನಭಾ ನಟೇಶ್ ಅವರು ತೆಲುಗು ಭಾಷೆಯ ನಾಗಬಂಧಂ ಅನ್ನುವ ಚಿತ್ರ ಮಾಡಿದ್ದಾರೆ. ಈ ಚಿತ್ರದಲ್ಲಿ ಪಾರ್ವತಿ ಅನ್ನುವ ರೋಲ್ ಅನ್ನೆ ಮಾಡಿದ್ದಾರೆ.

ವಜ್ರಕಾಯದಲ್ಲಿ ಪಟಾಕ ಪಾರ್ವತಿ ಆಗಿಯೇ ಮಾಡಿದ್ದರು. ಇದು ಜೋರು ಪಾತ್ರವೇ ಆಗಿತ್ತು. ಆದರೆ, ನಾಗಬಂಧಂ ಚಿತ್ರದಲ್ಲಿ ನಭಾ ಸಾಫ್ಟ್ ರೋಲ್ ಮಾಡಿದ್ದಾರೆ. ಈ ವಿಷಯವನ್ನ ಸ್ವತಃ ನಭಾ ರಿವೀಲ್ ಮಾಡಿದ್ದಾರೆ.

ಜುಲೈ-3 ರಂದು ರಿಲೀಸ್

ನಾಗಬಂಧಂ ಚಿತ್ರ ಜುಲೈ-3 ರಂದು ರಿಲೀಸ್ ಆಗುತ್ತಿದೆ. ನಭಾ ನಟೇಶ್ ಸೇರಿದಂತೆ ಕೆಜಿಎಫ್ ಗರುಡ ರಾಮ್, ಹಿರಿಯ ನಟ ಅವಿನಾಶ್, ನಾಗ್ ಅಶ್ವಿನ್ ಈ ಚಿತ್ರದಲ್ಲಿ ನಟಿಸಿದ್ದಾರೆ.

ಈ ಚಿತ್ರದ ಪ್ರಚಾರಕ್ಕೆ ನಭಾ ನಟೇಶ್ ಬೆಂಗಳೂರಿಗೆ ಬಂದಿದ್ದರು. ಆಗಲೇ ತಾವು ಕಳೆದ 10 ವರ್ಷದಿಂದ ಕನ್ನಡ ಮೀಡಿಯಾ ಎದುರು ಬಂದೆ ಇಲ್ಲ. ಈಗಲೇ ಬಂದಿರೋದು.

10 ವರ್ಷದ ಹಿಂದೆ ಯಾವ ಪ್ರೀತಿ ತೋರಿಸಿದ್ದರೋ ಅದೇ ಪ್ರೀತಿಯನ್ನುಈಗ ತೋರಿಸಿದ್ದಾರೆ. ಮಾಧ್ಯಮದಲ್ಲಿ ಈಗಲೂ ಪರಿಚಿತ ಮುಖಗಳು ಇವೆ. ಎಲ್ಲರನ್ನು ಭೇಟಿ ಆಗಿ ತುಂಬಾನೆ ಖುಷಿ ಆಗಿದೆ ಅಂತಲೂ ನಭಾ ನಟೇಶ್ ಹೇಳಿಕೊಂಡಿದ್ದಾರೆ.

ಚಿತ್ರದ ಹಾಡಿಗೆ ನೃತ್ಯ

ನಾಗಬಂಧಂ ಚಿತ್ರದಲ್ಲಿ ನಮೋ ರೇ ಅನ್ನುವ ಹಾಡಿದೆ. ಈ ಹಾಡಿಗೇನೆ ನಟಿ ನಭಾ ನಟೇಶ್ ಈ ಪ್ರೆಸ್ ಮೀಟ್ ಅಲ್ಲಿ ಡ್ಯಾನ್ಸ್ ಮಾಡಿದ್ದಾರೆ. ಈ ಕ್ಷಣದ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲೂ ಹರಿದಾಡುತ್ತಿವೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed