Morena Train Accident: ರೈಲಿಗೆ ಬೆಂಕಿ ಬಿದ್ದಿದೆ ಎಂದ ಕಿಡಿಗೇಡಿಗಳು, ವದಂತಿ ನಂಬಿ ಕೆಳಕ್ಕೆ ಜಿಗಿದ ಮಕ್ಕಳು ಸೇರಿ 8 ಮಂದಿ ಸಾವು! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೊರೆನಾದಲ್ಲಿ ಸುಳ್ಳು ಬೆಂಕಿ ವದಂತಿ


Last Updated:

Morena Train Accident: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಹೇತಂಪುರ ರೈಲ್ವೆ ನಿಲ್ದಾಣದ ಬಳಿ ಸಂಭವಿಸಿದ ಭೀಕರ ರೈಲು ಅಪಘಾತವು ಇಡೀ ದೇಶವನ್ನೇ ನಡುಗಿಸಿದೆ. ಯಾಕಂದ್ರೆ, ರೈಲಿಗೆ ಬೆಂಕಿ ಹೊತ್ತಿಕೊಂಡಿದೆ ಎಂಬ ಕೇವಲ ಒಂದು ಸಣ್ಣ ಸುಳ್ಳು ವದಂತಿ ಮತ್ತು ಅದರಿಂದ ಸೃಷ್ಟಿಯಾದ ಆತಂಕದಿಂದ ಸುಮಾರು 8 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.

ಮೊರೆನಾದಲ್ಲಿ ಸುಳ್ಳು ಬೆಂಕಿ ವದಂತಿ
ಮೊರೆನಾದಲ್ಲಿ ಸುಳ್ಳು ಬೆಂಕಿ ವದಂತಿ

ಮೊರೆನಾ (ಮಧ್ಯಪ್ರದೇಶ): ಮಧ್ಯಪ್ರದೇಶದ (Madhya Pradesh) ಮೊರೆನಾ (Morena) ಜಿಲ್ಲೆಯ ಹೇತಂಪುರ ರೈಲ್ವೆ ನಿಲ್ದಾಣದ (Railway Station) ಬಳಿ ಸಂಭವಿಸಿದ ಭೀಕರ ರೈಲು ಅಪಘಾತವು (Train Accident) ಇಡೀ ದೇಶವನ್ನೇ ನಡುಗಿಸಿದೆ. ಯಾಕಂದ್ರೆ, ರೈಲಿಗೆ ಬೆಂಕಿ (Fire in Train) ಹೊತ್ತಿಕೊಂಡಿದೆ ಎಂಬ ಕೇವಲ ಒಂದು ಸಣ್ಣ ಸುಳ್ಳು ವದಂತಿ (False Rumor) ಮತ್ತು ಅದರಿಂದ ಸೃಷ್ಟಿಯಾದ ಆತಂಕದಿಂದ ಸುಮಾರು 8 ಜನರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.

ಏನಿದು ಘಟನೆ?

ನ್ಯೂಸ್​18 ಹಿಂದಿ ವರದಿ ಮಾಡಿರುವಂತೆ, ಇಂದು ಸಂಜೆ 4 ಗಂಟೆಯ ಸುಮಾರಿಗೆ ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್ ರೈಲು ಮೊರೆನಾದಿಂದ ಧೋಲ್‌ಪುರ ಕಡೆಗೆ ಪ್ರಯಾಣಿಸುತ್ತಿತ್ತು. ಈ ವೇಳೆ, ರೈಲು ಹೇತಂಪುರ ನಿಲ್ದಾಣದ ಸಮೀಪಿಸುತ್ತಿದ್ದಂತೆ, ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂಬ ಸುದ್ದಿ ಹರಡಿತು. ಈ ಸುದ್ದಿ ಕ್ಷಣಾರ್ಧದಲ್ಲಿ ಇಡೀ ರೈಲಿನಲ್ಲಿ ಕಾಳ್ಗಿಚ್ಚಿನಂತೆ ಹರಡಿ, ಪ್ರಯಾಣಿಕರಲ್ಲಿ ತೀವ್ರ ಭೀತಿ ಮೂಡಿಸಿತು. ಬೆಂಕಿಯ ಜ್ವಾಲೆಗೆ ಸಿಲುಕುತ್ತೇವೆ ಎಂಬ ಭಯದಿಂದ ರೈಲಿನೊಳಗೆ ಕಾಲ್ತುಳಿತದ ವಾತಾವರಣ ನಿರ್ಮಾಣವಾಯಿತು.

ಕಣ್ಣೆದುರೇ ಬಂದ ಕರಾಳ ಮೃತ್ಯು:

ಆತಂಕದ ಪರಮಾವಧಿಗೆ ತಲುಪಿದ ಕೆಲ ಪ್ರಯಾಣಿಕರು, ರೈಲು ನಿಲ್ಲುವವರೆಗೂ ಕಾಯುವ ತಾಳ್ಮೆ ಕಳೆದುಕೊಂಡರು. ಹಾಗಾಗಿ, ತಮ್ಮ ಜೀವ ಉಳಿಸಿಕೊಳ್ಳುವ ಆತುರದಲ್ಲಿ, ಚಲಿಸುತ್ತಿದ್ದ ಉದಯಪುರ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನ ಬಾಗಿಲು ಮತ್ತು ಕಿಟಕಿಗಳಿಂದ ಹೊರಗೆ ಜಿಗಿಯಲು ಪ್ರಾರಂಭಿಸಿದರು. ದುರಾದೃಷ್ಟವಶಾತ್, ಪ್ರಯಾಣಿಕರು ಜಿಗಿದ ಪಕ್ಕದ ಹಳಿಯಲ್ಲೇ ಧೋಲ್‌ಪುರ ಕಡೆಯಿಂದ ಅತ್ಯಂತ ವೇಗವಾಗಿ ಪಾತಾಲಕೋಟ್ ಎಕ್ಸ್‌ಪ್ರೆಸ್ ರೈಲು ಬರುತ್ತಿತ್ತು. ಏತನ್ಮಧ್ಯೆ, ಪ್ರಯಾಣಿಕರಿಗೆ ವೇಗವಾಗಿ ಬರುತ್ತಿದ್ದ ಆ ರೈಲನ್ನು ಗಮನಿಸಲು ಸಾಧ್ಯವಾಗಲಿಲ್ಲ. ಹಾಗಾಗಿ, ನೇರವಾಗಿ ರೈಲಿನಿಂದ ಕೆಳಗೆ ಬಿದ್ದಿದ್ದಾರೆ. ಆ ತಕ್ಷಣವೇ ಎದುರಿನಿಂದ ಬಂದ ರೈಲು ಇವರ ಮೇಲೆ ಹರಿದಿದೆ.

ಮುಂದುವರೆದು, ಅಪಘಾತವನ್ನ ಕಂಡ ತಕ್ಷಣ ಸ್ಥಳೀಯ ನಿವಾಸಿಗಳು ರೈಲ್ವೆ ಇಲಾಖೆ ಮತ್ತು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದರೊಂದಿಗೆ, ಮೊರೆನಾ ಎಸ್‌ಪಿ ಧರ್ಮರಾಜ್ ಮೀನಾ ಅವರ ನೇತೃತ್ವದಲ್ಲಿ ಜಿಆರ್‌ಪಿ ಮತ್ತು ಆರ್‌ಪಿಎಫ್ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು. ಅದರಂತೆ, ಹಳಿಗಳ ಮೇಲೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಗಾಯಾಳುಗಳನ್ನು ತಕ್ಷಣವೇ ಹತ್ತಿರದ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಯಿತು. ಮೃತರ ದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

ರೈಲ್ವೆ ಇಲಾಖೆಯ ಪ್ರಾಥಮಿಕ ತನಿಖೆಯ ಪ್ರಕಾರ, ಉದಯಪುರ ಇಂಟರ್‌ಸಿಟಿ ರೈಲಿನಲ್ಲಿ ಯಾವುದೇ ಬೆಂಕಿ ಅಪಘಾತ ಸಂಭವಿಸಿರಲಿಲ್ಲ. ಅದು ಕೇವಲ ಒಂದು ಸುಳ್ಳು ವದಂತಿ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇನ್ನೂ, ರೈಲಿನಲ್ಲಿ ಅಂತಹ ಗೊಂದಲದ ವಾತಾವರಣವನ್ನು ಸೃಷ್ಟಿಸಿದ ಮತ್ತು ಸುಳ್ಳು ವದಂತಿಯನ್ನು ಹರಡಿದ ಕಿಡಿಗೇಡಿಗಳು ಯಾರು ಎಂಬುದರ ಕುರಿತು ರೈಲ್ವೆ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed