Nabha Natesh: ನಭಾ ನಟೇಶ್‌ಗೆ ಏನ್ ಆಗಿದೆ; ಮುಖವೆಲ್ಲ ರಕ್ತಸಿಕ್ತ! ಇದು ಯಾವ ಚಿತ್ರ ಗೊತ್ತಾ? | | ACTPnews

ನಭಾ ನಟೇಶ್‌ಗೆ ಏನ್ ಆಗಿದೆ; ಮುಖವೆಲ್ಲ ರಕ್ತಸಿಕ್ತ! ಇದು ಯಾವ ಚಿತ್ರ?


Last Updated:

ನಭಾ ನಟೇಶ್ ತಮ್ಮ ನಾಗಬಂಧಂ ಚಿತ್ರದ ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ನಭಾ ನಟೇಶ್ ಮೇಕ್‌ಅಪ್‌ ಸೀಕ್ರೆಟ್ ಕೂಡ ರಿವೀಲ್ ಆಗಿದೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ನಭಾ ನಟೇಶ್‌ಗೆ ಏನ್ ಆಗಿದೆ; ಮುಖವೆಲ್ಲ ರಕ್ತಸಿಕ್ತ! ಇದು ಯಾವ ಚಿತ್ರ?
ನಭಾ ನಟೇಶ್‌ಗೆ ಏನ್ ಆಗಿದೆ; ಮುಖವೆಲ್ಲ ರಕ್ತಸಿಕ್ತ! ಇದು ಯಾವ ಚಿತ್ರ?

ಕನ್ನಡದ ವಜ್ರಕಾಯ ಬೆಡಗಿ ನಭಾ ನಟೇಶ್ (Nabha Natesh) ಲಕ್ ಚೇಂಜ್ ಆಗಿದೆ. ತೆಲುಗು ಭಾಷೆಯ ಚಿತ್ರಗಳಲ್ಲಿ ನಾಗಬಂಧಂ ಚಿತ್ರ (Nagabandham) ಮರು ಜೀವನ ಕೊಟ್ಟಿದೆ. ಪಾರ್ವತಿ ಅನ್ನುವ ಸಾಫ್ಟ್ ರೋಲ್ ಅನ್ನೆ ಈ ಚಿತ್ರದಲ್ಲಿ ಮಾಡಿದ್ದಾರೆ. ಇದು ಇವರಿಗೆ ಒಳ್ಳೆ ಹೆಸರು ತಂದು ಕೊಟ್ಟಿದೆ. ಸಿನಿಮಾ ಕೂಡ ಚೆನ್ನಾಗಿಯೇ ಹೋಗಿದೆ. ಇದರ ಬೆನ್ನಲ್ಲಿಯೇ ನಭಾ ನಟೇಶ್ ಅವರ ಸ್ವಯಂಭು ಚಿತ್ರವು (Swayambhu Film) ಮತ್ತೊಂದು ಗೆಲುವಿನ ನಿರೀಕ್ಷೆ ಮೂಡಿಸಿದೆ. ಆದರೆ, ಇದರ ನಡುವೆ ಸ್ವತಃ ನಭಾ ನಟೇಶ್ (Nabha Natesh) ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ರಕ್ತಸಿಕ್ತ ಮುಖದ ಈ ಒಂದು ವಿಡಿಯೋದಲ್ಲಿ ನಭಾ ಅವರನ್ನ ವಿಲನ್ ಹೊಡೆಯೋ ದೃಶ್ಯವೂ ಇದೆ. ಆದರೆ, ಈ ಚಿತ್ರ ಯಾವುದು ಅಂತ ನಭಾ ಹೇಳಿಕೊಂಡಿಲ್ಲ. ಬದಲಾಗಿ ಮೇಕಿಂಗ್ ಮತ್ತು ಫೋಟೋ ಶೇರ್ ಮಾಡಿಕೊಂಡಿದ್ದಾರೆ. ಇದರ ಇನ್ನಷ್ಟು ವಿವರ ಇಲ್ಲಿದೆ ಓದಿ.

ನಭಾ ನಟೇಶ್ ಮುಖ ರಕ್ತಸಿಕ್ತ

ನಭಾ ನಟೇಶ್ ಈ ಫೋಟೋಗಳನ್ನ ಹಂಚಿಕೊಂಡಿದ್ದಾರೆ. ಒಂದೆರಡು ವಿಡಿಯೋ ಕೂಡ ಇವೆ. ಒಂದರಲ್ಲಿ ಮೇಕ್‌ಅಪ್ ಮಾಡುತ್ತಿರೋ ದೃಶ್ಯಗಳು ಇವೆ.
Nabha Natesh Share Swayambhu Film Latest Making Video on Social Media

ನಭಾ ನಟೇಶ್ ಮುಖ ರಕ್ತಸಿಕ್ತ

(ಚಿತ್ರ ಕೃಪೆ: ನಭಾ ನಟೇಶ್‌ ಇನ್‌ಸ್ಟಾಗ್ರಾಮ್)

ಇನ್ನೊಂದರಲ್ಲಿ ವಿಲನ್ ನಭಾ ನಟೇಶ್ ಮುಖಕ್ಕೆ ಹೊಡೆಯೋ ದೃಶ್ಯ ಇದೆ. ಈ ಒಂದು ಲುಕ್ ಇರೋ ಒಂದೆರಡು ಫೋಟೋಗಳು ಇವೆ. ಇದಕ್ಕೆ ನಭಾ ನಟೇಶ್ ಒಂದೆರಡು ಸಾಲು ಬರೆದಿದ್ದಾರೆ.

ನಭಾ ನಟೇಶ್ ಬರೆದದ್ದು ಏನು

Too excited to be terrifying! You guys want to see the making of this look? ಈ ಸಾಲಿನ ಅರ್ಥ ತುಂಬಾನೆ ಸರಳವಾಗಿದೆ. ಈ ಒಂದು ಲುಕ್ ಅಲ್ಲಿ ಕಾಣಿಸಿಕೊಳ್ಳಲು ಉತ್ಸಾಹದಲ್ಲಿಯೇ ಇದ್ದೇನೆ. ಈ ಒಂದು ಲುಕ್‌ನ ಮೇಕಿಂಗ್ ನೋಡಲು ನೀವು ಕಾಯ್ತಾ ಇದ್ದೀರಾ ಅನ್ನೋದನ್ನೆ ನಭಾ ನಟೇಶ್ ಇಲ್ಲಿ ಕೇಳಿದ್ದಾರೆ.

ಮೇಕಿಂಗ್ ವಿಡಿಯೋ ಔಟ್

ಈ ಚಿತ್ರದ ನಾಯಕಿ ಪಾರ್ವತಿ ಪಾತ್ರದ ಮೇಕಿಂಗ್ ವಿಡಿಯೋವನ್ನ ನಟಿ ನಭಾ ನಟೇಶ್ ತಮ್ಮ ಇನ್‌ಸ್ಟಾಗ್ರಾಂಮ್ ಪೇಜ್ ಅಲ್ಲಿಯೇ ಹಂಚಿಕೊಂಡಿದ್ದಾರೆ.

Nabha Natesh Share Swayambhu Film Latest Making Video on Social Media

ಮೇಕಿಂಗ್ ವಿಡಿಯೋ ಔಟ್

(ಚಿತ್ರ ಕೃಪೆ: ನಭಾ ನಟೇಶ್‌ ಇನ್‌ಸ್ಟಾಗ್ರಾಮ್)

ಇದನ್ನ ನೋಡಿದವ್ರು ತಮ್ಮದೇ ರೀತಿಯಲ್ಲಿಯೇ ಕಾಂಪ್ಲಿಮೆಂಟ್ ಕೊಟ್ಟಿದ್ದಾರೆ. ಇನ್ನುಳಿದಂತೆ ನಭಾ ನಟೇಶ್ ಅವರು ಈ ನಾಗಬಂಧಂ ಚಿತ್ರದ ಸಕ್ಸಸ್ ಖುಷಿಯಲ್ಲಿಯೇ ಇದ್ದಾರೆ. ಈ ಒಂದು ಚಿತ್ರ ಇವರಿಗೆ ಒಳ್ಳೆ ಹೆಸರು ತಂದು ಕೊಟ್ಟಿದೆ.

ಸ್ವಯಂಭು ಸಿನಿಮಾ ವಿಶೇಷತೆ

ಹಾಗೆ ಈ ಚಿತ್ರದಲ್ಲಿ ಕನ್ನಡತಿ ನಭಾ ನಟೇಶ್ ನಾಯಕಿ ಆಗಿದ್ದಾರೆ. ಈ ಚಿತ್ರದಲ್ಲಿ ಸುಂದರ ವಲ್ಲಿ ಅನ್ನುವ ಹೆಸರಿನ ಪಾತ್ರವನ್ನೆ ಮಾಡಿದ್ದಾರೆ. ನಿಖಿಲ್ ಸಿದ್ಧಾರ್ಥ್ ಈ ಚಿತ್ರದ ನಾಯಕರಾಗಿದ್ದಾರೆ. ಕಾರ್ತಿಕೇಯ, ಕಾರ್ತಿಕೇಯ-2, ಸ್ಪೈ ಚಿತ್ರದಲ್ಲಿ ಇವರು ಜನರ ಹೃದಯ ಗೆದ್ದು ಬಿಟ್ಟಿದ್ದಾರೆ.

ಹಾಗೆ ಈ ಚಿತ್ರ ಪಿರಿಯಾಡಿಕಲ್ ಹೈ ಬಜೆಟ್ ಚಿತ್ರವೇ ಆಗಿದೆ. ರವಿ ಬಸ್ರೂರು ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ಟ್ರಿಪಲ್ ಆರ್ ಚಿತ್ರ ಖ್ಯಾತಿಯ ಸೆಂತಿಲ್ ಈ ಚಿತ್ರಕ್ಕೆ ಕ್ಯಾಮರಾವರ್ಕ್ ಮಾಡಿದ್ದಾರೆ. ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed