MI vs RR, IPL 2026: ಆರ್ಚರ್​​ ಮಾರಕ ದಾಳಿಗೆ ಮುಂಬೈ ಧೂಳೀಪಟ! ನಿರ್ಣಾಯಕ ಪಂದ್ಯದಲ್ಲಿ ಗೆದ್ದು ಪ್ಲೇಆಫ್​ ಪ್ರವೇಶಿಸಿದ ರಾಜಸ್ಥಾನ್ | ಕ್ರೀಡಾ ಸುದ್ದಿ | ACTPnews

ರಾಜಸ್ಥಾನ್ ರಾಯಲ್ಸ್


Last Updated:

IPL 2026: ರಾಜಸ್ಥಾನ್ ರಾಯಲ್ಸ್ ಆರಂಭಿಕರ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಸಂಘಟಿತ ಪ್ರದರ್ಶನದಿಂದ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 205 ರನ್​ಗಳ ಸವಾಲಿನ ಮೊತ್ತ ದಾಖಲಿಸಿತ್ತು. ಆದರೆ ಮುಂಬೈ ತಂಡ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು ಕೇವಲ 175 ರನ್​ಗಳಿಸಲಷ್ಟೇ ಶಕ್ತವಾಗಿ 30 ರನ್​ಗಳ ಸೋಲು ಕಂಡಿತು.

ರಾಜಸ್ಥಾನ್ ರಾಯಲ್ಸ್
ರಾಜಸ್ಥಾನ್ ರಾಯಲ್ಸ್

ಪ್ಲೇಆಫ್​ ನಿರ್ಧರಿಸುವ ನಿರ್ಣಾಯಕ ಪಂದ್ಯದಲ್ಲಿ ರಾಜಸ್ಥಾನ ರಾಯಲ್ಸ್ ತಂಡ ಮುಂಬೈ ಇಂಡಿಯನ್ಸ್ (MI) ರನ್​ಗಳ ಜಯ ಸಾಧಿಸಿ ನೇರವಾಗಿ ಪ್ಲೇಆಫ್ ಪ್ರವೇಶಿಸಿದೆ. ಮುಂಬೈನ ಐತಿಹಾಸಿಕ ವಾಂಖೆಡೆ ಕ್ರೀಡಾಂಗಣದಲ್ಲಿ (Wankhede Stadium) ನಡೆದ ಈ ಹೈವೋಲ್ಟೇಜ್ ಸಮರದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ರಾಜಸ್ಥಾನ್ ರಾಯಲ್ಸ್ ಆರಂಭಿಕರ ವೈಫಲ್ಯದ ಹೊರತಾಗಿಯೂ ಮಧ್ಯಮ ಕ್ರಮಾಂಕದ ಸಂಘಟಿತ ಪ್ರದರ್ಶನದಿಂದ 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 205 ರನ್​ಗಳ ಸವಾಲಿನ ಮೊತ್ತ ದಾಖಲಿಸಿತ್ತು. 206 ರನ್​ಗಳ ಗುರಿಯನ್ನ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 175 ರನ್​ಗಳಿಸಲಷ್ಟೇ ಶಕ್ತವಾಗಿ 30 ರನ್​ಗಳ ಸೋಲು ಕಂಡು ಟೂರ್ನಿಯಿಂದ ಹೊರಬಿದ್ದಿತು. ಇತ್ತ ಗೆಲುವು ಸಾಧಿಸಿದ ರಾಜಸ್ಥಾನ್ ರಾಯಲ್ಸ್ ತಂಡ 16 ಅಂಕಗಳೊಂದಿಗೆ 4ನೇ ತಂಡವಾಗಿ ನೇರವಾಗಿ ಪ್ಲೇಆಫ್ ಪ್ರವೇಶಿಸಿತು. ರಾಜಸ್ಥಾನ್ ರಾಯಲ್ಸ್ ಗೆಲ್ಲುತ್ತಿದ್ದಂತೆ ಅತ್ತ ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ತಂಡಗಳು ಟೂರ್ನಿಯಿಂದ ಹೊರಬಿದ್ದವು.

206 ರನ್​ಗಳ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಇಂದೂ ಕೂಡ ಕಳಪೆ ಆರಂಭ ಪಡೆದುಕೊಂಡಿತು. ಪವರ್​ ಪ್ಲೇ ಮುಗಿಯುವುದರೊಳಗೆ 4 ವಿಕೆಟ್ ಕಳೆದುಕೊಂಡು ಆಘಾತ ಅನುಭವಿಸಿತು. ಚೇಸಿಂಗ್ ಆರಂಭಿಸಿದ ಮುಂಬೈಗೆ ಆರ್ಚರ್ ಮೊದಲ ಓವರ್​ನಲ್ಲೇ ಶಾಕ್ ಕೊಟ್ಟರು. ರೋಹಿತ್ ಶರ್ಮಾರನ್ನ ಡಕ್ ಔಟ್ ಮಾಡಿ ಬ್ರೇಕ್ ನೀಡಿದರು. 3ನೇ ಓವರ್​​ನಲ್ಲಿ ಮತ್ತೆ ಬಂದ ಆರ್ಚರ್​ 6 ರನ್​ಗಳಿಸಿದ್ದ ನಮನ್​ ಧೀರ್​​ರನ್ನ ಬೌಲ್ಡ್​ ಮಾಡಿ ಡಬಲ್ ಶಾಕ್ ಕೊಟ್ಟರು. ರಿಕಲ್ಟನ್​ 7 ಎಸೆತಗಳಲ್ಲಿ ತಲಾ 1 ಬೌಂಡರಿ, ಸಿಕ್ಸರ್ ಸಹಿತ 12 ರನ್​ಗಳಿಸಿ ನಾಂಡ್ರೆ ಬರ್ಗರ್​ಗೆ ವಿಕೆಟ್ ಒಪ್ಪಿಸಿದರು. ತಿಲಕ್ ವರ್ಮಾ ಕೂಡ ಹೆಚ್ಚು ಸಮಯ ಕ್ರೀಸ್​​​​​​ನಲ್ಲಿ ನಿಲ್ಲಲಿಲ್ಲ. 7 ಎಸೆತಗಳಲ್ಲಿ 3 ರನ್​​ ಸಿಡಿಸಿ ಬ್ರಿಜೇಶ್ ಶರ್ಮಾ ಬೌಲಿಂಗ್​​ನಲ್ಲಿ ಬೌಲ್ಡ್​​ ಆದರು.

38 ರನ್​ಗಳಾಗುವಷ್ಟರಲ್ಲಿ 4 ವಿಕೆಟ್ ಕಳೆದುಕೊಂಡಿದ್ದ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ಕಾಣಬಹುದು ಎಂದೇ ನಿರೀಕ್ಷಿಸಲಾಗಿತ್ತು. ಆದರೆ ಸೂರ್ಯಕುಮಾರ್ ಯಾದವ್ ಹಾಗೂ ವಿಲ್ ಜಾಕ್ಸ್​ 63 ರನ್​ಗಳ ಜೊತೆಯಾಟ ನೀಡಿ ಪಂದ್ಯದಲ್ಲಿ ಮತ್ತೆ ಕಮ್​​ಬ್ಯಾಕ್ ಮಾಡುವಂತೆ ಮಾಡಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed