Radhika Pandit: ರಾಧಿಕಾ ಫೋನಲ್ಲಿ ಯಶ್ ವಿಡಿಯೋ ಕಾಲ್! ಫ್ಯಾನ್ಸ್ ಖುಷ್ | | ACTPnews

Rocking Star Yash Video Call talking to fans got viral


ರಾಕಿಂಗ್ ಫ್ಯಾನ್ಸ್

ರಾಕಿಂಗ್ ಸ್ಟಾರ್ ಯಶ್ ಬಗ್ಗೆ ಎಲ್ಲರೂ ಕೇಳ್ತಾರೆ. ಫ್ಯಾನ್ಸ್ ಅಂತೂ ಕಾಯ್ತಾನೇ ಇದ್ದಾರೆ. ರಾಧಿಕಾ ಪಂಡಿತ್ ಅವರ ಇನ್‌ಸ್ಟಾಗ್ರಾಮ್ ಪೇಜ್ ಅಲ್ಲಿ ಯಾವುದಾದರೂ ಪೋಸ್ಟ್ ನೋಡಿದರೆ ಸಾಕು.
ವಿಡಿಯೋ ಕಾಲ್

(ಚಿತ್ರ ಕೃಪೆ: ಮಧು ದೈತೋಟ್ ಇನ್‌ಸ್ಟಾಗ್ರಾಮ್)

ಇಲ್ಲೂ ಯಶ್ ಕುರಿತು ಕೇಳುತ್ತಾರೆ. ಆ ರೀತಿಯ ಕ್ರೇಜ್ ಉಳಿಸಿಕೊಂಡಿರೋ ಕೆಲವು ಫ್ಯಾನ್ಸ್‌ಗೆ ಯಶ್ ಅವರನ್ನ ನೋಡುವ ಭಾಗ್ಯ ಸಿಕ್ಕಿದೆ. ರಾಧಿಕಾ ಪಂಡಿತ್ ಅವರ ಫೋನ್‌ ಮೂಲಕವೇ ಯಶ್ ಅವರನ್ನ ನೋಡಿದ್ದಾರೆ.

ವಿಡಿಯೋ ಕಾಲ್

ರಾಧಿಕಾ ಪಂಡಿತ್ ವಿಡಿಯೋ ಕಾಲ್ ಮಾಡಿದ್ದಾರೆ. ಈ ಮೂಲಕ ಯಶ್ ತಮ್ಮ ಅಭಿಮಾನಿಗಳ ಜೊತೆಗೆ ಮಾತನಾಡಿದ್ದಾರೆ. ಈ ವಿಡಿಯೋದಲ್ಲಿ ಒಂದು ಸೌಂಡ್ ಕೇಳಿ ಬರುತ್ತದೆ.

ರಾಧಿಕಾ ಕಾಣ್ತಾರೆ

ರಾಧಿಕಾ ಪಂಡಿತ್ ಅವರು ತಮ್ಮ ಫೋನ್‌ನಿಂದಲೇ ಈ ಕಾಲ್ ಮಾಡಿದ್ದಾರೆ. ಅದು ಈ ವಿಡಿಯೋದಲ್ಲೂ ಗೊತ್ತಾಗುತ್ತದೆ. ಯಶ್ ಮಾತನಾಡೋ ವಿಡಿಯೋವನ್ನ ರಾಧಿಕಾ ಪಂಡಿತ್ ಅಭಿಮಾನಿಗಳಿಗೂ ತೋರಿಸುತ್ತಾರೆ.

ಇದನ್ನೆಲ್ಲ ಶೂಟ್ ಮಾಡಿದವರು ರಾಧಿಕಾ ಅವರನ್ನು ಕ್ಯಾಪ್ಚರ್ ಮಾಡಿದ್ದಾರೆ. ಆದರೆ, ಈ ಒಂದು ವಿಡಿಯೋದಲ್ಲಿ ಎಲ್ಲೂ ಫ್ಯಾನ್ಸ್ ಮುಖಗಳು ಕಾಣಿಸೋದಿಲ್ಲ ಅಂತ ಹೇಳಬಹುದು.

ವಿಡಿಯೋ ಶೇರ್

ರಾಧಿಕಾ ಮತ್ತು ಯಶ್ ಹಾಗೂ ಫ್ಯಾನ್ಸ್ ಮಾತನಾಡಿರೋ ಈ ವಿಡಿಯೋ ವೈರಲ್ ಆಗಿದೆ. ಪತ್ರಕರ್ತೆ ಮಧು ದೈತೋಟ್ ಈ ವಿಡಿಯೋವನ್ನ ಇನ್‌ಸ್ಟಾಗ್ರಾಮ್‌ನ ತಮ್ಮ ಪೇಜ್ ಅಲ್ಲಿ ಹಂಚಿಕೊಂಡಿದ್ದಾರೆ.

Rocking Star Yash Video Call talking to fans got viral

ಹೇಗಿದ್ದೀರಾ ಬಾಸ್

(ಚಿತ್ರ ಕೃಪೆ: ಮಧು ದೈತೋಟ್ ಇನ್‌ಸ್ಟಾಗ್ರಾಮ್)

ಅಭಿಮಾನಿಗಳಿಗಾಗಿಯೇ ರಾಧಿಕಾ ಪಂಡಿತ್ ಈ ಒಂದು ವ್ಯವಸ್ಥೆ ಮಾಡಿದ್ದಾರೆ. ಯಶ್ ಅವರಿಗೆ ವಿಡಿಯೋ ಕಾಲ್ ಮಾಡಿ ಅಭಿಮಾನಿಗಳ ಜೊತೆಗೆ ಮಾತನಾಡಿಸಿದ್ದಾರೆ ಅನ್ನೋದನ್ನು ಮಧು ದೈತೋಟ್ ಈ ವಿಡಿಯೋದ ಜೊತೆಗೆ ಬರೆದುಕೊಂಡಿದ್ದಾರೆ.

ರಾಕಿ ಭಾಯ್ ಬ್ಯುಸಿ

ರಾಕಿಂಗ್ ಸ್ಟಾರ್ ಯಶ್ ತಮ್ಮ ಟಾಕ್ಸಿಕ್ ಮತ್ತು ರಾಮಾಯಣ ಚಿತ್ರದ ಕೆಲಸದಲ್ಲಿ ಬ್ಯುಸಿ ಇದ್ದಾರೆ. ಯಾರಂದ್ರೆ ಯಾರ ಕೈಗೂ ಸಿಗೋದಿಲ್ಲ. ಅಷ್ಟು ಬ್ಯುಸಿ ಆಗಿದ್ದಾರೆ.

ಆದರೆ, ಅಭಿಮಾನಿಗಳಿಗಾಗಿಯೇ ರಾಧಿಕಾ ಪಂಡಿತ್ ಈ ಒಂದು ವಿಡಿಯೋ ಕಾಲ್ ಮಾಡಿದ್ದಾರೆ. ಆ ಮೂಲಕ ಯಶ್ ಅವರ ಜೊತೆಗೆ ಮಾತನಾಡಿಸಿದ್ದಾರೆ. ಆ ಕ್ಷಣದ ಈ ವಿಡಿಯೋನೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಹೇಗಿದ್ದೀರಾ ಬಾಸ್

ಯಶ್ ಅವರನ್ನ ವಿಡಿಯೋ ಕಾಲ್ ಅಲ್ಲಿ ನೋಡಿದ ಫ್ಯಾನ್ಸ್ ತುಂಬಾನೆ ಖುಷಿಪಟ್ಟಿದ್ದಾರೆ. ಬಾಸ್ ಹೇಗಿದ್ದೀರಾ ಅಂತ ಒಬ್ಬರು ಕೇಳ್ತಾರೆ. ಇನ್ನು ಕೆಲವು ಮಹಿಳಾ ಅಭಿಮಾನಿಗಳು We Love You ಬಾಸ್ ಅಂತಲೂ ಹೇಳ್ತಾರೆ.

ಇದರ ನಡುವೆ ಯಾರೋ ನಾವು ಕರ್ನಾಟಕದವರು ಅಂತಲೂ ಹೇಳ್ತಾರೆ. ಹೀಗೆ ಅಭಿಮಾನಿಗಳು ವಿಡಿಯೋದಲ್ಲಿಯೇ ಯಶ್ ಅವರನ್ನ ನೋಡಿ ಸಾಕಷ್ಟು ಖುಷಿಪಟ್ಟಿದ್ದಾರೆ ಅಂತ ಹೇಳಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports