Mouni Roy: ಮೌನಿ ರಾಯ್ ಡಿವೋರ್ಸ್ ಆದ್ರೆ ದಿಶಾ ಪಠಾನಿ ಟ್ರೋಲ್ ಆಗ್ತಿರೋದ್ಯಾಕೆ? | Why disha patani is trolled after Mouni roy got divorce | | ACTPnews

ದಿಶಾ-ಮೌನಿ


Last Updated:

ಮೌನಿ ಅಭಿಮಾನಿಗಳು ದಿಶಾ ಅವರನ್ನು ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ. ಮೌನಿ ಡಿವೋರ್ಸ್ ಆದ್ರೆ ದಿಶಾ ಟ್ರೋಲ್ ಆಗೋದ್ಯಾಕೆ?

ದಿಶಾ-ಮೌನಿ
ದಿಶಾ-ಮೌನಿ

ಮೌನಿ ರಾಯ್ (Mouni Roy) ಮತ್ತು ಉದ್ಯಮಿ ಸೂರಜ್ ನಂಬಿಯಾರ್ (Suraj Nambiar) ಅವರ ವಿಚ್ಛೇದನದ (Divorce) ಮಧ್ಯೆ ನಟಿ ದಿಶಾ ಪಟಾನಿ (Disha Patani) ಅನಿರೀಕ್ಷಿತವಾಗಿ ಆನ್‌ಲೈನ್ ಟ್ರೋಲಿಂಗ್‌ನ (Troll) ಕೇಂದ್ರಬಿಂದುವಾಗಿದ್ದಾರೆ. ಅವರ ವಿವಾಹದ ಸುತ್ತಲಿನ ತೀವ್ರ ಚರ್ಚೆಗಳ ನಂತರ ವಿವಾಹಿತ ಜೋಡಿ ಇತ್ತೀಚೆಗೆ ಜಂಟಿ ಹೇಳಿಕೆಯ ಮೂಲಕ ತಮ್ಮ ಡಿವೋರ್ಸ್ ದೃಢಪಡಿಸಿದರು.

ಮೌನಿ ಅಭಿಮಾನಿಗಳು ದಿಶಾ ಅವರನ್ನು ಟ್ರೋಲ್ ಮಾಡೋಕೆ ಶುರು ಮಾಡಿದ್ದಾರೆ. ಮೌನಿ ಮತ್ತು ಸೂರಜ್ ಬಗ್ಗೆ ವಿಚ್ಛೇದನದ ವದಂತಿಗಳು ಆನ್‌ಲೈನ್‌ನಲ್ಲಿ ವೈರಲ್ ಆಗುತ್ತಿದ್ದಂತೆ ಅದೇ ಸಮಯದಲ್ಲಿ ದಿಶಾ ಪಟಾನಿ ಇನ್‌ಸ್ಟಾಗ್ರಾಮ್‌ನಲ್ಲಿ ಸೂರಜ್ ನಂಬಿಯಾರ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಬಳಕೆದಾರರು ಗಮನಿಸಿದ್ದಾರೆ.

ಕೆಲವು ನೆಟ್ಟಿಗರು ಯಾವುದೇ ಸಾಕ್ಷಿ ಇಲ್ಲದೆ ದಿಶಾ ಅವರನ್ನು ದಂಪತಿಯ ವೈಯಕ್ತಿಕ ಸಮಸ್ಯೆಗಳೊಂದಿಗೆ ಲಿಂಕ್ ಮಾಡಲು ಪ್ರಯತ್ನಿಸಿದರು. ಇದು ಭಾರೀ ಟ್ರೋಲಿಂಗ್​ಗೆ ಕೂಡಾ ಕಾರಣವಾಯಿತು.

ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಕೆಲವು ದಿನಗಳ ಹಿಂದೆ ದಿಶಾ ಪಟಾನಿ ಅವರ ಪೋಸ್ಟ್‌ನ ಕಾಮೆಂಟ್‌ಗಳ ಸೆಕ್ಷನ್​ಗೆ ಹೋಗಿದ್ದಾರೆ. ಮೌನಿ ಸೂರಜ್ ಮಧ್ಯೆ ಜಗಳ ತಂದು ಹಾಕಿದ್ರಾ ಎಂದು ಬರೆದಿದ್ದಾರೆ. ಇನ್ನೊಂದು ಕಾಮೆಂಟ್, “ಸೂರಜ್ ಅವರನ್ನು ಯಾಕೆ ಅನ್‌ಫಾಲೋ ಮಾಡಿದ್ರಿ ಎಂದು ಪ್ರಶ್ನಿಸಿದೆ. ಬೇರೊಬ್ಬರು, “ಮೌನಿ ಮತ್ತು ಅವಳ ಪತಿಗೆ ಏನಾಯಿತು?” ಎಂದು ಕೇಳಿದರು.

ಇನ್ನೊಬ್ಬ ವ್ಯಕ್ತಿ, “ಮೌನಿ ಅವರ ವಿಚ್ಛೇದನೆ ಮಾಡಿಸಿಬಿಟ್ರಲ್ಲಾ ಎಂದಿದ್ದಾರೆ. ನಿಮ್ಮಿಂದಾಗಿ ಮೌನಿ ರಾಯ್ ಡಿವೋರ್ಸ್ ತೆಗೆದುಕೊಂಡರು ಎಂದಿದ್ದಾರೆ. ಇನ್ನೂ ಕೆಲವರು ದಿಶಾ ಅವರನ್ನು ಹೋಂ ಬ್ರೇಕರ್ ಎಂದು ಕರೆದರು.

ಆದಾಗ್ಯೂ, ಈ ಕಾಮೆಂಟ್‌ಗಳು ಆಧಾರರಹಿತವಾಗಿವೆ ಮತ್ತು ಯಾವುದೇ ಸಾಕ್ಷಿಗಳೂ ಇಲ್ಲ. ದಿಶಾ ಮತ್ತು ಮೌನಿ ರಾಯ್ ಬಹಳ ಹಿಂದಿನಿಂದಲೂ ಆಪ್ತ ಸ್ನೇಹಿತರಾಗಿದ್ದಾರೆ. ಇಬ್ಬರು ನಟಿಯರು ಆಗಾಗ ಒಟ್ಟಿಗೆ ವೆಕೇಷನ್ ಹೋಗುತ್ತಾರೆ. ಪರಸ್ಪರರ ಇನ್‌ಸ್ಟಾಗ್ರಾಮ್ ಪೋಸ್ಟ್‌ಗಳಲ್ಲಿ ಕಾಣಿಸಿಕೊಳ್ಳುತ್ತಾರೆ ಮತ್ತು ಪಾರ್ಟಿಗಳು ಮತ್ತು ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಒಟ್ಟಿಗೆ ಕಾಣಿಸಿಕೊಳ್ಳುತ್ತಾರೆ.

ಅವರ ಭಾರೀ ಆಪ್ತತೆ ಹಾಗೂ ಆತ್ಮೀಯತೆ ಗೆಳೆತನದಿಂದ ಹಲವು ಬಾರಿ ಸುದ್ದಿಯಾಗಿದ್ದಾರೆ. ರೆಡ್ಡಿಟ್ ಮತ್ತು ಗಾಸಿಪ್ ವೇದಿಕೆಗಳಲ್ಲಿ ಹೆಚ್ಚಿನ ಟ್ರೋಲಿಂಗ್ ಕಂಡುಬಂತು. ಅಲ್ಲಿ ಬಳಕೆದಾರರು ದಿಶಾ ದಂಪತಿ ಡಿವೋರ್ಸ್ ಮೇಲೆ ಪ್ರಭಾವ ಬೀರಿರಬಹುದು ಎಂದು ಸೂಚಿಸುವ ಕಾಮೆಂಟ್‌ ಮಾಡಿದ್ದಾರೆ.

ಅಷ್ಟೇ ಅಲ್ಲದೆ ಅವರಿಬ್ಬರೂ ರಿಲೇಷನ್​ಶಿಪ್​ನಲ್ಲಿದ್ದಾರಾ ಎನ್ನುವವರೆಗೂ ಚರ್ಚೆಗಳು ಹೋದವು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದಾರಾ? ಗೆಳೆತನಕ್ಕಿಂತ ಹೆಚ್ಚಿನದಾಗಿದ್ಯಾ ಈ ಸಂಬಂಧ ಎಂದು ಎಲ್ಲರೂ ಪ್ರಶ್ನಿಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports